
ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ದುರ್ಗಾಷ್ಟಮಿ ಪ್ರಯುಕ್ತ ಈರುಳ್ಳಿಯ ಫೋಟೋ ಹಾಕುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದ್ದಾರೆ.
ಉತ್ತರ ಭಾರತದಲ್ಲಿ ಈಗ ಚೈತ್ರ ನವರಾತ್ರಿ ಆಚರಿಸಲಾಗುತ್ತಿದೆ. ಈ ವೇಳೆ ಮಂಗಳವಾರ ನಡೆದ ದುರ್ಗಾಷ್ಟಮಿ ಪ್ರಯುಕ್ತ ಉಪವಾಸವಿದ್ದರೆ ನಿಮ್ಮ ಮನೆಯಲ್ಲಿನ ಪ್ರಸಾದವು ಈ ರೀತಿ ಗೋಚರಿಸುತ್ತದೆ ಎಂಬ ಟ್ಯಾಗ್‌ಲೈನ್‌ನಲ್ಲಿ ಪೂರಿ, ಉಪ್ಪಿಟ್ಟು, ಮೊಸರು ಹಾಗೂ ಕತ್ತರಿಸಿದ ಈರುಳ್ಳಿಯ ಫೋಟೋವನ್ನು ನಟಿ ಕಂಗನಾ ಟ್ವೀಟ್ ಮಾಡಿದ್ದಾರೆ.
ಪೋಷಕರ ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ; ಮಕ್ಕಳಿಗೆ ಸುಳ್ಳು ಹೇಳಿದ್ರಾ?
ದಕ್ಕೆ ಹಲವು ಟ್ವೀಟಿಗರು ವ್ಯಂಗ್ಯ ಮತ್ತು ಹಾಸ್ಯವಾಗಿ ಪ್ರತಿಕ್ರಿಯಿಸಿದ್ದರೆ, ಮತ್ತಷ್ಟುಜನ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ. ‘9 ದಿನಗಳ ಹಬ್ಬದ ವೇಳೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಕ್ಕೆ ನಿಷೇಧವಿದೆ.
9 ದಿನಗಳ ನವರಾತ್ರಿಯಂದು 9 ಶಕ್ತಿ ದೇವತೆಗಳಿಗೆ ಜನರು ದಿನವಿಡೀ ಉಪವಾಸವಿದ್ದು, ಪೂಜಾ ಪುನಸ್ಕಾರಗಳನ್ನು ಮಾಡುತ್ತಾರೆ’ ಎಂದು ಕಿರಿಕಾರಿದ್ದಾರೆ. ಈ ಸಲ ಚೈತ್ರ ನವರಾತ್ರಿ ಏ.13ರಂದು ಆರಂಭವಾಗಿದ್ದು ಏ.21ರ ರಾಮನವಮಿ ಆಚರಣೆಯೊಂದಿಗೆ ಮುಕ್ತಾಯವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.