Muddy Review: ರೇಸಿಂಗ್ ಪ್ರಿಯರ ಕುತೂಹಲ ಹೆಚ್ಚಿಸುತ್ತೆ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ

By Suvarna NewsFirst Published Dec 11, 2021, 12:26 PM IST
Highlights
  • Muddy: ಮೋಟರಿಸ್ಟ್‌ಗಳ ಮನಸು ಮುಟ್ಟಲಿದೆ ಸಿನಿಮಾ
  • ಥ್ರಿಲ್ಲಿಂಗ್ ಮಡ್ ರೇಸ್‌ಗಳನ್ನು ಹೊರತುಪಡಿಸಿ ಸಿನಿಮಾದಲ್ಲಿ ಬಹಳಷ್ಟು ಟ್ವಿಸ್ಟ್, ತಿರುವುಗಳು

ಸಂಪೂರ್ಣವಾಗಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮಡ್ಡಿ ಸಿದ್ಧವಾಗಿದೆ. ಆ್ಯಕ್ಷನ್ ಹಾಗೂ ಚಂದದ ಸ್ಟೋರಿ ನೋಡೋರಿಗೆ ಸಿನಿಮಾ(Cinema) ಸಖತ್ ಫನ್ ನೀಡಲಿದೆ. ಅಪರೂಪದ ದೃಶ್ಯಗಳು, ಬ್ಯಾಗ್ರೌಂಡ್ ಸ್ಕೋರ್‌ಗಳೊಂದಿಗೆ 4*4 ರೇಸಿಂಗ್ ಎಕ್ಸೈಟ್‌ಮೆಂಟ್ ಕೊಡಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಡ್ಡಿ(Muddy) ಸಿನಿಮಾ ಮೋಟರಿಸ್ಟ್‌ಗಳ ಮನಸು ಮುಟ್ಟಲಿದೆ. ಯುವ, ಉತ್ಸಾಹಿ ಮೋಟರಿಸ್ಟ್‌ಗಳ ಕಥೆಗೆ ಈ ಸಿನಿಮಾ ಆಪ್ತವಾಗಲಿದೆ.

ಕಾಲೇಜೊಂದರಲ್ಲಿ ಕಠಿಣ ಕಾಂಪಿಟೇಷನ್ ನಂತರ ಮಡ್ ರೇಸ್‌ನಲ್ಲಿ ಟೋನಿ ವಿರುದ್ಧ ಕಾರ್ತಿ ಗೆಲ್ಲುತ್ತಾನೆ. ಆರಂಭಿಕ ದೃಶ್ಯಗಳಲ್ಲಿ ಸಿನಿಮಾ, ಸಿನಿಮಾಟೋಗ್ರಫಿ, ಎಡಿಟಿಂಗ್, ಬ್ಯಾಗ್ರೌಂಡ್ ಕುರಿತು ಕುತೂಹಲಕಾರಿ ಸಂಗತಿಗಳು ಬಿಚ್ಚಿಕೊಳ್ಳಲಿವೆ. ಥ್ರಿಲ್ಲಿಂಗ್ ಮಡ್ ರೇಸ್‌ಗಳನ್ನು ಹೊರತುಪಡಿಸಿ ಸಿನಿಮಾದಲ್ಲಿ ಬಹಳಷ್ಟು ಟ್ವಿಸ್ಟ್, ತಿರುವುಗಳು. ಪ್ರೇಕ್ಷಕರ ಕುತೂಹಲ ಹೆಚ್ಚಿಸೋ ಬಹಳಷ್ಟು ಅಂಶಗಳಿವೆ.

ಮಡ್ಡಿ ಟೀಸರ್‌ಗೆ 15 ಮಿಲಿಯನ್‌ಗೂ ಹೆಚ್ಚು ವ್ಯೂಸ್

ಸಿನಿಮಾ ಮುಖ್ಯವಾಗಿ ವೇಗ, ತಡೆಗಳು, ಮಡ್ ಕುರಿತಾಗಿದೆ. ಇದರ ಜೊತೆಗೆ ಸಿನಿಮಾದಲ್ಲಿ ಬರೋ ಪಾತ್ರಗಳ ಜೀವನದ ಬಗ್ಗೆಯೂ ಬೆಳಕು ಚೆಲ್ಲಲಾಗುತ್ತದೆ. ಸಿನಿಮಾ ಕಥೆ ಕಾರ್ತಿ ಹಾಘೂ ಮುತ್ತು ಅವರ ಜೀವನದ ಸುತ್ತ ತಿರುಗುತ್ತದೆ. ಮೊದಲ ಅರ್ಧ ಭಾಗದಲ್ಲಿ ಸಿನಿಮಾ ಪ್ಲಾಟ್ ತೋರಿಸಿದರೆ ಪ್ರೇಕ್ಷಕರು ಮತ್ತಷ್ಟು ಆಕ್ಷನ್ ನಿರೀಕ್ಷಿಸುತ್ತಾರೆ. ಅದರಂತೆ ಎರಡನೇ ಭಾಗದಲ್ಲಿ ಟ್ವಸ್ಟ್‌ಗಳೇ ಬರುತ್ತದೆ. ಲೈಫ್ - ರಿಯಾಲಿಟಿ ಸುತ್ತ ಸಿನಿಮಾ ಹೆಚ್ಚು ಒತ್ತುಕೊಡುತ್ತದೆ. ನಂತರ ಮುತ್ತ ಹಾಗೂ ಕಾರ್ತಿಯ ಬಂಧ ಹಾಗೂ ಅವರ ಸಂಪೂರ್ಣ ಶತ್ರುಗಳಾಗಿ ಬದಲಾದ ಕುರಿತು ವಿವರಿಸುತ್ತದೆ.  ರೇಸಿಂಗ್ ಮಾಡೊ ಕಾರ್ತಿ, ಮುತ್ತು ಬಳಿ ಜೀಪ್ ಇರುತ್ತದೆ. ಗರುಡನ್ ಅವರ ಗೆಳೆಯ ಹಾಗೂ ಪಾರ್ಟ್‌ನರ್ ಆಗಿರುತ್ತಾನೆ. ಗರುಡನ್ ಸಿನಿಮಾದ ಕೊನೆವರೆಗೂ ಕಾಣಿಸಿಕೊಳ್ಳುತ್ತಾನೆ.

ಸಿನಿಮಾ ಆರಂಭದಿಂದ ಕೊನೆಯವರೆಗೆ ರೇಸಿಂಗ್ ಸೀನ್ ಚೆನ್ನಾಗಿ ಎಳೆಯಾಗಿ ತೋರಿಸಲಾಗಿದ್ದು ಕೊನೆಯವರೆಗೂ ರೇಸಿಂಗ್ ಇಂಟ್ರೆಸ್ಟಿಂಗ್ ರೀತಿಯಲ್ಲಿ ಪ್ರಸೆಂಟ್ ಮಾಡಲಾಗಿದೆ. ಕೆಜಿ ರತೀಶ್ ಸಿನಿಮಟೋಗ್ರಫಿ ಮಾಡಿದ್ದು ಸನ್ ಲೋಕೇಶ್ ಎಡಿಟಿಂಗ್ ಮಾಡಿದ್ದಾರೆ.ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು ದೃಶ್ಯಗಳಿಗೆ ಫ್ಲೇವರ್ ತುಂಬಿದ್ದಾರೆ. ಆಕ್ಷನ್ ಡೈರೆಕ್ಟರ್ ರನ್ ರವಿ ಫೈಟ್ ನಿರ್ದೇಶಿಸಿದ್ದಾರೆ. ವಿಶೇಷವೆಂದರೆ ಸಿನಿಮಾ ಪೂರ್ತಿ ಎಲ್ಲಿಯೂ ಡ್ಯಫ್ ಬಳಸದೆ ಕಲಾವಿದರೆ ಎಲ್ಲಾ ಸಾಹಸ ದೃಶ್ಯಗಳನ್ನೂ ಮಾಡಿದ್ದಾರೆ.

ಭಾರತದ ಮೊದಲ ಮಡ್ ರೇಸ್ ಸಿನಿಮಾ ಮಡ್ಡಿ ಟೀಸರ್ ಬಿಡುಗಡೆ.. ಅದ್ಭುತ ದೃಶ್ಯ ವೈಭವ

ಎರಡು ತಂಡಗಳ ನಡುವಿನ ಸ್ಫರ್ಧೆ ಚಿತ್ರದ ಹೈಲೈಟ್ಸ್.   ಪ್ರತೀಕಾರ, ಆಕ್ಷನ್ ಮತ್ತು ಹಾಸ್ಯದ ಮಿಶ್ರಣ ಇಲ್ಲಿದೆ.  ಚಿತ್ರದ ಪ್ರಮುಖ ಪಾತ್ರದಾರಿಗಳಿಗೆ ಎರಡು ವರ್ಷ ತರಬೇತಿ ನೀಡಲಾಗಿದೆ. ಈ ಚಿತ್ರದಲ್ಲಿ ಯಾವುದೇ ಡ್ಯೂಪ್  ಬಳಸಿಲ್ಲ. ಮಡ್ ರೇಸ್ ನ್ನು ಎಲ್ಲಾ ರೋಚಕತೆಯೊಂದಿಗೆ ಪ್ರೇಕ್ಷಕರಿಗೆ ಪ್ರಸ್ತುತಪಡಿಸುವುದು ನಿರ್ದೇಶಕರ ದೊಡ್ಡ ಸವಾಲಾಗಿತ್ತು. ಚಿತ್ರದ ಚಿತ್ರೀಕರಣಕ್ಕೆ ಸ್ಥಳವನ್ನು ಆಯ್ಕೆ ಮಾಡಲು ಒಂದು ವರ್ಷ ಬೇಕಾಯಿತು ಎಂದು ಚಿತ್ರತಂಡ ಹೇಳುತ್ತದೆ.

ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಮೊದಲ ಬಾರಿಗೆ ಮಲಯಾಳಂ ಚಿತ್ರವೊಂದರಲ್ಲಿ ತೊಡಗಿಸಿಕೊಂಡಿದ್ದಾರೆ. ರತ್ಸಾಸನ್ ಖ್ಯಾತಿಯ ಸ್ಯಾನ್ ಲೋಕೇಶ್  ಎಡಿಟಿಂಗ್ ಜವಾಭ್ದಾರಿ ನಿರ್ವಹಿಸಿದ್ದಾರೆ. ಸಿನಿಮಾಟೋಗ್ರಾಫರ್ ಆಗಿ ಕೆ.ಜಿ.ರತೀಶ್ ಸಾಹಸ ಮಾಡಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಅನ್ನು ಚಲನಚಿತ್ರ ಕಲಾವಿದರು ವಿಜಯ್ ಸೇತುಪತಿ ಮತ್ತು ಶ್ರೀ ಮುರಳಿ  ಬಿಡುಗಡೆ ಮಾಡಿದ್ದರು. ಬಾಲಿವುಡ್ ತಾರೆ ಅರ್ಜುನ್ ಕಪೂರ್ ಹಿಂದಿ ಟೀಸರ್ ಬಿಡುಗಡೆ ಮಾಡಿದ್ದಾರೆ. ಜಯಂ ರವಿ ತಮಿಳು ಟೀಸರ್, ಕನ್ನಡದಲ್ಲಿ  ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಮತ್ತು ತೆಲುಗಿನಲ್ಲಿ ಅನಿಲ್ ರವಿಪುಡಿ ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮೂಲಕ ತೆಲುಗು ಟೀಸರ್ ಬಿಡುಗಡೆ ಮಾಡಿದ್ದಾರೆ.

ಯುವನ್ ಕೃಷ್ಣ, ರಿಧಾನ್ ಕೃಷ್ಣ, ರೆಂಜಿ ಪಣಿಕ್ಕರ್, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುರೇಶ್ ಅನುಶಾ, ಐಎಂ ವಿಜಯನ್, ಹರೀಶ್ ಪೆರಡಿ, ಸುನಿಕ್ ಸುಖಡ, ಅಮಿತ್ ನಾಯರ್ ಅವರೂ ಸಿನಿಮಾದಲ್ಲಿದ್ದಾರೆ. 

click me!