ರಾಷ್ಟ್ರಮಟ್ಟದಲ್ಲಿ ಕಾಂತಾರ ಎಫೆಕ್ಟ್ ಜೋರಾಗಿದೆ. ಎಷ್ಟರ ಮಟ್ಟಿಗೆ ಅಂದರೆ ತಮಿಳು ನಟ ವಿಶಾಲ್ ಭೂತಕೋಲ, ತುಳುನಾಡ ಸಂಸ್ಕತಿಯನ್ನು ಕಣ್ಣಾರೆ ನೋಡಲು ಧರ್ಮಸ್ಥಳಕ್ಕೆ ಬರ್ತಾರಂತೆ.
ಕಾಂತಾರ ರಿಲೀಸ್ ಆಗಿ ಹತ್ರತ್ರ ಮೂರು ತಿಂಗಳಾಗ್ತಾ ಬಂತು. ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಓಟಿಟಿಯಲ್ಲೂ ಕಮಾಲ್ ಮಾಡಿದೆ. ಈ ಸಿನಿಮಾ ನೋಡಿ ದೇಶಾದ್ಯಂತದ ಜನರಿಗೆ ಕರ್ನಾಟಕ ಕರಾವಳಿಯ ಜನಪ್ರಿಯ ನಂಬಿಕೆ ದೈವಾರಾಧನೆ ಬಗ್ಗೆ ಆಸಕ್ತಿ, ಕುತೂಹಲ ಹೆಚ್ಚಿದೆ. ಕರಾವಳಿಯ ದೈವಾರಾಧನೆ ಈ ಮೂಲಕ ದೇಶಾದ್ಯಂತ ಸದ್ದು ಮಾಡುತ್ತಿದೆ. ತುಳುನಾಡಿನ ಗುಳಿಗ, ಪಂಜುರ್ಲಿ ದೈವಗಳ ಬಗ್ಗೆ ಜನ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಇನ್ನೊಂದೆಡೆ ಕಾಂತಾರ ಚಿತ್ರದ ಬಗ್ಗೆ ಸ್ಟಾರ್‌ಗಳೆಲ್ಲ ಮಾತಾಡಿದ್ದಾರೆ. ತುಳುನಾಡಿನ ಭೂತ ಕೋಲಕ್ಕೆ ಇದ್ದಕ್ಕಿದ್ದ ಹಾಗೆ ಯೂಟ್ಯೂಬ್‌ನಲ್ಲಿ ವೀಕ್ಷಣೆ ಅಧಿಕವಾಗಿದೆ. ಭೂತಕೋಲಗಳಿಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲೇಟೆಸ್ಟ್ ಸುದ್ದಿ ಅಂದರೆ ಸೆಲೆಬ್ರಿಟಿಗಳು ಈಗ ಭೂತಕೋಲವನ್ನು ಕಣ್ಣಾರೆ ನೋಡಲು ಉತ್ಸುಕರಾಗಿರೋದು. ತಮಿಳು ನಟ ವಿಶಾಲ್ ಇದೀಗ ತಾನು ಧರ್ಮಸ್ಥಳಕ್ಕೆ ಬರುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಕಾಂತಾರ ಸಿನಿಮಾ.
ಹೌದು, ಕಾಂತಾರ ಸಿನಿಮಾದಲ್ಲಿ ತೋರಿಸಿರುವ ಪಂಜುರ್ಲಿ, ಗುಳಿಗ ಭೂತ ಕೋಲವನ್ನು ನಟ ವಿಶಾಲ್‌ಗೆ ಕಣ್ಣಾರೆ ನೋಡುವ ಮನಸ್ಸಾಗಿದೆ. ಅಷ್ಟೇ ಅಲ್ಲ, ತುಳುನಾಡ ಸಂಸ್ಕೃತಿ ಹೇಗಿದೆ ಅಂತ ತಿಳಿದುಕೊಳ್ಳೋ ಮನಸ್ಸಾಗಿದೆ. ಅವರೀಗ ಕಾಂತಾರ ಸಿನಿಮಾದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅವರಿಗೆ ಕಾಲ್ ಮಾಡಿ ಕಂಗ್ರಾಟ್ಸ್ ಹೇಳಿದ್ದಾರೆ. ಅಷ್ಟೇ ಅಲ್ಲ, ದೇಶಕ್ಕೆ ಕರ್ನಾಟಕ ಕರಾವಳಿಯ ಸಂಸ್ಕೃತಿ ಪರಿಚಯಿಸದ್ದನ್ನು ಮನಸಾರೆ ಹೊಗಳಿದ್ದಾರೆ. ವಿಶಾಲ್ ಅವರಿಗೆ ಸಿನಿಮಾ ಬಹಳ ಹಿಡಿಸಿದೆ ಅನ್ನೋದನ್ನು ಸಪರೇಟಾಗಿ ಹೇಳಬೇಕಿಲ್ಲ. ಅವರಿಗೆ ಇಡೀ ಸಿನಿಮಾ ನೋಡಿ ಅಚ್ಚರಿ, ಆನಂದ ಎರಡೂ ಆಗಿದೆ. ಸಿನಿಮಾ ನೋಡಿದ ಮೇಲೆ ಶಾಕ್‌ನಲ್ಲಿ ಬಿದ್ದಿದ್ದಾರಂತೆ. ಅದರಲ್ಲೂ ಕ್ಲೈಮ್ಯಾಕ್ಸ್‌ನಲ್ಲಿ ಗುಳಿಗನ ಪರ್ಫಾಮೆನ್ಸ್ ನೋಡಿ ಅವರಿಗೆ ರೋಮಾಂಚನವಾಗಿದೆ. ಸೋ, ವಿಶಾಲ್ ಇದನ್ನು ಕಣ್ಣಾರೆ ನೋಡಬೇಕೆಂದು ಬಯಸುತ್ತಿದ್ದಾರೆ.
'ಎಮರ್ಜೆನ್ಸಿ'ಗಾಗಿ ಸಂಸತ್ ಭವನ ಕೇಳಿದ ನಟಿ ಕಂಗನಾ ರಣಾವತ್; ಸಿಗುತ್ತಾ ಅನುಮತಿ?
ಹಾಗೆ ನೋಡಿದರೆ ಈ ಸಿನಿಮಾದ ಬಳಿಕ ರಿಷಬ್ ಅವರನ್ನು ಇಡೀ ದೇಶವೇ ಡಿವೈನ್ ಸ್ಟಾರ್ ಎಂದು ಕೊಂಡಾಡುತ್ತಿದೆ. ಇಡೀ ಸಿನಿಮಾದಲ್ಲೊಂದು ಡಿವೈಟ್ ಟಚ್(Devine touch) ಇದೆ, ಅದು ಎಲ್ಲರನ್ನೂ ತಟ್ಟಿದೆ. ಈ ಸಿನಿಮಾ ಮಾಡೋದಕ್ಕಿಂತಲೂ ಮುಂಚೆ ರಿಷಬ್ ಧರ್ಮಸ್ಥಳಕ್ಕೆ ತೆರಳಿ ಅಲ್ಲಿ ಅಣ್ಣಪ್ಪ ದೈವದ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ, ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದಿದ್ದಾರೆ. ಇನ್ನೊಂದೆಡೆ ದೈವದ ವೇಷ ಹಾಕುವಾಗ ದೈವದ ಪಾತ್ರಿ ನಿರ್ವಹಿಸುತ್ತಿದ್ದ ನಿಯಮ, ವ್ರತ ಪಾಲಿಸಿದ್ದಾರೆ. ಅಷ್ಟೇ ಅಲ, ಪಂಜುರ್ಲಿ ದೈವದ ಅಪ್ಪಣೆಯನ್ನೂ ಕೇಳಿದ್ದಾರೆ. ಆಗ ಆ ಭೂತ ತನ್ನ ಮುಖದ ಬಣ್ಣವನ್ನೇ ತೆಗೆದು ರಿಷಬ್ ಮುಖಕ್ಕೆ ಹಚ್ಚಿ ಆಶೀರ್ವಾದ(Blessings) ಮಾಡಿದೆ. ದೈವದ ಆಶೀರ್ವಾದಪೂರ್ವಕವಾಗಿ ಶ್ರದ್ಧೆಯಿಂದ ಮಾಡಿದ ಸಿನಿಮಾ ಗೆದ್ದಿದೆ.
ಈಗ ರಿಷಬ್ ಕಾಂತಾರ ಎರಡನೇ ಭಾಗ ಮಾಡಲು ಪ್ಲಾನ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅದಕ್ಕಾಗಿ ಪಂಜುರ್ಲಿ ದೈವದ ಅಪ್ಪಣೆ ಕೇಳಿದ್ದಾರೆ. ಅದಕ್ಕೆ ದೈವ ಷರತ್ತು(Condition) ಬದ್ಧ ಅಪ್ಪಣೆ ನೀಡಿದೆ. ಆದರೆ ಸದ್ಯಕ್ಕೆ ಕಾಂತಾರ 2 ಮಾಡಬೇಕೋ ಬೇಡವೋ ಅನ್ನೋ ಗೊಂದಲದಲ್ಲಿ ರಿಷಬ್ ಶೆಟ್ಟಿ ಬಿದ್ದಿದ್ದಾರೆ.
ಮಗ ಬದುಕಲ್ಲ ಎನ್ನುವ ಭಯವಿತ್ತು, ಮಗಳು ಅನ್‌ಪ್ಲ್ಯಾನ್ಡ್ ಬೇಬಿ; ಚಿತ್ರರಂಗ ಬಿಡಲು ಕಾರಣ ತಿಳಿಸಿದ ನಮ್ರತಾ
ಇನ್ನು ವಿಶಾಲ್ ಹೋಗುತ್ತೇನೆ ಅಂದ ಧರ್ಮಸ್ಥಳದ ದೈವಗಳಿಗೆ ಬಹಳ ಮಹತ್ವ(Importence)ವಿದೆ. ಅ ದೈವಗಳ ಹಿನ್ನೆಲೆ, ಕಾರಣಿಕ ದೊಡ್ಡದು. ದೊಡ್ಡ ಸಮುದಾಯವೇ ಈ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದೆ. ಈ ದೈವಗಳಿಗೆ ಹರಕೆ ಹೇಳಿಕೊಂಡು ತೀರಿಸುವವರ ಸಂಖ್ಯೆಯೂ ದೊಡ್ಡದಿದೆ. ಜೊತೆಗೆ ಈ ದೈವರಾಧನೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಧರ್ಮಸ್ಥಳದ ಬೀಡಿನ ದೈವಗಳು, ಅಣ್ಣಪ್ಪ ದೈವದ ಆರಾಧನೆಯನ್ನು ಕಣ್ಣಾರೆ ನೋಡಲು ಈ ಬಾರಿ ನಟ ವಿಶಾಲ್ ಸೇರಿದಂತೆ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.