ನಟ ಜೆಕೆ ಹೊಸ ಪೋಸ್ಟ್ ವೈರಲ್; ವಿಶ್ ಮಾಡುತ್ತಿರುವ ಅಭಿಮಾನಿಗಳು

Published : May 30, 2022, 01:31 PM ISTUpdated : May 30, 2022, 02:34 PM IST
ನಟ ಜೆಕೆ ಹೊಸ ಪೋಸ್ಟ್ ವೈರಲ್; ವಿಶ್ ಮಾಡುತ್ತಿರುವ ಅಭಿಮಾನಿಗಳು

ಸಾರಾಂಶ

ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್‌ಗೆ(Karthik Jayaram) ಕಂಕಣ ಭಾಗ್ಯ ಕೂಡಿಬಂದಿದೆ. ಜೆಕೆ ಅಂತನೆ ಖ್ಯಾತಿಗಳಿಸಿರುವ ನಟ ಕಾರ್ತಿಕ್ ಈಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. 42 ವರ್ಷದ ನಟ ಕಾರ್ತಿಕ್ ಜಯರಾಮ್ ಒಂಟಿ ಜೀವನಕ್ಕೆ ಗುಡ್ ಬೈ ಹೇಳಿ ಜಂಟಿಯಾಗಲು ನಿರ್ಧರಿಸಿದ್ದಾರೆ. ಈ ಸಂತಸದ ವಿಷಯವನ್ನು ಜೆಕೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್‌ ಮದುವೆ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಕಾರಣವಾಗಿದ್ದು ಜೆಕೆ ಇತ್ತೀಚಿಗಷ್ಟೆ ಶೇರ್ ಮಾಡಿದ್ದ ಹೊಸ ಪೋಸ್ಟ್. ಹೌದು, ಜೆಕೆ ಯುವತಿ ಜೊತೆ ಸೆಲ್ಫಿಗೆ ಪೋಸ್ ನೀಡಿದ್ದ ಫೋಟೋ ಶೇರ್ ಮಾಡಿ ಲೈಫ್ ಲೈನ್ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಜೆಕೆ ಮದುವೆಯಾಗುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್‌ನಲ್ಲಿ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಆದರೆ ಮದುವೆ ವಿಚಾರವನ್ನು 42 ವರ್ಷದ ನಟ ಕಾರ್ತಿಕ್ ಜಯರಾಮ್ ತಳ್ಳಿಹಾಕಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಗರಂ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಕೆ ಆಕೆ ನನ್ನ ಗೆಳತಿ ಅಷ್ಟೆ ಎಂದು ಹೇಳಿದ್ದಾರೆ. ಅಲ್ಲದೇ ವೃತ್ತಿ ಜೀವನದ ಬಗ್ಗೆ ಯಾರು ಮಾತನಾಡಲ್ಲ ಆದರೆ ಫೋಟೋ ಹಾಕಿದ ತಕ್ಷಣ ಎಲ್ಲರೂ ಕೇಳುತ್ತಾರೆ ಎಂದು ಗರಂ ಆಗಿದ್ದಾರೆ.

ಒಂಟಿ ಜೀವನಕ್ಕೆ ಗುಡ್ ಬೈ ಹೇಳಿ ಜಂಟಿಯಾಗಲು ನಿರ್ಧರಿಸಿದ್ದಾರೆ ಅಂತ ಅಂದುಕೊಂಡಿದ್ದ ಅಭಿಮಾನಿಗಳಿಗೆ ಜೆಕೆ ಪ್ರತಿಕ್ರಿಯೆ ನಿರಾಸೆ ಮೂಡಿಸಿದೆ. ಅಂದಹಾಗೆ ಜೆಕೆ ಶೇರ್ ಮಾಡಿರುವ ಫೋಟೋದಲ್ಲಿ ಇರುವ ಹುಡುಗಿ ಅಪರ್ಣ ಸಮಂತಾ. ಅಪರ್ಣ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ಫ್ಯಾಷನ್ ಲೋಕದಲ್ಲಿ ಈಗಾಗಲೇ ಸಾಧನೆ ಮಾಡಿರುವ ಅಪರ್ಣ ಜೆಕೆ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂತನೆ ಅಭಿಮಾನಿಗಳು ಭಾವಿಸಿದ್ದರು. ಆದರೆ ಈಗ ಇದೆಲ್ಲ ಸುಳ್ಳು ಎಂದು ಅಲ್ಲಗಳೆದಿದ್ದಾರೆ. ಅಪರ್ಣ ಕೂಡ ಸಾಮಾಜಿಕ ಜಾಲತಾಣದಲ್ಲಿ ಜೆಕೆ ಫೋಟೋಗಳನ್ನು ಶೇರ್ ಮಾಡಿದ್ದರು. ಜೆಕೆ ಜೊತೆ ಇರುವ ಫೋಟೋ ಹಾಕಿ ನಿಮ್ಮನ್ನು ಪಡೆದಿದ್ದು ಲಕ್ಕಿ ಎಂದು ಹಾಕಿದ್ದರು. ಹಾಗಾಗಿ ಇಬ್ಬರ ಮದುವೆ ವಿಚಾರ ವೈರಲ್ ಆಗಿದೆ. ಆದರೀಗ ಸ್ವತಃ ಜೆಕೆ ಇದಕ್ಕೆಲ್ಲ ತೆರೆ ಎಳೆದಿದ್ದಾರೆ.

ನಟ ಜೆಕೆ ಬಗ್ಗೆ

ನಟ ಜೆಕೆ ಕಿರುತೆರೆ ಮತ್ತು ಸಿನಿಮಾ ಎರಡರಲ್ಲೂ ಮಿಂಚುತ್ತಿದ್ದಾರೆ. ಜೆಕೆ ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು. ಎಂಜಿನಿಯರಿಂಗ್ ಪದವಿ ಪಡೆದಿರುವ ನಟ ಜೆಕೆ ವಿದ್ಯಾಭ್ಯಾಸದ ಬಳಿಕ ದುಬೈನಲ್ಲಿ ಕೆಲಸಕ್ಕೆ ಸೇರಿದ್ದರು. ವೃತ್ತಿಯಲ್ಲಿ ಉತ್ತುಂಗದಲ್ಲಿ ಇರುವಾಗಲೇ ಜೆಕೆ ದುಬೈ ಕೆಲಸಕ್ಕೆ ಗುಡ್ ಬೈ ಹೇಳಿ ಬೆಂಗಳೂರಿಗೆ ವಾಪಾಸ್ ಆದರು. ಅಂದಹಾಗೆ ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊೆಂದಿದ್ದ ಜೆಕೆಗೆ ಕೆಲಸ ಬಿಡಲು ಪ್ರಮುಖ ಕಾರಣವಾಗಿತ್ತು.

Fashion Week : 40  ಸೂಪರ್‌ ಮಾಡೆಲ್‌ಗಳು ಒಂದೇ ವೇದಿಕೆಯಲ್ಲಿ... ಜೆಕೆ, ಶ್ವೇತಾ ರಂಗು!

ಮಾಡೆಲಿಂಗ್ ಮಾಡುವಾಗಲೇ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಜೆಕೆ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ಈ ಧಾರಾವಾಹಿಯಲ್ಲಿ ಕಾರ್ತಿಕ್ ಜಯರಾಮ್ ಜೆಕೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೆಕೆ ಪಾತ್ರ ದೊಡ್ಡ ಮಟ್ಟದ ಖ್ಯಾತಿ ಗಳಿಸಿತು. ಕಾರ್ತಿಕ್ ಜಯರಾಮ್ ಜೆಕೆಯಾಗಿ ಪ್ರೇಕ್ಷಕರ ಹೃದಯ ಗೆದ್ದರು. 2015ರಲ್ಲಿ ಈ ಧಾರಾವಾಹಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ನಾಯಕಿಯಾಗಿ ಮಯೂರಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿ ಬಳಿಕ ಜೆಕೆ ಹಿಂದಿಗೆ ಹಾರಿದರು. ಹಿಂದಿಯ ಕಿರುತೆರೆಯಲ್ಲಿ ಜೆಕೆ ಪೌರಾಣಿಕ ಸಿಯಾ ಕೆ ರಾಮ್ ನಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ್ದರು.

ನಟ ಜಯರಾಮ್ ಕಾರ್ತಿಕ್ ಹೊಸ ಅವತಾರ ವೈರಲ್!

ಬಳಿಕ ಜೆಕೆ ಕನ್ನಡ ಬಿಗ್ ಬಾಸ್ ಸೀಸನ್ 5ರಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಮನೆಯಲ್ಲಿ ಜೆಕೆ ಪ್ರೇಕ್ಷಕರ ಮನಗೆದ್ದಿದ್ದರು. ಕಿರುತೆರೆ ಜೊತೆಗೆ ಜೆಕೆ ಅನೇಕ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಕೆಂಪೆಗೌಡ, ವಿಷ್ಣುವರ್ಧನ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಮೇ 1 ಮತ್ತು ಪುಟ 109 ಸಿನಿಮಾಗಳಲ್ಲಿ ಜೆಕೆ ನಾಯಕನಾಗಿ ಕಾಣಿಸಿಕೊಂಡಿದ್ದರು. ಸದ್ಯ ಹಿಂದಿ ಮತ್ತು ತಮಿಳು ಪ್ರಾಜೆಕ್ಟ್ ನಲ್ಲಿ ಜೆಕೆ ಬ್ಯುಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?