ಐಶ್ವರ್ಯಾ ರೈ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವು ಸಂಗತಿಗಳು ಇಲ್ಲಿರಬಹುದು ಒಮ್ಮೆ ನೋಡಿ..!

Published : Aug 10, 2024, 11:55 AM IST
ಐಶ್ವರ್ಯಾ ರೈ ಬಗ್ಗೆ ನಿಮಗೆ ಗೊತ್ತಿಲ್ಲದ ಹಲವು ಸಂಗತಿಗಳು ಇಲ್ಲಿರಬಹುದು ಒಮ್ಮೆ ನೋಡಿ..!

ಸಾರಾಂಶ

ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರಿಗೆ ಆರಾಧ್ಯಾ ಎಂಬ ಮಗಳಿದ್ದಾಳೆ. ಐಶ್ವರ್ಯಾ ರೈ ಮಾವ ಅಮಿತಾಬ್ ಬಚ್ಚನ್ ಹಾಗೂ ಅತ್ತೆ ಜಯಾ ಬಚ್ಚನ್ ಎಂದು ಪತ್ಯೇಕವಾಗಿ ಹೇಳಬೇಕಿಲ್ಲ. ಇತ್ತೀಚೆಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ..

ನಟಿ ಐಶ್ವರ್ಯಾ ರೈ (Aishwarya Rai) ಹುಟ್ಟಿದ್ದು 1973ರಲ್ಲಿ ಕರ್ನಾಟಕದ ಮಂಗಳೂರಿನಲ್ಲಿ. ಅವರ ತಂದೆ ಮಿಲಿಟರಿಯಲ್ಲಿ ಡಾಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಐಶ್ವರ್ಯಾ ರೈ ಅವರು ಚಿಕ್ಕಂದಿನಿಂದಲೂ ಡಾಕ್ಟರ್ ಆಗಬೇಕೆಂದೇ ಕನಸು ಕಂಡಿದ್ದರಂತೆ. ಆದರೆ, ಕಾಲ ಕಳೆದಂತೆ ಅವರು ಮಾಡೆಲಿಂಗ್ ಕಡೆ ಆಕರ್ಷಿತರಾದರು. ಎಲ್ಲಾ ತರಹದ ಕ್ಲಾಸಿಕಲ್ ನೃತ್ಯಗಳನ್ನು ಅವರು ಕಲಿತರು. ಮಾಡೆಲಿಂಗ್‌ನಲ್ಲಿ ಬಹಳಷ್ಟು ಪರಿಶ್ರಮ ವಹಿಸಿ ಕೆಲಸ ಮಾಡಿದ್ದಾರೆ. 

1994ರಲ್ಲಿ ಐಶ್ವರ್ಯಾ ರೈ ಅವರು 'ಮಿಸ್ ವರ್ಲ್ಡ್‌' ಪಟ್ಟ ಪಡೆದುಕೊಂಡರು. 1997ರಲ್ಲಿ ಹಿಂದಿಯ 'ಔರ್ ಪ್ಯಾರ್ ಹೋ ಗಯಾ' ಚಿತ್ರದ ಮೂಲಕ ಸಿನಿಮಾ ಕೆರಿಯರ್ ಶುರು ಮಾಡಿದರು. ಆದರೆ ತಮಿಳಿನಲ್ಲಿ ಶಂಕರ್ ನಿರ್ದೇಶನ, ಪ್ರಶಾಂತ್ ನಾಯಕತ್ವದ 'ಜೀನ್ಸ್' ಚಿತ್ರವು ಅವರ ಮೊಟ್ಟ ಮೊದಲ ಕಮರ್ಷಿಯಲ್ ಹಿಟ್ ಚಿತ್ರ ಎನಿಸಿತು. ಬಳಿಕ ನಟಿ ಐಶ್ವರ್ಯಾ ರೈ ಅವರು ಬಹಳಷ್ಟು ಚಿತ್ರಗಳಲ್ಲಿ ನಟಿಸಿ ಸ್ಟಾರ್ ನಟಿ ಎನಿಸಿಕೊಂಡರು. 

ಟಾಕ್ಸಿಕ್ ಬೆನ್ನಲ್ಲೇ ಯಶ್ ನೆಕ್ಸ್ಟ್‌ ಸಿನಿಮಾ ಸುಳಿವೂ ಸಿಕ್ತು, ಜೋರಾಯ್ತು ಚರ್ಚೆ; ಗೆಸ್ ಮಾಡ್ತೀರಾ?

ನಟ ಸಲ್ಮಾನ್ ಖಾನ್ ಜೊತೆಗಿನ ಸ್ನೇಹ, ಬಳಿಕ ಬ್ರೇಕಪ್ ಮೂಲಕ ಒಮ್ಮೆ ಸಾಕಷ್ಟು ಸುದ್ದಿಯಾಗಿದ್ದರು. ಬಳಿಕ ಸ್ಟಾರ್ ನಟಿಯಾಗಿ ಒಂದು ದಶಕಗಳಿಗೂ ಹೆಚ್ಚು ಕಾಲ ಬಾಲಿವುಡ್‌ನಲ್ಲಿ ಮಿಂಚಿದರು. ಅವರಿಗೆ ಸಿನಿಮಾದಲ್ಲಿನ ಅಮೋಘ ನಟನೆಗಾಗಿ ಎರಡು ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ದೊರಕಿದೆ. ಬಳಿಕ, 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟರು. 

ನಟಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರಿಗೆ ಆರಾಧ್ಯಾ ಎಂಬ ಮಗಳಿದ್ದಾಳೆ. ಐಶ್ವರ್ಯಾ ರೈ ಮಾವ ಅಮಿತಾಬ್ ಬಚ್ಚನ್ ಹಾಗೂ ಅತ್ತೆ ಜಯಾ ಬಚ್ಚನ್ ಎಂದು ಪತ್ಯೇಕವಾಗಿ ಹೇಳಬೇಕಿಲ್ಲ. ಇತ್ತೀಚೆಗೆ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರಿಬ್ಬರ ದಾಂಪತ್ಯ ಚೆನ್ನಾಗಿಲ್ಲ, ಡಿವೋರ್ಸ್ ಆಗಲಿದೆ ಎಂದೆಲ್ಲಾ ವದಂತಿ ಇದ್ದರೂ ಅದ್ಯಾವುದೂ ಅಧೀಕೃತ ಎನ್ನುವಂತಿಲ್ಲ. 

ಹಲೋ, ಇಲ್ಲಿ ಸ್ವಲ್ಪ ನೋಡ್ರೀ... ಕಾಂತಾರ ಖ್ಯಾತಿ ರಿಷಬ್ ಶೆಟ್ಟಿ ಕಾಲೆಳಿದಿದ್ದು ಯಾರನ್ನ ಗೊತ್ತಾ?

ಒಟ್ಟಿನಲ್ಲಿ, ಕರ್ನಾಟಕ, ಮಂಗಳೂರು ಮೂಲದ ನಟಿ ಐಶ್ವರ್ಯಾ ರೈ ಅವರು ವಶ್ವ ಸುಂದರಿಯಾಗಿ ಮೆರೆದವರು. ಮಾಡೆಲಿಂಗ್ ಹಾಗು ಸಿನಿಮಾದಲ್ಲಿ ಮಿಂಚಿದವರು. ಹಲವಾರು ಇಂಟರ್‌ನ್ಯಾಷನಲ್ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಹಲವು ಗೌರವ, ಪ್ರಶಸ್ತಿಗಳನ್ನು ಪಡೆದವರು. ಈಗಲೂ ಕೂಡ ಹಲವಾರು ವೇದಿಕೆಗಳಲ್ಲಿ ಮಿಂಚುತ್ತ ತಮ್ಮ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸುತ್ತಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?