ಸೈಫ್ ಕಣ್ಣಲ್ಲಿ ನಾನಿನ್ನೂ ಸೆಕ್ಸಿ… ವಯಸ್ಸೊಪ್ಪಿಕೊಂಡ ಕರೀನಾ ಕಪೂರ್ ಖಾನ್

Published : Sep 11, 2024, 11:38 AM ISTUpdated : Sep 11, 2024, 11:54 AM IST
ಸೈಫ್ ಕಣ್ಣಲ್ಲಿ ನಾನಿನ್ನೂ ಸೆಕ್ಸಿ… ವಯಸ್ಸೊಪ್ಪಿಕೊಂಡ ಕರೀನಾ ಕಪೂರ್ ಖಾನ್

ಸಾರಾಂಶ

ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಬ್ಯೂಟಿ ಜೊತೆ ಆಕ್ಟಿಂಗ್ ನಲ್ಲೂ ಎತ್ತಿದ ಕೈ. ಯಂಗ್ ಆಕ್ಟರ್ಸ್ ಮಧ್ಯೆಯೂ ಡಿಮ್ಯಾಂಡ್ ಉಳಿಸಿಕೊಂಡಿರುವ ಬೇಬೋ ತಮ್ಮ ವಯಸ್ಸು, ಸೈಫ್ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ. 

ಬಾಲಿವುಡ್ ಬೇಬೋ ಕರೀನಾ ಕಪೂರ್ ಖಾನ್ (Bollywood Bebo Kareena Kapoor Khan) ವಯಸ್ಸು 40ರ ಗಡಿ ದಾಟಿದ್ರೂ ಈಗ್ಲೂ ಫಿಟ್ ಆಂಡ್ ಕ್ಯೂಟ್ ಆಗಿದ್ದಾರೆ. ಮಹಿಳೆಯರು ವಯಸ್ಸು ಮುಚ್ಚಿಟ್ಟು, ಯಂಗ್ ಆಗಿ ಕಾಣಲು ನಾನಾ ಪ್ರಯತ್ನ ಮಾಡ್ತಾರೆ. ಆದ್ರೆ ಕರೀನಾ ಕಪೂರ್ ಖಾನ್, ತಮಗೆ ವಯಸ್ಸಾಗ್ತಿದೆ ಎಂಬ ವಾಸ್ತವ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ತಮ್ಮ ವಯಸ್ಸಿನ ಬಗ್ಗೆ ಹಾಗೂ ಪತಿ ಸೈಫ್ ಅಲಿ ಖಾನ್ (Saif Ali Khan) ತಮ್ಮನ್ನು ಹೇಗೆ ನೋಡ್ತಿದ್ದಾರೆ ಎಂಬ ಬಗ್ಗೆ ಕರೀನಾ ಕಪೂರ್ ಖಾನ್, ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸೈಫ್ ಕಣ್ಣಿಗೆ ಈಗ್ಲೂ ಸೆಕ್ಸಿ ಕ್ವೀನ್ (Sexy Queen) ಕರೀನಾ : ಕರೀನಾ ಕಪೂರ್ ಖಾನ್ ಆತ್ಮವಿಶ್ವಾಸವುಳ್ಳ ಆಕ್ಟರ್. ಸೌಂದರ್ಯವರ್ದಕ ಮತ್ತು ಬೊಟಾಕ್ಸ್ ಬಗ್ಗೆ ಮಾತನಾಡಿದ ಕರೀನಾ, ವಯಸ್ಸು ಸೌಂದರ್ಯದ ಒಂದು ಭಾಗವಾಗಿದೆ. ಮುಖದ ಮೇಲೆ ಕಾಣುವ ಗೆರೆಗಳನ್ನು ಮುಚ್ಚಿಡುವ ಅಗತ್ಯವಿಲ್ಲ. ವಯಸ್ಸನ್ನು ಸ್ವೀಕರಿಸಿ, ಅದನ್ನು ಪ್ರೀತಿಸಲು ಕಲಿಯಬೇಕು ಎನ್ನುತ್ತಾರೆ ಕರೀನಾ ಕಪೂರ್ ಖಾನ್. ನನಗೆ 44 ವರ್ಷ. ನನಗೆ ಸೌಂದರ್ಯ ವರ್ದಕ (Cosmetics ) ಅಥವಾ ಬೊಟಾಕ್ಸ್ (Botox) ಅವಶ್ಯಕತೆ ಬಿದ್ದಿಲ್ಲ. ನನ್ನ ಪತಿ ಸೈಫ್ ಅಲಿ ಖಾನ್, ಈಗ್ಲೂ ನನ್ನನ್ನು ಸೆಕ್ಸಿ ಎಂದೇ ಸ್ವೀಕರಿಸ್ತಾರೆ. ಈ ವಯಸ್ಸಿನಲ್ಲೂ ನಾನು ಸುಂದರವಾಗಿ ಕಾಣ್ತಿದ್ದೇನೆ, ನನ್ನ ಚಿತ್ರಗಳು ಸಕ್ಸಸ್ ಕಾಣ್ತಿದೆ ಎಂದು ನನ್ನ ಸ್ನೇಹಿತರು ಹೇಳ್ತಾರೆ. ನನ್ನ ವಯಸ್ಸಿಗೆ ತಕ್ಕಂತೆ ಪಾತ್ರಗಳನ್ನು ನಾನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಇರುವಂತೆಯೇ ಅಭಿಮಾನಿಗಳು ನನ್ನನ್ನು ಸ್ವೀಕರಿಸಬೇಕು ಎಂಬುದು ನನ್ನ ಆಸೆ ಎನ್ನುತ್ತಾರೆ ಕರೀನಾ. ನನಗೆ ವಯಸ್ಸಾದಂತೆ ಅದಕ್ಕೆ ತಕ್ಕ ಪಾತ್ರಗಳಿಗೆ ಆಫರ್ ಬರುತ್ತದೆ. ಇದು ನನ್ನನ್ನು ಎಂದಿಗೂ ಬೇಸರಗೊಳಿಸಿಲ್ಲ. ನನಗೆ ಇದ್ರಿಂದ ಸಮಸ್ಯೆ ಇಲ್ಲ ಎನ್ನುತ್ತಾರೆ ಕರೀನಾ ಕಪೂರ್ ಖಾನ್. 

ಸಲ್ಲು ಕಾಲೆಳೆದ ಬ್ಯುಸಿನೆಸ್‌ಮೆನ್‌ Bigg Boss 18ರ ಮೊದಲ ಕಂಟೆಸ್ಟೆಂಟ್‌ : ರಣರಂಗವಾಗಲಿದ್ಯಾ ಬಿಗ್‌ ಬಾಸ್‌ ಮನೆ?

ನಟನೆ ಮೇಲೆ ಹೆಚ್ಚಿನ ಭರವಸೆ : ನಟನಾ ವೃತ್ತಿ ಜೀವನಕ್ಕೆ ಕಾಲಿಟ್ಟಾಗಿನಿಂದಲೂ ನನ್ನ ನಟನೆ ಬಗ್ಗೆ ನನಗೆ ಆತ್ಮವಿಶ್ವಾಸವಿದೆ, ನಂಬಿಕೆ  ಇದೆ. ನನ್ನ ಪ್ರತಿಭೆ ಹಾಗೂ ಸಮರ್ಪಣಾ ಭಾವದಿಂದ ನನಗೆ ಕೆಲಸ ಸಿಗುತ್ತದೆ ಎನ್ನುವ ವಿಶ್ವಾಸವಿತ್ತು. ಅದು ಸುಳ್ಳಾಗಿಲ್ಲ. ನನ್ನ ಆರೈಕೆ ನಾನು ಮಾಡ್ಕೊಂಡಿದ್ದೇನೆ. ಫಿಟ್ ಆಗಿದ್ದೇನೆ. ಸ್ವಯಂ ಆರೈಕೆ ಅಂದ್ರೆ ನಿಮಗಾಗಿ ನೀವು ಸಮಯ ಮೀಸಲಿಡುವುದು. ಸ್ನೇಹಿತರ ಜೊತೆ ಕ್ವಾಲಿಟಿ ಟೈಂ ಸ್ಪೆಂಡ್ ಆಗಿರಲಿ ಇಲ್ಲ ಸೈಫ್ ಜೊತೆ ಸೇರಿ ಆಹಾರ ತಯಾರಿಸೋದಿರಲಿ ಇಲ್ಲ ವ್ಯಾಯಾಮ, ವರ್ಕ್ ಔಟ್ ಆನಂದಿಸೋದಿರಲಿ. ನಾನಿದಕ್ಕೆ ಮಹತ್ವ ನೀಡ್ತೇನೆ. ಒಳ್ಳೆ ಊಟ, ಹೃದಯ ಬಿಚ್ಚಿ ಆಡುವ ಮಾತು, ವೈನ್ ಬಾಟಲಿ ಜೊತೆ ಕುಳಿತು ನಿಮ್ಮ ಬಗ್ಗೆ ನೀವೇ ಆಲೋಚನೆ ಮಾಡೋದು ತುಂಬಾ ಸಂತೋಷ ನೀಡುತ್ತದೆ ಎನ್ನುತ್ತಾರೆ ಕರೀನಾ. 

ಕಂಬಿ ಹಿಂದೆ 90 ದಿನ ಪೂರೈಸಿದ ಡೆವಿಲ್ ಹೀರೋ! ಕೋಟಿಯ ಕೋಟೆ ಕಟ್ಟಿ ಮೆರೆದವನ ಖಾತೇಲಿ ಈಗ ಎಷ್ಟಿದೆ ಹಣ?

ಮದುವೆಯಾಗಿ ಇಬ್ಬರು ಮಕ್ಕಳಾದ್ಮೇಲೂ ಕರೀನಾ ಕಪೂರ್ ಖಾನ್ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿಲ್ಲ. 2007ರಲ್ಲಿ ಸೈಫ್ ಅಲಿ ಖಾನ್ ಜೊತೆ ಡೇಟಿಂಗ್ ಶುರು ಮಾಡಿದ್ದ ಕರೀನಾ, 2012ರಲ್ಲಿ ಅವರ ಕೈ ಹಿಡಿದ್ರು. ತೈಮೂರ್ ಅಲಿ ಖಾನ್ ಹಾಗೂ ಜಹಾಂಗೀರ್ ಅಲಿ ಖಾನ್ ಜೊತೆ ಲೈಫ್ ಎಂಜಾಯ್ ಮಾಡ್ತಿರುವ ಕರೀನಾ ಕೈನಲ್ಲಿ ಸಾಕಷ್ಟು ಸಿನಿಮಾ ಇದೆ. ಸದ್ಯ ಕರೀನಾ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ (The Buckingham Murders) ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಿನಿಮಾ ಪ್ರಚಾರದಲ್ಲಿ ಕರೀನಾ ಬ್ಯುಸಿಯಿದ್ದು, ಸಿನಿಮಾ ಇದೇ 13ಕ್ಕೆ ತೆರೆಗೆ ಬರಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?