
ಬೆಂಗಳೂರು (ಏ.22): ನಟಿ ಅನು ಪ್ರಭಾಕರ್ ಮುಖರ್ಜಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದನ್ನು ಸಾಮಾಜಿಕ ಜಾಲತಾಣ ಮೂಲಕ ತಿಳಿಸಿರುವ ಅನು, ಕೊರೋನಾ ಎರಡನೇ ಅಲೆ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಮುನ್ನೆಚ್ಚರಿಕೆ ಅತ್ಯಗತ್ಯ ಎಂದು ಹೇಳಿದ್ದಾರೆ.
ಪತಿ ರಘು ಮುಖರ್ಜಿ ಹಾಗೂ ಮಗಳಿಗೆ ಕೊರೋನಾ ನೆಗೆಟಿವ್ ರಿಸಲ್ಟ್ ಬಂದಿರುವುದಾಗಿಯೂ ತಿಳಿಸಿದ್ದಾರೆ. ಅನು ಸದ್ಯ ಹೋಮ್ ಐಸೋಲೇಷನ್‌ನಲ್ಲಿ ಇದ್ದಾರೆ.
ಕೊರೋನಾ ಸೊಂಕಿನಿಂದ ಹೋಮ್ ಐಸೋಲೇಷನ್‌ನಲ್ಲಿರುವ ನಟಿ ಅನುಪ್ರಭಾಕರ್ ಸಂಕಷ್ಟಕ್ಕೆ ಸಿಲುಕಿದ್ದು, ಕೋವಿಡ್ ಸೊಂಕು ತಗುಲಿ ಐದು ದಿನವಾದರೂ ಬಿಯು ನಂಬರ್ ಇನ್ನೂ ಸಿಕ್ಕಿಲ್ಲ.
ಕೋವಿಡ್ ವಾರ್ ವೆಬ್ ಸೈಟ್ ನಲ್ಲಿಯೂ ನನ್ನ ರಿಪೋರ್ಟ್ ಇಲ್ಲ ಎನ್ನುತ್ತಿದ್ದಾರೆ. ಐದು ದಿನವಾದರೂ ಬಿಬಿಎಂಪಿಯಿಂದ ಕರೆ ಕೂಡ ಬಂದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಖತ್ ಸೀಕ್ರೆಟ್ ಬಿಟ್ಟು ಕೊಟ್ಟ ಅನು ಪ್ರಭಾಕರ್; ಭಾವುಕರಾದ ಮೇಘನಾ ರಾಜ್! ...
ಈಗಾಗಲೇ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಅತಿ ಹೆಚ್ಚು ದಾಖಲಾಗುತ್ತಿದೆ. ಲಕ್ಷಾಂತರ ಸಂಖ್ಯೆಯ ಪ್ರಕರಣಗಳಿದ್ದು ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಸರ್ಕಾರ ಈಗಾಗಲೇ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಬಾಲಿವುಡ್‌ನಲ್ಲಂತೂ ಅನೇಕ ನಟ, ನಟಿಯರಿಗೆ ಸೋಂಕು ತಗುಲಿದ್ದು, ಕರ್ನಾಟಕ ಸೇರಿ ಹಲವೆಡೆ ಅನೇಕರು ಬಲಿಯಾಗಿದ್ದಾರೆ. ಥಿಯೇಟರ್‌ಗಳಲ್ಲಿ ಕೇವಲ ಶೇ.50ರಷ್ಟು ಆಸನಗಳಿಗೆ ಸರಕಾರ ಅನುಮತಿ ನೀಡಿದ್ದು, ದೊಡ್ಡ ಬಜೆಟ್ ಸಿನಿಮಾಗಳ ರಿಲೀಸ್ ಡೇಟನ್ನು ಮುಂದೂಡಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲವು ನಟರ ಚಿತ್ರಗಳ ಚಿತ್ರೀಕರಣವನ್ನೂ ಸ್ಥಗಿತಗೊಳಿಸಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.