ಸಿಎಂ ಆಫರ್ ಬಂದ್ರೂ 'ಬೇಡ' ಅಂದಿದ್ದೇಕೆ ಸೋನು ಸೂದ್? ಕೊನೆಗೂ ಹೊರಬಿತ್ತು ಸೀಕ್ರೆಟ್!

Published : Dec 26, 2024, 10:03 PM ISTUpdated : Dec 26, 2024, 10:11 PM IST
ಸಿಎಂ ಆಫರ್ ಬಂದ್ರೂ 'ಬೇಡ' ಅಂದಿದ್ದೇಕೆ ಸೋನು ಸೂದ್? ಕೊನೆಗೂ ಹೊರಬಿತ್ತು ಸೀಕ್ರೆಟ್!

ಸಾರಾಂಶ

ದಿನನಿತ್ಯ ಊಟ ಕೊಡುವುದರಿಂದ ಹಿಡಿದು ಅಗತ್ಯವಿದ್ದ ಹಣ, ಬಟ್ಟೆ, ರೇಷನ್ ಎಲ್ಲವನ್ನೂ ಒದಗಿಸೋ ಪ್ರಯತ್ನ ಮಾಡಿದ್ರು. ದೇಶ ಮತ್ತು ವಿದೇಶಗಳಲ್ಲಿ ಸಿಲುಕಿರುವ ಜನರಿಗೆ ಎಮರ್ಜನ್ಸಿ ವೇಳೆಯಲ್ಲಿ ಸಹಾಯ ಮಾಡಲು ಅವ್ರು ತಮ್ಮ ಆಸ್ತಿಯನ್ನು ಸಹ ಅಡಮಾನವಿಟ್ಟಿದ್ದರು. ಈ ವೇಳೆ ನಟ ಸೋನು ಸೂದ್​ ಅವರನ್ನು....

ನಟ ಸೋನ್ ಸೂದ್ ಈಗ ಗೊತ್ತಿಲ್ಲದವರು ತುಂಬಾ ಕಡಿಮೆ ಎನ್ನಬಹುದು. ಕರೋನಾ (Corona) ಸಾಂಕ್ರಾಮಿಕ ರೋಗ ಪ್ರಪಂಚದಾದ್ಯಂತ ಹಬ್ಬಿದ್ದ ಸಮಯದಲ್ಲಿ, ಲಾಕ್‌ಡೌನ್ (Lockdown) ವಿಧಿಸಲಾಗಿತ್ತು. ಇಡೀ ದೇಶವೇ ಸಂಕಷ್ಟದಲ್ಲಿದ್ದಾಗ ಹಿಂದಿ ಚಿತ್ರರಂಗ ಹಾಗೂ ಸೌತ್ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಸೋನು ಸೂದ್ (Sonu Sood) ಅಸಹಾಯಕತೆಯಲ್ಲಿ ನರಳುತ್ತಿದ್ದ ಬಡಜನರ ನೆರವಿಗೆ ಬಂದ್ರು, ಸಹಾಯ ಹಸ್ತ ಚಾಚಿದ್ರು. 

ದಿನನಿತ್ಯ ಊಟ ಕೊಡುವುದರಿಂದ ಹಿಡಿದು ಅಗತ್ಯವಿದ್ದ ಹಣ, ಬಟ್ಟೆ, ರೇಷನ್ ಎಲ್ಲವನ್ನೂ ಒದಗಿಸೋ ಪ್ರಯತ್ನ ಮಾಡಿದ್ರು. ದೇಶ ಮತ್ತು ವಿದೇಶಗಳಲ್ಲಿ ಸಿಲುಕಿರುವ ಜನರಿಗೆ ಎಮರ್ಜನ್ಸಿ ವೇಳೆಯಲ್ಲಿ ಸಹಾಯ ಮಾಡಲು ಅವ್ರು ತಮ್ಮ ಆಸ್ತಿಯನ್ನು ಸಹ ಅಡಮಾನವಿಟ್ಟಿದ್ದರು. ಈ ವೇಳೆ ನಟ ಸೋನು ಸೂದ್​ ಅವರನ್ನು ರಾಜಕೀಯಕ್ಕೆ ಸೆಳೆಯಲು ಕೆಲವು ಪಕ್ಷಗಳು ಸಿಎಂ ಆಫರ್ (CM Offer)​ ಕೂಡ ನೀಡಿದ್ದರಂತೆ. ಅದನ್ನೀಗ ನಟ ಸೋನು ಸೂದ್ ಬಾಯ್ಬಿಟ್ಟಿದ್ದಾರೆ. 

ದರ್ಶನ್-ಸುದೀಪ್ ಒಂದಾಗುವ ಸುದಿನ ಹತ್ತಿರ ಬಂದಿದೆ; ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

ಸೋನು ಸೋದ್ ಅದ್ಭುತ ನಟರಾಗಿ ಬಾಲಿವುಡ್ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುಬೇಡಿಕೆ ಪಡೆದಿದ್ದಾರೆ. ನಟನೆಯ ಜೊತೆ ಸೋನು ಸೂದ್​ ಬಡವರ ಪಾಲಿನ ದೇವರು ಎಂದೇ ಜನಪ್ರಿಯರಾಗಿದ್ದಾರೆ.ತಮ್ಮದೇ ಫೌಂಡೇಶನ್ ಮೂಲಕ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತ, ಸಾಮಾಜಿಕ ಕೆಲಸಗಳಿಂದ ಹೆಚ್ಚು ಹೆಸರು ಮಾಡುತ್ತಿದ್ದಾರೆ. ಸೋನು ಸೂದ್ ಅವರ ಕೆಲಸ ಗುರುತಿಸಿದ ಥಾಯ್ಲೆಂಡ್‌ನ ಪ್ರವಾಸೋದ್ಯಮ ಸಚಿವಾಲಯವು ಅವರನ್ನು ಬ್ರಾಂಡ್ ಅಂಬಾಸಿಡರ್ ಮತ್ತು ಪ್ರವಾಸೋದ್ಯಮ ಸಲಹೆಗಾರರನ್ನಾಗಿ ನೇಮಿಸಿದೆ. ಇದು ಭಾರತಕ್ಕೂ ಒಂದು ದೊಡ್ಡ ಗೌರವ ಮತ್ತು ಹೆಮ್ಮೆಯ ಸಂಗತಿ. 

ಸೋನು ಸೂದ್  ಸಂದರ್ಶನವೊಂದರಲ್ಲಿ ತಮಗೆ ರಾಜಕೀಯ ಪಕ್ಷಗಳಿಂದ ಬಂದ ಬಿಗ್​ ಆಫರ್‌ ಗಳ ಬಗ್ಗೆ ಮಾತಾಡಿದ್ದಾರೆ. 'ನನಗೆ ಯಾರ ಬೆಂಬಲವೂ ಬೇಕಾಗಿಲ್ಲ. ನಾನು ಯಾವುದೇ ರೀತಿಯ ತಾರತಮ್ಯವಿಲ್ಲದೆ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತೇನೆ. ನಾನು ರಾಜಕೀಯ ಪಕ್ಷ ಸೇರಿಕೊಂಡರೆ ನನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯವಿದೆ. ಅದಕ್ಕಾಗಿಯೇ  ನಾನು ರಾಜಕೀಯಕ್ಕೆ ಹೋಗಲು ಇಷ್ಟಪಡುತ್ತಿಲ್ಲ' ಎಂದಿದ್ದಾರೆ.

ಸುದೀಪ್-ದರ್ಶನ್​ ಅಭಿಮಾನಿಗಳ ಕಿತ್ತಾಟಕ್ಕೆ ಕಾರಣವಾದ ಕೇಕ್, ನಟ ಪ್ರದೀಪ್‌ರಿಂದ ಸ್ಪಷ್ಟನೆ!

ಅಷ್ಟೇ ಅಲ್ಲ, 'ರಾಜಕೀಯಕ್ಕೆ ಹೋದರೆ ಅಲ್ಲಿ ಯಶಸ್ಸಿನೊಂದಿಗೆ ಜವಾಬ್ದಾರಿಯೂ ಹೆಚ್ಚುತ್ತದೆ. ಬಹಳ ಎತ್ತರದಲ್ಲಿ ನಿಂತು ಬದುಕುವುದು ಕಷ್ಟ. ಬಹಳಷ್ಟು ದೊಡ್ಡ ಸ್ಟಾರ್​ ಗಳು ಯಾವುದರ ಬಗ್ಗೆ ಕನಸು ಕಾಣುತ್ತಾರೋ ಅದು ನನಗೆ 'ಫತೇಹ್' ಸಿನಿಮಾ ನಿರ್ಮಾಣದಲ್ಲಿ ನಟ ಬ್ಯುಸಿ ಆಗಿದ್ದಾರೆ. 'ನನಗೆ ಸಿನಿಮಾ ಅಂದರೆ ತುಂಬಾ ಇಷ್ಟ, ನಟನೆ ಜೊತೆಗೆ ಮುಂದೆ ನಿರ್ದೇಶಕನಾಗಿಯೂ ಗುರುತಿಸಿಕೊಳ್ಳುವ ಆಸೆ ಇದೆ' ಎಂದಿದ್ದಾರೆ ನಟ ಸೋನು ಸೂದ್. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?