ಶೂಟಿಂಗ್ ಸೆಟ್​ನಲ್ಲಿ ನಟಿಯ ಮೇಲೆ ಕೈ ಮಾಡಿದ ನಿರ್ದೇಶಕ: ಸೆಟ್​ನಿಂದ ಹೊರಬಂದ ನಟಿ ಹೇಳಿದ್ದೇನು?

Published : Feb 29, 2024, 05:52 PM IST
ಶೂಟಿಂಗ್ ಸೆಟ್​ನಲ್ಲಿ ನಟಿಯ ಮೇಲೆ ಕೈ ಮಾಡಿದ ನಿರ್ದೇಶಕ: ಸೆಟ್​ನಿಂದ ಹೊರಬಂದ ನಟಿ ಹೇಳಿದ್ದೇನು?

ಸಾರಾಂಶ

ಶೂಟಿಂಗ್ ಸೆಟ್​ನಲ್ಲಿ ಖ್ಯಾತ ನಟಿ ಮಮಿತಾ  ಮೇಲೆ ಕೈ ಮಾಡಿದ ನಿರ್ದೇಶಕ: ಸೆಟ್​ನಿಂದ ಹೊರಬಂದ ನಟಿ ಹೇಳಿದ್ದೇನು?  

ಇದಾಗಲೇ ಸಾಕಷ್ಟು ತಾರೆಯರು ಕಾಸ್ಟಿಂಗ್​ ಕೌಚ್​ ಕುರಿತು ಹಲವು ನಟಿಯರು ಹೇಳಿಕೊಂಡಿದ್ದಾರೆ. ಅದೇ ರೀತಿ, ಹಿಂದೆಲ್ಲಾ ಸಿನಿಮಾಗಳಲ್ಲಿ ಒಂದು ದೃಶ್ಯ ಸರಿಯಾಗಿ ಬರಬೇಕು ಎಂದರೆ ಅದನ್ನು ತಿದ್ದಿ ತೀಡಲು ನಿರ್ದೇಶಕರು ಹೇಗೆಲ್ಲಾ ಬೈಯುತ್ತಿದ್ದರು ಕೆಲವೊಮ್ಮೆ ಹೊಡೆದೂ ಬಿಡುತ್ತಿದ್ದರು ಎಂದು ಹಿರಿಯ ನಟಿಯರು ಹೇಳಿಕೊಂಡಿದ್ದಾರೆ. ಆದರೆ ಈಗ ಕಾಲ ಬದಲಾಗಿದೆ. ತಿದ್ದಿ ತೀಡಲು ಹೊಡೆದು ಬಡಿಯುವ ಕಾಲ ಇದಲ್ಲ. ಶಾಲೆಗಳಲ್ಲಿಯೇ ಈ ರೀತಿ ಸಾಧ್ಯವಾಗದಿದ್ದಾಗ ಇನ್ನು ನಟನೆ ಬರುವುದಿಲ್ಲ ಎಂದು ಶೂಟಿಂಗ್​ ಸಮಯದಲ್ಲಿ ಹೊಡೆಯಲಿಕ್ಕೆ ಆದೀತೆ?

ಆದರೆ ಇದೀಗ ತಮಗೆ ಆ ರೀತಿಯ ಭಯಾನಕ ಅನುಭವ ಆಗಿರುವುದಾಗಿ ನಟಿಯೊಬ್ಬರು ಹೇಳಿಕೊಂಡಿದ್ದು, ಭಾರಿ ಸದ್ದು ಮಾಡುತ್ತಿದ್ದಾರೆ. ತಾವು ಪ್ರಬುದ್ಧ ನಟ-ನಟಿಯಾಗಿ ಹೊರಹೊಮ್ಮಲು ಹಿಂದೆ ನಿರ್ದೇಶಕರು ತಮ್ಮನ್ನು ತಿದ್ದಿ ತೀಡಿ, ಹೊಡೆದದ್ದೇ ಕಾರಣ ಎಂದು ಹಿರಿಯ ತಾರೆಯರು ಹೆಮ್ಮೆಯಿಂದ ಇಂದು ಹೇಳಿಕೊಳ್ಳುವುದು ಉಂಟು. ಆದರೆ ಇದೀಗ ನಟಿಯೊಬ್ಬರು ನಿರ್ದೇಶಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.  ಹೌದು ಈ ನಟಿಯ ಹೆಸರು ಮಮತಾ ಬಿಜು.  ತಮಿಳು ಸಿನಿಮಾ ರಂಗದ ಖ್ಯಾತ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಬಾಲಾ ಅವರು ತಮ್ಮ ಮೇಲೆ ಕೈ ಮಾಡಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷಯ ಪ್ರಸ್ತಾಪಿಸಿರುವ ನಟಿ, ಅವರು ಹೊಡೆದ ಕಾರಣದಿಂದಲೇ ತಾವು ಆ ಸಿನಿಮಾದಿಂದ ಹೊರಬರಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. 

ಡ್ರಾಮಾ ಜ್ಯೂನಿಯರ್ಸ್​ ವೇದಿಕೆಗೆ ಪ್ರಕಾಶ್​ ರಾಜ್​: ಪ್ರೇಕ್ಷಕರಿಂದ ಭಾರಿ ವಿರೋಧ- ಏನೆಲ್ಲಾ ಹೇಳಿದ್ರು ನೋಡಿ...

ಬಾಲಾ ನಿರ್ದೇಶನ ಮಾಡುತ್ತಿರುವ ‘ವಾನಂಗನ್’ ಸಿನಿಮಾದಲ್ಲಿ ಮಲಯಾಳಂ ನಟಿ ಮಮಿತಾ ಬಿಜು ನಟಿಸಿದ್ದರು. ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗ ಹಾಡೊಂದರ ಚಿತ್ರೀಕರಣದ ಸಮಯದಲ್ಲಿ ನಿರ್ದೇಶಕ ಬಾಲಾ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿಯೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿಯೂ ಸಂದರ್ಶನವೊಂದರಲ್ಲಿ ನಟಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಬಾಲಾ ಅವರು ಇದಾಗಲೇ ಸಾಕಷ್ಟು ಹಿಟ್​ ಸಿನಿಮಾಗಳನ್ನು ನೀಡಿದವರು. ಪಿತಾಮಗನ್, ಸೇತು, ನಾನ್ ಕಡವುಲ್ ಸೇರಿದಂತೆ ಹಲವು ಚಿತ್ರ ನೀಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಇವರ ವಿರುದ್ಧದ ಮಮಿತಾ ಆರೋಪ ಮಾಡಿದ್ದಾರೆ. ಇದು ಭಾರಿ ಚರ್ಚೆಗೆ ಕಾರಣವಾಗಿದೆ.
 
ಅಷ್ಟಕ್ಕೂ ಆಗಿದ್ದು ಏನೆಂದರೆ, ನಿರ್ದೇಶಕರು ತಮ್ಮ ಕೆನ್ನೆಗೆ ಹೊಡೆದದ್ದು,  ವಾನಂಗನ್ ಸಿನಿಮಾದ ಚಿತ್ರೀಕರಣದ ವೇಳೆ ಎಂದಿದ್ದಾರೆ.  ಈ ಸಿನಿಮಾದಲ್ಲಿ ವಿಲ್ಲಡಿಚ್ಚಾಂಪಾಟನ್ ಕಲಾವಿದೆಯಂತೆ ವಾದ್ಯ ನುಡಿಸುತ್ತಾ ನರ್ತಿಸಬೇಕಿತ್ತು. ಆದರೆ ನನಗೆ ಅದು ಸರಿಯಾಗಿ ಬರುತ್ತಿರಲಿಲ್ಲ. ಉಳಿದವರು  ನುರಿತ ಕಲಾವಿದರಿದ್ದರು. ಅವರ  ಜೊತೆ ಏಕಾಏಕಿಯಾಗಿ  ಬೆರೆಯೋದು ಕಷ್ಟವಾಯಿತು. ಹಾಗಾಗಿ ಮೂರು ಟೇಕ್ ತೆಗೆದುಕೊಂಡೆ. ಈ ಕಾರಣಕ್ಕಾಗಿ ನಿರ್ದೇಶಕರು ಹೊಡದೇ ಬಿಟ್ಟರು ಎಂದಿದ್ದಾರೆ ಮಮಿತಾ. ಅಷ್ಟಕ್ಕೂ ತಾವು ತುಂಬಾ ಕೋಪಿಷ್ಠ ಎಂದು ಅವರು ಮೊದಲೇ ಹೇಳಿದ್ದರು.  ಬೈದರೆ ಮನಸ್ಸಿಗೆ ತಗೋಬೇಡಿ ಎಂದೂ ಹೇಳಿದ್ದರು. ಆದರೆ ನನಗೆ ಅಲ್ಲಿ ಇರಲು ಸಾಧ್ಯವಾಗಲಿಲ್ಲ. ಅವಮಾನ ಸಹಿಸಲು ಆಗದೇ ಚಿತ್ರದಿಂದ ಹೊರಕ್ಕೆ ಬಂದೆ ಎಂದಿದ್ದಾರೆ.

ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​: ಅಪ್ಪ ಶಾರುಖ್​ ಕುರಿತು ತನಿಖಾಧಿಕಾರಿ ವಾಂಖೆಡೆಯಿಂದ ಭಾರಿ ಹೇಳಿಕೆ!
 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್