ನನಗೆ ಹೀಗಾಗಿದ್ದಕ್ಕೆ ಪೋಷಕರೇ ಕಾರಣ; ಬಾಯಿಬಿಟ್ಟ ಬಾಲಿವುಡ್ ನಟಿ ಪ್ರೀತಿ ಜಿಂಟಾ!

By Shriram Bhat  |  First Published Nov 10, 2023, 12:46 PM IST

ಇಂದು ಅಮೆರಿಕಾ ದೇಶವು ನನಗೆ ಭಾರತದಲ್ಲಿ 'ಮಹಿಳಾ ಸಬಲೀಕರಣ'ಕ್ಕೆ ಸಂಬಂಧಿಸಿ ಕೆಲಸ ಮಾಡುವ ಜವಾಬ್ಧಾರಿ ನೀಡಿದೆ. ಇದಕ್ಕಾಗಿ ನಾನು ತುಂಬಾ ಸಂತೋಷಪಡುತ್ತೇನೆ. ಕಾರಣ, ನನ್ನಂತೆ ನಾನು ಹಲವರನ್ನು ಇಂಡಿಪೆಂಡೆಂಟ್ ಆಗಿ ಬದುಕಲು ಪ್ರೇರೇಪಿಸುತ್ತೇನೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ನನ್ನಿಂದಾದ ಕೊಡುಗೆ ನೀಡಲಿದ್ದೇನೆ' ಎಂದಿದ್ದಾರೆ ನಟಿ ಪ್ರೀತಿ ಜಿಂಟಾ. 


ಬಾಲಿವುಡ್ ಗುಳಿಕೆನ್ನೆಯ ನಟಿ ಪ್ರೀತಿ ಜಿಂಟಾ ತಮ್ಮ ಪೋಷಕರ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರೀತಿ ಜಿಂಟಾ, 'ನಾನು ನಿಜವಾಗಿಯೂ ಲಕ್ಕೀ. ನನಗೆ ಶಿಕ್ಷಣ ನೀಡಿ, ನಾನು ಸ್ವತಂತ್ರ ಬದುಕನ್ನು ನಡೆಸಲು ನನ್ನ ಪೋಷಕರು ನನಗೆ ದಾರಿ ಮಾಡಿಕೊಟ್ಟಿದ್ದಾರೆ. ನಾನು ಕೆಲಸ ಮಾಡಿ ನನ್ನ ಜೀವನ ಸಾಗಿಸುತ್ತಿದ್ದೇನೆ. ನಾನು ಇಂದು ಸ್ವತಂತ್ರ ಜೀವನ ನಡೆಸುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಅಪ್ಪ-ಅಮ್ಮ' ಎಂದಿದ್ದಾರೆ ನಟಿ ಪ್ರೀತಿ ಜಿಂಟಾ.

ತಮ್ಮ ಇಂದಿನ ಜೀವನದ ಬಗ್ಗೆ ಮಾತನಾಡಿರುವ ನಟಿ ಪ್ರೀತಿ ಜಿಂಟಾ, ತಾವು ಚಿಕ್ಕವಳಿದ್ದಾಗ ಅಪ್ಪ ಹೇಳಿದ ಮಾತನ್ನು ಸಹ ಹೇಳಿದ್ದಾರೆ. 'ನಾನು ಚಿಕ್ಕವಳಿದ್ದಾಗ ನನ್ನ ಅಪ್ಪ ಒಂದು ಮಾತು ಹೇಳಿದ್ದರು. ಹೆಣ್ಣು ಮಕ್ಕಳು ಚಿಕ್ಕವರಿದ್ದಾಗ ಅಪ್ಪನ ಆಸರೆಯಲ್ಲಿ ಬೆಳೆಯಬೇಕು, ಮದುವೆ ಆದಾಗ ಗಂಡನ ಅಸರೆಯಲ್ಲಿ ಹಾಗೂ ಮುದುಕರಾದಾಗ ಮಕ್ಕಳ ಆಸರೆಯಲ್ಲಿ ಬದುಕಬೇಕು' ಎಂದು ಹೇಳಿದ್ದರು. ಸಮಾಜದಲ್ಲಿ ಹೀಗೇ ಇದೆ ಎಂದಿದ್ದರು. ಆದರೆ, ನನಗೆ ಹಾಗೆ ಬದುಕಲು ಒತ್ತಡವನ್ನು ಹೇರಲಿಲ್ಲ. 

Latest Videos

undefined

ಕಾರ್ತಿಕ್ ಆರ್ಯನ್ ಜೊತೆ ಬ್ರೇಕ್ ಅಪ್: ಮೌನ ಮುರಿದು, ಬಾಲಿವುಡ್‌ನಲ್ಲಿ ಯಾವುದೂ ಶಾಶ್ವತವಲ್ಲವೆಂದ ಸಾರಾ ಆಲಿ ಖಾನ್

ನನ್ನ ಅಪ್ಪ-ಅಮ್ಮ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ, ಶಿಕ್ಷಣ ಕೊಟ್ಟು, ಇಂದು ನಾನು ಏನಾಗಿದ್ದೇನೋ ಅದಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಹೆಣ್ಣು ಸ್ವತಂತ್ರವಾಗಿ ಬದುಕಲು ಅಸಾಧ್ಯ ಎಂಬ ವಾತಾವರಣದಲ್ಲಿ, ಅದಕ್ಕೆ ವಿರುದ್ಧವಾಗಿ ನನಗೆ ಎಲ್ಲ ರೀತಿಯ ಸ್ವಾತಂತ್ರ್ಯ ಹಾಗೂ ಸೌಲಭ್ಯ ಕೊಟ್ಟು ಯಾರ ಮೇಲೂ ಅವಲಂಬನೆ ಆಗದೇ ನನ್ನ ಕಾಲ ಮೇಲೆ ನಾನು ನಿಲ್ಲಲು ಸಮರ್ಥವಾಗಿರುವಂತೆ ಬದುಕು ರೂಪಿಸಿದ್ದಾರೆ. ನಾನು ಇದಕ್ಕಾಗಿ ನನ್ನ ಫ್ಯಾಮಿಲಿಗೆ ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ ನಟಿ ಪ್ರೀತಿ ಜಿಂಟಾ.

ಐ ಆ್ಯಮ್ ದ ಲೀಡರ್, ಬ್ಲಡಿ ಲೀಡರ್; ಗುಡುಗಿದ ಡೇರ್ ಡೆವಿಲ್‌ ತನಿಷಾ ಮುಂದೆ ತಲೆತಗ್ಗಿಸಿ ನಿಂತಿದ್ಯಾರು?

ಇಂದು ಅಮೆರಿಕಾ ದೇಶವು ನನಗೆ ಭಾರತದಲ್ಲಿ 'ಮಹಿಳಾ ಸಬಲೀಕರಣ'ಕ್ಕೆ ಸಂಬಂಧಿಸಿ ಕೆಲಸ ಮಾಡುವ ಜವಾಬ್ಧಾರಿ ನೀಡಿದೆ. ಇದಕ್ಕಾಗಿ ನಾನು ತುಂಬಾ ಸಂತೋಷಪಡುತ್ತೇನೆ. ಕಾರಣ, ನನ್ನಂತೆ ನಾನು ಹಲವರನ್ನು ಇಂಡಿಪೆಂಡೆಂಟ್ ಆಗಿ ಬದುಕಲು ಪ್ರೇರೇಪಿಸುತ್ತೇನೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ನನ್ನಿಂದಾದ ಕೊಡುಗೆ ನೀಡಲಿದ್ದೇನೆ' ಎಂದಿದ್ದಾರೆ ನಟಿ ಪ್ರೀತಿ ಜಿಂಟಾ. ಒಟ್ಟಿನಲ್ಲಿ, ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ನಟಿ ಪ್ರೀತಿ ಜಿಂಟಾ ಈಗ ಬಿಸಿನೆಸ್ ವುಮೆನ್ ಆಗಿ ಕೂಡ ಮಿಂಚುತ್ತಿದ್ದಾರೆ. 

click me!