
ಸಕಲಕಲಾವಲ್ಲಭ ಕಮಲ್ ಹಾಸನ್(Kamal Haasan) ನಟನೆಯ ವಿಕ್ರಮ್(Vikram) ಸಿನಿಮಾ ಸೂಪರ್ ಸಕ್ಸಸ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಸಿನಿಮಾಗೆ ಎಲ್ಲಾ ಭಾಷೆಯಿಂದನೂ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಾಕ್ಸ್ ಆಫೀಸ್‌ನಲ್ಲೂ ಉತ್ತಮ ಕಮಾಯಿ ಮಾಡಿದೆ. ವಿಕ್ರಮ್ ಸಿನಿಮಾ ಸಕ್ಸಸ್‌ನ ಖುಷಿಯಲ್ಲಿರುವ ಕಮಲ್ ಹಾಸನ್ ಅಭಿಮಾನಿಗಳಿಗೆ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ವಿಕ್ರಮ್ ಸಿನಿಮಾ ಮೂಡಿಬಂದಿದೆ. ಅಂದಹಾಗೆ ಸಿನಿಮಾ ಭರ್ಜರಿ ಯಶಸ್ಸು ಕಂಡ ಖುಷಿಗೆ ತೆಲುಗು ಸ್ಟಾರ್ ಚಿರಂಜೀವಿ(Chiranjeevi) ತಮ್ಮ ನಿವಾಸದಲ್ಲಿ ವಿಕ್ರಮ್ ಸಕ್ಸಸ್ ಪಾರ್ಟಿ ಆಯೋಜಿಸಿದ್ದರು. ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಪಾರ್ಟಿಯಲ್ಲಿ ವಿಶೇಷ ಗೆಸ್ಟ್ ಆಗಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್(Salman Kha) ಆಗಮಿಸಿದ್ದರು.
ವಿಕ್ರಮ್ ಚಿತ್ರದ ಯಶಸ್ಸಿಗೆ ಕನ್ನಡದಲ್ಲೇ ಕೃತಜ್ಞತೆ ಸಲ್ಲಿಸಿದ ಕಮಲ್‌ಹಾಸನ್
ಚಿರಂಜೀವಿ ನಿವಾಸದಲ್ಲಿ ಘಟಾನುಘಟಿ ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆ ಸಮಯದಲ್ಲಿ ಕಮಲ್ ಹಾಸನ್ ಅವರಿಗೆ ಚಿರಂಜೀವಿ ಸನ್ಮಾನ ಮಾಡಿ ಗೌರವಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ವಿಕ್ರಮ್ ಸಿನಿಮಾದ ನಿರ್ದೇಶಕ ಲೋಕೇಶ್ ಕನಗರಾಜ್ ಕೂಡ ಹಾಜರಿದ್ದರು. ಸುಂದರ ಫೋಟೋಗಳನ್ನು ಶೇರ್ ಮಾಡಿರುವ ಚಿರಂಜೀವಿ ವಿಕ್ರಮ್ ಸಿನಿಮಾವನ್ನು ಹಾಡಿಹೊಗಳಿದ್ದಾರೆ.
ತುಂಬಾ ಸಂತೋಷವಾಗುತ್ತಿದೆ. ನನ್ನ ಆತ್ಮೀಯ ಹಳೆಯ ಸ್ನೇಹಿತ ಕಮಲ್ ಹಾಸನ್ ಅವರನ್ನು ಗೌರವಿಸುವುದು. ತನ್ನ ಆತ್ಮೀಯ ಸಲ್ಮಾನ್ ಖಾನ್ ಜೊತೆ. ವಿಕ್ರಮ್ ಅದ್ಭುತ ಯಶಸ್ಸಿಗಾಗಿ ಸಲ್ಮಾನ್ ಖಾನ್ ಮತ್ತು ಲೋಕೇಶ್ ಕನಗರಾಜ್ ನನ್ನ ಮನೆಯಲ್ಲಿ. ಇಂಥ ಅದ್ಭುತವಾದ ಸಿನಿಮಾ. ನನ್ನ ಸ್ನೇಹಿತನಿಗೆ ಅಭಿನಂದನೆಗಳು. ಇನ್ನುಹೆಚ್ಚಿನ ಶಕ್ತಿ ಸಿಗಲಿ' ಎಂದು ಚಿರಂಜೀವಿ ಗೆಳೆಯ ಕಮಲ್ ಹಾಸನ್ ಅವರನ್ನು ಹಾಡಿಹೊಗಳಿದ್ದಾರೆ.
ವಿಕ್ರಮ್ ಸಕ್ಸಸ್;ನಿರ್ದೇಶಕರಿಗೆ ದುಬಾರಿ ಕಾರು ಗಿಫ್ಟ್ ಮಾಡಿದ ಕಮಲ್ ಹಾಸನ್
ವಿಕ್ರಮ್ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ದಕ್ಷಿಣ ಭಾರತದ ಖ್ಯಾತ ನಟರಾದ ಫಹಾದ್ ಫೀಸಿಲ್ ಮತ್ತು ವಿಜಯ್ ಸತುಪತಿ ನಟಿಸಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ ಕಾಲಿವುಡ್ ಸ್ಟಾರ್ ಸೂರ್ಯ ಬಣ್ಣ ಹಚ್ಚಿದ್ದಾರೆ. ವಿಕ್ರಮ್ ಸಿನಿಮಾ ಈಗಾಗಲೇ 200 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಅಂದಹಾಗೆ ಸಿನಿಮಾ ಭರ್ಜರಿ ಯಶಸ್ಸು ಕಂಡ ಖುಷಿಗೆ ಕಮಲ್ ಹಾಸನ್ ಸಿನಿಮಾತಂಡಕ್ಕೆ ಅದ್ಭುತ ಗಿಫ್ಟ್ ನೀಡಿದ್ದಾರೆ. ನಟ ಸೂರ್ಯ ಅವರಿಗೆ ದುಬಾರಿ ವಾಚ್ ಗಿಫ್ಟ್ ಮಾಡಿರವ ಕಮಲ್, ನಿರ್ದೇಶಕ ಲೋಕೇಶ್ ಅವರಿಗೆ ಕಾರ್ ಉಡುಗೊರೆಯಾಗಿ ನೀಡಿದ್ದಾರೆ. ಅನೇಕ ಜನರಿಗೆ ಬೈಕ್ ಗಿಫ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.