ಹುಟ್ಟೋ ಮೂರನೇ ಮಗುವಿಗೆ ದಂಡ ಹಾಕಿ, ಜೈಲಿಗೆ ಕಳ್ಸಿ ಎಂದ ಕಂಗನಾ

By Suvarna News  |  First Published Apr 21, 2021, 6:15 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅದು ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ತಮ್ಮ ಆಲೋಚನೆಗಳನ್ನು ಶೇರ್ ಮಾಡಿದ್ದಾರೆ. ಅವರ ವಿವಾದಾತ್ಮಕ ಟ್ವೀಟ್‌ಗಳು ವೈರಲ್ ಆಗಿವೆ.


ಬಾಲಿವುಡ್ ನಟಿ-ನಿರ್ಮಾಪಕಿ ಮತ್ತು ವಿವಾದದಿಂದಲೇ ಫೇಮಸ್ ಆಗಿರೋ ಕಂಗನಾ ರಣಾವತ್ ಸುದ್ದಿಯಲ್ಲಿದ್ದಾರೆ. ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ದೇಶದ ಮೊದಲ ಮಹಿಳಾ ಪ್ರಧಾನಿ ಮತ್ತು ಜವಾಹರಲಾಲ್ ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಬಗ್ಗೆ ನಟಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕ್ವೀನ್ ನಟಿ ತನ್ನ ಮೊಂಡು ನಿರ್ಭೀತ ಸ್ವಭಾವಕ್ಕೆ ಮತ್ತು ಅವರ ಕಾಂಟ್ರವರ್ಶಿಯಲ್ ಟ್ವೀಟ್‌ಗಳಿಂದ ಸುದ್ದಿಯಾಗಿದ್ದಾರೆ. ಅವರ ಇತ್ತೀಚಿನ ಪೋಸ್ಟ್ ಅವರನ್ನು ಮತ್ತೆ ಸುದ್ದಿಯಲ್ಲಿರುವಂತೆ ಮಾಡಿದೆ.

Tap to resize

Latest Videos

ಪ್ರೆಗ್ನೆಂಸಿ ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡುತ್ತಿದ್ದಾರೆ ನೋಡಿ ಕರೀನಾ !

ಕಂಗನಾ ಅವರ ಇತ್ತೀಚಿನ ಟ್ವೀಟ್‌ನಲ್ಲಿ "ನಮಗೆ ಜನಸಂಖ್ಯಾ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಕಾನೂನುಗಳು ಬೇಕಾಗಿವೆ. ಸಾಕಷ್ಟು ಮತ ರಾಜಕಾರಣ ಇದು ನಿಜ ಇಂದಿರಾಗಾಂಧಿ ಚುನಾವಣೆಯಲ್ಲಿ ಸೋತರು.  ಇಂದು ಜನಸಂಖ್ಯಾ ಬಿಕ್ಕಟ್ಟನ್ನು ನೋಡುವಾಗ ಕನಿಷ್ಠ ಮೂರನೇ ಮಗುವಿಗೆ ಜೈಲು ಶಿಕ್ಷೆ ಎಂದು ನಿಗದಿ ಮಾಡಬೇಕು ಎಂದಿದ್ದಾರೆ.

ಹಿಂದಿನ ಟ್ವೀಟ್‌ನಲ್ಲಿ, ಚೀನಾವು ಭಾರತದಷ್ಟು ಜನಸಂಖ್ಯೆಯನ್ನು ಹೊಂದಿರಬಹುದು ಆದರೆ ಭೂಮಿ / ಸಂಪನ್ಮೂಲಗಳು ಸುಮಾರು ಮೂರು ಪಟ್ಟು ಹೆಚ್ಚಿವೆ. ಜನಸಂಖ್ಯೆಯ ಸಮಸ್ಯೆ ತೀವ್ರವಾಗಿದೆ. ಈ ದೇಶವನ್ನು ಹೇಗೆ ನಿಭಾಯಿಸುವುದು ಹೇಳಿ? ಎಂದಿದ್ದಾರೆ.

ಡಿಪ್ಪಿ ಮತ್ತು ಕತ್ರೀನಾ ನಂತರ ದೆಹಲಿ ಹುಡುಗಿ ಜೊತೆ ಡೇಟ್‌ ಮಾಡುತ್ತಿದ್ದ ರಣಬೀರ್?

ಮತ್ತೊಂದು ಟ್ವೀಟ್‌ನಲ್ಲಿ, ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯಿಂದ ಜನರು ಸಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.  130 ಕೋಟಿ ಭಾರತೀಯರ ಜೊತೆಗೆ, ಭಾರತದಲ್ಲಿ 25 ಕೋಟಿಗೂ ಹೆಚ್ಚು ಅಕ್ರಮ ವಲಸಿಗರಿದ್ದಾರೆ ಎಂದು ಅವರು ಹೇಳಿದ್ದಾರೆ.

click me!