ಕಾಂಡೋಮ್ ಜಾಹೀರಾತು ಇದೆ, ಸಿನಿಮಾ ಯಾಕೆ ಮಾಡಬಾರದು; 'ಛತ್ರಿವಾಲಿ' ಬಗ್ಗೆ ರಾಕುಲ್ ಮಾತು

By Shruiti G KrishnaFirst Published May 7, 2022, 2:39 PM IST
Highlights

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್(Rakul Preet Singh) ಇದೀಗ ಕಾಂಡೋಮ್ ಫ್ಯಾಕ್ಟರಿಯ ಕ್ವಾಲಿಟಿ ಹೆಡ್ ಆಗಿದ್ದಾರೆ. ಹಾಗಾದ್ರೆ ಸಿನಿಮಾ ಬಿಟ್ರಾ ಅಂತ ಯೋಚಿಸಬೇಡಿ. ರಾಕುಲ್ ಕಾಂಡೋಮ್ ಪರೀಕ್ಷಕಿಯಾಗಿರುವುದು ಸಿನಿಮಾದಲ್ಲಿ.

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್(Rakul Preet Singh) ಇದೀಗ ಕಾಂಡೋಮ್ ಫ್ಯಾಕ್ಟರಿಯ ಕ್ವಾಲಿಟಿ ಹೆಡ್ ಆಗಿದ್ದಾರೆ. ಹಾಗಾದ್ರೆ ಸಿನಿಮಾ ಬಿಟ್ರಾ ಅಂತ ಯೋಚಿಸಬೇಡಿ. ರಾಕುಲ್ ಕಾಂಡೋಮ್ ಪರೀಕ್ಷಕಿಯಾಗಿರುವುದು ಸಿನಿಮಾದಲ್ಲಿ. ಹೌದು, ರಾಕುಲ್ ಪ್ರೀತ್ ಸಿಂಗ್ ಹೊಸ ಸಿನಿಮಾದಲ್ಲಿ ಕಾಂಡೋಮ್ ಪರೀಕ್ಷಕಿಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ರಾಕುಲ್ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಛತ್ರಿವಾಲಿ(Chhatriwali) ಎಂದು ಟೈಟಲ್ ಇಡಲಾಗಿದೆ.

ಛತ್ರಿವಾಲಿ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸದ ರಾಕುಲ್ ಇದೀಗ ಹೊಸ ಸಿನಿಮಾದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ರಾಕುಲ್ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಈ ಸಿನಿಮಾದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಕುಲ್ 'ಈ ಸಿನಿಮಾದಲ್ಲಿ ಸಂಭಾಷಣೆಯನ್ನು ಸೂಕ್ಷ್ಮವಾಗಿ, ಮನರಂಜನೆಯ ರೀತಿಯಲ್ಲಿ ಹೇಳಿದ್ದೀವಿ' ಎಂದಿದ್ದಾರೆ. ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿರುವ ನಾಯಕಿಗೆ ಎಲ್ಲಿಯೂ ಕೆಲಸ ಸಿಗುವುದಿಲ್ಲ. ಬಳಿಕ ಕಾಂಡೋಮ್ ಫ್ಯಾಕ್ಟರಿಯ ಕ್ವಾಲಿಟಿ ಹೆಡ್ ಆಗಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಹೇಗೆಲ್ಲ ಕೆಲಸ ಮಾಡುತ್ತಾರೆ ಎನ್ನುವುದೇ ಛತ್ರಿವಾಲಿಯ ಕಥೆ.

ಅಂದಹಾಗೆ ಸಿನಿಮಾಗೆ ತೇಜರ್ ಪ್ರಭ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ. ಛತ್ರಿವಾಲಿ ಕಳೆದ ವರ್ಷವೇ ಚಿತ್ರೀಕರಣ ಮುಗಿಸಿದೆ. ಡಿಸೆಂಬರ್‌ನಲ್ಲೇ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಸದ್ಯ ಬಿಡುಗಡೆಗೆ ಸಿದ್ಧವಾಗುತ್ತಿದೆ. ಕಾಂಡೋಮ್ ಬಗ್ಗೆ ಜಾಹೀರಾತುಗಳು ಪ್ರಸಾರವಾಗುತ್ತಿವೆ. ಆದರೆ ಸಿನಿಮಾ ಯಾಕೆ ಮಾಡಬಾರದು ಎನ್ನುವ ಆಲೋಚನೆಯಿಂದ ಈ ಸಿನಿಮಾ ಮಾಡಿರುವುದಾಗಿ ಹೇಳಿದ್ದಾರೆ.

ಛತ್ರಿವಾಲಿ ಚಿತ್ರವನ್ನು ಕುಟುಂಬ ಸ್ನೇಹಿ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂದು ಹೇಳಿದ್ದಾರೆ. 'ನಾವು ಯಾರಿಗೂ ಉಪದೇಶ ನೀಡುತ್ತಿಲ್ಲ. ಇದು ಜೀವನದ ಒಂದು ಭಾಗವಾದ ಕೌಟುಂಬಿಕ ಸಿನಿಮಾವಾಗಿದೆ. ನಿಮಗೆ ಮುಜುಗರ ಆಗುವಂತ ಯಾವುದೇ ದೃಶ್ಯವಿಲ್ಲ. ನಾವು ಸೂಕ್ಷ್ಮವಾಗಿ ಮನರಂಜನೆ ರೀತಿಯಲ್ಲಿ ಹೇಳಿದ್ದೀವಿ. ನಾವು ಇಲ್ಲಿ ಯಾವುದೇ ಪಾಠದ ಹಾಗೆ ಹೇಳುತ್ತಿಲ್ಲ' ಎಂದು ರಾಕುಲ್ ಹೇಳಿದ್ದಾರೆ. 

ಡಿವೋರ್ಸ್‌ಗಿಂತಲೂ ನೋವು ಕೊಡ್ತಿದೆ ವೈಯಕ್ತಿಕ ವಾಗ್ದಾಳಿ: ಸಮಂತಾ

ನಟಿ ರಾಕುಲ್ ಪ್ರೀತ್ ಸಿಂಗ್ ಕೊನೆಯದಾಗಿ ಅಜಯ್ ದೇವಗನ್ ಜೊತೆ ರನ್ ವೇ 34 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಛತ್ರಿವಾಲಿ ಜೊತೆಗೆ ಆಯುಷ್ಮಾನ್ ಖುರಾನ ನಟನೆಯ ಡಾಕ್ಟರ್ ಜಿ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಥ್ಯಾಂಕ್ ಗಾಡ್, ಅಕ್ಷಯ್ ಕುಮಾರ್ ಜೊತೆ ಮಿಷನ್ ಸಿಂಡ್ರೆಲಾ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಮಿನಿ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡ ನಟಿ ರಕುಲ್‌ ಪ್ರೀತ್‌ - ನೆಟ್ಟಿಗರಿಂದ ಟ್ರೋಲ್‌!

ಡಾಕ್ಟರ್ ಜಿ ಸಿನಿಮಾದಲ್ಲಿ ರಾಕುಲ್ ಸ್ತ್ರಿರೋಗತಜ್ಞೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅದ್ಭುತ ಚಿತ್ರಕಥೆಯಾಗಿದೆ ಎಂದಿದ್ದಾರೆ. ಇನ್ನು ಅಕ್ಷಯ್ ಕುಮಾರ್ ಸರ್ ಜೊತೆ ನಟಿಸುತ್ತಿರುವ ಪಾತ್ರ ಕೂಡ ವಿಭಿನ್ನವಾಗಿದೆ. ನಾನು ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದೀನಿ. ನನ್ನ ಮೇಲೆ ನಂಬಿಕೆ ಇಟ್ಟು ವೈವಿಧ್ಯಮಯ ಪಾತ್ರಗಳನ್ನು ನೀಡುತ್ತಿದ್ದಾರೆ ಎಂದು ರಾಕುಲ್ ಹೇಳಿದ್ದಾರೆ.

click me!