ಪತ್ರಕರ್ತೆಗೆ ನಿಂದನೆ; 'ಹೋಮ್' ಸಿನಿಮಾ ಖ್ಯಾತಿಯ ನಟ ಶ್ರೀನಾಥ್ ಭಾಸಿ ಅರೆಸ್ಟ್

Published : Sep 27, 2022, 03:11 PM IST
ಪತ್ರಕರ್ತೆಗೆ ನಿಂದನೆ; 'ಹೋಮ್' ಸಿನಿಮಾ ಖ್ಯಾತಿಯ ನಟ ಶ್ರೀನಾಥ್ ಭಾಸಿ ಅರೆಸ್ಟ್

ಸಾರಾಂಶ

ಸಂದರ್ಶನ ವೇಳೆ ಮಹಿಳಾ ಆಂಕರ್ ಅನ್ನು ನಿಂದಿಸಿದ ಆರೋಪದ ಮೇರೆಗೆ ಮಲಯಾಳಂ ನಟ ಶ್ರೀನಾಥ್ ಭಾಸಿಯನ್ನು ಅರೆಸ್ಟ್ ಮಾಡಲಾಗಿದೆ. ನಟ ಶ್ರೀನಾಥ್ ಅವರನ್ನು ಎರ್ನಾಕುಲಂನಲ್ಲಿ ಸೋಮವಾರ (ಸೆಪ್ಟಂಬರ್ 26) ಬಂಧಿಸಲಾಗಿದೆ. 

ಸಂದರ್ಶನ ವೇಳೆ ಮಹಿಳಾ ಆಂಕರ್ ಅನ್ನು ನಿಂದಿಸಿದ ಆರೋಪದ ಮೇರೆಗೆ ಮಲಯಾಳಂ ನಟ ಶ್ರೀನಾಥ್ ಭಾಸಿಯನ್ನು ಅರೆಸ್ಟ್ ಮಾಡಲಾಗಿದೆ. ನಟ ಶ್ರೀನಾಥ್ ಅವರನ್ನು ಎರ್ನಾಕುಲಂನಲ್ಲಿ ಸೋಮವಾರ (ಸೆಪ್ಟಂಬರ್ 26) ಬಂಧಿಸಲಾಗಿದೆ. ಪತ್ರಕರ್ತೆ ನಟ ಶ್ರೀನಾಥ್ ವಿರುದ್ಧ ಮರಾಡು ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 

ಸಂದರ್ಶನದ ವೇಳೆ ಮಲಯಾಳಂ ನಟ ಶ್ರೀನಾಥ್ ಮಹಿಳಾ ಆಂಕರ್ ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೆಕ್ಷನ್ 509ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಸದ್ಯ ಶ್ರೀನಾಥ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

ಶ್ರೀನಾಥ್ ತಮ್ಮ ಹೊಸ ಸಿನಿಮಾ ‘ಚಟ್ಟಂಬಿ’ ಪ್ರಚಾರ ಕಾರ್ಯಕ್ರಮಗಳಲ್ಲಿ ಶ್ರೀನಾಥ್ ಭಾಸಿ ತೊಡಗಿದ್ದಾರೆ. ‘ಚಟ್ಟಂಬಿ’ ಪ್ರಮೋಷನ್ ಗಾಗಿ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ಶ್ರೀನಾಥ್ ಭಾಸಿ ಸಂದರ್ಶನ ನೀಡಿದ್ದರು. ಸಂದರ್ಶನದ ವೇಳೆ ಮಹಿಳಾ ಆಂಕರ್‌ ಕೇಳಿದ ಪ್ರಶ್ನೆಗೆ ಶ್ರೀನಾಥ್ ಭಾಸಿ ರೊಚ್ಚಿಗೆದ್ದರು. ಸಿನಿಮಾದ ಟೈಟಲ್ ಬಗ್ಗೆ ಕೇಳಿದ ಪ್ರಶ್ನೆಗೆ ಶ್ರೀನಾಥ್ ಫುಲ್ ಗರಂ ಆದರು. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳಾ ಆಂಕರ್ ಹೇಳಿದ ಪ್ರಶ್ನೆಗೆ ಸಿಟ್ಟಾಗಿದ್ದ ಶ್ರಿನಾಥ್ ಕ್ಯಾಮರಾ ಆಫ್ ಮಾಡುವಂತೆ ಕ್ಯಾಮರ್ ಪರ್ನಸ್‌ಗೆ ಕೇಳಿಕೊಂಡರು. ಬಳಿಕ ಗೌರವ ನೀಡುವಂತೆ ಕೂಗಾಡಿದರು. 

ಆಂಕರ್ ನೀಡಿರುವ ದೂರಿನಲ್ಲಿ ಕ್ಯಾಮರಾ ಆಫ್ ಆದ ಬಳಿಕ ಶ್ರೀನಾಥ್ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆರೋಪಿಸಿದರು. ನಿರೂಪಕಿಯ ದೂರಿನ ಅನ್ವಯ ಶ್ರೀನಾಥ್ ಅವರನ್ನು ಬಂಧಿಸಲಾಗಿದೆ. ಆದರೆ ಶ್ರೀನಾಥ್ ಆರೋಪವನ್ನು ತಳ್ಳಿ ಹಾಕಲಾಗಿದೆ. ಆದರೆ ಟೆಂಪರ್ ಕಳೆದುಕೊಂಡಿದ್ದಕ್ಕೆ ಕ್ಷಮೆ ಕೇಳಿದ್ದಾರೆ ಎನ್ನಲಾಗಿದೆ. 

ಬೆಂಗ್ಳೂರಲ್ಲಿ ಡ್ರಗ್ಸ್‌ ಮಾರುತ್ತಿದ್ದ ಮಲಯಾಳಿ ಕಿರುತೆರೆ ನಟ..!

ಈ ಪ್ರಕರಣದ ಬಳಿಕ ಶ್ರೀನಾಥ್ ಅವರು ಈ ಮೊದಲು ಮೇಲ್ ಆಂಕರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ವೈರಲ್ ಆಗಿದೆ. ಎಫ್‌ಎಮ್ ವಾಹಿನಿಯ ಆರ್ ಜೆ ಜೊತೆಯೂ ಕಿತ್ತಾಡಿಕೊಂಡು ಸಂದರ್ಶನ ಅರ್ಧಕ್ಕೆ ನಿಲ್ಲಿಸಿ ಹೊರಬಂದಿದ್ದರು.     

ಲೈಂಗಿಕ ದೌರ್ಜನ್ಯ: ಮಲಯಾಳಂ ನಟ ವಿಜಯ್ ಬಾಬು ಬಂಧನ

ಶ್ರೀನಾಥ್ ಭಾಸಿ ಬಗ್ಗೆ ಹೇಳುವುದಾದರೆ, ಸಂಗೀತ ಹಿನ್ನೆಲೆಯಿಂದ ಬಂದ ಭಾಸಿ ಬಳಿಕ ನಟನಾಗಿ ಗುರುತಿಸಿಕೊಂಡರು. ರೇಡಿಯೋ ಜಾಕಿ, ವಿಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದರು. ಮಲಯಾಳಂ ಸಿನಿಮಾಗಳಾದ ಪ್ರಣಯಂ, ಉಸ್ತಾದ್ ಹೋಟೆಲ್, ಹನಿ ಬೀ, ಮಸಾಲಾ ರಿಪಬ್ಲಿಕ್, ದಿ ಲಾಸ್ಟ್ ಸಪ್ಪರ್, ಬಿವೇರ್ ಆಫ್ ಡಾಗ್ಸ್, ಬಿಟೆಕ್, ವೈರಸ್, ಹ್ಯಾಪಿ ಸರ್ದಾರ್, ಹೋಮ್ ಮುಂತಾದ ಸಿನಿಮಾಗಳಲ್ಲಿ ಶ್ರೀನಾಥ್ ಭಾಸಿ ಅಭಿನಯಿಸಿದ್ದಾರೆ.
ಕಾಮಿಡಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಚಟ್ಟಂಬಿ ಸಿನಿಮಾ ಶ್ರೀನಾಥ್ ನಾಯಕನಾಗಿ ನಟಿಸಿದ ನಟಿಸಿದ ಮೊದಲ ಚಿತ್ರವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?