ಸಿನಿ ಕ್ಷೇತ್ರದಲ್ಲಿ ನಡೆದ ಪ್ರಕರಣಗಳ ಕುರಿತು ಹೇಮಾ ಕಮಿಟಿ ವರದಿ ಬೆನ್ನಲ್ಲೇ ಕೇರಳ ಚಿತ್ರರಂಗದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಇದೀಗ ಒಬ್ಬರ ಹಿಂದೆ ಒಬ್ಬರು ಜೈಲು ಸೇರುತ್ತಿದ್ದಾರೆ. ಇದೀಗ ಖ್ಯಾತ ನಟ ಮಕೇಶ್ ಸರದಿ.
ತಿರುವನಂತಪುರಂ(ಸೆ.24) ಮಲೆಯಾಳಂ ಸಿನಿಮಾ ಕ್ಷೇತ್ರದಲ್ಲಿ ನಡೆದಿರುವ ಲೈಂಗಿಕ ಕಿರುಕುಳ ಪ್ರಕರಣಗಳು ಹೇಮಾ ಕಮಿಟಿ ವರದಿ ಬಳಿಕ ಒಂದೊಂದಾಗಿ ಹೊರಬೀಳುತ್ತಿದೆ. ವರದಿ ಸಲ್ಲಿಕೆ ಬೆನ್ನಲ್ಲೇ ಹಳೇ ಪ್ರಕರಣಗಳು ಮುನ್ನಲೆಗೆ ಬಂದಿತ್ತು. ಇದೀಗ ಒಬ್ಬರ ಹಿಂದೆ ಒಬ್ಬರು ಜೈಲು ಸೇರುತ್ತಿದ್ದಾರೆ. ಈ ಪೈಕಿ ಮಳೆಯಾಳಂ ಖ್ಯಾತ ನಟ ಮುಕೇಶ್ ಅರೆಸ್ಟ್ ಆಗಿದ್ದಾರೆ. ಬಲಾತ್ಕಾರ ಪ್ರಕರಣ ಸಂಬಂಧ ಮುಕೇಶ್ ವಿರುದ್ಧ ದೂರು ದಾಖಲಾಗಿತ್ತು. ಈ ದೂರಿನ ಅನ್ವಯ ಮುಕೇಶ್ ಅರೆಸ್ಟ್ ಆಗಿದ್ದಾರೆ. ಬಂಧನದ ಬೆನ್ನಲ್ಲೇ ಸತತ 3 ಗಂಟೆ ಮುಕೇಶ್ ವಿಚಾರಣೆ ನಡೆಸಿ ಬೆವರಿಳಿಸಿದ್ದಾರೆ ಅನ್ನೋ ಮಾಹಿತಿಗಳು ಬಯಲಾಗಿದೆ.
ಹಾಲಿ ಶಾಸಕರಾಗಿರುವ ಮುಕೇಶ್ ವಿರುದ್ಧ ಎರಡು ಬಲಾತ್ಕಾರ ಪ್ರಕರಣ ದಾಖಲಾಗಿತ್ತು. ಈ ಕೇಸ್ ಸಂಬಂಧ ರಚಿಸಲಾಗಿರುವ ಎಸ್ಐಟಿ ಮುಂದೆ ಮುಕೇಶ್ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ನಡುವೆ ಮುಕೇಶ್ ಬಂಧನವಾಗಿದೆ. ಆದರೆ ಮುಕೇಶ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಸೆಪ್ಟೆಂಬರ್ 5 ರಂದು ನಟ ಹಾಗೂ ಶಾಸಕ ಕೊಚ್ಚಿ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಮುಕೇಶ್ ಬಂಧನದಿಂದ ಮುಕ್ತರಾಗಲಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.
ನಟಿಯರ ವ್ಯಾನಿಟಿ ವ್ಯಾನ್‌ಗಳಲ್ಲಿ ಸಿಸಿ ಕ್ಯಾಮೆರಾ; ಕರಾಳ ಸತ್ಯಗಳನ್ನು ಬಹಿರಂಗ ಪಡಿಸಿದ ರಾಧಿಕಾ!
ಮುಕೇಶ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಮೊದಲೇ ನಿರೀಕ್ಷಾ ಜಾಮೀನು ಪಡೆದು ವಿಚಾರಣೆಗೆ ಹಾಜರಾದ ಮುಕೇಶ್ ಬಂಧಿಸಿದ ಕೇರಳ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧನದ ಬಳಿಕ ಸತತ 3 ಗಂಟೆ ಮುಕೇಶ್ ವಿಚಾರಣೆ ನಡೆಸಿದ್ದಾರೆ. ಕೇರಳ ಶಾಸಕರಾಗಿರುವ ಮುಕೇಶ್ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ.
ಎಸ್‌ಐಟಿ ವಿಚಾರಣೆ ವೇಳೆ ಬಂಧನ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮಾಧ್ಯಮಗಳು ಸ್ಥಳಕ್ಕ ಧಾವಿಸಿತ್ತು. ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡಲು ಮುಕೇಶ್ ನಿರಾಕರಿಸಿದ್ದಾರೆ. ಹೇಮಾ ಕಮಿಟಿ ವರದಿ ಬಳಿಕ ಸರ್ಕಾರ ಮೌನಕ್ಕೆ ಜಾರಿದೆ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅನ್ನೋ ಆರೋಪಗಳು ಕೇಳಿಬಂದಿತ್ತು. ಇದೀಗ ಮುಕೇಶ್ ಬಂಧನವಾಗಿದೆ.
ಮುಕೇಶ್ ಬೆನ್ನಲ್ಲೇ ಕೇರಳ ಪೊಲೀಸ್ ಮತ್ತೊಬ್ಬ ನಟ, ಅಮ್ಮಾ ಸಿನಿಮಾ ಸಂಘಟನೆಯ ಮಾಜಿ ಸದಸ್ಯ ಸಿದ್ದಿಕ್ಕಿ ಬಂಧನವಾಗುವ ಸಾಧ್ಯತೆ ಇದೆ. ಸಿದ್ದಿಕ್ಕಿ ವಿರುದ್ಧ ಬಲಾತ್ಕಾರ ಪ್ರಕರಣ ದಾಖಲಾಗಿದೆ. ಮುಕೇಶ್ ರೀತಿ ಸಿದ್ದಿಕ್ಕಿ ಕೂಡ ನಿರೀಕ್ಷಣ ಜಾಮೀನಿಗೆ ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಕೇರಳ ಹೈಕೋರ್ಟ್ ಸಿದ್ದಿಕ್ಕ ಮನವಿಯನ್ನು ತಿರಸ್ಕರಿಸಿದೆ. ಮನವಿ ತಿರಸ್ಕೃತಗೊಳ್ಳುತ್ತಿದ್ದಂತೆ ಸಿದ್ದಿಕ್ಕಿ ಯಾರ ಕೈಗೂ ಸಿಗದೆ ಅಜ್ಞಾತವಾಗಿದ್ದಾರೆ. ಇದೀಗ ಪೊಲೀಸರು ಲುಕ್‌ಔಟ್ ನೋಟಿಸಿ ಹೊರಡಿಸಿದ್ದಾರೆ. ಇದೀಗ ಸಿದ್ದಿಕ್ಕಿ ಪತ್ತೆ ಹಚ್ಚಿ ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ.
ಕನ್ನಡ ಸಿನಿರಂಗಕ್ಕೆ ದೊಡ್ಡ ತಲೆನೋವು ತಂದಿಟ್ಟ ಮೀಟೂ, ಕಾಸ್ಟಿಂಗ್ ಕೌಚ್ ಭೂತ.., ಏನಾಗ್ತಿದೆ ನೋಡಿ..!