ನಟಿ ನವ್ಯಾ ನಾಯರ್ ಅವರು ಗುರುವಾಯೂರು ಉತ್ಸವದಲ್ಲಿ ನೃತ್ಯ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ನೃತ್ಯದ ಕೊನೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ, ಮತ್ತು ಅಜ್ಜಿಯೊಬ್ಬರು ವೇದಿಕೆಗೆ ಬಂದು ಅವರನ್ನು ಸಮಾಧಾನಪಡಿಸಿದ ವಿಡಿಯೋ ವೈರಲ್ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ಗಜ ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ನಾಇ ನವ್ಯಾ ನಾಯರ್ ಅವರು ಭಾಗ್ಯದ ಬಳೆಗಾರ ಮತ್ತು ದೃಶ್ಯಂ ಸಿನಿಮಾದ ಮೂಲಕ ಕನ್ನಡಿಗರಿಗೂ ಚಿರಪರಿತ ಆಗಿದ್ದಾರೆ. ದೃಶ್ಯಂ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಿಂದ ದೂರವಾಗಿದ್ದ ನಟಿ ಇದೀಗ ದೇವಸ್ಥಾನದಲ್ಲಿ ನೃತ್ಯ ಮಾಡುವ ಮೂಲಕ ಪತ್ತೆಯಾಗಿದ್ದಾರೆ.
ಮಲಯಾಳಂನ ಪ್ರೀತಿಯ ನಟಿ ನವ್ಯಾ ನಾಯರ್. ನಂದನಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ನವ್ಯಾ ಇಂದಿಗೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ಅದರೊಂದಿಗೆ ಶಾಸ್ತ್ರೀಯ ನೃತ್ಯವನ್ನೂ ನವ್ಯಾ ತಮ್ಮ ಜೀವನದಲ್ಲಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ತಮ್ಮ ಕಾರ್ಯಕ್ರಮದ ವಿಶೇಷಗಳನ್ನೆಲ್ಲಾ ನಟಿ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆ ರೀತಿಯಲ್ಲಿ ನವ್ಯಾ ಅವರ ಒಂದು ವಿಡಿಯೋ ಈಗ ವೈರಲ್ ಆಗಿದೆ.
ಗುರುವಾಯೂರು ಉತ್ಸವದ ಅಂಗವಾಗಿ ನವ್ಯಾ ನಾಯರ್ ಅವರ ನೃತ್ಯ ಕಾರ್ಯಕ್ರಮವಿತ್ತು. ಗುರುವಾಯೂರಪ್ಪನನ್ನು ಸ್ತುತಿಸುವ ಹಾಡಿಗೆ ಹೆಜ್ಜೆ ಹಾಕಿದ ನವ್ಯಾ ಕೊನೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಮಧ್ಯೆ ಅಜ್ಜಿಯೊಬ್ಬರು ವೇದಿಕೆಯ ಬಳಿ ಬಂದು ನವ್ಯಾ ಅವರನ್ನು ಕರೆಯುತ್ತಾರೆ. ಆ ಅಜ್ಜಿ ಜೋರಾಗಿ ಅಳುತ್ತಿದ್ದಾರೆ. ಭದ್ರತಾ ಸಿಬ್ಬಂದಿ ಅವರನ್ನು ಸರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ನವ್ಯಾ ಅಜ್ಜಿಯ ಬಳಿ ಹೋದಾಗ ಅವರು ಕೈ ಹಿಡಿದು ಚುಂಬಿಸಿ ಸಮಾಧಾನಪಡಿಸುತ್ತಾರೆ. ಈ ವಿಡಿಯೋ ಸೈಬರ್ ಜಗತ್ತಿನಲ್ಲಿ ಬಹಳ ವೈರಲ್ ಆಗಿದೆ.
ಇದನ್ನೂ ಓದಿ: ಮುದ್ದಿಸಿದೆ, ಚುಂಬಿಸಿದೆ, ಅದರಲ್ಲೇನು ತಪ್ಪು? ಅದೊಂದು ಕೆಟ್ಟ ಅನುಭವ ತಲೆ ಕೆಡಿಸುತ್ತಿದೆ!
ಇದರ ನಂತರ ಅಜ್ಜಿಯೊಂದಿಗಿನ ಫೋಟೋವನ್ನು ಹಂಚಿಕೊಂಡ ನವ್ಯಾ ನಾಯರ್ ಸಹ ಪ್ರತಿಕ್ರಿಯಿಸಿದ್ದಾರೆ. 'ನನಗೆ ಹೇಳಲು ಪದಗಳಿಲ್ಲ..ಸರ್ವಂ ಕೃಷ್ಣಾರ್ಪಣಂ', ಎಂದು ನವ್ಯಾ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. 'ಆ ತಾಯಿ ಆ ನೃತ್ಯವನ್ನು ಎಷ್ಟು ಆನಂದಿಸಿದರು ಎಂಬುದು ಸ್ಪಷ್ಟವಾಗಿದೆ, ಆ ವೃದ್ಧೆಗೆ ಕಣ್ಣೀರು ಬಂದರೆ ನವ್ಯಾ ಅವರ ನೃತ್ಯವು ಅವರಲ್ಲಿ ಹೊಸ ಅನುಭವವನ್ನು ಉಂಟುಮಾಡಿದೆ', ಎಂದು ಕಾಮೆಂಟ್ ಗಳು ಬರುತ್ತಿವೆ.
ಇದೇ ವೇಳೆ, ವರಾಹಂ ಚಿತ್ರವು ನವ್ಯಾ ಅವರ ಮುಂದಿನ ಬಿಡುಗಡೆಗೆ ಸಿದ್ಧವಾಗಿದೆ. ಸುರೇಶ್ ಗೋಪಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಥ್ರಿಲ್ಲರ್ ಶೈಲಿಯ ಈ ಚಿತ್ರದಲ್ಲಿ ಸೂರಜ್ ವೆಂಜಾರಮೂಡು, ಗೌತಮ್ ವಾಸುದೇವ್ ಮೆನನ್ ಕೂಡ ನಟಿಸಿದ್ದಾರೆ. ಸನಲ್ ವಿ ದೇವನ್ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: ಚುಂಬಿಸಿದ್ದೇ ತಪ್ಪಾಗೋಯ್ತಾ? ಕರಾಳ ದಿನವನ್ನು ನೆನೆದ 'ಗಜ' ನಟಿ ನವ್ಯಾ ನಾಯರ್!