ನಟಿ ದಿಶಾ ಪಟಾನಿ ಡಿನ್ನರ್ ಡೇಟ್ ವಿಡಿಯೋ ಬಹಿರಂಗ, ಜೊತೆಗಿರುವುದು ಯಾರು?

ಬಾಲಿವುಡ್ ನಟಿ ದಿಶಾ ಪಟಾನಿ ಡೇಟಿಂಗ್, ರಿಲೇಶನ್‌ಶಿಪ್ ಕುರಿತು ಹಲವು ಸುದ್ದಿಗಳು ಹರಿದಾಡಿದೆ. ಇದೀಗ ದಿಶಾ ಪಟಾನಿ ಡಿನ್ನರ್ ಡೇಟ್ ವಿಡಿಯೋ ಬಹಿರಂಗವಾಗಿದೆ. ದಿಶಾ ಪಟಾನಿ ಯಾರ ಜೊತೆಗೆ ಡಿನ್ನರ್ ಡೇಟ್‌ನಲ್ಲಿದ್ದಾರೆ? 

Actress Disha patani dinner date video goes viral leaving netizens curious

ಮುಂಬೈ(ಮಾ.28) ಬಾಲಿವುಡ್ ನಟಿ ದಿಶಾ ಪಟಾನಿ ಪರ್ಸನಲ್ ಲೈಫ್ ಕುರಿತು ಸಾಕಷ್ಟು ಪ್ರಶ್ನೆಗಳು, ಕುತೂಹಲಗಳು ಅಭಿಮಾನಿಗಳಲ್ಲಿ ಇದ್ದೇ ಇದೆ. ಅದರಲ್ಲೂ ಪ್ರಮುಖವಾಗಿ ದಿಶಾ ಪಟಾನಿ ಯಾರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಕುತೂಹಲ ಇದ್ದೇ ಇದೆ. ಟೈಗರ್ ಶ್ರಾಫ್ ಜೊತೆಗಿನ ಸಂಬಂಧ ಬ್ರೇಕ್ ಅಪ್ ಆಗಿದೆ ಎನ್ನಲಾದ ಬಳಿಕ ದಿಶಾ ಪಟಾನಿ ಒಂದಿಷ್ಟು ನಟರ ಜೊತೆ ಕೇಳಿಬಂದರೂ ಗಾಳಿ ಸುದ್ದಿಯಾಗಿಯಾಗಿ ದೂರ ಸರಿದಿತ್ತು.ಈ ಎಲ್ಲಾ ಕುತೂಹಲ ನಡುವೆ ದಿಶಾ ಪಟಾನಿ ವಿಡಿಯೋ ಒಂದು ಬಹಿರಂಗವಾಗಿದೆ. ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಡೇಟ್ ವಿಡಿಯೋ ಇದಾಗಿದೆ. ದಿಶಾ ಪಟಾನಿ ಯಾರ ಜೊತೆ ಡಿನ್ನರ್ ಡೇಟ್ ನಡೆಸಿದ್ದಾರೆ ?

ಡಿನ್ನರ್ ಡೇಟ್ ವಿಡಿಯೋ
ಐಪಿಎಲ್ 2025 ಒಪನಿಂಗ್ ಸೆರೆಮನಿಯಲ್ಲಿ ದಿಶಾ ಪಟಾನಿ ಅದ್ಭುತ ಡ್ಯಾನ್ಸ್ ಎಲ್ಲರ ಕಣ್ಣು ಕುಕ್ಕಿತ್ತು. ಇದಾದ ಬಳಿಕ ದಿಶಾ ಪಟಾನಿ ಇದೀಗ ದಿನ್ನರ್ ಡೇಟ್ ವಿಡಿಯೋ ಮೂಲಕ ಸದ್ದು ಮಾಡಿದ್ದಾರೆ. ದಿಶಾ ಪಟಾನಿ ಹೊಸ ಡಿನ್ನರ್ ಡೇಟ್ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ದಿಶಾ ಪಟಾನಿ ರೆಸ್ಟೋರೆಂಟ್ ಒಂದರಲ್ಲಿ ಕುಳಿತು ಮಾತನಾಡುತ್ತಿರುವ ದೃಶ್ಯವಿದೆ. ಆದರೆ ಈ ವಿಡಿಯೋ ಸಂಪೂರ್ಣ ದಿಶಾ ಪಟಾನಿಯನ್ನೇ ಫೋಕಸ್ ಮಾಡಿದೆ. ದಿಶಾ ಪಟಾನಿ ಡಿನ್ನರ್ ಡೇಟ್‌ನಲ್ಲಿ ಖುಷಿ ಖುಷಿಯಾಗಿ ಮಾತನಾಡುತ್ತಿದ್ದಾರೆ. ನಗು ಚೆಲ್ಲಿ ಮಾತನಾಡುತ್ತಿರುವ ದಿಶಾ ಪಟಾನಿ ಈ ವಿಡಿಯೋ ವೈರಲ್ ಆಗಿದೆ. ಆದರೆ ದಿಶಾ ಪಟಾನಿ ಯಾರ ಜೊತೆಗೆ ಮಾತನಾಡುತ್ತಿದ್ದಾರೆ ಅನ್ನೋದು ಮಾತ್ರ ಬಹಿರಂಗವಾಗಿಲ್ಲ. ಹೀಗಾಗಿ ದಿಶಾ ಪಟಾನಿ ಡಿನ್ನರ್ ಡೇಟ್ ಕುತೂಹಲ ಹಾಗೇ ಉಳಿದುಕೊಂಡಿದೆ.

Latest Videos

IPL 2025 ಓಪನಿಂಗ್ ಫೋಟೋ: ದಿಶಾ ಪಟಾನಿ ಭಾರೀ ಟ್ರೋಲ್..!

ರೆಡ್ಡಿಟ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ತಕ್ಷಣವೇ ಹಲವರು ಪ್ರತಿಕ್ರಿಯಿಸಿದ್ದಾರೆ.  ದಿಶಾ ಪಟಾನಿ ಡಿನ್ನರ್ ಡೇಟ್ ಕುರಿತು ಹಲವರು ಪ್ರಶ್ನಿಸಿದ್ದಾರೆ.ಪಟಾನಿ ಜೊತೆಗಿರುವುದು ಯಾರು ಎಂದು ಕೇಳಿದ್ದಾರೆ. ಆದರೆ ಇದೇ ವೇಳೆ ಇದು ಪಬ್ಲಿಸಿಟಿ ಸ್ಟಂಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಿಶಾ ಪಟಾನಿಯನ್ನು ಮಾತ್ರ ಫೋಕಸ್ ಮಾಡಿ ವಿಡಿಯೋ ತೆಗೆಯಲಾಗಿದೆ. ಇದು ಪ್ರಚಾರಕ್ಕಾಗಿ ಮಾಡಿದ ಸ್ಟಂಟ್.ಈ ರೀತಿ ಬಾಲಿವುಡ್ ಮಂದಿ ಹಲವು ಸ್ಟಂಟ್ ಮಾಡಿ ಹಿನ್ನಡೆ ಅನುಭವಿಸಿದ್ದಾರೆ ಎಂದು ಕಮೆಂಟ್ಸ್ ಮಾಡಿದ್ದಾರೆ.

ದಿಶಾ ಪಟಾನಿಯ ಈ ಡಿನ್ನರ್ ಡೇಟ್ ಸಂಪೂರ್ಣ ಸ್ಕ್ರಿಪ್ಟೆಡ್. ಮೊದಲೇ ಹೇಳಿ ಮಾಡಿಸಿದ ವಿಡಿಯೋ ಇದಾಗಿದೆ. ಇವೆಲ್ಲಾ ಪ್ರಚಾರಕ್ಕಾಗಿ ಮಾಡಿದ ಪ್ರಯೋಗ. ಇದರಿಂದ ಅಚ್ಚರಿಗೊಳ್ಳಲು ಕಾರಣವಿಲ್ಲ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. 

 

Disha patani spotted on a date ?
byu/ReasonableSwing2161 inBollyBlindsNGossip

 

ದಿಶಾ ಪಟಾನಿ ಯಾರ ಜೊತೆ ಡೇಟಿಂಗ್?
ದಿಶಾ ಪಟಾನಿ ಹೆಸರು ಟೈಗರ್ ಶ್ರಾಫ್ ಜೊತೆ ಹಲವು ದಿನಗಳ ಕಾಲ ಕೇಳಿಬಂದಿತ್ತು. ಬಳಿಕ ಬ್ರೇಕ್ ಅಪ್ ಸುದ್ದಿಗಳು ಹರಿದಾಡಿತ್ತು. ಈ ಬ್ರೇಕ್ ಅಪ್ ಬಳಿಕ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದು ವಿರಳ. ಟೈಗರ್ ಶ್ರಾಫ್ ಬಳಿಕ ಇತ್ತೀಚೆಗೆ ದಿಶಾ ಪಟಾನಿ ಹೆಸರು ಮಾಡೆಲ್ ಹಾಗೂ ಫಿಟ್ನೆಸ್ ಅಲೆಕ್ಸಾಂಡರ್ ಅಲೆಕ್ ಐಲಿಸ್ ಜೊತೆ ಕೇಳಿಬಂದಿದೆ. ಇತ್ತೀಚೆಗೆ ಮೋಹಿತ್ ರೈ ಹುಟ್ಟುಹಬ್ಬದ ಪಾರ್ಟಿಯಲ್ಲಿ ದಿಶಾ ಪಟಾನಿ ಹಾಗೂ ಅಲೆಕ್ಸಾಂಡರ್ ಜೊತೆಯಾಗಿ ಕಾಣಿಸಿಕೊಂಡಿದ್ದರು.

ದಿಶಾ ಪಟಾನಿಯ ಫಿಟ್‌ನೆಸ್‌ ಹಿಂದಿವೆ ಮೂರು ನಾಯಿ, ಮೂರು ಬೆಕ್ಕು!
 

vuukle one pixel image
click me!