ಶೂಟಿಂಗ್​ನಲ್ಲಿ ಜಾರಿಬಿದ್ದ ಹಾಟ್​ ಬ್ಯೂಟಿ ನೋರಾ ಫತೇಹಿ: ಛೇ... ಹೀಗೆಲ್ಲಾ ನಟಿಯ ಕಾಲೆಳೆಯೋದಾ ನೆಟ್ಟಿಗರು?

By Suvarna News  |  First Published Feb 20, 2024, 4:39 PM IST

ಶೂಟಿಂಗ್​ ಸಮಯದಲ್ಲಿ ಜಾರಿಬಿದ್ದ ನೋರಾ ಫತೇಹಿ. ಅಯ್ಯೋ ಪಾಪ ಎನ್ನೋ ಬದ್ಲು ಹೀಗೆಲ್ಲಾ  ನಟಿಯ ಕಾಲೆಳೆಯೋದಾ ನೆಟ್ಟಿಗರು?
 


ಬಾಲಿವುಡ್​ನ ಹಾಟ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ನಟಿ ನೋರಾ ಫತೇಹಿ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹಾಟ್​ನೆಸ್​ನಿಂದಲೇ ಫೇಮಸ್​ ಆಗಿರೋ ನಟಿ ಈಕೆ. ಇಂದು ಅಂದ್ರೆ ಫೆ.6 ಈ ನಟಿಗೆ 32ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ, ನೋರಾ ಫತೇಲಿ ಕುರಿತು ಹೇಳುವುದಾದರೆ, ನೋರಾ ಫತೇಹಿ ಐಟಂ ಗರ್ಲ್​ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ.  ಅಂದಹಾಗೆ ನಟಿ, ಯಾವುದೇ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ತಮ್ಮ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ನೃತ್ಯವನ್ನು ಮಾಧುರಿ ದೀಕ್ಷಿತ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರೊಂದಿಗೆ ಹೋಲಿಸಲಾಗುತ್ತದೆ. ಇವರು ಸೊಂಟ ಕುಣಿಸುತ್ತಾ ಬೆಲ್ಲಿ ಡ್ಯಾನ್ಸ್​ ಮಾಡಿದರೆ ಕಣ್​ ಕಣ್​ ಬಿಟ್ಟು ನೋಡಬೇಕು ಹಾಗಿರುತ್ತದೆ!

ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ನೋರಾ,  ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ.  ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ ದೊಡ್ಡ ಬ್ರೇಕ್‌ ಸಿಕ್ಕಿತ್ತು. ಕನ್ನಡ ಕೆಡಿ ಸಿನಿಮಾದಲ್ಲಿಯೂ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲವುಗಳ ನಡುವೆಯೇ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಜೊತೆ ನಟಿಯ ಹೆಸರು ಥಳಕು ಹಾಕಿಕೊಂಡಿದೆ. ಆರ್ಯನ್​ಗಿಂತ ಐದು ವರ್ಷ ದೊಡ್ಡವಳಾಗಿರುವ ನೋರಾ, ಆರ್ಯನ್​ ಜೊತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಫೋಟೋಗಳು ವೈರಲ್​ ಆಗಿವೆ. 

Latest Videos

undefined

ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಜೊತೆ ಆರ್ಯನ್​ ಡೇಟಿಂಗ್​? ಈಕೆ ಬಾಲಿವುಡ್​ ಹಾಟ್​ ನಟಿ!

 
 
 
 
 
 
 
 
 
 
 
 
 
 
 

A post shared by Nora Fatehi (@norafatehi)

ಇದೀಗ ನಟಿ ಶೂಟಿಂಗ್​ ಸಮಯದಲ್ಲಿ ಸ್ಕೇಟಿಂಗ್​ ಮಾಡುತ್ತಿದ್ದಾಗ ಜಾರಿ ಬಿದ್ದಿದ್ದಾರೆ. ತರಬೇತುದಾರ ಸ್ಕೇಟಿಂಗ್​ ಕಲಿಸುತ್ತಿದ್ದ ಸಮಯದಲ್ಲಿ ವೇಗದಲ್ಲಿ ಹೋಗುತ್ತಿರುವಾಗಲೇ ನಟಿ ಜಾರಿ ಬಿದ್ದಿದ್ದಾರೆ. ಅವರು ಬೀಳುತ್ತಲೇ ಅಲ್ಲಿದ್ದವರೆಲ್ಲರೂ ಓಡಿ ಬಂದಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದೆ. ಕೆಲವೇ ಕೆಲವು ಮಂದಿ ಅಯ್ಯೋ ಪಾಪ, ಹುಷಾರು ಮೇಡಂ ಎಂದೆಲ್ಲಾ ಕಮೆಂಟ್​ ಹಾಕಿದ್ದರೆ, ಇನ್ನು ಹಲವಾರು ಮಂದಿ ನೆಗೆಟಿವ್​ ಕಮೆಂಟ್​ ಹಾಕುವ ಮೂಲಕ ನಟಿಯ ಕಾಲೆಳೆದಿದ್ದಾರೆ. ಬಳಕುವ ಬಳ್ಳಿಯಂತಿರುವ ನೋರಾ ತಮ್ಮ ದೇಹದ ಭಾಗಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಗಾತ್ರವನ್ನು ದೊಡ್ಡದಾಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಇದನ್ನೇ ಮುಂದು ಮಾಡಿಕೊಂಡಿರುವ ಕಮೆಂಟಿಗರು, ಈಕೆಗೆ ಏನೂ ಆಗುವುದಿಲ್ಲ ಬಿಡಿ, ಇನ್​ಬಿಲ್ಟ್​ ಪ್ರೊಟೆಕ್ಷನ್​ ಸಿಸ್ಟಮ್​ ಇದೆ ಎಂದು ರೇಗಿಸಿದರೆ, ಇನ್ನು ಕೆಲವರು ನಿಮ್ಮ ಪ್ಲಾಸ್ಟಿಕ್​ ಬಗ್ಗೆ ಜೋಪಾನ ಎಂದು ಹೇಳಿದ್ದಾರೆ. ಮತ್ತೆ ಕೆಲವರು ನಟಿಯ ಕಾಲೆಳೆದಿದ್ದು, ಉಲ್ಟಾ ಮಾತ್ರ ಬೀಳಬೇಡಿ, ಮುಂಭಾಗದ ಗಾತ್ರಕ್ಕೆ ಅಲ್ಲಿಯ ಟೈಲ್ಸ್​ ಒಡೆದು ಹೋಗಬಹುದು ಎಂದಿದ್ದಾರೆ. ಮತ್ತೆ ಕೆಲವರು ಮುಂಭಾಗ ಭಾರಿ ಭಾರ ಇರುವ ಕಾರಣ ಬ್ಯಾಲೆನ್ಸ್​ ತಪ್ಪುವುದು ಸಹಜ ಎಂದಿದ್ದಾರೆ. ಒಟ್ಟಿನಲ್ಲಿ ದೇಹದ ಭಾಗವನ್ನೇ ಇಟ್ಟುಕೊಂಡು ಹಲವಾರು ಮಂದಿ ಕೆಟ್ಟ ರೀತಿಯ ಕಮೆಂಟ್​ ಮಾಡುತ್ತಿದ್ದಾರೆ. 

ಅಷ್ಟಕ್ಕೂ ನೋರಾ ಅವರ ಬಗ್ಗೆ ಕೆಲವೊಂದು ನೆಗೆಟಿವ್​ ಸುದ್ದಿಗಳೂ ಸದ್ದು ಮಾಡುತ್ತಲೇ ಇರುತ್ತವೆ. ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಅನ್ನೋ ಟೈಟಲ್‌ ಜತೆಗೆ ಹಿಂದಿ ಸಿನಿಮಾಗಳ ವಿದೇಶಿ ಸೆನ್ಸಾರ್‌ ಬೋರ್ಡ್‌ನ ಸದಸ್ಯನಾಗಿಯೂ ಕಾರ್ಯ ನಿರ್ವಹಿಸುತ್ತಿರೋ  ಉಮೈರ್ ಸಂಧು ಈ ಹಿಂದೆ ನೋರಾ ಬಗ್ಗೆ ಅತ್ಯಂತ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು.  ಐಟಂ ಡ್ಯಾನ್ಸರ್‌ ಕೂಡ ಆಗಿರುವ ನೋರಾ ಫತೇಹಿ ಬಗ್ಗೆ ಉಮೈರ್‌ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದರು. ಅಷ್ಟಕ್ಕೂ ಅವರು ಹೇಳಿದ್ದೇನೆಂದರೆ,  ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಅತ್ಯಂತ ದುಬಾರಿ ನೈಟ್‌ ಗರ್ಲ್‌ ಯಾರೆಂದರೆ ಅದು ನೋರಾ ಫತೇಹಿ. ಪ್ರತಿಯೊಬ್ಬ ನಟ, ರಾಜಕಾರಣಿ, ಉದ್ಯಮಿಗಳು ಅದರಲ್ಲೂ ಅಂಬಾನಿ ಸಹ ಈಕೆ ಜತೆ ಮಲಗಲು ಇಷ್ಟಪಡುತ್ತಾರೆ ಎಂದು ಬರೆದುಕೊಂಡಿದ್ದರು.  ಅದಕ್ಕೆ ಪರ  ವಿರೋಧ ನಿಲುವು ವ್ಯಕ್ತವಾಗಿತ್ತು.  

5 ಸಾವಿರದಿಂದ 50 ಕೋಟಿ ಒಡತಿ! ಬಾರ್​ ಗರ್ಲ್​ನಿಂದ ಬಾಲಿವುಡ್​ವರೆಗೆ... ಮಾದಕ ಚೆಲುವೆಯ ರೋಚಕ ಸ್ಟೋರಿ... ​

click me!