ನಿಮಗೆ ಬಹಳಷ್ಟು ಉತ್ತರ ಭಾರತೀಯರು ಫ್ಯಾನ್ಸ್ ಇದ್ದಾರೆ. ನೀವು ಹೀಗೆ ತೆಲುಗಿನಲ್ಲಿ ಮಾತನಾಡಿದರೆ ಉತ್ತರ ಭಾರತೀಯರಾದ ನಮಗೆ ಮಾತ್ರವಲ್ಲ, ದಕ್ಷಿಣ ಭಾರತದ ಉನ್ನುಳಿದ ಭಾಷಿಗರಾದ ಕನ್ನಡ, ತಮಿಳು ಹಾಗೂ ತೆಲುಗು ಭಾಷಿಗರಿಗೂ ಅರ್ಥವಾಗುವುದಿಲ್ಲ..
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅದೇನು ಮಾಡಿದರೂ ಏನಾದರೊಂದು ಕಿರಿಕ್ ಹುಟ್ಟಿಕೊಳ್ಳುತ್ತದೆ. ಕಿರಿಕ್ ಹೆಸರಿನ ಚಿತ್ರಕ್ಕೂ ಅವರಿಗೂ ಅದೇನೋ ನಂಟೋ ಭಗವಂತನೇ ಬಲ್ಲ ಎಂಬಂತಾಗಿದೆ. ಇತ್ತೀಚೆಗೆ ಆನಂದ್ ದೇವರಕೊಂಡ ಅಭಿನಯದ 'ಗಂ ಗಂ ಗಣೇಶ' ಚಿತ್ರದ ಪ್ರೆಸ್‌ಮೀಟ್‌ನಲ್ಲಿ ವೈಟ್ ಕಲರ್ ಡಿಸೈನ್ ಬಟ್ಟೆಯಲ್ಲಿ ಮಿರಮಿರ ಮಿಂಚುತ್ತಿದ್ದ ನಟಿ ರಶ್ಮಿಕಾರನ್ನು ಹೊಗಳಿ ಸೋಷಿಯಲ್ ಮೀಡಿಯಾದಲ್ಲಿ (Social Media) ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿಲಿಲ್ಲ. ಆದರೆ, ಅವರು ತೆಲುಗಿನಲ್ಲಿ ಮಾತನಾಡುವ ಬದಲು ಇಂಗ್ಲೀಷ್‌ನಲ್ಲಿ ಮಾತನಾಡಿ ಎಂದು ಸಲಹೆ ನೀಡಿ ವಿನಂತಿಸಿಕೊಂಡಿದ್ದಾರೆ.
ಇಲ್ಲೆ ಸಮಸ್ಯೆ ಇರುವುದು. ಏಕೆಂದರೆ, ಹೇಳಿ ಕೇಳಿ ನಟ ರಶ್ಮಿಕಾ ಅತ್ಯಂತ ಹೆಚ್ಚು ಸಕ್ಸಸ್ ಕಂಡಿರುವುದೇ ತೆಲುಗು ಸಿನಿರಂಗದಲ್ಲಿ. ತೆಲುಗು ಸಿನಿಮಾದ ಪ್ರಮೋಶನ್, ಪ್ರೆಸ್‌ಮೀಟ್‌ನಲ್ಲಿ ನಟಿ ರಶ್ಮಿಕಾ ಏನಾದ್ರೂ ಇಂಗ್ಲೀಷಿನಲ್ಲಿ ಮಾತನಾಡಿದರೆ ಖಂಡಿತವಾಗಿಯೂ ಟಾಲಿವುಡ್ ಸಿನಿರಂಗ ಸೇರಿದಂತೆ, ತೆಲುಗು ಪ್ರೇಕ್ಷಕರು ಸಹಿಸುವುದು ಕಷ್ಟ ಎನ್ನಬಹುದು. ರಶ್ಮಿಕಾಗೆ ಬೆಳೆಸಿ ಅನ್ನ ಕೊಟ್ಟ ಭಾಷೆಯ ಬಗ್ಗೆ ಗೌರವವಿಲ್ಲ ಎಂದು ಖಂಡಿತವಾಗಿಯೂ ಅಂದುಕೊಳ್ಳುತ್ತಾರೆ. ಆದರೆ ತೆಲುಗು ಬದಲು ಇಂಗ್ಲಿಷಿನಲ್ಲಿ ಮಾತನಾಡಿ ಎಂದಿರುವ ಅಭಿಮಾನಿಯದು ತಪ್ಪಿದೆಯಾ? ಖಂಡಿತ ಇಲ್ಲ.
undefined
ಅಷ್ಟೊಂದು ಸತ್ಯವಂತರಾಗ್ಬೇಡಿ ಆ್ಯಂಕರ್ ಅನುಶ್ರೀ; ಈ ಕಾಮೆಂಟ್‌ಗೆ ಅವ್ರನ್ನ ಸುಮ್ನೆ ಬಿಡಲ್ಲ ಬಿಡಿ!
ಏಕೆಂದರೆ, ಸೋಷಿಯಲ್ ಮೀಡಿಯಾ 'ಎಕ್ಸ್'ನಲ್ಲಿ ಮೆಸೇಜ್ ಮಾಡಿರುವ ರಶ್ಮಿಕಾ ಅಭಿಮಾನಿ, ನೀವು ತುಂಬಾ ಸುಂದರವಾಗಿದ್ದೀರಿ. ನಾನು ನಿಮ್ಮನ್ನು ನೋಡಲೆಂದೇ ಈ ಫಂಕ್ಷನ್‌ಗೆ ಬಂದಿರುವೆ. ಆದರೆ, ನಿಮ್ಮನ್ನು ನೋಡುವುದರ ಜತೆಗೆ ನಿಮ್ಮ ಮಾತನ್ನೂ ಕೇಳಿ ಅರ್ಥಮಾಡಿಕೊಳ್ಳಲು ಇಷ್ಟಪಡುವೆ. ಆದರೆ, ನನಗೆ ತೆಲುಗು ಅರ್ಥವಾಗುವುದಿಲ್ಲ. ಮುಂದಿನ ಸಾರಿ ದಯವಿಟ್ಟು ನಿಮ್ಮ ಕಾರ್ಯಕ್ರಮಗಳಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿ. ನಿಮಗೆ ನಾರ್ತ್ ಇಂಡಿಯಾದಲ್ಲಿ ಅಭಿಮಾನಿಗಳು ಇಲ್ಲ ಅಂದುಕೊಂಡಿದ್ದೀರಾ?' ಎಂದು ಕೇಳಿದ್ದಾನೆ.
ನೈಟ್ ಮೆಸೇಜ್ ಮಾಡಿ ಅಂದಿದ್ರಿ ನಂಬರ್ ಕೊಟ್ಟು; ಅನುಶ್ರೀಗೆ ತಗ್ಲಾಕೊಂಡ್ರಾ ಅಚ್ಯುತ್?
ಅಷ್ಟೇ ಅಲ್ಲ, ಆತನೇ ಮುಂದುವರೆದು ನಿಮಗೆ ಬಹಳಷ್ಟು ಉತ್ತರ ಭಾರತೀಯರು (North Indian Fans) ಫ್ಯಾನ್ಸ್ ಇದ್ದಾರೆ. ನೀವು ಹೀಗೆ ತೆಲುಗಿನಲ್ಲಿ ಮಾತನಾಡಿದರೆ ಉತ್ತರ ಭಾರತೀಯರಾದ ನಮಗೆ ಮಾತ್ರವಲ್ಲ, ದಕ್ಷಿಣ ಭಾರತದ ಉನ್ನುಳಿದ ಭಾಷಿಗರಾದ ಕನ್ನಡ, ತಮಿಳು ಹಾಗೂ ತೆಲುಗು ಭಾಷಿಗರಿಗೂ ಅರ್ಥವಾಗುವುದಿಲ್ಲ. ನಿಮಗೆ ಎಲ್ಲಾ ಭಾಷೆಗಳ ಅಭಿಮಾನಿಗಳೂ ಇರುವುದರಿಂದ ನೀವು ಮುಂದೆ ಇಂಗ್ಲೀಷ್‌ನಲ್ಲಿ ಮಾತನಾಡಿ. ಇದರಿಂದ ಎಲ್ಲರಿಗೂ ಅರ್ಥವಾಗುತ್ತದೆ' ಎಂದಿದ್ದಾರೆ.
ಪೋರ್ನ್ ಮೂವಿ'ನಲ್ಲಿ ನಟಿಸ್ತೀರಾ ಅಂತ ಕೇಳಿದ್ದ ಅವ್ನು; ಹಿಗ್ಗಾಮುಗ್ಗಾ ಬೆಂಡೆತ್ತಿದ್ರು ಬೆಂಕಿ ತನಿಷಾ!
ಈ ಸಂದೇಶಕ್ಕೆ ಉತ್ತರಿಸಿರುವ ನಟಿ ರಶ್ಮಿಕಾ 'ನನಗೆ ಖಂಡಿತವಾಗಿಯೂ ನಿಮ್ಮ ಪ್ರೀತಿ-ಅಭಿಮಾನ ಅರ್ಥವಾಗುತ್ತಿದೆ. ಆದರೆ, ಕೆಲವೊಮ್ಮೆ ನಾವು ಚಿತ್ರಕ್ಕೆ ಸಂಬಂಧಪಟ್ಟ ಭಾಷೆಯಲ್ಲಿ, ಅಲ್ಲಿನ ನೆಲದಲ್ಲಿ ಮಾತನಾಡದಿದ್ದರೆ ನಾನು ಆ ಭಾಷೆಗೆ, ಜನರಿಗೆ ಗೌರವ ಕೊಡುವುದಿಲ್ಲ ಎಂದುಕೊಂಡು ಬಿಡುತ್ತಾರೆ. ನಾನು ಇಂತಹ ಟೀಕೆಯನ್ನು ಈಗಾಗಲೇ ಎದುರಿಸಿ ಅನುಭವಿಸಿದ್ದೇನೆ. ಆದರೂ, ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು, ಮುಂದೆ ಖಂಡಿತವಾಗಿಯೂ ಇಂಗ್ಲೀಷ್‌ನಲ್ಲಿ ಹೆಚ್ಚು ಮಾತನಾಡಲು ಪ್ರಯತ್ನಿಸುತ್ತೇನೆ' ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಕರಾಳ ಸತ್ಯ ಹೇಳುತ್ತೇನೆ, ಹಲವರು ಸ್ವಇಚ್ಛೆಯಿಂದ್ಲೇ ಹಾಸಿಗೆ ಹಂಚಿಕೊಳ್ತಾರೆ; ಗಾಯತ್ರಿ ಗುಪ್ತಾ!