ರಜನಿಕಾಂತ್ ಕಂಡು ಶಾರುಖ್ ಖಾನ್ ಮಾಡಿದ್ದೇನು? ಅಂಬಾನಿ ಮದುವೆಯಲ್ಲಿನ ಈ ಘಟನೆ ವೈರಲ್ ಆಗ್ತಿದೆ!

By Shriram Bhat  |  First Published Jul 21, 2024, 7:02 PM IST

ನಟ ಶಾರುಖ್ ಖಾನ್ ಅವರು ಅಲ್ಲಿ ಬಂದು ಸತ್ತಾಡುತ್ತ ಸಾಕಷ್ಟು ಪರಿಚಿತರನ್ನು ಮಾತನಾಡಿಸುತ್ತ ಓಡಾಡುತ್ತಿದ್ದರು. ಆಗ ಅವರಿಗೆ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ದಂಪತಿಗಳು ಕಣ್ಣಿಗೆ ಬಿದ್ದಿದ್ದಾರೆ. ರಜನಿಕಾಂತ್ ಅವರನ್ನು ನೋಡಿದ ಕೂಡಲೇ ನಟ ಶಾರುಖ್..


ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಇತ್ತೀಚೆಗೆ ನಡೆದ ಅಂಬಾನಿ ಮದುವೆಗೆ ಬಂದೇ ಬರುತ್ತಾರೆ ಎಂದು ಎಲ್ಲರಿಗೂ ಗೊತ್ತಿತ್ತು. ಯಾವುದೇ ಎಮರ್ಜಿನ್ಸಿ ಆದರೆ ಮಾತ್ರ ಗೈರು ಆಗಬಹುದು, ಇಲ್ಲದಿದ್ದರೆ ಶಾರುಖ್ ಖಾನ್ ಅಲ್ಲಿ ಬರುವುದು ಗ್ಯಾರಂಟಿ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಅದರಂತೆ ನಟ ಶಾರುಖ್ ಖಾನ್ ಅಲ್ಲಿಗೆ ಬಂದಿದ್ದಾರೆ. ಅಷ್ಟೇ ಅಲ್ಲ, ವಿಶೇಷ ದಿರಿಸಿ ಧರಿಸಿ ಅಲ್ಲಿ ಅವರು ಸಖತ್ ಮಿಂಚಿದ್ದಾರೆ ಕೂಡ. ವಿಷಯ ಇಷ್ಟೇ ಅಲ್ಲ, ಮುಂದೆ ನೋಡಿ.. 

ನಟ ಶಾರುಖ್ ಖಾನ್ ಅವರು ಅಲ್ಲಿ ಬಂದು ಸತ್ತಾಡುತ್ತ ಸಾಕಷ್ಟು ಪರಿಚಿತರನ್ನು ಮಾತನಾಡಿಸುತ್ತ ಓಡಾಡುತ್ತಿದ್ದರು. ಆಗ ಅವರಿಗೆ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ದಂಪತಿಗಳು ಕಣ್ಣಿಗೆ ಬಿದ್ದಿದ್ದಾರೆ. ರಜನಿಕಾಂತ್ (Rajinikanth) ಅವರನ್ನು ನೋಡಿದ ಕೂಡಲೇ ನಟ ಶಾರುಖ್, ತಮ್ಮ ನಡಿಗೆಯ ವೇಗ ಕಡಿಮೆ ಮಾಡಿದ್ದಾರೆ. ಸ್ವಲ್ಪ ಹೊತ್ತು ಪಕ್ಕದಲ್ಲೇ ನಿಂತು, ನೋಡಿ ಬಳಿಕ ರಜನಿಕಾಂತ್ ದಂಪತಿಗಳನ್ನು ಮಾತನಾಡಿಸಿ ಹೋಗಿದ್ದಾರೆ.

Tap to resize

Latest Videos

ತಂದೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದ ರಜನಿಕಾಂತ್; ಅದೃಷ್ಟವಂತ ಆ ವ್ಯಕ್ತಿ ಯಾರು? 

ಶಾರುಖ್ ನೋಡಿದ ತಕ್ಷಣ ಮಾತನಾಡಿಸಲು ಸಾಧ್ಯವೇ ಇರಲಿಲ್ಲ. ಕಾರಣ, ಅದಾಗಲೇ ಅವರಿಗಿಂತ ಮೊದಲು ಕೆಲವು ಜನರು ಅಲ್ಲಿ ನಟ ರಜನಿಕಾಂತ್ ಅವರನ್ನು ಸುತ್ತುವರೆದು ಮಾತನಾಡಿಸುತ್ತ, ಜೊತೆಗೆ ನಿಂತು ಫೋಟೋ ತೆಗಿಸಿಕೊಳ್ಳುತ್ತ ಇದ್ದರು. ಹೀಗಾಗಿ, ನಟ ಶಾರುಖ್ ಖಾನ್ ಅವರು ಗೌರವದಿಂದ ಅಲ್ಲೇ ಪಕ್ಕದಲ್ಲಿ ನಿಂತು, ರಜನಿಕಾಂತ್  ಅವರ ಪಕ್ಕ ಇದ್ದವರು ಹೋದ ಬಳಿಕವಷ್ಟೇ ಅವರನ್ನು ಮಾತನಾಡಿಸಿಕೊಂಡು ಮುಂದೆ ಹೋಗಿದ್ದಾರೆ.

ನಟ ಶಾರುಖ್ ಖಾನ್ ಅವರ ಈ ನಡೆಯನ್ನು ನೋಡಿ ಅಲ್ಲಿದ್ದ ಹಲವರು ಮೆಚ್ಚಿದ್ದಾರೆ. ಅಷ್ಟೇ ಅಲ್ಲ, ವೀಡಿಯೋ ನೋಡಿದ ಬಹಳಷ್ಟು ಮಂದಿ ಮೆಚ್ಚಿ ಮಾತನಾಡಿದ್ದಾರೆ. ಶಾರುಖ್ ಖಾನ್ ತಾವೊಬ್ಬರು ಸೂಪರ್ ಸ್ಟಾರ್ ಆಗಿದ್ದರೂ ತಮಗಿಂತ ಹಿರಿಯ ಸೂಪರ್ ಸ್ಟಾರ್ ನಟರನ್ನು ಗೌರವ ಕೊಟ್ಟು ಮಾತನಾಡಿಸಿದ ಪರಿ ಮೆಚ್ಚುವಂತಿತ್ತು. ನಟ ರಜನಿಕಾಂತ್ ಕೂಡ ಬಾಲಿವುಡ್ ಬಾದಶಾ ಶಾರುಖ್ ಖಾನ್ ಅವರನ್ನು ಆತ್ಮೀಯತೆಯಿಂದ ನೋಡಿ, ನಕ್ಕು ಮಾತನಾಡಿ ಬೀಳ್ಕೊಟ್ಟರು. 

ಬಾಳ ಸಂಗಾತಿ ಯಾರಂತ ಅಧಿಕೃತವಾಗಿ ಅನೌನ್ಸ್ ಮಾಡಲಿರುವ ನಿರ್ದೇಶಕ ತರುಣ್ ಸುಧೀರ್, ಯಾವತ್ತು ಗೊತ್ತಾ?

ಒಟ್ಟಿನಲ್ಲಿ ಅಂಬಾನಿ ಕುಟುಂಬದ ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚಂಟ್ ಮದುವೆಯಲ್ಲಿ ಹಲವು ದಿಗ್ಗಜರ ಸಂಗಮವಾಗಿತ್ತು. ಬಹಳಷ್ಟು ಸ್ಟಾರ್ ನಟನಟಿಯರು ಅಲ್ಲಿ ಬಹಳ ಕಾಲದ ಬಳಿಕ ಭಾಗಿಯಾಗಿ ಪರಸ್ಪರ ಮಾತನಾಡಿಕೊಂಡರು, ಫೋಟೋ ತೆಗೆಸಿಕೊಂಡರು. ಕೆಜಿಎಫ್ ಖ್ಯಾತಿಯ ನಟ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಜೋಡಿ ಕೂಡ ಮದುವೆಯಲ್ಲಿ ಭಾಗಿಯಾಗಿ ಸಖತ್ ಮಿಂಚಿದ್ದಾರೆ. 

click me!