ಸಿಕಂದರ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 30 ರಂದು ಸಿನಿಮಾ ತೆರೆಗೆ ಬರ್ತಿದ್ದು, ಟಿಕೆಟ್ ಬೆಲೆ ಮಾತ್ರ ಗಗನಕ್ಕೇರಿದೆ.
ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ (Bollywood Dabangg Boy) ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (National Crush Rashmika Mandanna) ಅಭಿನಯದ ಬಹು ನಿರೀಕ್ಷಿತ ಚಿತ್ರ ಸಿಕಂದರ್ ಇದೇ ಮಾರ್ಚ್ 30ರಂದು ತೆರೆಗೆ ಬರ್ತಿದೆ. ಭಾಯಿಜಾನ್ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಸಿಕಂದರ್ ಸಿನಿಮಾ ಟ್ರೇಲರ್ ಬಿಡುಗಡೆ ನಂತ್ರ ಸಿನಿಮಾ ಹೆಚ್ಚು ಸುದ್ದಿ ಮಾಡಿದ್ದು, ಚಿತ್ರದ ಮುಂಗಡ ಬುಕಿಂಗ್ ಭಾರಿ ಸಂಖ್ಯೆಯಲ್ಲಿ ನಡೆಯುತ್ತಿದೆ. ಸಿನಿಮಾ ಕ್ರೇಜ್ ಹೆಚ್ಚಾಗ್ತಿದ್ದಂತೆ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೇರಿದೆ. ದುಡ್ಡಿದ್ದೋರು ಮಾತ್ರ ಸಿನಿಮಾ ನೋಡ್ಬಹುದು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಗುರುವಾರದಿಂದಲೇ ಆನ್ಲೈನ್ ಟಿಕೆಟ್ ಬುಕ್ಕಿಂಗ್ (Online Ticket Booking) ಶುರುವಾಗಿದೆ. ಗುರುವಾರ ಸಂಜೆಯಿಂದ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಆಗ್ತಿದೆ. ಮೆಟ್ರೋ ನಗರಗಳಲ್ಲಿ, ಸಿಕಂದರ್ ಟಿಕೆಟ್ ದರ 2000 ಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿವೆ. ಕೆಲವು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ರೆಕ್ಲೈನರ್ ಸೀಟುಗಳ ಬೆಲೆಯೇ 700 ವರೆಗೆ ಏರಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳು ಸಾಮಾನ್ಯವಾಗಿ ಕಡಿಮೆ ಟಿಕೆಟ್ ಬೆಲೆಗಳನ್ನು ಇಷ್ಟಪಡುವ ಸಾಮಾನ್ಯ ಪ್ರೇಕ್ಷಕರನ್ನು ಸೆಳೆಯುತ್ತದೆ. ಆದ್ರೆ ದೆಹಲಿ ಡಿಲೈಟ್ ಸೇರಿದಂತೆ ದೆಹಲಿಯ ಇತರ ಭಾಗಗಳಲ್ಲಿನ ಹೆಚ್ಚಿನ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಸಿಕಂದರ್ ಸಿನಿಮಾ ಟಿಕೆಟ್‌ಗಳ ಬೆಲೆ 90 ರಿಂದ 200 ರ ನಡುವೆ ಇದೆ. ಇಷ್ಟೊಂದು ಬೆಲೆ ನಡುವೆಯೂ ಅಭಿಮಾನಿಗಳ ಕ್ರೇಜ್ ಕಡಿಮೆ ಆಗಿಲ್ಲ. ಬೆಲೆ ಏರಿಕೆಯನ್ನು ಕೆಲವರು ಟಿಕೆಟ್ ಬೇಡಿಕೆಯನ್ನು ಸ್ಪಷ್ಟಪಡಿಸುತ್ತೆ ಎಂದಿದ್ದಾರೆ. ಮತ್ತೆ ಕೆಲವರು ಬೆಲೆ ಹೆಚ್ಚಾಗ್ತಿದ್ದಂತೆ ಸಿನಿಮಾ ವೀಕ್ಷಕರ ಸಂಖ್ಯೆ ಕಡಿಮೆ ಆಗುತ್ತೆ, ಇದು ಉದ್ಯಮಕ್ಕೆ ನಷ್ಟ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ನಟಿ ದಿಶಾ ಪಟಾನಿ ಡಿನ್ನರ್ ಡೇಟ್ ವಿಡಿಯೋ ಬಹಿರಂಗ, ಜೊತೆಗಿರುವುದು ಯಾರು?
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿಕಂದರ್ ಟಿಕೆಟ್ ಬೆಲೆ 2000 ರೂಪಾಯಿಗಿಂತ ಹೆಚ್ಚು : ಮಲ್ಟಿಪ್ಲೆಕ್ಸ್‌ಗಳು ಈಗಾಗಲೇ ತಮ್ಮ ಪ್ರೀಮಿಯಂ ಟಿಕೆಟ್‌ಗಳಿಗೆ ಬ್ಲಾಕ್‌ಬಸ್ಟರ್ ಬೆಲೆ ನಿಗದಿ ಮಾಡಿವೆ. ಮುಂಬೈನ ಮಲ್ಟಿಪ್ಲೆಕ್ಸ್‌ಗಳು ಡೈರೆಕ್ಟರ್ಸ್ ಕಟ್ ಅಥವಾ ಲಕ್ಸ್ ಟಿಕೆಟ್‌ಗಳನ್ನು 2200 ರೂಪಾಯಿವರೆಗೆ ಮಾರಾಟ ಮಾಡುತ್ತಿವೆ. ದೆಹಲಿಯಲ್ಲಿ ಈ ಬೆಲೆಗಳು 1600 ರಿಂದ 1900 ರೂಪಾಯಿವರೆಗೆ ಇದೆ. ಬೆಲೆ ಇಷ್ಟೊಂದು ಹೆಚ್ಚಿದ್ರೂ ದೆಹಲಿ-ಎನ್‌ಸಿಆರ್‌ನಲ್ಲಿ ಅನೇಕ ಸ್ಕ್ರೀನ್ ಈಗಾಗಲೇ ಮಾರಾಟವಾಗಿವೆ. ಉಳಿದ ನಗರಗಳ ಮಲ್ಟಿಪ್ಲೆಕ್ಸ್ ಸೀಟುಗಳ ಬೆಲೆ 850 ರಿಂದ 900 ರೂಪಾಯಿಗೆ ಮಾರಾಟ ಆಗ್ತಿದೆ.
ಆನ್ಲೈನ್ ಬುಕ್ಕಿಂಗ್ ಶುರುವಾಗಿ ಎರಡು ದಿನವಾಗಿಲ್ಲ, ಆಗ್ಲೇ ಸಿಕಂದರ್ 10 ಕೋಟಿ ಗಳಿಕೆ ಕಂಡಿದೆ. ಇಲ್ಲಿಯವರೆಗೆ ಚಿತ್ರದ 147518 ಟಿಕೆಟ್‌ಗಳು ಮಾರಾಟವಾಗಿವೆ. ಆದ್ರೆ ಸಲ್ಮಾನ್ ಖಾನ್ ವಿಷ್ಯಕ್ಕೆ ಬಂದ್ರೆ ಇದು ಕಡಿಮೆ. ಇದೇ ಸ್ಥಿತಿ ಮುಂದುವರೆದ್ರೆ ಸಲ್ಮಾನ್ ಖಾನ್ ತಮ್ಮ ಗಳಿಕೆ ರೆಕಾರ್ಡ್ ಮುರಿಯಲು ಸಾಧ್ಯವಾಗೋದಿಲ್ಲ ಎನ್ನುತ್ತಿದ್ದಾರೆ ತಜ್ಞರು.
ದುನಿಯಾ ವಿಜಯ್ಗೆ 'ದೇವತೆ' ತಂದ ಸಂಕಷ್ಟ! ತಮಿಳಿನ ಚೊಚ್ಚಲ ಚಿತ್ರದಲ್ಲೇ ಕಿರಿಕ್- ಶೂಟಿಂಗ್ ಕ್ಯಾನ್ಸಲ್...
ಆರಂಭದಿಂದಲೂ ಸಿಕಂದರ್ ಸುದ್ದಿ ಮಾಡ್ತಾನೆ ಬಂದಿದೆ. ಸಲ್ಮಾನ್ ಖಾನ್ ಜೊತೆ ಇದೇ ಮೊದಲ ಬಾರಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಆರಂಭದಲ್ಲಿ ಇದೇ ವಿಷ್ಯ ಚರ್ಚೆಯಾಗಿತ್ತು. ನಂತ್ರ ರಶ್ಮಿಕಾ ಹಾಗೂ ಸಲ್ಮಾನ್ ಖಾನ್ ವಯಸ್ಸಿನ ಅಂತರದ ಬಗ್ಗೆ ಚರ್ಚೆಯಾಗಿತ್ತು. ಈಗ ಟಿಕೆಟ್ ಬೆಲೆ ಚರ್ಚೆಯಲ್ಲಿದ್ದು, ಸಿಕಂದರ್ ಗಳಿಕೆಯಲ್ಲಿ ದಾಖಲೆ ಮುರಿಯುತ್ತಾ ಕಾದು ನೋಡ್ಬೇಕಿದೆ. ಎಆರ್ ಮುರುಗದಾಸ್ ನಿರ್ದೇಶನದ ಸಿಕಂದರ್ ಚಿತ್ರದಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಜೊತೆ ಕಾಜಲ್ ಅಗರ್ವಾಲ್, ಶರ್ಮಾನ್ ಜೋಶಿ ಮತ್ತು ಸತ್ಯರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.