ಕೃಷ್ಣ ಸುಂದರಿ ಕಾಜೋಲ್​, ಶಸ್ತ್ರಚಿಕಿತ್ಸೆ ಇಲ್ಲದೇ ಬೆಳ್ಳಗಾಗಿದ್ದು ಹೇಗೆ? ಬಿಳುಪಿನ ರಹಸ್ಯ ಬಿಚ್ಚಿಟ್ಟ ಬಾಲಿವುಡ್​ ಬ್ಯೂಟಿ

By Suchethana D  |  First Published Jul 21, 2024, 5:36 PM IST

ಕೃಷ್ಣ ಸುಂದರಿ, ಡಸ್ಕಿ ಬ್ಯೂಟಿ ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ನಟಿ ಕಾಜೋಲ್​, ಏಕಾಏಕಿ ಬೆಳ್ಳಗಾಗಿದ್ದು ಹೇಗೆ? ನಟಿ ಹೇಳಿದ್ದೇನು?
 


ಅಂದ ನೋಡುಗರ ಕಣ್ಣಲ್ಲಿ ಇರುತ್ತದೆ, ಬೆಳ್ಳಗಿದ್ದರಷ್ಟೇ ಚೆಂದ, ಬಿಳುಪೇ ಎಲ್ಲವೂ ಎನ್ನುವುದು ಸರ್ವೇ ಸಾಮಾನ್ಯ ಎಲ್ಲರೂ ಹೇಳುವ ಮಾತನಾಡಿದ್ದರೂ ಕೃಷ್ಣ ವರ್ಣದವರು ಅದೆಷ್ಟೋ ಸಾಧನೆ ಮಾಡಿದ್ದಾರೆ. ತೆಳ್ಳಗೆ ಬೆಳ್ಳಗೆ ಇದ್ದರೇನೇ ಬಣ್ಣದ ಲೋಕದಲ್ಲಿ ಜಾಗ ಗಿಟ್ಟಿಸಿಕೊಳ್ಳಲು ಸಾಧ್ಯ ಎನ್ನುವುದನ್ನು ಎಂದೋ ಸುಳ್ಳು ಎಂದು ಸಾಬೀತು ಮಾಡಿದವರು ಕನ್ನಡತಿ ಸರಿತಾ. ಅದೇ ರೀತಿ ಈಗಲೂ ಕೃಷ್ಣವರ್ಣದ ಸೆಲೆಬ್ರಿಟಿಗಳು ಅದೆಷ್ಟೋ ಮಂದಿ ಸಕ್ಸಸ್​ ಕಾಣುತ್ತಿದ್ದಾರೆ. ಆದರೂ ಬಿಳಿ ಬಣ್ಣದ ಮೇಲೆ ಬಹುತೇಕರಿಗೆ ಅದೇನೋ ವ್ಯಾಮೋಹ. ಅಷ್ಟಕ್ಕೂ ಡಸ್ಕಿ ಬ್ಯೂಟಿ ಎಂದೇ ಫೇಮಸ್​ ಆದವರು ಬಾಲಿವುಡ್​ ನಟಿ ಕಾಜೋಲ್​. ಇವರು ಕೂಡ ಕೃಷ್ಣ ವರ್ಣದವರಾದರೂ ಆಗಲೇ ಎಷ್ಟೋ ಹಿಟ್​ ಚಿತ್ರಗಳನ್ನು ಕೊಟ್ಟವರು. ತಮ್ಮ ಅಭಿನಯದಿಂದಲೇ ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದವರು.

ಆದರೂ ಬಾಡಿ ಷೇಮ್​ ಎನ್ನುವ ಕೆಟ್ಟ ಸಂಸ್ಕೃತಿ ಎಲ್ಲೆಲ್ಲೂ ಇದ್ದದ್ದೇ. ಅದರಲ್ಲಿಯೂ ಚಿತ್ರ ತಾರೆಯರು ಎಂದರೆ ಹೀಗೆಯೇ ಇರಬೇಕು ಎನ್ನುವ ಸಿದ್ಧ ಸೂತ್ರವೂ ಇರುವ ಕಾರಣದಿಂದ ಅವರು ಹೆಚ್ಚಾಗಿ ಬಾಡಿ ಷೇಮ್​ ಮಾಡಿಸಿಕೊಂಡಿರುತ್ತಾರೆ. ಇದರ ಬಗ್ಗೆ ಇದಾಗಲೇ ಹಲವಾರು ನಟಿಯರು ಮಾತನಾಡಿದ್ದಾರೆ. ಅದೇ ರೀತಿ ಕಾಜೋಲ್​ ಬಣ್ಣದ ಬಗ್ಗೆಯೂ ಹೇಳಿದವರು ಹಲವರು. ಅಷ್ಟಕ್ಕೂ ನಟಿ ಹಿಂದೊಮ್ಮೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಕೆಲ ದಿನಗಳ ಬಳಿಕ ತಮ್ಮ ಬಣ್ಣದಿಂದಾಗಿ ತಾವು ಅನುಭವಿಸಿದ್ದ ಕಷ್ಟದ ಬಗ್ಗೆ ನಟಿ ಕಾಜೋಲ್ ಈ ಹಿಂದೆ ಮಾತಾಡಿದ್ದರು, ಹಾಗೆಂದು ನಟಿ, ಉಳಿದವರಂತೆ ತಮ್ಮ ದೇಹಕ್ಕೆ ಪ್ಲಾಸ್ಟಿಕ ಸರ್ಜರಿ ಮಾಡಿಸಿಕೊಳ್ಳಲಿಲ್ಲ. ಅಷ್ಟಕ್ಕೂ ಬಹುತೇಕ ಚಿತ್ರತಾರೆಯವರು ತಮ್ಮ ಅಂಗಾಂಗಗಳಿಗೆ ಕತ್ತರಿ ಹಾಕಿಸಿಕೊಂಡವರೇ. ಆದರೆ ನಟಿ ಕಾಜೋಲ್​ ಹಾಗೇನು ಮಾಡಲಿಲ್ಲ. ಆದರೂ ಕೃಷ್ಣ ವರ್ಣದವರಾಗಿದ್ದ ಕಾಜೋಲ್​ ಸ್ವಲ್ಪ ದಿನ ಕಣ್ಮರೆಯಾಗಿ ಕೊನೆಗೆ ಹಾಲು ಬಿಳುಪಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. 

Tap to resize

Latest Videos

ಜಿಮ್‌, ವರ್ಕ್‌‌ಔಟ್‌ ಇಲ್ಲದೇ ಮಾಧವನ್‌ 21 ದಿನಗಳಲ್ಲಿ ತೂಕ ಇಳಿಸಿಕೊಂಡದ್ದು ಹೇಗೆ? ನಟನಿಂದ ಟಿಪ್ಸ್‌

 ಡಸ್ಕಿ ಬ್ಯೂಟಿ ಎನಿಸಿಕೊಂಡಿದ್ದ ಕಾಜೋಲ್   ಸಿಕ್ಕಾಪಟ್ಟೆ ಫೇರ್ ಆಗಿ ಕಾಣಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಶ್ನೆಗಳ ಸುರಿಮಳೆಯಾಗಿದೆ. ನಟಿ ಕೂಡ ಶಸ್ತ್ರಚಿಕಿತ್ಸೆ ಮೊರೆ ಹೋಗಿದ್ದಾರೆ ಎಂದೇ ಹೇಳಲಾಗಿತ್ತು.  ಆದರೆ ತಾವು ಬೆಳ್ಳಗಾಗಿದ್ದು ಹೇಗೆ ಎಂಬ ಬಗ್ಗೆ ನಟಿ ಕೆಲ ತಿಂಗಳ ಹಿಂದೆ ಹೇಳಿದ್ದು,  ಅದರ ವಿಡಿಯೋ ಒಂದು ಈಗ ಪುನಃ ವೈರಲ್​ ಆಗಿದೆ.  ‘ನಾನು ಬೆಳ್ಳಗೆ ಬದಲಾಗಲು ಸಾಕಷ್ಟು ಚಿಕಿತ್ಸೆಗಳನ್ನು ಪಡೆದುಕೊಂಡಿದ್ದೇನೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ.  ಆದರೆ ಅದು ಶುದ್ಧ ತಪ್ಪು' ಎಂದಿದ್ದಾರೆ.  ಹಿಂದೆಲ್ಲಾ  'ಕಪ್ಪಗಿದ್ದಾಳೆ. ದಪ್ಪ ಇದ್ದಾಳೆ. ಯಾವಾಗಲೂ ಕನ್ನಡಕ ಹಾಕಿಕೊಂಡಿರುತ್ತಾಳೆ' ಎಂದೆಲ್ಲಾ ಆಡಿಕೊಳ್ಳುತ್ತಿದ್ದರು. ಆದರೆ ನಾನು ನನ್ನ ಬಣ್ಣದ ಬಗ್ಗೆ ಯಾವಾಗಲೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ, ಆಡಿಕೊಳ್ಳುವವರ ಬಾಯನ್ನು ಮುಚ್ಚಿಸಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು, ಅಂಥ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಂಡರೆ ಬದುಕಲು ಆಗುವುದಿಲ್ಲ. ಆದರೆ ಈಗ ಬೆಳ್ಳಗಾಗಲು ಕಾರಣವೂ ಇದೆ. ಆದರೆ ಅದು ಶಸ್ತ್ರಚಿಕಿತ್ಸೆಯಂತೂ ಅಲ್ಲವೇ ಅಲ್ಲ ಎಂದಿದ್ದಾರೆ.

'10-12 ವರ್ಷಗಳ ಹಿಂದೆ ನಾನು ಹೆಚ್ಚು ಹೆಚ್ಚು ಸಿನಿಮಾ ಚಿತ್ರೀಕರಣದಲ್ಲಿ (Shooting) ಭಾಗವಹಿಸುತ್ತಿದ್ದೆ. ಅದಕ್ಕಾಗಿ ಹೊರಗಡೆ ಸುತ್ತಾಡುತ್ತಿದ್ದೆ. ಬಿಸಿಲು- ಧೂಳು ಎನ್ನಲೇ ಶೂಟಿಂಗ್​ನಲ್ಲಿ ಪಾಲ್ಗೊಳ್ಳಬೇಕಿತ್ತು. ಹಾಗಾಗಿ ನನ್ನ ಚರ್ಮ ಕಪ್ಪಗಾಗಿತ್ತು. ಆದರೆ ಕಳೆದ 10 ವರ್ಷಗಳಿಂದ ನಾನು ಮನೆಯಲ್ಲಿ ಇದ್ದೇನೆ.  ಸೂರ್ಯನ ಕಿರಣಗಳಿಂದ ದೂರ ಇರುವುದರಿಂದ ಸ್ಕಿನ್ ಕಲರ್ ಬಂದಿದೆ. ಅಷ್ಟೇ, ಅದು ಬಿಟ್ಟು ನಾನು ಯಾವುದೇ ಸರ್ಜರಿ ಮಾಡಿಸಿಕೊಳ್ಳಲಿಲ್ಲ ಎನ್ನುವ ಮೂಲಕ ಬಿಳುಪಿನ ರಹಸ್ಯ ಬಿಚ್ಚಿಟ್ಟಿದ್ದಾರೆ. ಇನ್ನು ಕಾಜೋಲ್​ ಕುರಿತು ಹೇಳುವುದಾದರೆ,  1999ರಲ್ಲಿ ಅಜೆಯ್​ ದೇವಗನ್​  ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಜೋಲ್ 25 ವರ್ಷಗಳ ಖುಷಿಯ ಸಂಸಾರಿಕ ಜೀವನ ನಡೆಸುತ್ತಿದ್ದಾರೆ. 1975 ಆಗಸ್ಟ್​ 5ರಂದು ಜನಿಸಿರುವ ಕಾಜೋಲ್​ ಅವರಿಗೆ ಈಗ 50 ವರ್ಷ ಪೂರ್ಣಗೊಂಡಿದೆ. 25 ವರ್ಷಗಳ ಈ ದಾಂಪತ್ಯ ಜೀವನದಲ್ಲಿ  ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗನ ಹೆಸರು ಯುಗ್, ಮಗಳ ಹೆಸರು ನ್ಯಾಸಾ. 

ನೀರ್​ ದೋಸೆ ತಿಂದ್ರೆ ಪ್ರಭುದೇವ ಥರ ಡಾನ್ಸ್​ ಮಾಡ್ಬೋದು, ಕತ್ರಿನಾರಂತೆ ಸ್ಲಿಮ್​ ಆಗ್ಬೋದು! ನಟರ ಬಾಯಲ್ಲೇ ಕೇಳಿ
 

click me!