ಒಂದೇ ಫ್ರೇಮಲ್ಲಿ 80-90ರ ದಶಕದ ಹೀರೋಯಿನ್ಸ್, ನಿಮ್ಮ ನೆಚ್ಚಿನ ನಟಿ ಯಾರು?

Published : Mar 01, 2024, 04:13 PM ISTUpdated : Mar 01, 2024, 04:21 PM IST
ಒಂದೇ ಫ್ರೇಮಲ್ಲಿ 80-90ರ ದಶಕದ ಹೀರೋಯಿನ್ಸ್, ನಿಮ್ಮ ನೆಚ್ಚಿನ ನಟಿ ಯಾರು?

ಸಾರಾಂಶ

ಅಂಥ ಅಪರೂಪದ, 80-90ರ ದಶಕದ ಬಹುಭಾಷಾ ನಟಿಯರ ಫೋಟೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸದ್ಯ ಹರಿದಾಡುತ್ತಿದೆ. ಹಲವರು ಈ ಫೋಟೋ ಮೆಚ್ಚಿಕೊಂಡಿದ್ದಾರೆ, ಹಳೆಯ ನೆನಪು ಮರುಕಳಿಸಿದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

ಕಳೆದ 80ರ ದಶಕದಲ್ಲಿ ತೆರೆಯ ಮೇಲೆ ನಾಯಕಿಯರಾಗಿ ಮಿಂಚಿದ್ದ ಹಲವು ನಟಿಯರು ಇಂದು ನಟಿಸುವುದನ್ನೇ ಬಿಟ್ಟಿದ್ದಾರೆ. ಕೆಲವರು ಸೀರಿಯಲ್‌ ಕಡೆ ಮುಖ ಮಾಡಿದ್ದಾರೆ. ಹಲವರು ಇಂದಿನ ಸಿನಿಮಾಗಳಲ್ಲಿ ಅಮ್ಮ, ಅಕ್ಕ ಅಥವಾ ಯಾವುದಾದರೂ ಪೋಷಕ ಪಾತ್ರಕ್ಕೆ ಸೀಮಿತರಾಗಿದ್ದಾರೆ. ಆದರೆ, ಅಂದು ಸ್ಟಾರ್ ಹೀರೋಯಿನ್‌ಗಳಾಗಿದ್ದ ಅವರನ್ನು ಇಂದು ಮಧ್ಯವಯಸ್ಕರು, ಅದನ್ನು ಜಸ್ಟ್ ದಾಟಿ ಸ್ವಲ್ಪ ಮುಂದಕ್ಕೆ ಹೋಗಿರುವ ಅವರ ಅಭಿಮಾನಿಗಳು, ಸಿನಿಪ್ರೇಕ್ಷಕರು ಮರೆತಿಲ್ಲ. ಏಕೆಂದರೆ, ಅಂದು ಅವರ ಅಭಿನಯ, ಸೌಂದರ್ಯ ಅಷ್ಟೊಂದು ಚೆನ್ನಾಗಿತ್ತು. 

ಅಂದಿನ ಹಲವು ನಾಯಕಿ-ನಟಿಯರು ಇಂದು ಅಪ್ಪಟ ಗೃಹಿಣಿಯರಾಗಿ ಮನೆಯಲ್ಲಿಯೇ ಇರುತ್ತಾರೆ. 'ಹೌಸ್‌ ವೈಫ್' ಪಟ್ಟದಿಂದ ಆಚೆ ಬಾರದ ಅವರು, ಯಾವುದೇ ಸಭೆ, ಸಮಾರಂಭಗಳಲ್ಲೂ ಭಾಗಿಯಾಗುವುದಿಲ್ಲ. ಕೆಲವರು, ಟೂರು, ಟ್ರಿಪ್‌ ಎಂದೆಲ್ಲಾ ಹೋಗುತ್ತಾ ಇರುತ್ತಾರೆ. ಆದರೆ, ಅದನ್ನು ಅವರು ತಮ್ಮ ಫ್ಯಾಮಿಲಿಗಷ್ಟೇ ಸೀಮಿತ ಮಾಡಿಕೊಂಡಿರುತ್ತಾರೆ. ಅಂದು ಪರಸ್ಪರ ಸ್ಪರ್ಧಿಗಳಾಗಿದ್ದವರು, ವೈರಿಗಳಾಗಿದ್ದವರೂ ಕೂಡ ಇಂದು ಸ್ನೇಹಿತೆಯರಾಗಿ ಇರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ, ಅವರೆಲ್ಲರೂ 'ಒಂದು ಫೋಟೋ ಫ್ರೇಂ'ನಲ್ಲಿ ನೋಡಲು ಸಿಗುವುದು ತುಂಬಾ ಅಪರೂಪ!

ಬಹಳಷ್ಟು ಸ್ಟಾರ್ ನಟರ ಜೊತೆ ನಟಿಸಿದ್ದ ಮಾಲಾಶ್ರೀ ನಟ ವಿಷ್ಣುವರ್ಧನ್‌ಗೆ ಯಾಕೆ ಜೋಡಿಯಾಗಲಿಲ್ಲ?

ಅಂಥ ಅಪರೂಪದ, 80-90ರ ದಶಕದ ಬಹುಭಾಷಾ ನಟಿಯರ 'ಫೋಟೋ' ಒಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಹಲವರು ಈ ಫೋಟೋ ಮೆಚ್ಚಿಕೊಂಡಿದ್ದಾರೆ, ಹಳೆಯ ನೆನಪು ಮರುಕಳಿಸಿದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಕನ್ನಡವೂ ಸೇರಿದಂತೆ ತಮಿಳು-ತೆಲುಗು ಚಿತ್ರರಂಗದಲ್ಲಿ ನಾಯಕಿಯರಾಗಿ ಮಿಂಚಿದ್ದ ನಟಿಯರು ಈ ಫೋಟೋದಲ್ಲಿದ್ದಾರೆ. ಟಬು, ರಾಧಾ, ಅಮಲಾ ಮತ್ತು ರಾಧಿಕಾ. ಅದು ಹೇಗೋ ಒಂದೇ ಫೋಟೋ ಪ್ರೇಮಿನಲ್ಲಿ ಅವರೆಲ್ಲರೂ ಬಂದಿದ್ದಾರೆ, ನೋಡಿ ಹಲವರು ಪುಳಕಗೊಂಡಿದ್ದಾರೆ. 

ಡಾಲಿ ಧನಂಜಯ್ ಸಿನಿಮಾ ಹೀರೋ 'ಪತಿ'ಯಾದ್ರು; ನಾಗಭೂಷಣ್‌ಗೆ ಜೋಡಿಯಾದ್ರು ಮಲೈಕಾ!

ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಸದ್ಯ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಅಮಲಾ, ಟಬು, ರಾಧಾ ಹಾಗೂ ರಾಧಿಕಾ ಸುಂದರ ಸಲ್ವಾರ್‌ ಸೂಟ್‌ನಲ್ಲಿ ಮಿಂಚುತ್ತಿದ್ದಾರೆ. 'ನಾವೆಲ್ಲರೂ ಆಪ್ತ ಸ್ನೇಹಿತೆಯರು' ಎಂದು ಆ ಫೋಟೋ ಜಗತ್ತಿಗೇ ಸಾರಿ ಹೇಳುತ್ತಿರುವಂತೆ ಭಾಸವಾಗುತ್ತಿದೆ. ಪರಸ್ಪರ ಭೇಟಿಯಾಗಿರುವ ಕಾರಣಕ್ಕೆ ಅವರೆಲ್ಲರೂ ತುಂಬಾ ಖುಷಿಯಾಗಿದ್ದು ಫೋಟೋದಲ್ಲಿ ಕಾಣಿಸುತ್ತಿದ್ದರೆ, ಅವರೆಲ್ಲರನ್ನೂ ಸೇರಿಸಿದ ಒಂದೇ ಫೋಟೋ ನೋಡಿ ಸಿನಿಮಾ ಪ್ರೇಕ್ಷಕರೂ ಪುಳಕಿತರಾಗಿದ್ದಾರೆ. ಒಟ್ಟಿನಲ್ಲಿ, ಅಂದಿನ ಸ್ಟಾರ್ ನಟರಾದ ಚಿರಂಜೀವಿ, ನಾಗಾರ್ಜುನ, ರಜನಿಕಾಂತ್, ಕಮಲ್ ಹಾಸನ್, ರವಿಚಂದ್ರನ್ ಸೇರಿದಂತೆ ಹಲವರೊಂದಿಗೆ ಈ ನಟಿಯರು ತೆರೆ ಹಂಚಿಕೊಂಡು ಮನರಂಜಿಸಿದ್ದನ್ನು ಯಾರೂ ಎಂದಿಗೂ ಮರೆಯಲು ಸಾಧ್ಯವಿಲ್ಲ.

ನಾಗರಹಾವು ಬಳಿಕ ನಟ ವಿಷ್ಣುವರ್ಧನ್‌ಗೆ ಪುಟ್ಟಣ್ಣ ಕಣಗಾಲ್ ಮತ್ತೊಂದು ಸಿನಿಮಾ ಯಾಕೆ ಮಾಡಲಿಲ್ಲ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?