
ಈ ನಟಿಯ ಹೆಸರು ಕೇಳದವರು ತುಂಬಾ ಕಡಿಮೆ ಎಂದೇ ಹೇಳಬೇಕು. ತೆಲುಗು, ಕನ್ನಡ, ಮಲಯಾಂಳ ಹಾಗು ತಮಿಳು ಈ ಎಲ್ಲಾ ಭಾಷೆಗಳ ಅಂದರೆ ದಕ್ಷಿಣ ಭಾರತದಲ್ಲಿ ಖ್ಯಾತರಾಗಿದ್ದ ನಟಿ ಇವರು. ಆದರೆ, ಅವು ಪ್ರಸಿದ್ಧಿ ಪಡೆದಿದ್ದು 90ರ ದಶಕದ ಬಾಲನಟಿಯಾಗಿ. 4-5ನೇ ವರ್ಷದಲ್ಲೇ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ, ಅದೆಷ್ಟು ಖ್ಯಾತಿ ಸಂಪಾದಿಸಿದ್ದರು ಎಂದರೆ, ಹುಟ್ಟಿದರೆ ಅಂತ ಮಗಳು ಹುಟ್ಟಬೇಕು ಎಂದು ಪ್ರತಿಯೊಂದು ತಂದೆ-ತಾಯಿ ಹಂಬಲಿಸವಷ್ಟರ ಮಟ್ಟಿಗೆ ಈಕೆಯನ್ನು ಎಲ್ಲರೂ ಇಷ್ಟಪಟ್ಟಿದ್ದರು.
ಚಿನಕುರುಳಿಯಂತೆ ಪಟಪಟನೆ ಮಾತಾಡುವುದು, ಯಾವ ಪ್ರತಿಭಾವಂತ ಸ್ಟಾರ್ ನಟನಟಿಯರಿಗೂ ಕಮ್ಮಿಯಿಲ್ಲದ ನಟನೆ ಮೂಕಲ ಸಿನಿಮಾ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿದ್ದರು ಈ ಬಾಲ ನಟಿ. ಆದರೆ, ಆಕೆ ಬಾಲನಟಿಯಾಗಿಯೇ ಉಳಿಯಲು ಸಾಧ್ಯವೇ? ಪ್ರಕೃತಿ ಸಹಜ ಎಂಬಂತೆ ಆಕೆಗೆ ವಯಸ್ಸಾಗುತ್ತಿದ್ದಂತೆ ಆಕೆ ನಟನೆ ಬಿಟ್ಟು ವಿದ್ಯಾಭ್ಯಾಸದತ್ತ ಗಮನ ಹರಿಸಿದರು. ಯಾವಾಗ ಹದಿಹರೆಯಕ್ಕೆ ಕಾಲಿಟ್ಟರೋ, ಆಗ ಮತ್ತೆ ಮಾಡೆಲಿಂಗ್, ಜಾಹೀರಾತು, ನಟನೆ ಹೀಗೆ ಮತ್ತೆ ಮರಳಿ ತಮ್ಮ ಬಣ್ಣದ ಲೋಕದ ಪ್ರಯಾಣ ಆರಂಭಿಸಿದರು.
ಮೆಗಾಸ್ಟಾರ್ 'ವಿಶ್ವಂಬರ' ಲುಕ್ ನೋಡಿ ಫ್ಯಾನ್ಸ್ ಥ್ರಿಲ್; ತ್ರಿಷಾ ಓಕೆ, ಜಾಹ್ನವಿ ಕಪೂರ್ ಯಾಕೆ ಅಂತಿದಾರಲ್ಲ!
ಆದರೆ, ಬಾಲನಟಿಯಾಗಿ ಗಳಿಸಿದ್ದ ಖ್ಯಾತಿ ಕೂಡ ಈಕೆಯ ಕೈ ಹಿಡಿಯಲಿಲ್ಲ. ಅದೇನಾಯಿತೋ ಎಂಬಂತೆ ಈಕೆಯನ್ನು ಯಶಸ್ಸು ಕೈ ಹಿಡಿಯಲೇ ಇಲ್ಲ. ನಟಿಸಿದ ಯಾವ ಸಿನಿಮಾ ಕೂಡ ಈ ನಟಿಗೆ ಯಶಸ್ಸು ತಂದುಕೊಡಲೇ ಇಲ್ಲ. ಆದರೆ, ಈಕೆಯ ಜತೆ ಒಮ್ಮೆ ಕೆಲಸ ಮಾಡಿದ ನಿರ್ಮಾಪಕರು, ನಿರ್ದೇಶಕರು ಆಕೆಯನ್ನು ಮತ್ತೆ ಕರೆಯಲೇ ಇಲ್ಲವಂತೆ. ಕಾರಣ, ಅಹಂಕಾರ ಎನ್ನಲಾಗುತ್ತಿದೆ. ಈಕೆಯ ದರ್ಪ ಯಾವ ಮಟ್ಟಿಗೆ ಇತ್ತು ಎಂದರೆ, ನಿರ್ದೇಶಕರು ಈಕೆಯ ಕಾಲ್‌ಶೀಟ್ ಬೇಡವೇ ಬೇಡ ಎಂಬಷ್ಟು ಎನ್ನಲಾಗಿದೆ.
ನರೇಂದ್ರ ಮೋದಿ ತವರಲ್ಲಿ 'ಜಸ್ಟ್ ಪಾಸ್' ಹಾಡಿನ ಮೋಡಿ; 'ನೋಡಿದ ಕೂಡಲೇ' ಏನಾಯ್ತು ಹೇಳ್ತೀರಾ!?
ಈಕೆಯ ಹೆಸರು ಶ್ಯಾಮಿಲಿ. ಆದರೆ, ಈಕೆಯನ್ನು ಸಿನಿಮಾ ಪ್ರೇಕ್ಷಕರು ಗುರುತಿಸುವುದು ಬೇಬಿ ಶ್ಯಾಮಿಲಿ (Baby Shamili)ಎಂಬ ಹೆಸರಿನಿಂದಲೇ ಆಗಿದೆ. ಅದಕ್ಕೆ ಕಾರಣ, ಆಕೆ ಖ್ಯಾತಿ ಪಡೆದಿದ್ದು ಪಟ್ಟು ಹುಡುಗಿಯಾಗಿದ್ದಾಗ ಬೇಬಿ ಶ್ಯಾಮಿಲಿ ಎಂಬ ಹೆಸರಿನಲ್ಲಿ ಸಿನಿಮಾ ನಟನೆ ಮಾಡಿದ್ದರಿಂದಲೇ. ಬೇಬಿ ಹಂತ ಮುಗಿದು ಶ್ಯಾಮಿಲಿ ಹೆಸರಿನಲ್ಲಿ ಮಾಡಿದ ಯಾವ ಸಿನಿಮಾ ಕೂಡ ಯಶಸ್ವಿಯಾಗದೇ ಈಕೆ ಸಿನಿಮಾ ರಂಗದಿಂದ ದೂರವೇ ಇರಬೇಕಾಗಿದೆ. ಅಂದಹಾಗೆ, ನಟಿ ಬೇಬಿ ಶ್ಯಾಮಿಲಿ ತಮಿಳು ಸ್ಟಾರ್ ನಟ ಅಜಿತ್ ಪತ್ನಿ ಶಾಲಿನಿಯ ತಂಗಿ.
ಕನ್ನಡದಲ್ಲಿ ಲಾಕಪ್ ಡೆತ್, ಭೈರವಿ, ಕಾದಂಬರಿ, ಮತ್ತೆ ಹಾಡಿತು ಕೋಗಿಲೆ, ಶಾಂಭವಿ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಬೇಬಿ ಶ್ಯಾಮಿಲಿ ಕೊನೆಯದಾಗಿ 2009ರಲ್ಲಿ ತಮಿಳು-ತೆಲುಗು ನಟ ಸಿದ್ಧಾರ್ಥ್ ಜತೆ ಓಯೆ (Oye) ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅಹಂಕಾರಕ್ಕೆ ತೆತ್ತ ಬೆಲೆ ಎಂಬಂತೆ ಸಿನಿಮಾರಂಗದಿಂದಲೇ ಈಕೆ ಮೂಲೆಗುಂಪು ಆಗಬೇಕಾಯ್ತುಯ ಎಂಬುದು ಅವರನ್ನು ಬಲ್ಲವರು ಹೇಳುವ ಮಾತು. ಅದೇನೇ ಇದ್ದರೂ ಬಾಲನಟಿಯಾಗಿ ಬೇಬಿ ಶ್ಯಾಮಿಲಿ (Shamili) ತೋರಿರುವ ಪ್ರತಿಭೆಯನ್ನು ಯಾರೂ ಮೆರಯಲು ಸಾಧ್ಯವಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.