ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವೆ ಡಿವೋರ್ಸ್ ವಿಷಯ ತಣ್ಣಗಾಗುತ್ತಿದ್ದಂತೆಯೇ ಅಭಿಷೇಕ್ ಇನ್ನೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ನೆಟ್ಟಿಗರು ಗರಂ ಆಗಿದ್ದೇಕೆ?
ಕೆಲ ತಿಂಗಳಿನಿಂದ ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿತ್ತು. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದರು. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದರು. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡಿತ್ತು. ಇದಾದ ಬಳಿಕ ಐಶ್ವರ್ಯ ಮಾವ ಅಮಿತಾಭ್ ಬಚ್ಚನ್ ಕೂಡ ಇದಕ್ಕೆ ಸ್ಪಷ್ಟವಾಗಿ ಉತ್ತರ ನೀಡದೇ, ಅಡ್ಡಗೋಡೆ ಮೇಲೆ ದೀಪ ಇಟ್ಟವರಂತೆ ಹಾರಿಕೆ ಉತ್ತರ ಕೊಟ್ಟಿರುವುದು ಕೂಡ ಈ ವಿಚ್ಛೇದನದ ಸುದ್ದಿ ನಿಜ ಎಂದೇ ಹೇಳಲಾಗಿತ್ತು.
ಈ ಸುದ್ದಿ ಈಗ ಬಹುತೇಕ ತಣ್ಣಗಾಗಿದೆ. ಈ ಇಬ್ಬರೂ ವಿಚ್ಛೇದನ ಪಡೆಯುತ್ತಿಲ್ಲ ಎನ್ನುವುದು ಸಾಬೀತಾಗಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೇ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈಗ ಎಲ್ಲವೂ ಸರಿಯಾಗಿದೆ ಎಂದೇ ಹೇಳಲಾಗುತ್ತಿದ್ದು, ಡಿವೋರ್ಸ್ ಸುದ್ದಿಗೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಇದಕ್ಕೂ ಮುನ್ನ ನಡೆದಿದ್ದ ಘಟನೆಗಳನ್ನು ತಾಳೆ ಹಾಕಿ ನೋಡಿದಾಗ ಜೋಡಿ ಪ್ರತ್ಯೇಕ ಆಗುತ್ತಿರುವುದು ನಿಜ ಎಂದೇ ನಂಬಲಾಗಿತ್ತು. ಸಾಲದು ಎಂಬಂತೆ, ನಾನು ಹಾಗೂ ಪತ್ನಿ ಐಶ್ವರ್ಯಾ ಪೋಷಕರೊಂದಿಗೆ ಜೊತೆಯಾಗಿ ವಾಸ ಮಾಡುತ್ತಿಲ್ಲ ಎಂದು ಅಭಿಷೇಕ್ ಬಚ್ಚನ್ ಹೇಳಿರುವ ವೀಡಿಯೋವೊಂದು ವೈರಲ್ ಆಗಿತ್ತು. ಕೆಲ ದಿನಗಳ ಹಿಂದಷ್ಟೇ ಐಶ್ವರ್ಯಾ ಅವರು ತಮ್ಮ ಅತ್ತೆ ಮಾವನ ಮನೆ ಜಲ್ಸಾದಿಂದ ಹೊರಬಂದು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ ಎಂದು ವರದಿ ಆದ ಬೆನ್ನಲ್ಲೇ ಈ ವಿಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಸಾಬೀತಾಗಿತ್ತು.
100 ಕೋಟಿ ಕೊಟ್ಟರೂ ಈ ನಟನ ಜೊತೆ ನಟಿಸಲ್ಲ ಎನ್ನುತ್ತಲೇ ಭಾರಿ ಆಫರ್ ರಿಜೆಕ್ಟ್ ಮಾಡಿದ ನಯನತಾರಾ!
ಅದಾದ ಬಳಿಕ , ಮುಂಬೈನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಆರಾಧ್ಯ ಬಚ್ಚನ್ ಸೇರಿದಂತೆ ಅಮಿತಾಭ್ ಬಚ್ಚನ್ ಕೂಡ ಒಟ್ಟಿಗೇ ಕಾಣಿಸಿಕೊಂಡಿದ್ದು, ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತಾಗಿತ್ತು. ಅಭಿಷೇಕ್ ಅವರ ಕಬಡ್ಡಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ಅನ್ನು ಹುರಿದುಂಬಿಸಲು ಮತ್ತು ಬೆಂಬಲಿಸಲು ಬಚ್ಚನ್ ಫ್ಯಾಮಿಲಿ ಬಂದಿತ್ತು. ಇದನ್ನು ನೋಡಿದ ನೆಟ್ಟಿಗರು ಹಾಗಿದ್ದರೆ ಎಲ್ಲವೂ ಸರಿಯಿದೆಯೇ ಎಂದು ಪ್ರಶ್ನಿಸಿದ್ದರು. ಇದಾದ ಬಳಿಕ ಇವರಿಬ್ಬರ ಸಂಬಂಧ ಸರಿಯಾಗಿದೆ ಎನ್ನುವುದಕ್ಕೆ ಹಲವಾರು ಘಟನೆಗಳು ಸಾಕ್ಷಿಯಾದವು.
ಈಗ ಸುದ್ದಿ ತಣ್ಣಗಾಗುತ್ತಿದೆ ಮತ್ತೆ ಅಭಿಷೇಕ್ ಬಚ್ಚನ್ ಇನ್ನೊಂದು ಪೊಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು, ನಿಮಗೆ ಬೇಕಾದುದನ್ನು ನೀವು ತ್ಯಾಗ ಮಾಡದಿದ್ದರೆ - ನಿಮಗೆ ಬೇಕಾದದ್ದು ತ್ಯಾಗವಾಗುತ್ತದೆ ಎಂದಿದ್ದಾರೆ. ಡಿವೋರ್ಸ್ ಸುದ್ದಿಗೆ ಸಂಬಂಧಿಸಿದಂತೆಯೇ ಈ ಹೇಳಿಕೆ ನೀಡಲಾಗಿದೆ ಎಂದೇ ಬಿಂಬಿಸಲಾಗುತ್ತಿದೆ. ಇಷ್ಟು ದಿನಗಳವರೆಗೆ ಈ ದಂಪತಿಯ ಡಿವೋರ್ಸ್ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದ ನೆಟ್ಟಿಗರು ಇದೀಗ ಗರಂ ಆಗಿದ್ದಾರೆ. ಇವರಿಗೆ ಪ್ರಚಾರದ ಹುಚ್ಚು ಅತಿಯಾಗಿದೆ. ಡಿವೋರ್ಸ್ ಸುದ್ದಿ ತಣ್ಣಗಾಗುತ್ತಿದ್ದಂತೆಯೇ ಮತ್ತೆ ಪ್ರಚಾರದಲ್ಲಿ ಇರುವ ಉದ್ದೇಶದಿಂದ ತಮ್ಮ ಸಂಬಂಧದ ಕುರಿತು ಈ ರೀತಿ ಮಾತನಾಡುವುದು ನಾಚಿಕೆಗೇಡು ಎಂದು ಹೇಳುತ್ತಿದ್ದಾರೆ. ಮದುವೆಯೆಂಬ ಪವಿತ್ರ ಬಂಧವನ್ನು ಈ ರೀತಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಇವರ ಅಭಿಮಾನಿಗಳ ಡಿವೋರ್ಸ್ ಬಗ್ಗೆ ಮತ್ತೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಐಶ್ವರ್ಯ ರೈಯನ್ನು ಈ ಹಿಂದೆ ಪ್ಲಾಸ್ಟಿಕ್ ಅಂತನೂ ಕರೆಯಲಾಗಿತ್ತು! ಹೀಗೆ ಅಂದೋರು ಯಾರು ಗೊತ್ತಾ?