ಐಶ್ವರ್ಯ ರೈ ತೂಕ ಹೆಚ್ಚಿಸಿಕೊಂಡಿದ್ದ ಬಗ್ಗೆ ಅಭಿಷೇಕ್ ಬಚ್ಚನ್ ನೀಡಿರುವ ಹೇಳಿಕೆಯ ಹಳೆಯ ಸಂದರ್ಶನ ಮತ್ತೆ ಸದ್ದು ಮಾಡುತ್ತಿದೆ. ನಟ ಹೇಳಿದ್ದೇನು?
ಸದ್ಯ ಬಚ್ಚನ್ ಕುಟುಂಬದ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಸದ್ಯ ಬಿ-ಟೌನ್ನಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ, ನಟಿ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ಸುದ್ದಿ. ಅಭಿಷೇಕ್ ಬಚ್ಚನ್ ತಮ್ಮ ಮದುವೆಯ ಉಂಗುರವನ್ನು ಧರಿಸದೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ಇಷ್ಟೆಲ್ಲಾ ಊಹಾಪೋಹಕ್ಕೆ ಕಾರಣವಾಗಿದೆ. ರೆಡ್ಡಿಟ್ ಬಳಕೆದಾರರಲ್ಲಿ ಒಬ್ಬರು ಇದಕ್ಕೆ ಸಂಬಂಧಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 'ಅಭಿಷೇಕ್ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ತಮ್ಮ ಮದುವೆಯ ಉಂಗುರವನ್ನು ಧರಿಸುತ್ತಿಲ್ಲ, ಇಲ್ಲಿಯವರೆಗೆ ಅವರು ಯಾವಾಗಲೂ ಅದನ್ನು ಧರಿಸುತ್ತಿದ್ದರು. ಹೀಗಾಗಿ ಅಭಿಷೇಕ್ ಹಾಗೂ ಐಶ್ವರ್ಯಾ ಸಪರೇಟ್ ಆಗುತ್ತಾರೆ ಎಂಬುದು ನಿಜವೆಂದು ತೋರುತ್ತಿದೆ' ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿಯೇ ಇಬ್ಬರೂ ಪ್ರತ್ಯೇಕ ಆಗುತ್ತಿದ್ದಾರೆ ಎನ್ನುವ ಸುದ್ದಿ ಸಕತ್ ಸದ್ದು ಮಾಡುತ್ತಿದೆ.
ರ್ಸನಲ್ ಲೈಫ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಭೀಷೇಕ್ ಹಾಗೂ ಐಶ್ವರ್ಯಾ ಇಬ್ಬರೂ ತಮ್ಮ ಲೈಫ್ ಕುರಿತು ಹೆಚ್ಚಿನ ಅಪ್ಡೇಟ್ ಬಿಟ್ಟುಕೊಡುವುದಿಲ್ಲ. ಆದರೆ ಇದೀಗ ಉಂಗುರದಿಂದಾಗಿ ಜನರೇ ಊಹಾಪೋಹ ಶುರುವಿಟ್ಟುಕೊಂಡಿದ್ದಾರೆ. ಆದರೆ ಮದುವೆ ಉಂಗುರ ಧರಿಸದೇ ಇರಲು ಹಲವು ಕಾರಣ ಇರಬಹುದು ಎನ್ನುವುದು ಫ್ಯಾನ್ಸ್ ಸಮಜಾಯಿಷಿ. ಇದರ ಫೋಟೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಇದಕ್ಕೆ ನಾನಾ ಈತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅವರಲ್ಲಿ ಒಬ್ಬರು, 'ಉಂಗುರ ಹಾಕಿಲ್ಲ ಎಂದ ಮಾತ್ರಕ್ಕೆ ಅವರು ಬೇರೆಯಾಗುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ' ಎಂದಿದ್ದಾರೆ. ಮತ್ತೊಬ್ಬರು, 'ಬಚ್ಚನ್ ಫ್ಯಾಮಿಲಿಯಲ್ಲಿ ವಿಚ್ಛೇದನ ಅಸಾಧ್ಯ ಎಂದು ನಾನು ಯಾವಾಗಲೂ ಭಾವಿಸುತ್ತೇನೆ' ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, 'ಅಮಿತಾಭ್ ಬದುಕಿರುವವರೆಗೆ ಅವರು ಹೀಗಾಗಲು ಬಿಡುವುದಿಲ್ಲ' ಎಂದು ಹೇಳುತ್ತಿರುವ ನಡುವೆಯೇ ಅಮಿತಾಭ್ ಅವರೂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂಥ ಪ್ರತಿಕ್ರಿಯೆ ನೀಡಿ, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.
ಐಶ್-ಅಭಿಷೇಕ್ ಡಿವೋರ್ಸ್ ಸುದ್ದಿ ಬೆನ್ನಲ್ಲೇ ಸೊಸೆಯನ್ನು ಅನ್ಫಾಲೋ ಮಾಡಿದ ಅಮಿತಾಭ್? ಅಸಲಿಯತ್ತೇನು?
ಇದರ ನಡುವೆಯೇ, ಕೆಲ ವರ್ಷಗಳ ಹಿಂದೆ ಅಭಿಷೇಕ್ ಬಚ್ಚನ್ ಅವರು ಪತ್ನಿಯನ್ನು ಸೂಪರ್ಮಾಮ್ ಎಂದು ಹಾಡಿ ಹೊಗಳಿರುವ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಎಲ್ಲರಿಗೂ ತಿಳಿದಿರುವಂತೆ ಕೆಲ ವರ್ಷಗಳಿಂದ ಐಶ್ವರ್ಯ ರೈ ಸಕತ್ ತೂಕ ಹೆಚ್ಚಿಸಿಕೊಂಡಿದ್ದಾರೆ. ಕಳೆದ ಮಾರ್ಚ್ನಲ್ಲಿ ಐಶ್ವರ್ಯಾ ರೈ ಮಣಿರತ್ನಂ ಜೊತೆ ಸಿನಿಮಾ ಮಾಡಿದ್ದು, ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ನಂದಿನಿಯಾಗಿ ನಟಿಸಿ ಎಲ್ಲರ ಮನಸು ಗೆದ್ದಿದ್ದಾರೆ. ಅದರ ಟ್ರೇಲರ್ ಲಾಂಚ್ ಇವೆಂಟ್ಗೆ ಬಂದಿದ್ದಾಗ ನಟಿ ಸುಂದರವಾಗಿ ರೆಡಿಯಾಗಿದ್ದರು. ಆದರೆ ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಅವರ ತೂಕ. ಐಶ್ವರ್ಯಾ ಅವರ ತೂಕ ತುಂಬಾ ಹೆಚ್ಚಾಗಿದ್ದು ನೋಡಿ ಥಹರೇವಾರಿ ಕಮೆಂಟ್ಗಳು ಬಂದಿದ್ದವು. ಈ ಹಿಂದೆ ಅವರು ಪೊನ್ನಿಯಿನ್ ಸೆಲ್ವನ್ 1 ಇವೆಂಟ್ನಲ್ಲಿ ಭಾಗಿಯಾಗಿದ್ದಾಗ ಕೂಡಾ ಇಷ್ಟು ದಪ್ಪಗಿರಲಿಲ್ಲ. ಆದರೆ ನಟಿ ಮತ್ತಷ್ಟು ದಪ್ಪ ಆಗಿದ್ದರಿಂದ ಫ್ಯಾನ್ಸ್ ಬೇಸರ ಕೂಡ ಆಗಿದ್ದರು. ಇದನ್ನು ನೋಡುತ್ತಿದ್ದಂತೆಯೇ ಐಶ್ವರ್ಯಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ನಟಿ ಮತ್ತೊಮ್ಮೆ ಗರ್ಭಿಣಿಯಾ ಎಂದು ಚರ್ಚಿಸಲು ಶುರು ಮಾಡಿದ್ದರು. ಐಶ್ವರ್ಯಾ ರೈ ಅವರ ಈ ಲುಕ್ ನೋಡಿದ ನೆಟ್ಟಿಗರು ನಟಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಬಂದಿರಬಹುದಾ ಎಂದು ಚರ್ಚಿಸುತ್ತಿದ್ದರು. ದಿಢೀರ್ ತೂಕ ಹೆಚ್ಚಳವಾಗುವಂತ ಅನಾರೋಗ್ಯ ಸಮಸ್ಯೆಗಳಿರುವ ಕಾರಣ ಈ ರೀತಿ ಆಗಿದ್ದಾರೆ ಎನ್ನುತ್ತಿದ್ದರು.
ಈ ರೀತಿಯ ಸುದ್ದಿಗಳಿಂದ ಬೇಸರಗೊಂಡಿದ್ದ ಅಭಿಷೇಕ್ ಅವರು, ಐಶ್ವರ್ಯಾ ಸೂಪರ್ಮಾಮ್. ಮಗಳಿಗಾಗಿ ಆಕೆ ಏನು ಮಾಡಲೂ ಸಿದ್ಧ. ಮಗಳ ಸಲುವಾಗಿ ಐಶ್ವರ್ಯಾ ಜಿಮ್‌ನಲ್ಲಿ ಒಂದು ದಿನವೂ ಕಳೆದಿಲ್ಲ. ಇದೇ ಕಾರಣಕ್ಕೆ ತೂಕ ಹೆಚ್ಚಾಗಿದೆ ಎಂದಿದ್ದರು. ಅವಳು ತಾಯಿಯಾದಾಗ ಅವಳ ವೃತ್ತಿಜೀವನವು ಹಿನ್ನಡೆಯಾಯಿತು. ಇಂದು ಆಕೆ ಆರಾಧ್ಯಗಾಗಿ ಎಲ್ಲವನ್ನೂ ಮಾಡುತ್ತಾಳೆ. ಅವಳು ಸೂಪರ್ಮಾಮ್. ಆರಾಧ್ಯ ಹುಟ್ಟಿದ ಕೂಡಲೇ ಆಕೆಯ ತೂಕ ಹೆಚ್ಚುತ್ತಿರುವ ಬಗ್ಗೆ ಮಾಧ್ಯಮಗಳು ಒಂದೊಂದು ರೀತಿಯಲ್ಲಿ ಹೇಳಿಕೆ ನೀಡಿದವು. ಆಕೆಯ ಬಗ್ಗೆ ಅಸಹ್ಯವಾದ ರೀತಿಯಲ್ಲಿ ಬರೆಯಲಾಯಿತು. ಅದು ನನ್ನನ್ನು ನಿಜವಾಗಿಯೂ ಅಸಮಾಧಾನಗೊಳಿಸಿತು. ಅವಳು ಮಗಳ ಆರೈಕೆಯಲ್ಲಿ ತೊಡಗಿದ್ದ ಕಾರಣ, ಜಿಮ್‌ನಲ್ಲಿ ಒಂದು ದಿನವೂ ಕಳೆದಿಲ್ಲ. ಇದೇ ಕಾರಣಕ್ಕೆ ಸಹಜವಾಗಿ ತೂಕ ಹೆಚ್ಚಾಗಿದೆ ಎಂದಿದ್ದರು.
ಅಭಿಷೇಕ್ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್ ವೈರಲ್!