ರಶ್ಮಿಕಾ ಮಂದಣ್ಣ ಮನೆಯಲ್ಲಿ ಸೂತಕದ ಛಾಯೆ; ಅಗಲಿದ ಮ್ಯಾಕ್ಸಿಗಾಗಿ ಕಣ್ಣೀರಧಾರೆ

By Sathish Kumar KH  |  First Published Jul 18, 2024, 11:43 AM IST

ಭಾರತದ ನ್ಯಾಷನಲ್ ಕ್ರಶ್ ಖ್ಯಾತಿಯ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ.


ಬೆಂಗಳೂರು (ಜು.18): ಭಾರತದ ನ್ಯಾಷನಲ್ ಕ್ರಶ್ ಖ್ಯಾತಿಯ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ಶೂಟಿಂಗ್ ಸಮಯ ಹೊರತುಪಡಿಸಿ ಮನೆಯಲ್ಲಿದ್ದ ಬಹುಕ್ಷಣಗಳನ್ನು ಕಳೆಯುತ್ತಿದ್ದ ಆಪ್ತ ಬೋಯ್ ಮ್ಯಾಕ್ಸಿ ನಿಧನವಾಗಿದ್ದಾಳೆ. ಇದರಿಂದ ರಶ್ಮಿಕಾ ಮಂದಣ್ಣ ಸೇರಿದಂತೆ ಇಡೀ ಮನೆಯಲ್ಲಿ ಕಣ್ಣೀರಿಡುತ್ತಿದ್ದಾರೆ. 

ರಶ್ಮಿಕಾ ಮಂದಣ್ಣ ದೇಶದ ಪ್ರಮುಖ ನಡಿಯರಲ್ಲಿ ಒಬ್ಬರಾಗಿದ್ದು, ಅವರನ್ನು ಪ್ರೀತಿಯಿಂದ ನ್ಯಾಷನಲ್ ಕ್ರಶ್ ಎಂದು ಕರೆಯಲಾಗುತ್ತದೆ. ತನ್ನ ನಟನಾ ಕೌಶಲ್ಯ ಮಾತ್ರವಲ್ಲದೆ, ಜನ ಸಾಮಾನ್ಯರಂತೆ ಎಲ್ಲ ಅಭಿಮಾನಿಗಳೊಂದಿಗೆ ಆಪ್ತವಾಗಿ ನಡೆದುಕೊಳ್ಳುವ ಸ್ವಭಾವದಿಂದಲೂ ಹೆಚ್ಚು ಅಭಿಮಾನಿಗಳಿಗೆ ಇಷ್ಟದ ನಟಿಯಾಗಿದ್ದಾಳೆ. ಇತ್ತೀಚೆಗೆ ರಾಷ್ಟ್ರೀಯ ಸಾಕುಪ್ರಾಣಿಗಳ ದಿನದ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್ (Instagram) ನಲ್ಲಿ ತಮ್ಮ ಮನೆಯ ನಾಯಿ, ಬೆಕ್ಕುಗಳೊಂದಿಗೆ ಆತ್ಮೀಕವಾಗಿರುವ ಫೋಟೋಗಳು ಹಾಗೂ ವೀಡಿಯೊನು ಹಂಚಿಕೊಳ್ಳುವ ಮೂಲಕ ತಮಗಿರುವ ಪ್ರಾಣಿಗಳ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಆದರೆ, ಈಗ ರಶ್ಮಿಕಾ ಮಂದಣ್ಣ ಅತ್ಯಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮನೆಯ ಸಾಕುನಾಯಿ ಬೋಯ್ ಮ್ಯಾಕ್ಸಿ ಈಗ ಮೃತಪಟ್ಟಿದೆ. ಹೀಗಾಗಿ, ನಟಿ ರಶ್ಮಿಕಾ ಭಾವನಾತ್ಮಕ ತೀವ್ರ ನೋವನ್ನು ಅನುಭವಿಸುತ್ತಿದ್ದಾರೆ. 

Tap to resize

Latest Videos

ಅಂಬಾನಿ ಮದ್ವೇಲಿ ರಶ್ಮಿಕಾ ಮಂದಣ್ಣ, ಈಕೆ ಹೀರೋಯಿನ್ ಅಲ್ಲ ಬಾಡಿ ಬಿಲ್ಡರ್ ಅನ್ನೋದಾ ನೆಟ್ಟಿಗರು!

ನಟಿ ರಶ್ಮಿಕಾ ತನ್ನ ಪ್ರೀತಿಯ ಸಾಕು ನಾಯಿ ಮ್ಯಾಕ್ಸಿಯನ್ನು ಕಳೆದುಕೊಂಡು ಶೋಕದಲ್ಲಿದ್ದಾರೆ. ಈ ಬಗ್ಗೆ ಸ್ವತಃ ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು ತಮ್ಮ ದುಃಖವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಜೊತೆಗೆ, ನಾಯಿಯೊಂದಿಗೆ ತಾನು ಕಳೆದಿದ್ದ ಹಲವು ಆತ್ಮೀಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ರಶ್ಮಿಕಾ ತನ್ನ ಮುದ್ದಿನ ನಾಯಿಗಳಿಗೆ ಪ್ರೀತಿಯ ಸನ್ನೆಗಳೊಂದಿಗೆ ಸ್ನಾನ ಮಾಡುವುದು, ನಾಯಿಗೆ ಮುದ್ದಿಸುವುದು, ತನ್ನ ಮೈಮೇಲೆ ಮಲಗಿಸಿಕೊಂಡು ಪ್ರೀತಿ ಹಂಚುವುದನ್ನು ಕೂಡ ನಾವು ನೋಡಬಹುದು. ಈ ಬಗ್ಗೆ ಭಾವನಾತ್ಮಕ ಬರಹವೊಂದನ್ನು ಬರೆದುಕೊಂಡಿದ್ದಾರೆ. ಮೈತುಂಬಾ ಕೂದಲು ತುಂಬಿಕೊಂಡು ನೀನು ತಂದುಕೊಡು ಚೆಂಡಿಗಾಗಿ ಕಾಯುತ್ತಿದ್ದ ನಾನು ಇನ್ನು ನಿನ್ನನ್ನು ಬಿಟ್ಟಿರಬೇಕಾದ ಪ್ರಸಂಗ ಬಂದಿದೆ. ಆದರೆ, ನೀನು ಯಾವಾಗಲೂ ತಂದು ಕೊಡುತ್ತಿದ್ದ ಚೆಂದು ಮಾತ್ರ ನನ್ನೊಂದಿಗೆ ಸದಾ ಇರುತ್ತದೆ ಎಂದು ಭಾವನಾತ್ಮಕ ಟಿಪ್ಪಣಿಯೊಂದನ್ನು ಬರೆದುಕೊಂಡಿದ್ದಾರೆ. 

Kubera ಚಿತ್ರದ ರಶ್ಮಿಕಾ ಫಸ್ಟ್ ಲುಕ್ ರಿವೀಲ್, ದುಡ್ಡಿನ ಸೂಟ್‌ಕೇಸ್ ನೋಡಿ ಕುತೂಹಲ ಹುಟ್ಟಿಸಿದೆ ಸಿನಿಮಾ!

ಇನ್ನು ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಅತ್ಯಂತ ಬ್ಯೂಸಿ ಆಗಿರುವ ನಟಿಯಾಗುದ್ದಾರೆ. ರಶ್ಮಿಕಾ ಈಗ ಬಹುನಿರೀಕ್ಷಿತ ಸೀಕ್ವೆಲ್ 'ಪುಷ್ಪ 2: ದಿ ರೂಲ್' ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ ಅಲ್ಲು ಅರ್ಜುನ್ ನಿರ್ವಹಿಸಿದ ಪುಷ್ಪಾ ರಾಜ್ ಪಾತ್ರಕ್ಕೆ ನಟಿ ರಶ್ಮಿಕಾ ಪತ್ನಿಯಾಗಿ ಶ್ರೀವಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಇನ್ನು ರಶ್ಮಿಕಾ ಧನುಷ್ ಮತ್ತು ಕಿಂಗ್ ನಾಗಾರ್ಜುನ ಅವರೊಂದಿಗೆ 'ಕುಬೇರ' ಚಿತ್ರದಲ್ಲೂ ನಟಿಸುತ್ತಿದ್ದು, ಇತ್ತೀಚೆಗೆ ಟ್ರೇಲರ್ ಕೂಡ ರಿಲೀಸ್ ಆಗಿದೆ.

click me!