ಪತ್ನಿ ಜರೀನ್ ಖಾನ್ ಗರ್ಭಿಣಿಯಿದ್ದಾಗ ನಟಿ ಜೀನತ್ ಅಮಾನ್ ಜೊತೆ ಸಂಬಂಧ ಬೆಳೆಸಿದ್ದ ಸಂಜಯ್ ಖಾನ್! ಪತ್ನಿ ಹೇಳಿದ್ದೇನು?
ನಟ ಮತ್ತು ನಟಿಯರ ವಿವಾಹೇತರ ಸಂಬಂಧಗಳು ದೊಡ್ಡ ವಿಷಯವೇ ಅಲ್ಲ. ಇದು ಈಗಿನ ಮಾತಲ್ಲ. ಬ್ಲ್ಯಾಕ್ ಆ್ಯಂಡ್ ವೈಟ್ ಯುಗದಿಂದಲೂ ಇಂಥ ಸುದ್ದಿಗಳು ಸದ್ದು ಮಾಡುತ್ತಲೇ ಇದ್ದವು. ಅಕ್ರಮ ಸಂಬಂಧ, ಮದುವೆಯಾದರೂ ಇನ್ನೊಬ್ಬಳ ಜೊತೆ ಡೇಟಿಂಗ್, ವಿವಾಹಕ್ಕೆ ಮುಂಚೆಯೇ ದೈಹಿಕ ಸಂಬಂಧ... ಇವೆಲ್ಲವೂ ಈ ಬಣ್ಣದ ಲೋಕದಲ್ಲಿ ಆಗಲೂ ಸರ್ವೇ ಸಾಮಾನ್ಯವಾಗಿದ್ದವು. ಅಂಥ ಸಾಕಷ್ಟು ಸುದ್ದಿಗಳು ಬಾಲಿವುಡ್‌ನಲ್ಲಿ ಅಂಗಳದಲ್ಲಿ ತುಂಬಿ ಹೋಗಿವೆ. ಇದರಿಂದ ಹಲವು ಕುಟುಂಬಗಳು ಒಡೆದು ಕೂಡ ಹೋಗಿವೆ. ಈಗ ಆ ಕೆಟ್ಟ ದಿನಗಳನ್ನು ನೆನೆದಿದ್ದಾರೆ ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ನಟಿ ಜರೀನ್ ಖಾನ್. ಹೌದು. ನಟ-ನಿರ್ದೇಶಕ ಸಂಜಯ್ ಖಾನ್ ಮತ್ತು ಪತ್ನಿ ಜರೀನ್ ಖಾನ್ ಅವರ ಕಥೆ. ಜರೀನ್ ಖಾನ್ ಮಾಡೆಲ್ ಆಗಿದ್ದರು. ಅವರು ಅಪ್ರತಿಮ ಸುಂದರಿ. ತಮ್ಮ ಹದಿಹರೆಯದ ವಯಸ್ಸಿನಲ್ಲಿ ಸಂಜಯ್ ಖಾನ್ ಜೊತೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಜರೀನ್ ಖಾನ್ ಕೂಡ ಸಂಜಯ್ ಖಾನ್ ಜೊತೆ ಇರಲು 17 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಕೂಡ ತೊರೆದರು. ಏರುತ್ತಿರುವ ಯೌವನ. ಇಬ್ಬರಲ್ಲಿಯೂ ಯೌವನದ ಕಾವು ಏರಿತ್ತು. ಸಂಜಯ್ ಖಾನ್ ಮತ್ತು ಜರೀನ್ ಖಾನ್ ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರ ಮದುವೆಯಾಗಲು ನಿರ್ಧರಿಸಿದರು. ಮದುವೆಯೂ ಆಯಿತು. ದಾಂಪತ್ಯ ಜೀವನವನ್ನೂ ನಡೆಸಲು ಶುರು ಮಾಡಿದರು.
ಆದರೆ ಮದುವೆಯಾದ ಮೇಲೆ ಸಂಜಯ್ ಖಾನ್ ವರಸೆ ಬದಲಿಸಿದರು. ಅದೂ ಜರೀನ್ ಖಾನ್ ಗರ್ಭಿಣಿಯಾಗಿದ್ದಾಗಿನಿಂದ ಅವರ ಅಕ್ರಮ ಸಂಬಂಧದ ಘಾಟು ಜರೀನ್ ಅವರಿಗೆ ಬರತೊಡಗಿತು. ಮಗ ಜಾಯೆದ್ ಖಾನ್‌ಗೆ ಅವರು ಜನ್ಮ ನೀಡುವವರೆಗೂ ಸಂಜಯ್ ಖಾನ್ ಅವರು ಮತ್ತೊಂದು ಸಂಬಂಧದಲ್ಲಿ ಇರುವ ಬಗ್ಗೆ ಇಂಡಸ್ಟ್ರಿಯಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಅದು 70 ರ ದಶಕ. ಆ ವೇಳೆ ಸಂಜಯ್ ಖಾನ್ ಮಾದಕ ನಟಿ ಜೀನತ್ ಅಮಾನ್ ಜೊತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದರು ಎಂಬ ಚರ್ಚೆ ಎಲ್ಲೆಡೆ ಹಬ್ಬಿತ್ತು. ಈ ಸುದ್ದಿ ಅವರ ಪತ್ನಿ ಜರೀನ್ ಖಾನ್ ಅವರ ಕಿವಿಗೂ ಬಿತ್ತು. ಇದರಿಂದ ಜರೀನ್ ಖಾನ್ ಜರ್ಜರಿತಗೊಂಡರು.
ಈ ಬಗ್ಗೆ 2012ರಲ್ಲಿ 'ಫಿಲ್ಮ್‌ಫೇರ್'ಗೆ ಜರೀನ್ ಖಾನ್ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ಸಂಜಯ್ ಖಾನ್ ಜೊತೆಗಿನ ವೈವಾಹಿಕ ಜೀವನ ಮತ್ತು ಮೋಸ ಕುರಿತು ಮುಕ್ತವಾಗಿ ಅವರು ಮಾತನಾಡಿದ್ದು, ಅದೀಗ ಮತ್ತೆ ವಯರಲ್ ಆಗಿದೆ. ಇದನ್ನು ಕೇಳಿ ನನಗೆ ಆಘಾತವಾಗಿತ್ತು. ಜಾಯೆದ್ ನನ್ನ ಹೊಟ್ಟೆಯಲ್ಲಿದ್ದಾಗ ನಾನು ಸಾಕಷ್ಟು ಭಾವನಾತ್ಮಕ ಏರಿಳಿತಗಳನ್ನು ಅನುಭವಿಸಿದೆ. ಆದರೆ ಆಗ ನನಗೆ ಅದ್ಭುತವಾದ ಆತ್ಮವಿಶ್ವಾಸವಿತ್ತು. ನಾನು 9 ತಿಂಗಳ ಗರ್ಭಿಣಿಯಾಗಿದ್ದಾಗಲೂ, ನಾನು 6 ಇಂಚಿನ ಹಿಮ್ಮಡಿಗಳನ್ನು ಧರಿಸುತ್ತಿದ್ದೆ. ಇದಕ್ಕೆ ಕಾರಣ ನನ್ನ ಪತಿಯ ಅಕ್ರಮ ಸಂಬಂಧದಿಂದ ನಾನು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಬಯಸಿದ್ದೆ. . ನನ್ನ ಹೃದಯ ಒಡೆದು ಹೋದರೂ ಧೈರ್ಯ ತೋರಲು ಹೀಗೆಯೇ ಇದ್ದೆ ಎಂದಿದ್ದಾರೆ.
ನಾಗ ಚೈತನ್ಯ ಜೊತೆಗೆ ವಿಚ್ಛೇದನ: ಕೊನೆಗೂ ಮೌನ ಮುರಿದ ನಟಿ ಸಮಂತಾ ಪ್ರಭು
ಇದಾದ ಬಳಿಕ ತಮ್ಮ ಸಂಸಾರ ಒಡೆದು ಹೋಗುವ ಸುಳಿವು ಸಿಗುತ್ತಲೇ ಅದನ್ನು ತಾವು ಹೇಗೆ ಉಳಿಸಿಕೊಂಡೆವು ಎಂಬ ಬಗ್ಗೆ ಜರೀನ್ ಹೇಳಿದ್ದಾರೆ. ಒಂದು ಸಮಯದಲ್ಲಿ ಹೀಗೆ ಮಾಡಿದರೆ ನಾನು ಬೇರೆಯಾಗುತ್ತೇನೆ ಎಂದು ಪತಿ ಸಂಜಯ್ ಖಾನ್‌ಗೆ ಹೇಳಿದೆ. ಇದಾದ ಬಳಿಕ ವಿಷಯಗಳು ಸಾಮಾನ್ಯವಾಗಲು ಪ್ರಾರಂಭಿಸಿದವು. ನಂತರ ಪಂಚತಾರಾ ಹೋಟೆಲ್‌ನಲ್ಲಿ ಸಂಜಯ್ ಖಾನ್ ಮತ್ತು ಜೀನತ್ ಅಮಾನ್ ನಡುವೆ ದೊಡ್ಡ ಜಗಳ ನಡೆಯಿತಂತೆ. ಸಂಜಯ್ ಖಾನ್ ಅವರು ಅತಿಥಿಗಳ ಮುಂದೆ ಜೀನತ್ ಅಮಾನ್ ಅವರನ್ನು ಸಾರ್ವಜನಿಕವಾಗಿ ಹೊಡೆದಿದ್ದರು ಎಂದೂ ಹೇಳಲಾಗುತ್ತದೆ. ಆದರೆ ಈ ವಿಷಯ ಎಷ್ಟು ಸತ್ಯವೋ ಗೊತ್ತಿಲ್ಲ ಎಂದಿರುವ ಜರೀನ್, ನಂತರ ಅವರಿಬ್ಬರ ಸಂಬಂಧ ಮುರಿದು ಬಿತ್ತು ಎಂದಿದ್ದಾರೆ.
ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಮದ್ವೆ ಪ್ರಸ್ತಾವ ಇಟ್ಟ ನಟಿ ಪಾಯಲ್ ಘೋಷ್: ಒಂದೇ ಒಂದು ಷರತ್ತು...
1980 ರ 'ಅಬ್ದುಲ್ಲಾ' ಚಿತ್ರದಲ್ಲಿ ಸಂಜಯ್ ಖಾನ್ ಜೀನತ್ ಅಮಾನ್ ಅವರೊಂದಿಗೆ ಕೆಲಸ ಮಾಡಿದರು. ಈ ಚಿತ್ರದ ಶೂಟಿಂಗ್ ವೇಳೆಯೇ ಇಬ್ಬರ ನಡುವೆ ಅಫೇರ್ ಶುರುವಾಗಿದೆ. ವರದಿಗಳ ಪ್ರಕಾರ, ಜೀನತ್ ಅಮನ್ ಮತ್ತು ಸಂಜಯ್ ಖಾನ್ ಕೂಡ ವಿವಾಹವಾದರು. ಆದಾಗ್ಯೂ, ಸ್ವಲ್ಪ ಸಮಯದ ನಂತರ ಅವರ ಸಂಬಂಧವು ಮುರಿದುಹೋಯಿತು ಎನ್ನಲಾಗಿದೆ.