'ಎಮರ್ಜೆನ್ಸಿ'ಗಾಗಿ ಸಂಸತ್ ಭವನ ಕೇಳಿದ ನಟಿ ಕಂಗನಾ ರಣಾವತ್; ಸಿಗುತ್ತಾ ಅನುಮತಿ?

Published : Dec 19, 2022, 11:37 AM ISTUpdated : Dec 19, 2022, 11:48 AM IST
'ಎಮರ್ಜೆನ್ಸಿ'ಗಾಗಿ ಸಂಸತ್ ಭವನ ಕೇಳಿದ ನಟಿ ಕಂಗನಾ ರಣಾವತ್; ಸಿಗುತ್ತಾ ಅನುಮತಿ?

ಸಾರಾಂಶ

ನಟಿ ಕಂಗನಾ ರಣಾವತ್ 'ಎಮರ್ಜೆನ್ಸಿ' ಸಿನಿಮಾ ಶೂಟಿಂಗ್ ಮಾಡಲು ಸಂಸತ್ ಭವನ ಕೇಳಿದ್ದಾರೆ. ಆದರೆ ಅನುಮತಿ ಸಿಗುವುದು ಅನುಮಾನ ಎನ್ನಲಾಗಿದೆ.  

ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ವಿವಾದಗಳ ಮೂಲಕವೇ ಸದ್ದು ಮಾಡುತ್ತಿದ್ದ ಕಂಗನಾ ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದರು. ಸಿನಿಮಾ, ಶೂಟಿಂಗ್ ಅಂತ ಬ್ಯುಸಿಯಾಗಿದ್ದ ಕಂಗನಾ ಇದೀಗ ಮತ್ತೆ ಸದ್ದು ಮಾಡುತ್ತಿದ್ದಾರೆ. ಅಂದಹಾಗೆ ಕಂಗನಾ ಈ ಬಾರಿ ಸುದ್ದಿಯಾಗಿದ್ದು ಯಾವುದೇ ವಿವಾದದಿಂದ ಅಲ್ಲ, ಸಿನಿಮಾ ವಿಚಾರಕ್ಕೆ. ಹೌದು, ಕಂಗನಾ ಸದ್ಯ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಕೆಲವರ ಲುಕ್ ರಿವೀಲ್ ಮಾಡಿದ್ದು ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇದೇ ಖುಷಿಯಲ್ಲಿ ಕಂಗನಾ ಎಮರ್ಜೆನ್ಸಿ ಸಿನಿಮಾವನ್ನು ಭರ್ಜರಿಯಾಗಿ ಶೂಟ್ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾವನ್ನು ಸಂಸತ್ ಭವನದೊಳಗೆ ಶೂಟ್ ಮಾಡಲು ಅವಕಾಶ ಕೊಡಿ ಎಂದು ಕಂಗನಾ ಬೇಡಿಕೆ ಇಟ್ಟಿದ್ದಾರೆ. 

ತುರ್ತು ಪರಿಸ್ಥಿತಿ ಕುರಿತು ತಾವು ನಿರ್ಮಿಸುತ್ತಿರುವ ಸಿನಿಮಾಕ್ಕೆ ಸಂಸತ್‌ ಭವನದೊಳಗೆ ಚಿತ್ರೀಕರಣಕ್ಕೆ ಅನುಮತಿ ನೀಡಬೇಕೆಂದು ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಲೋಕಸಭೆ ಸಚಿವಾಲಯವನ್ನು ಕೋರಿದ್ದಾರೆ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ಜಾರಿಗೊಳಿಸಿದ್ದ ತುರ್ತುಸ್ಥಿತಿ ಕುರಿತು ‘ಎಮರ್ಜೆನ್ಸಿ’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ, ಮಾಜಿ ಪ್ರಧಾನಿ  ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಕೆಲ ದೃಶ್ಯಗಳನ್ನು ಸಂಸತ್ತಿನೊಳಗೆ ಚಿತ್ರೀಕರಿಸಲು ಅನುಮತಿ ಕೋರಿದ್ದಾರೆ. ಆದರೆ, ಅನುಮತಿ ನೀಡುವ ಸಾಧ್ಯತೆ ಕಡಿಮೆಯಿದೆ ಎಂದು ಮೂಲಗಳು ಹೇಳಿವೆ.

Kangana Ranaut: ಮತ್ತೊಂದು ತಮಿಳು ಚಿತ್ರದಲ್ಲಿ ಕಂಗನಾ: ಈ ಬಾರಿ ಚಂದ್ರಮುಖಿಯಾಗಿ ನಟಿ!

ಸಂಸತ್‌ ಭವನದೊಳಗೆ ಸರ್ಕಾರಿ ಸ್ವಾಮ್ಯದ ದೂರದರ್ಶನ ಹಾಗೂ ಸಂಸದ್‌ ಟೀವಿ ಚಾನಲ್‌ನವರಿಗೆ ಮಾತ್ರ ವಿಡಿಯೋ ಚಿತ್ರೀಕರಣಕ್ಕೆ ಅನುಮತಿಯಿದೆ. ಯಾವುದೇ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗೆ ಚಿತ್ರೀಕರಣಕ್ಕೆ ಅನುಮತಿಯಿಲ್ಲ. ಈವರೆಗೆ ಯಾವುದೇ ಖಾಸಗಿ ಚಿತ್ರೀಕರಣಕ್ಕೆ ಸಂಸತ್ತಿನೊಳಗೆ ಅನುಮತಿ ನೀಡಿದ ಉದಾಹರಣೆಯು ಇಲ್ಲ. ಹೀಗಾಗಿ ಈಗ ಕಂಗನಾರಿಗೂ ಅನುಮತಿ ಸಿಗುವುದಿಲ್ಲ ಎಂದು ಹೇಳಲಾಗಿದೆ.

'ಕಾಂತಾರ' ಚಿತ್ರವನ್ನು ನೇರವಾಗಿ ಆಸ್ಕರ್‌ಗೆ ಕಳುಹಿಸಿ; ನಟಿ ಕಂಗನಾ ರಣಾವತ್ ಒತ್ತಾಯ

‘ಎಮರ್ಜೆನ್ಸಿ’ ಚಿತ್ರವನ್ನು ಕಂಗನಾ ಅವರೇ ಬರೆದು, ನಿರ್ಮಾಣ ಮಾಡಿ, ನಿರ್ದೇಶನ ಮಾಡಿ, ಅವರೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಂಗನಾ ರಣಾವತ್​ ಅವರ ವೃತ್ತಿಜೀವನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಹುಮುಖ್ಯ ಆಗಲಿದೆ. ಅದಕ್ಕಾಗಿ ಅವರು ಸಖತ್​ ತಯಾರಿ ಮಾಡಿಕೊಂಡು ಶೂಟಿಂಗ್​ ಆರಂಭಿಸಿದ್ದಾರೆ. ಕಂಗನಾ ವಿಭಿನ್ನ ಪಾತ್ರ ಆಯ್ಕೆ ಮಾಡಿಕೊಂಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇಂದಿರಾ ಪಾತ್ರಕ್ಕೆ ಬಣ್ಣ ಹಚ್ಚಿರುವ ಕಂಗನಾ ಲುಕ್ ಕೂಡ ಎಲ್ಲರ ಹೃದಯ ಗೆದ್ದಿತ್ತು. ಈ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ