ಮಕ್ಕಳಿಂದ ನಮ್ಮಿಬ್ಬರ ನಡುವೆ ಜಗಳ; ಕೆಲಸ ಬಿಟ್ಟು ಮನೆಯಲ್ಲಿರಲು ಇದೇ ಕಾರಣವೆಂದ ನಮ್ರತಾ ಶಿರೋಡ್ಕರ್‌

By Vaishnavi ChandrashekarFirst Published Dec 19, 2022, 11:04 AM IST
Highlights

ಪತಿ ಮಹೇಶ್ ಬಾಬು ಕಾಲ್ ಆಂಡ್ ಮೆಸೇಜ್ ಮ್ಯಾನೇಜ್ ಮಾಡುವ ನಮ್ರತಾ ಸಿನಿಮಾದಿಂದ ದೂರ ಉಳಿಯಲು ಇದೇ ಕಾರಣವಂತೆ.... 

ಸೌತ್ ಚಿತ್ರರಂಗದ ಸೂಪರ್ ಸ್ಟಾರ್ ಆಂಡ್ ಸಿಂಪಲ್ ಸ್ಟಾರ್ ಮಹೇಶ್ ಬಾಬು ಮತ್ತು ನಟಿ ನಮ್ರತಾ ಶಿರೋಡ್ಕರ್ ಪ್ರೀತಿಸಿ 2005ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಮ್ರತಾ ಮಹೇಶ್ ಬಾಬುಗಿಂತ 3 ವರ್ಷ ದೊಡ್ಡವರು . 2000ರಲ್ಲಿ ಮಹೆಶ್ ಬಾಬು ಮತ್ತು ನಮತ್ರಾ ಮೊದಲು ಭೇಟಿಯಾಗಿದ್ದು ಸಿನಿಮಾ ಶೂಟಿಂಗ್ ಮುಗಿಯುವಷ್ಟರಲ್ಲಿ ಇಬ್ಬರು ಪ್ರೀತಿಸಲು ಆರಂಭಿಸಿದ್ದರು. ವೃತ್ತಿ ಜೀವನಕ್ಕೆ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಪ್ರೀತಿ ವಿಚಾರವನ್ನು ಪೋಷಕರಿಗೂ ಹೇಳಿರಲಿಲ್ಲವಂತೆ. ಮದುವೆಗೂ ಮುನ್ನ ಮಹೇಶ್ ಬಾಬು ಹಾಕಿದ ಕಂಡಿಷನ್‌ ಸಖತ್ ವೈರಲ್ ಆಗಿತ್ತು... ಈ ಬಗ್ಗೆ ಸಂದರ್ಶನವೊಂದರಲ್ಲಿ ನಮ್ರತಾ ಮಾತನಾಡಿದ್ದಾರೆ. 

'ನಮ್ಮ ಮದುವೆ ಬಗ್ಗೆ ಮಹೇಶ್ ಬಾಬುಗೆ ಕ್ಲಾರಿಟಿ ಇತ್ತು. ಮದುವೆ ನಂತರ ನಾಣು ಸಿನಿಮಾ ಮಾಡಬಾರದು ನಟಿಸಬಾರದು ಎಂದು ಹೇಳಿದ್ದರು. ನನಗೆ ನಟನೆಗಿಂತ ಮಹೇಶ್ ಬಾಬು ಮುಖ್ಯ ಅಲ್ಲದೆ ಮದುವೆ ಬಹಳ ಹ್ಯಾಪಿಯೆಸ್ಟ್‌ ಮೊಮೆಂಟ್‌ ನಟನೆ ನಿಲ್ಲಿಸಿದಕ್ಕೆ ಯಾವುದೇ ಕಾರಣಕ್ಕೂ ನನಗೆ ಬೇಸರವಿಲ್ಲ. ನನ್ನ ಕೆಲಸವನ್ನು ಗಂಭೀರವಾಗಿ ಪರಿಗಣಿಸಿದ್ದರೆ ಪರ್ಸನಲ್ ಜೀವನದಲ್ಲಿ ಇಷ್ಟೊಂದು ಖುಷಿಯಾಗಿರಲು ಆಗುತ್ತಿರಲಿಲ್ಲ. ಅನೇಕ ವಿಚಾರಗಳಲ್ಲಿ ನಾನು ಸೋಂಬೇರಿ ಹೀಗಾಗಿ ನಾನು ಪ್ಲ್ಯಾನ್ ಮಾಡಿದ ಪ್ರಕಾರ ಏನೂ ನಡೆಯುವುದಿಲ್ಲ. ನನ್ನ ಜೀವನದಲ್ಲಿ ಏನು ನಡೆದಿದೆ ಅದೆಲ್ಲಾ ಅದಾಗೆ ನಡೆದಿರುವುದು. ಒಂದೇ ಹೇಳುವುದು ನಾನು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಅದರಿಂದ ಜೀವನದಲ್ಲಿ ನಾನು ಇಷ್ಟೊಂದು ಖುಷಿಯಾಗಿರುವುದು' ಎಂದು ಹೇಳಿದ್ದಾರೆ.

'ನಟಿಸಲು ಶುರು ಮಾಡಿದಾಗಲೂ ನಾನು ಸೋಂಬೇರಿ ಆಗಿದ್ದೆ, ಮಾಡಲಿಂಗ್ ಮಾಡಿ ಬೋರ್ ಅಗಿದೆ ಎಂದು ನಾನು ನಟನೆ ಶುರು ಮಾಡಿದ್ದು. ಆಕ್ಟಿಂಗ್ ಎಂಜಾಯ್ ಮಾಡಿ ಮುಂದೇನು ಎಂದು ಯೋಚನೆ ಮಾಡುವಾಗ ನಾನು ನನ್ನ ಮ್ಯಾನ್ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ್ದು ಆದಾದ ನಂತರ ಮದುವೆಯಾಗಿದ್ದು. ಈ ವಿಚಾರದ ಬಗ್ಗೆ ನಾನು ಎಲ್ಲೂ ಕಂಪ್ಲೇಂಟ್ ಹೇಳುವುದಿಲ್ಲ ಆದರೆ ಮಹೇಶ್ ಬಾಬು ಅವರನ್ನು ಮದುವೆಯಾಗಿ ಖುಷಿಯಾಗಿರುವ ಜೀವನದಲ್ಲಿ ಖುಷಿ ಕ್ಷಣಗಳನ್ನು ಕಾಣುತ್ತಿವೆ ನನ್ನ ಪ್ರಪಂಚವೇ ಬದಲಾಗಿದೆ. ಮದುವೆ ಆಗುವುದೇ ಒಂದೊಳ್ಳೆ ಅನುಭವ. ತಾಯಿತನ ನನ್ನ ಜೀವನವನ್ನು ಮತ್ತಷ್ಟು ಬದಲಾಯಿಸಿದೆ' ಎಂದಿದ್ದಾರೆ. 

ಮಗ ಬದುಕಲ್ಲ ಎನ್ನುವ ಭಯವಿತ್ತು, ಮಗಳು ಅನ್‌ಪ್ಲ್ಯಾನ್ಡ್‌ ಬೇಬಿ; ಚಿತ್ರರಂಗ ಬಿಡಲು ಕಾರಣ ತಿಳಿಸಿದ ನಮ್ರತಾ

'ಮಹೇಶ್ ಬಾಬು ಇಂಟ್ರಾವರ್ಟ್‌. ಸಿನಿಮಾ ಆದ್ಮೇಲೆ ಫ್ಯಾಮಿಲಿನೇ ನಮ್ಮ ಪ್ರಪಂಚ. ಬೇರೆ ಕೆಲಸ ಇಲ್ಲ ಅಂದರೆ ಮಕ್ಕಳಿಗಾಗಿ ಮಹೇಶ್ ಸಮಯ ಕೊಡುತ್ತಾರೆ. ಗೌತಮ್ ಮತ್ತು ಸಿತಾರ ತಮಗೆ ಏನೇ ಬೇಕಿದ್ದರೂ ಮಹೇಶ್ ಅವರನ್ನು ಕೇಳುತ್ತಾರೆ. ಅವರು ಬಿಡಲ್ಲ ಕೊಡಿಸುತ್ತಾರೆ ಇದೇ ಕಾರಣಕ್ಕೆ ನಮ್ಮಿಬ್ಬರ ನಡುವೆ ಕೆಲವೊಮ್ಮೆ ಜಗಳ ಆಗುತ್ತದೆ. ಇದೆಲ್ಲಾ ಸಣ್ಣ ಪುಟ್ಟ ಜಗಳ ಇದು ಎಲ್ಲರ ಮನೆಯಲ್ಲೂ ನಡೆಯುತ್ತದೆ' ಎಂದು ನಮ್ರತಾ ನಕ್ಕಿದ್ದಾರೆ.

'ನನ್ನ ಫ್ಯಾಮಿಲಿ ನನಗೆ ತುಂಬಾನೇ ಸಪೋರ್ಟಿವ್ ಆಗಿದ್ದಾರೆ ಏನೇ ಕೆಲಸ ಮಾಡಿದ್ದರೂ ಅಥವಾ ಯಾವುದೇ ನಿರ್ಧಾರ ತೆಗೆದುಕೊಂಡರೂ ಒಪ್ಪಿಕೊಳ್ಳುತ್ತಾರೆ. ಓಪನ್ ಮೈಂಡ್‌ ಜನರು ಎಂದು ಹೇಳುವುದಕ್ಕಿಂತ ಹೆಚ್ಚಾಗಿ ನಾವು ಏನೇ ಮಾಡಿದ್ದರೂ ನಮ್ಮ ಲಿಮಿಟ್ ಮೀರಿ ಕೆಲಸ ಮಾಡುವುದಿಲ್ಲ. ಮನಸ್ಸಿಗೆ ಏನು ಖುಷಿ ಕೊಡುತ್ತದೆ ಅದನ್ನು ಮಾಡಿ ಎಂದು ಹೇಳುತ್ತಾರೆ. ಇದೇ ಯೋಚನೆಗಳನ್ನು ನನ್ನ ಮಕ್ಕಳಿಗೂ ಹೇಳಿ ಕೊಡಲು ಶುರು ಮಾಡಿರುವೆ. ನನ್ನ ಮತ್ತು ನನ್ನ ಸಹೋದರಿ ಇಷ್ಟೊಂದು ಖುಷಿಯಾಗಿರಲು ಕಾರಣವೇ..ನಮ್ಮ ಬಳಿ ಏನಿದೆ ಎಷ್ಟಿದೆ ಅದರಲ್ಲಿ ಖುಷಿ ಕಾಣುವುದು ಹೀಗಾಗಿ ಯಾವ ಬೇಸರವಿಲ್ಲ. ಅಯ್ಯೋ ಜೀವನದಲ್ಲಿ ನಾನು ಇದೆಲ್ಲಾ ಮಾಡಿಲ್ಲ ಅನ್ನೋ ರಿಗ್ರೆಟ್‌ ಕೂಡ ಇಲ್ಲ' ಎಂದು ನಮ್ರತಾ ಹೇಳಿದ್ದಾರೆ. 

click me!