ದೀಪಿಕಾ ಗರ್ಭಿಣಿಯಾದ ಸುದ್ದಿ ರಿವೀಲ್ ಆಗ್ತಿದ್ದಂತೆಯೇ ಮಗುವಿನ ಬಿಗ್ ಅಪ್ಡೇಟ್ ನೀಡಿದ್ದಾರೆ ರಣವೀರ್ ಸಿಂಗ್. ಅವರು ಹೇಳಿದ್ದೇನು?
ನಟಿ ದೀಪಿಕಾ ಗರ್ಭಿಣಿಯಾಗಿದ್ದು, ದೀಪಿಕಾ ಮತ್ತು ರಣವೀರ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ದೀಪಿಕಾ ಗರ್ಭಿಣಿ ಎಂದು ಬಾಲಿವುಡ್ ಲೈಫ್ ವರದಿ ಮಾಡಿತ್ತು. ಆದರೆ ಅದರ ಬಗ್ಗೆ ಸತ್ಯ ತಿಳಿದು ಬಂದಿರಲ್ಲಿ. ಆದರೆ ಇದೀಗ ಖುದ್ದು ನಟ ದಂಪತಿಯೇ ಅನೌನ್ಸ್ ಮಾಡಿದ್ದಾರೆ. ದೀಪಿಕಾ ಮತ್ತು ರಣವೀರ್ ಸಿಂಗ್ ಅಪ್ಪ-ಅಮ್ಮ ಆಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟಕ್ಕೂ ನಟಿ ಗರ್ಭಿಣಿ ಎನ್ನುವುದಕ್ಕೆ ಸದ್ಯ ಯಾವುದೇ ಮುನ್ಸೂಚನೆ ಇಲ್ಲ. ಏಕೆಂದರೆ ಅವರಿಗೆ ಈಗ ಕೇವಲ ಎರಡು ತಿಂಗಳು. ಎರಡು ತಿಂಗಳಿಗೆ ಬೇಬಿ ಬಂಪ್ ತಿಳಿಯುವುದಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಲಿರುವುದಾಗಿ ದಂಪತಿ ಇದಾಗಲೇ ತಿಳಿಸಿದ್ದಾರೆ.
ಅಂದಹಾಗೆ ಈ ಜೋಡಿ, 25 ಜುಲೈ 2019 ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿತ್ತು. ಮದುವೆಯಾಗಿ ಸುಮಾರು 5 ವರ್ಷಗಳಾದರೂ ಈ ಜೋಡಿ ಮಗುವಿನ ಬಗ್ಗೆ ಮಾತನಾಡಿರಲಿಲ್ಲ. ದೀಪಿಕಾ ಅವರ ಕೈಯಲ್ಲಿ ಭರ್ಜರಿ ಆಫರ್ ಇರುವ ಕಾರಣ, ಮಗುವಿನ ಬಗ್ಗೆ ಯೋಚನೆ ಮಾಡಿರಲಿಲ್ಲ. ಅವರು ತಮ್ಮ ಕೆರಿಯರ್ ಮೇಲೆ ಫೋಕಸ್ ಮಾಡಿದ್ದರು.ನಟಿ ದೀಪಿಕಾ ಅವರು ಪ್ರೆಗ್ನೆನ್ಸಿ ಮುಂದೂಡಿದರೂ ಕೂಡಾ ಕೆಲವೊಂದು ಪ್ರಮುಖ ಪ್ರಾಜೆಕ್ಟ್ ಮಾಡಿ ಸೈ ಎನಿಸಿಕೊಂಡರು. ಪಠಾಣ್, ಜವಾನ್, ಫೈಟರ್ ಸಿನಿಮಾಗಳಲ್ಲಿ ಕಾಣಿಸಿಕೊಂಡರು.
ಆರ್ಯನ್ ಖಾನ್ ಡ್ರಗ್ಸ್ ಕೇಸ್: ಅಪ್ಪ ಶಾರುಖ್ ಕುರಿತು ತನಿಖಾಧಿಕಾರಿ ವಾಂಖೆಡೆಯಿಂದ ಭಾರಿ ಹೇಳಿಕೆ!
ಇದೀಗ ಅಪ್ಪನಾಗುವ ಖುಷಿಯಲ್ಲಿರುವ ರಣವೀರ್ ಸಿಂಗ್ ಅವರು ತಮಗೆ ಎಂಥ ಮಗು ಬೇಕು ಎಂಬ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ ತಮಗೆ ಹೆಣ್ಣುಮಗು ಬೇಕು ಎನ್ನುವುದು. ರಣವೀರ್ ಹೇಳಿದ್ದೇನೆಂದರೆ, ಮದುವೆಯಾದ ಬಳಿಕ ಮಗು ಅಂತೂ ಆಗುತ್ತದೆ ಎಂದು ಗೊತ್ತೇ ಇಲ್ಲ. ಒಂದೆರಡು ವರ್ಷ ಅಲ್ಲದಿದ್ದರೂ ನಾಲ್ಕೈದು ವರ್ಷ ಬಿಟ್ಟಾದರೂ ಮಗು ಆಗುತ್ತದೆ ಎಂದು ತಿಳಿದಿತ್ತು. ಈಗಿನಿಂದಲೇ ಎಂಥ ಮಗು ಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದೆ. ಅದಕ್ಕಾಗಿ ದೀಪಿಕಾಳ ಬಾಲ್ಯದ ಫೋಟೋ ಸದಾ ನೋಡುತ್ತಿದ್ದೆ. ಅವಳು ತುಂಬಾ ಕ್ಯೂಟ್ ಆಗಿ ಇದ್ದಳು. ಅದನ್ನೇ ನೋಡುತ್ತಿದ್ದರೆ, ಅಂಥದ್ದೇ ಮಗು ಹುಟ್ಟುತ್ತದೆ ಎನ್ನುವ ಕಲ್ಪನೆಯಲ್ಲಿಯೇ ಇದ್ದೇನೆ. ಆದ್ದರಿಂದ ನನಗೆ ಅವಳಂತೆಯೇ ಇದ್ದ ಕ್ಯೂಟ್ ಹೆಣ್ಣು ಮಗು ಬೇಕು ಎಂದಿದ್ದಾರೆ. ಹೆಣ್ಣು ಮಗುವೇ ಹುಟ್ಟಲಿದೆ ಎಂದೂ ಹೇಳಿದ್ದಾರೆ.
ಇನ್ನು ದೀಪಿಕಾ ಕುರಿತು ಹೇಳುವುದಾದರೆ, ದೀಪಿಕಾ ಪಡುಕೋಣೆ ಅವರ ಡ್ರೆಸ್ ಪಠಾಣ್ ಚಿತ್ರದಲ್ಲಿ ಸಾಕಷ್ಟು ಹಂಗಾಮ ಸೃಷ್ಟಿಸಿತ್ತು. ಅದರೂ ಚಿತ್ರ ಹಲವು ದಾಖಲೆ ಬರೆಯಿತು. ಆದರೆ ಕೆಲ ದಿನಗಳ ಹಿಂದೆ ಬಿಡುಗಡೆಯಾದ ದೀಪಿಕಾ ಮತ್ತು ಹೃತಿಕ್ ರೋಷನ್ ಅಭಿನಯದ ಫೈಟರ್ ಚಿತ್ರ ವಿವಾದದ ನಡುವೆಯೇ ರಿಲೀಸ್ ಆಯಿತು. ಆದರೆ ಚಿತ್ರ ನಿರೀಕ್ಷೆಯಂತೆ ಕಲೆಕ್ಷನ್ ಮಾಡಲಿಲ್ಲ. ನಟಿಯರು ಬೆತ್ತಲಾದರೆ ಮಾತ್ರ ಚಿತ್ರ ಓಡುತ್ತದೆ ಎನ್ನುವಂತೆ, ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಠಾಣ್ಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್‌ಫೋರ್ಸ್ ಆಫೀಸರ್ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್‌ಫೋರ್ಸ್ ಆಫೀಸರ್ ಆಗಿರುವ ದೀಪಿಕಾಳ ಬಹುತೇಕ ಬೆತ್ತಲೆ ವೇಷಕ್ಕೆ ಹಲವರು ಛೀಮಾರಿ ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ, ಬಾಲಾಕೋಟ್ ದಾಳಿಯ ಕಥಾಹಂದರ ಹೊಂದಿರುವ ‘ಫೈಟರ್’ ಚಿತ್ರದ ಇದೀಗ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದೆ. ಚಿತ್ರದಲ್ಲಿ ಹೃತಿಕ್, ದೀಪಿಕಾ ತುಟಿಗೆ ಮುತ್ತಿಕ್ಕಿರುವ ದೃಶ್ಯ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ ವಾಯುಪಡೆ ವಿಂಗ್ ಕಮಾಂಡರ್‌ರೊಬ್ಬರು ನೋಟಿಸ್ ನೀಡಿದ್ದಾರೆ. ಚಿತ್ರದಲ್ಲಿ ವಾಯುಪಡೆಯ ಸಮವಸ್ತ್ರವನ್ನು ಧರಿಸಿ ಲಿಪ್‌ಕಿಸ್ ಮಾಡುತ್ತಿರುವುದು ವಾಯುಪಡೆಗೆ ಅವಮಾನ ಮಾಡಿದೆ. ಜೊತೆಗೆ ವಾಯುಪಡೆಯ ಘನತೆಗೆ ಧಕ್ಕೆ ತಂದಿದೆ. ಪಡೆಯ ಅಸಂಖ್ಯಾತ ಅಧಿಕಾರಿಗಳಿಗೆ ಅವಮಾನವಾಗಿದೆ’ ಎಂದು ಲೀಗಲ್ ನೋಟಿಸ್ ನೀಡಿದ್ದಾರೆ.
ಶೂಟಿಂಗ್ ಸೆಟ್ನಲ್ಲಿ ನಟಿಯ ಮೇಲೆ ಕೈ ಮಾಡಿದ ನಿರ್ದೇಶಕ: ಸೆಟ್ನಿಂದ ಹೊರಬಂದ ನಟಿ ಹೇಳಿದ್ದೇನು?