ಕ್ರಾಕ್ ಚಿತ್ರದ ಪ್ರಚಾರಕ್ಕಾಗಿ ಅಪಾಯಕಾರಿ ಸ್ಟಂಟ್ ವಿಡಿಯೋ ಪೋಸ್ಟ್, ನಟ ವಿದ್ಯುತ್ ವಿರುದ್ಧ ಭಾರಿ ಆಕ್ರೋಶ!

Published : Feb 20, 2024, 05:44 PM ISTUpdated : Feb 20, 2024, 05:45 PM IST
ಕ್ರಾಕ್ ಚಿತ್ರದ ಪ್ರಚಾರಕ್ಕಾಗಿ ಅಪಾಯಕಾರಿ ಸ್ಟಂಟ್ ವಿಡಿಯೋ ಪೋಸ್ಟ್, ನಟ ವಿದ್ಯುತ್ ವಿರುದ್ಧ ಭಾರಿ ಆಕ್ರೋಶ!

ಸಾರಾಂಶ

ಬಹುನಿರೀಕ್ಷೆಯ ಕ್ರಾಕ್ ಚಿತ್ರ ಪ್ರತಿ ದಿನ ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಾಗುತ್ತಿದೆ. ಇದೀಗ ಈ ಚಿತ್ರಕ್ಕಾಗಿ ನಟ ವಿದ್ಯುತ್ ಜಮವಾಲ್ ಅಪಾಯಕಾರಿ ಸ್ಟಂಟ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಈ ಪ್ರಚಾರದ ಗಿಮಿಕ್ ತೀವ್ರ ಟೀಕೆಗೆ ಗುರಿಯಾಗಿದೆ.

ಮುಂಬೈ(ಫೆ.20) ಬಾಲಿವುಡ್ ನಟ ವಿದ್ಯುತ್ ಜಮವಾಲ್ ತಮ್ಮ ಅದ್ಭುತ ನಟನೆ, ಅಸಾಧಾರಣ ಮೈಕಟ್ಟು, ಅತ್ಯುತ್ತಮ ಸ್ಟಂಟ್‌ಗಳ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.  ಕಳೆದ ಹಲವು ದಿನಗಳಿಂದ ವಿದ್ಯುತ್ ಜಮಾವಲ್ ಕ್ರಾಕ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದರು. ಬಹುನಿರೀಕ್ಷೆಯ ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದರ ನಡುವೆ ಕ್ರಾಕ್ ಚಿತ್ರದ ಪ್ರಮೋಶನ್‌ಗಾಗಿ ನಟ ವಿದ್ಯುತ್ ಜಮಾವಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಇದು ಚಲಿಸುತ್ತಿರುವ ರೈಲಿನಲ್ಲಿ ಮಾಡಿದ ಅಪಾಯಕಾರಿ ಸ್ಟಂಟ್ ವಿಡಿಯೋ ಆಗಿದೆ. ಆದರೆ  ಈ ವಿಡಿಯೋ ವಿದ್ಯುತ್ ಜಮಾವಲ್‌ಗೆ ಬಾರಿ ಹಿನ್ನಡೆ ತಂದಿದೆ. ಕಾರಣ ಒರ್ವ ನಟನಾಗಿ ಇಂತಹ ಅಪಾಯಕಾರಿ ಸ್ಟಂಟ್ ವಿಡಿಯೋಗಳನ್ನು ಪೋಸ್ಟ್ ಮಾಡಿದರೆ, ಇದರಿಂದ ಪ್ರೇರಿತರಾಗಿ ಅನಾಹುತಗಳು ಸಂಭವಿಸುವ ಸಾಧ್ಯತೆ ಹೆಚ್ಚು. ನಿಮ್ಮ ಮೇಲಿನ ಗೌರವ ಇಲ್ಲವಾಗಿದೆ ಎಂದು ಹಲರು ಆಕ್ರೋಶ ಹೊರಹಾಕಿದ್ದಾರೆ.

ಬಾಲಿವುಡ್‌ನ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರ ಕ್ರಾಕ್. ಈ ಚಿತ್ರದಲ್ಲಿ ಹಲವು ಅಪಾಯಕಾರಿ ಸ್ಟಂಟ್‌ಗಳಿವೆ. ಈ ಎಲ್ಲಾ ಸ್ಟಂಟ್‌ಗಳನ್ನು ಖುದ್ದ ನಟ ವಿದ್ಯುತ್ ಜಮಾವಲ್ ಮಾಡಿದ್ದಾರೆ. ಇದರ ನಡುವೆ ಚಿತ್ರದ ಪ್ರಮೋಶನ್‌ಗಾಗಿ ರೈಲಿನಲ್ಲಿ ಇಬ್ಬರು ಯುವಕರು ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ಡೇರ್ ಡೇವಿಲ್ಸ್‌ಗೆ ನನ್ನ ನಮನಗಳು ಎಂದು ಬರೆದುಕೊಂಡಿದ್ದರು.

ಸರಿಯಾದ ಸಮಯಕ್ಕೆ ನಿನ್ನೊಳಗಿರುವ ಪ್ರಾಣಿಯನ್ನು ಹೊರಗೆ ತಂದಿದ್ದೀಯಾ; ವರ್ಮಾ ಟ್ವೀಟ್ ವೈರಲ್!

ಅಪಾಯಾಕಾರಿ ಸ್ಟಂಟ್ ಕುರಿತು ಗಂಭೀರತೆ, ಅಪಾಯಕಾರಿ ಸನ್ನಿವೇಶಗಳ ಕುರಿತು ಹೇಳಲು ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಆದರೆ ಈ ವಿಡಿಯೋದ ಉದ್ದೇಶ ಈಡೇರಲಿಲ್ಲ. ಕಾರಣ ಒರ್ವ ನಟ ಈ ರೀತಿಯ ಸ್ಟಂಟ್ ವಿಡಿಯೋಗಳನ್ನು ಉತ್ತೇಜಿಸುವ ರೀತಿಯಲ್ಲಿ ಪೋಸ್ಟ್ ಮಾಡಿದರೆ, ಸಾರ್ವಜನಿಕರ ಮೇಲೆ ಬೀರುವ ಪರಿಣಾಮದ ಕುರಿತು ನೆಟ್ಟಿಗರು ಪ್ರಶ್ನಿಸಿದ್ದಾರೆ. 

ಕ್ರಾಕ್ ಚಿತ್ರಕ್ಕಾಗಿ ವಿದ್ಯುತ್ ಈಗಾಗಲೇ ರೈಲಿನಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ್ದಾರೆ. ಚಲಿಸುತ್ತಿರುವ ರೈಲಿನ ಮೇಲೆ ಹತ್ತಿ ಒಡುತ್ತಿರುವ ದೃಶ್ಯ, ಚಲಿಸುತ್ತಿರುವ ರೈಲಿನಿಂದ ಇಳಿಯುತ್ತಿರುವ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಈ ರೈಲಿನ ಸ್ಟಂಟ್‌ಗಳು ಅಂದುಕೊಂಡಷ್ಟು ಸುಲಭವಲ್ಲ ಅನ್ನೋದನ್ನು ಹೇಳಲು ಹೋದ ನಟ ಇದೀಗ ವಿವಾದಕ್ಕೆ ಸಿಲುಕಿದ್ದಾರೆ.

ಹಿಮಾಲಯದ ತಪ್ಪಲಿನಲ್ಲಿ ಸಂಪೂರ್ಣ ಬೆತ್ತಲಾದ ತುಪಾಕಿ ನಟ : ಆಧ್ಮಾತ್ಮದ ಮಾತು: ಫೋಟೋಸ್ ವೈರಲ್

ನಿಮ್ಮ ಬಗ್ಗೆ ಗೌರವವಿದೆ. ಆದರೆ ಈ ರೀತಿಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದರೆ ಸಾರ್ವಜನಿಕರು, ಸಿನಿಮಾ ನಟರನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ. ಇದರಿಂದ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ನೆಟ್ಟಿಗರು ತಿಳಿ ಹೇಳಿದ್ದಾರೆ. ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ವಿದ್ಯುತ್ ಜಮಾವಲ್ ಈ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?