ಪುಷ್ಪಾ-2 ಸಿನಿಮಾ ಬಿಡುಗಡೆಯಾದಾಗಿನಿಂದಲೂ ಅಲ್ಲು ಅರ್ಜುನ್ ಒಳ್ಳೆಯ ಕಾರಣಕ್ಕಿಂತ ನೆಗೆಟಿವ್ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದಲ್ಲ ಒಂದು ಸಮಸ್ಯೆಗಳು ಅವರನ್ನು ನಿರಂತರ ಕಾಡುತ್ತಿವೆ ಆದರೆ ಈ ಸಮಸ್ಯೆಗೆ ಅವರ ವರ್ತನೆಯೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.
ಪುಷ್ಪಾ-2 ಸಿನಿಮಾ ಬಿಡುಗಡೆಯಾದಾಗಿನಿಂದಲೂ ಅಲ್ಲು ಅರ್ಜುನ್ ಒಳ್ಳೆಯ ಕಾರಣಕ್ಕಿಂತ ನೆಗೆಟಿವ್ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದಲ್ಲ ಒಂದು ಸಮಸ್ಯೆಗಳು ಅವರನ್ನು ನಿರಂತರ ಕಾಡುತ್ತಿವೆ. ಪುಷ್ಪಾ-2 ಸಿನಿಮಾ ನೋಡಲು ಸಂಧ್ಯಾ ಥಿಯೇಟರ್‌ಗೆ ಮಗನೊಂದಿಗೆ ಬಂದಿದ್ದ ಅಮ್ಮ ಆ ದಿನ ನಡೆದ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದರೆ ಅವರ ಪುತ್ರನ ಮಿದುಳು ನಿಷ್ಕ್ರಿಯಗೊಂಡಿರುವುದು ಎಲ್ಲರಿಗೂ ಗೊತ್ತೆ ಇದೆ. ಇದಾದ ನಂತರ ತೆಲಂಗಾಣ ಸರ್ಕಾರ ಹಾಗೂ ಅಲ್ಲು ಅರ್ಜುನ್ ನಡುವೆ ದೊಡ್ಡ ವಾಕ್ಸಮರವೇ ನಡೆದಿದ್ದು, ಇದು ರಾಜಕೀಯ ಸಮರವಾಗಿ ಬದಲಾಗಿರುವುದು ಎಲ್ಲರಿಗೂ ಗೊತ್ತೆ ಇದೆ. ಹೀಗಿರುವಾಗ ಅಲ್ಲು ಅರ್ಜುನ್ ಅವರ ದುರಂಕಾರದ ವರ್ತನೆಯೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಎಂದು ಕೆಲ ವಿಮರ್ಶಕರು ವಾದ ಮಾಡ್ತಿದ್ದಾರೆ.
ಪುಷ್ಪಾ ನಟ ಅಲ್ಲು ಅರ್ಜುನ್ ತಮ್ಮ ಅತ್ಯುತ್ತಮವಾದ ನಟನಾ ಪ್ರತಿಭೆಗೆ ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿ ಪಡೆದ ತೆಲುಗು ನಟ, ನಟನೆಯಲ್ಲಿ ಒನ್ ನಂಬರ್ ಎನಿಸಿರುವ ನಟನಿಗೆ ಈ ಪ್ರಶಸ್ತಿ ಅವರ ಅಗಾಧವಾದ ಪ್ರತಿಭೆಗೆ ಸಾಕ್ಷಿಯಾಗಿದೆ. ಅಲ್ಲದೇ ತೆಲುಗು ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ಏರಿಸಿದ ನಟರ ಪಟ್ಟಿಯಲ್ಲಿ ಅಲ್ಲು ಅರ್ಜುನ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಹಾಗಂತ ಅವರಿಗೆ ಈ ಇನ್ನಿಲ್ಲದ ಜನಪ್ರಿಯತೆ ತಂದು ಕೊಟ್ಟಿದ್ದು, ಕೇವಲ ಪುಷ್ಪಾ ಸಿನಿಮಾವಲ್ಲ, ಕೇರಳ ಹಾಗೂ ಹಿಂದಿ ಭಾಷಿಕ ಪ್ರದೇಶದಲ್ಲಿಯೂ ಅವರು ಪುಷ್ಪಾ ಸಿನಿಮಾಗೂ ಮೊದಲೇ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು.
undefined
ಗಂಗೋತ್ರಿ ಸಿನಿಮಾ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಅಲ್ಲು ಅರ್ಜುನ್ ಅವರ ಪ್ರಯಾಣ ಪುಷ್ಪ 2ವರೆಗೆ ಬಹಳ ವಿನಮ್ರತೆಯಿಂದ ಕೂಡಿತ್ತು. ತಳಮಟ್ಟದಿಂದ ಅವರು ಸಾಟಿಯಿಲ್ಲದ ಎತ್ತರಕ್ಕೆ ಬೆಳೆದ ರೀತಿ ಏನು ಸಣ್ಣ ಸಾಧನೆಯಲ್ಲ, ಒಬ್ಬ ನಟನಾಗಿ ಅಲ್ಲು ಅರ್ಜುನ್ ಅವರಲ್ಲಿ ಯಾವುದೇ ಕೊರತೆ ಇಲ್ಲ ಆದರೆ ಇತ್ತೀಚಿನ ಬೆಳವಣಿಗೆಗಳು ಅವರು ಯಶಸ್ಸನ್ನು ಏರುತ್ತಿದ್ದಂತೆ ಅವರ ಆ ಹಿಂದಿನ ತಮ್ಮ ವಿನಮ್ರತೆಯನ್ನು ಕಳೆದುಕೊಂಡರಾ, ಯಶಸ್ಸು ಅವರ ತಲೆ ತಿರುಗಿಸಿತಾ ಎಂಬ ಪ್ರಶ್ನೆಗಳನ್ನು ಕೆಲ ಟಾಲಿವುಡ್‌ನ ವಿಮರ್ಶಕರೇ ಹೇಳುತ್ತಿದ್ದಾರೆ. ಅವರ ದುರಂಕಾರದ ವರ್ತನೆಯೇ ಅವರನ್ನು, ಅವರ ಅಭಿಮಾನಿಗಳು ಹಾಗೂ ಅವರ ಸ್ವಂತ ಕುಟುಂಬದಿಂದ ದೂರ ಮಾಡುತ್ತಿದೆ ಎಂದು ಟಾಲಿವುಡ್ ಮೂಲಗಳು ಹೇಳುತ್ತಿವೆ.
ಅವರ ಅಸಾಧಾರಣ ನಟನಾ ಕೌಶಲ್ಯದ ಹೊರತಾಗಿಯೂ, ಅವರು ಇತರ ಮೆಗಾ ಕುಟುಂಬದ ಹೀರೋಗಳಂತೆ ಮೋಡಿ ಮತ್ತು ಕ್ರೇಜ್ ಅನ್ನು ಹೊಂದಿಲ್ಲ. ಅವರ ವರ್ತನೆಯೇ ಅವರನ್ನು ಮೆಗಾ ಕುಟುಂಬದಿಂದ ದೂರ ಇಟ್ಟಿದೆ ಎಂದು ಟಾಲಿವುಡ್ ಇಂಡಸ್ಟ್ರಿಯ ಕೆಲ ಮೂಲಗಳು ಹೇಳುತ್ತಿವೆ. ಪುಷ್ಪಾ-2 ಚಿತ್ರದ ಯಶಸ್ಸಿನ ನಂತರ, ಅವರ ಈ ದುರಂಕಾರದ ವರ್ತನೆ ಇನ್ನಷ್ಟು ಸ್ಪಷ್ಟವಾಗಿದೆ ಎಂದು ತೆಲುಗು ಚಿತ್ರರಂಗದಲ್ಲಿ ಜನ ಮಾತನಾಡುತ್ತಿದ್ದಾರೆ.
ಪುಷ್ಪ 2 ಅಲ್ಲು ಅರ್ಜುನ್ ಅವರನ್ನು ಹೊಸ ಎತ್ತರಕ್ಕೆ ಏರಿಸಿದಂತು ನಿಜ ಆದರೆ ಈ ಬೃಹತ್ ಹಿಟ್‌ನ ವೈಭವದಲ್ಲಿ ಮುಳುಗುವ ಬದಲು ಅಲ್ಲು ಅರ್ಜುನ್ ಅವರು ವಿವಾದಗಳಲ್ಲಿ ಸಿಲುಕಿಕೊಂಡಿದ್ದು, ಇದು ಅವರ ಯಶಸ್ಸನ್ನು ಮುಚ್ಚಿಹಾಕಿವೆ. ಅನೇಕರು ಅವರ ವರ್ತನೆಯೇ ಇದಕ್ಕೆ ಕಾರಣವೆಂದು ಹೇಳುತ್ತಿದ್ದಾರೆ. ಒಂದು ಕಾಲದಲ್ಲಿ ವಿನಯವೇ ಮೈದುಂಬಿಕೊಂಡಿದ್ದ ನಟ, ಈಗ ಅದೇ ನಡವಳಿಕೆಯನ್ನು ಕಾಪಾಡಿಕೊಳ್ಳಲು ಹೋರಾಡುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(Taggede Le) ಬಗ್ಗೋದೇ ಇಲ್ಲ ಎಂಬ ಅವರ ಪುಷ್ಪಾ ಸಿನಿಮಾದ ಆನ್ ಸ್ಕ್ರೀನ್ ಡೈಲಾಗ್ ರೀತಿಯೇ ನಿಜ ಜೀವನದಲ್ಲೂ ಅಲ್ಲು ಅರ್ಜುನ್ ಅವರ ವರ್ತನೆ ಮುಂದುವರೆದಿದ್ದು, ಇದಕ್ಕೆ ಅವರೀಗ ಭಾರಿ ಬೆಲೆ ತೆರಬೇಕಾಗಿ ಬಂದಿದೆ. ಹೀಗಾಗಿ ಅಲ್ಲು ಅರ್ಜುನ್ ಅವರು ತಮ್ಮ ಮೊದಲ ಸಿನಿಮಾ ಗಂಗೋತ್ರಿ ತೆರೆಕಂಡ ಸಂದರ್ಭದಲ್ಲಿ ಹೇಗೆ ವಿನಯದಿಂದ ಇದ್ದರೋ ಅದೇ ರೀತಿಯ ವರ್ತನೆಯನ್ನು ಮತ್ತೆ ಬೆಳೆಸಿಕೊಳ್ಳಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳು ಪವನ್ ಕಲ್ಯಾಣ್ ಬಗ್ಗೆ ಮಾತನಾಡುವಂತೆ ಮನವಿ ಮಾಡಿದ್ದರು. ಆದರೆ ಮಾತನಾಡಲ್ಲ ಬ್ರದರ್ ಎಂದು ಹೇಳುವ ಮೂಲಕ ಅವರು ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿದರು. ಇದು ಮೆಗಾ ಅಭಿಮಾನಿಗಳನ್ನು ಕೂಡ ಕೋಪಗೊಳ್ಳುವಂತೆ ಮಾಡಿತ್ತು. ಅಲ್ಲು ಅರ್ಜುನ್ ಅವರ ಈ ಉದ್ಧಟತನವೇ ಅವರನ್ನು ಮೆಗಾ ಕುಟುಂಬದ ಅಭಿಮಾನಿಗಳಿಂದ ಅಂತರ ಕಾಯ್ದುಕೊಳ್ಳುವಂತೆ ಮಾಡಿತ್ತು ಅಲ್ಲದೇ ಪವನ್ ಕಲ್ಯಾಣ್ ಅವರ ಕಟ್ಟಾ ಅಭಿಮಾನಿಗಳು ಅಲ್ಲು ವಿರುದ್ಧ ತಿರುಗಿ ಬೀಳುವಂತೆ ಮಾಡಿತ್ತು.