ಗಂಡನ ಆರೋಗ್ಯಕ್ಕಾಗಿ ಸಂಗಾತಿಯಾದಳು ಏನು ಬೇಕಾದ್ರು ಮಾಡಲು ಸಿದ್ದರಾಗಿರುತ್ತಾರೆ ಎನ್ನುವುದಕ್ಕೆ ನಟಿ ದಿಪ್ತಿ ಧ್ಯಾನಿ(Dipti Dhyani) ಒಂದು ಉದಾಹರಣೆ. ಹೌದು, ನಟಿ ದೀಪ್ತಿ ಪತಿಯ ಆರೋಗ್ಯಕ್ಕಾಗಿ ಹರಕೆ ಹೊತ್ತಿದ್ದರು. ಅದರಂತೆ ಈಗ ತಲೆ ಕೂದಲು ದಾನ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ.
ಗಂಡನ ಆರೋಗ್ಯಕ್ಕಾಗಿ ಸಂಗಾತಿಯಾದಳು ಏನು ಬೇಕಾದ್ರು ಮಾಡಲು ಸಿದ್ದರಾಗಿರುತ್ತಾರೆ ಎನ್ನುವುದಕ್ಕೆ ನಟಿ ದಿಪ್ತಿ ಧ್ಯಾನಿ(Dipti Dhyani) ಒಂದು ಉದಾಹರಣೆ. ಹೌದು, ನಟಿ ದೀಪ್ತಿ ಪತಿಯ ಆರೋಗ್ಯಕ್ಕಾಗಿ ಹರಕೆ ಹೊತ್ತಿದ್ದರು. ಅದರಂತೆ ಈಗ ತಲೆ ಕೂದಲು ದಾನ ಮಾಡುವ ಮೂಲಕ ಹರಕೆ ತೀರಿಸಿದ್ದಾರೆ. ದೀಪ್ತಿ ಪತಿ, ನಟ ಸೂರಜ್ ಥಾಪರ್(Sooraj Thapar) ಪತ್ನಿ ತಲೆ ಬೋಳಿಸಿಕೊಂಡಿದ್ದನ್ನು ನೋಡಿ ಆಘಾತವಾಗಿತು ಎಂದಿದ್ದಾರೆ. ನಟ ಸೂರಜ್ ಥಾಪರ್ ಕಳೆದ ವರ್ಷ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಆರೋಗ್ಯ ತೀವ್ರ ಹದಗೆಟ್ಟಿತ್ತು. ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆ ಸಮಯದಲ್ಲಿ ಪತ್ನಿ ದೀಪ್ತಿ ಸೂರಜ್ ಆರೋಗ್ಯಕ್ಕಾಗಿ ಅನೇಕ ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಆಗ ತಿರುಪತಿ ಬಾಲಾಜಿಗೆ ತನ್ನ ಕೂದಲನ್ನು ಅರ್ಪಿಸುವುದಾಗಿ ಹರಕೆ ಕಟ್ಟಿಕೊಂಡಿದ್ದರು.
ಅಂದು ದೇವರಲ್ಲಿ ಕೇಳಿಕೊಂಡಂತೆ ಇಂದು ತಿರುಪತಿಗೆ ತೆರಳಿ ಕೂದಲನ್ನು ಅರ್ಪಿಸಿದ್ದಾರೆ. ಕೂದಲು ದಾನ ಮಾಡಿದ ಫೋಟೋವನ್ನು ದೀಪ್ತಿ ಶೇರ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ದೀಪ್ತಿ, ಸೂರಜ್ ಆಸ್ಪತ್ರೆಯಲ್ಲಿ ಇದ್ದಾಗ ನಾನು ಅಸಹಾಯಕಳಾಗಿದ್ದೆ. ವೈದ್ಯರು ಸೂರಜ್ ಅವರ ಶ್ವಾಸಕೋಶ 60ರಷ್ಟು ಸೋಂಕು ತಗುಲಿದೆ ಎಂದಿದ್ದರು. ಆಗ ನಾನು ಎಲ್ಲಾ ದೇವರನ್ನು ಪ್ರಾರ್ಥಿಸಿದೆ. ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದೆ. ತಿರುಪತಿಗೆ ಕೂದಲನ್ನು ದಾನ ಮಾಡುತ್ತೇನೆ ಹರಕೆ ಕಟ್ಟಿಕೊಂಡೆ. ಸೂರಜ್ ಚೇತರಿಸಿಕೊಂಡರು. ಈಗ ಆರೋಗ್ಯವಾಗಿದ್ದಾರೆ ಹಾಗಾಗಿ ನಾನು ಈಗ ನನ್ನ ಹರಕೆ ಪೂರೈಸಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸೂರಜ್ ಪ್ರತಿಕ್ರಿಯೆ ನೀಡಿ ದೀಪ್ತಿ ಅಂತ ಹೆಂಡತಿ ಪಡೆಯಲು ನಾನು ಅದೃಷ್ಟಶಾಲಿ ಎಂದು ಹೇಳಿದ್ದಾರೆ. ನಾನು ಲೀಲಾವತಿ ಆಸ್ಪತ್ರೆಯಿಂದ ಮನೆಗೆ ಮರಳಿದಾಗ ನನಗೆ ಈ ಬಗ್ಗೆ ಹೇಳಿದ್ದಳು. ನಾನು ಆಕೆ ಹೇಳಿದ್ದನ್ನು ಕೇಳಿ ಶಾಕ್ ಆದೆ. ಇಡೀ ತಲೆ ಬೋಳಿಸಿಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದೆ. ಆದರೂ ನನಗೆ ಸಂದೇಹ ಇತ್ತು. ಆದರೆ ಅವಳು ಅದನ್ನು ಮಾಡಿದ್ದಾಳೆ. ಅವಳಿಗೆ ಕೂದಲಿಗಿಂತ ನನ್ನ ಆರೋಗ್ಯ ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.
ನಿದ್ರಾಹೀನತೆಯಿಂದ ಹೊರಬರಲು ಗಾಂಜಾ ಸೇವನೆ ಕಲಿತಿದ್ದೆ: ಆರ್ಯನ್
ದೀಪ್ತಿ ಮತ್ತೆ ಬಣ್ಣ ಹಚ್ಚಲು ಸಿದ್ಧಳಾಗಿದ್ದಾಳೆ. ಮುಂದಿನ ಜೀವನದ ಬಗ್ಗೆ ತುಂಬಾ ಯೋಚಿಸುತ್ತಿದ್ದಾಳೆ. ಸರಿಯಾದ ಪಾತ್ರಕ್ಕಾಗಿ ಕಾಯುತ್ತಿದ್ದಾಳೆ ಎಂದು ಪತ್ನಿ ಬಗ್ಗೆ ಸೂರಜ್ ಹೇಳಿದ್ದಾರೆ. ಪ್ರಮಾಣಿಕವಾಗಿ ಹೇಳುತ್ತೇನೆ ಇದನ್ನೆಲ್ಲ ಮಾಡುವುದರಿಂದ ನಾನು ಚೆನ್ನಾಗಿ ಇರುತ್ತೇನೆ ಎಂದು ನನಗೆ ಗೊತ್ತಿಲ್ಲ. ಆದರೆ ಅವಳು ನಗುಮೊಗದಿಂದ ದೇವಸ್ಥಾನಕ್ಕೆ ಹೋಗಿ ಕುಳಿತು ದೇವರ ಸ್ಮರಣೆ ಮಾಡುತ್ತಿದ್ದಳು. ಇದು ನಮ್ಮಿಬ್ಬರಿಗೂ ಭಾವನಾತ್ಮಕ ಕ್ಷಣವಾಗಿತ್ತು. ದೀಪ್ತಿಯ ಶಕ್ತಿ ಎಲ್ಲವನ್ನು ಮೀರಿಸಿತು. ಆಕೆ ಆತ್ಮವಿಶ್ವಾಸದಿಂದ ಹೊಸ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಸ್ಕ್ರಾರ್ಫ್ ಧರಿಸಲು ಸಹ ನಿರಾಕರಿಸಿದ್ದಾಳೆ. ಈಗಲೂ ಸುಂದರವಾಗಿ ಕಾಣಿಸುತ್ತಿದ್ದಾಳೆ ಎಂದು ಪತ್ನಿಯನ್ನು ಗುಣಗಾನ ಮಾಡಿದ್ದಾರೆ.
Amrita Rao ಅವರಿಗೆ ಕಪಾಳಮೋಕ್ಷ ಮಾಡಿದ್ದು ಪಶ್ಚಾತ್ತಾಪವಿಲ್ಲ ಎಂದ Esha Deol
ಕೂದಲಿಗೆ ವಿದಾಯ ಹೇಳುವ ಮೊದಲು ದೀಪ್ತಿ ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಸಂಪೂರ್ಣ ಕೂದಲು ದಾನ ಮಾಡುವ ಬಗ್ಗೆ ತಿಳಿದ ತಕ್ಷಣ ಸ್ನೇಹಿತರು ಕೂದಲಿಗೆ ವಿದಾಯ ಕೂಟ ಆಯೋಜಿಸಿದ್ದರು ಎಂದು ಹೇಳಿದ್ದಾರೆ.