ನಟ ಬಾಬ್ಬಿ ಡಿಯೋಲ್ ಅವರು ಧಮೇಂದ್ರರ ಮೊದಲನೇ ಹೆಂಡತಿ ಪ್ರಕಾಶ್ ಕೌರ್ ಮಗ. ಅವರಿಗೊಬ್ಬ ತಮ್ಮ ಸನ್ನಿ ಡಿಯೋಲ್ ಇದ್ದಾರೆ. ಬಾಬ್ಬಿ ಡಯೋಲ್ ಕಿಸ್ಮತ್, ದೋಸ್ತಾನಾ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ಸ್ಟಾರ್ ಕಿಡ್ ಬಾಬ್ಬಿ ಡಿಯೋಲ್ ಅವರು ತಾವು ಕರಣ್ ಜೋಹರ್ ಚಿತ್ರವಾದ 'ರಾಕಿ ಔರ್ ರಾಣಿ ಪ್ರೇಮ್ ಕಹಾನಿ' ಚಿತ್ರದಿಂದ ಹೊರನಡೆದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಂದರೆ, ಅವರು ರಣವೀರ್ ಸಿಂಗ್ ಹಾಗು ಆಲಿಯಾ ಭಟ್ ಜೋಡಿಯ ಈ ಚಿತ್ರವನ್ನು ವೀಕ್ಷಿಸುತ್ತಿರುವಾಗ ಥಿಯೇಟರ್‌ನಿಂದ ಹೊರಹೋದರಂತೆ. ಕಾರಣ, ಅವರ ಅಪ್ಪ ಧಮೇಂದ್ರ ಆ ಚಿತ್ರದಲ್ಲಿ ಸಾಯುವ ಸೀನ್ ಇತ್ತಂತೆ. ಅದನ್ನು ನೋಡಲಾಗದೇ ನಟ, ಧಮೇಂದ್ರ ಮಗ Bobby Deole ಚಿತ್ರವನ್ನು ಸಂಪೂರ್ಣವಾಗಿ ನೋಡದೇ ಹೊರಹೋಗಿದ್ದರಂತೆ.
ಅನಿಮಲ್ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ನಟ ಬಾಬ್ಬಿ ಡಿಯೋಲ್ ಈ ವಿಷಯವನ್ನು ಹೇಳಿದ್ದಾರೆ. ಅದು ಯಾವುದೇ ಚಿತ್ರವಿರಲಿ, ನನ್ನ ತಂದೆ ನಟಿಸಿದ್ದಾರೆ ಎಂದರೆ ನನಗೆ ಸಹಜವಾಗಿಯೇ ಹೆಚ್ಚು ಕುತೂಹಲ ಇರುತ್ತದೆ. ಆ ಸಿನಿಮಾವನ್ನು ನೋಡಲೇಬೇಕು ಎಂದು ನಾನು ಥಿಯೇಟರ್‌ಗೆ ಹೋಗುತ್ತೇನೆ. ಆದರೆ, ಅದರಲ್ಲೇನಾದ್ರೂ ನನ್ನ ತಂದೆಯ ಸಾವಿನ ದೃಶ್ಯವೇನಾದರೂ ಇದ್ದರೆ ನಾನು ಅದನ್ನು ನೋಡಲು ಇಷ್ಟಪಡುವುದಿಲ್ಲ. ಆ ದೃಶ್ಯ ಶುರುವಾಗುತ್ತಿದ್ದಂತೆ ನಾನು ಅಳಲು ಶುರು ಮಾಡುತ್ತೇನೆ. ಬಳಿಕ ನನಗೆ ಅಲ್ಲಿ ಚಿತ್ರ ನೋಡುತ್ತಾ ಕುಳಿತಿರಲು ಸಾಧ್ಯವಾಗುವುದಿಲ್ಲ. ತಕ್ಷಣ ಅಲ್ಲಿಂದ ಹೊರಟುಬಿಡುತ್ತೇನೆ' ಎಂದಿದ್ದಾರೆ ನಟ ಬಾಬ್ಬಿ ಡಿಯೋಲ್.
ಕ್ಯಾಮೆರಾ ಎದುರು ಹೀಗೆ ಹೇಳಿದ್ರೆ ಮುಂಬರುವ ಸಿನಿಮಾ ನಿರ್ದೇಶಕರಿಗೆ ಸಮಸ್ಯೆ ಆಗುತ್ತೆ; ಪ್ರಿಯಾಂಕಾ ಚೋಪ್ರಾ
ಹೀಗೆ ಆಗಿದ್ದು, ನಾನು ಸಿನಿಮಾದಿಂದ ಎದ್ದು ಬಂದಿದ್ದು ಕರಣ್ ಜೋಹರ್ ಸಿನಿಮಾದಿಂದ ಮಾತ್ರವಲ್ಲ. ಅದು ಬಹಳಷ್ಟು ಸಿನಿಮಾದಲ್ಲಿ ಆಗಿದೆ. ಆ ಚಿತ್ರದ ಅನುಭವ ನೆನಪಾಯಿತು, ಹೇಳಿದೆ ಅಷ್ಟೇ' ಎಂದಿದ್ದಾರೆ. ಬಾಬ್ಬಿ ಡಿಯೋಲ್ ಈ ಮಾತಿಗೆ ಸಂಬಂಧಿಸಿದಂತೆ ಅವರಪ್ಪ ಧಮೇಂದ್ರ ಅವರನ್ನು ಕೇಳಿದಾಗ 'ಅದು ಸಹಜ. ಯಾಕೆಂದರೆ ನಮ್ಮಲ್ಲಿ ಫ್ಯಾಮಿಲಿ ಬಾಂಡಿಂಗ್ ಅಷ್ಟು ಗಟ್ಟಿಯಾಗಿದೆ. ನಾನು, ನನ್ನ ಮಕ್ಕಳ ಮಧ್ಯೆ ಅದೆಷ್ಟು ಗಟ್ಟಿಯಾದ ಬಾಂಧವ್ಯ ಇದೆ ಎಂದರೆ, ಸಿನಿಮಾದ ಪಾತ್ರದಲ್ಲಿ ಕೂಡ ನಾನು ನಮ್ಮ ಫ್ಯಾಮಿಲಿ ಮೆಂಬರ್ಸ್ಗೆ ನೋವು, ಸಾವು ಆಗುವುದನ್ನು ಇಷ್ಟಪಡುವುದಿಲ್ಲ' ಎಂದಿದ್ದಾರೆ.
ಅಮ್ಮನವರು ಇರೋ ತನಕ ಯಾವ್ದೇ ಭಯ ಇರಲಿಲ್ಲ, ಚಿಂತೆ ಮಾಡುವ ಅಗತ್ಯ ಇರಲಿಲ್ಲ; ಲಕ್ಷ್ಮೀ ಹೇಳಿಕೆ
ಅಂದಹಾಗೆ, ನಟ ಬಾಬ್ಬಿ ಡಿಯೋಲ್ ಅವರು ಧಮೇಂದ್ರರ ಮೊದಲನೇ ಹೆಂಡತಿ ಪ್ರಕಾಶ್ ಕೌರ್ ಮಗ. ಅವರಿಗೊಬ್ಬ ತಮ್ಮ ಸನ್ನಿ ಡಿಯೋಲ್ ಇದ್ದಾರೆ. ಬಾಬ್ಬಿ ಡಯೋಲ್ ಕಿಸ್ಮತ್, ದೋಸ್ತಾನಾ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಅನಿಮಲ್' ಚಿತ್ರದಲ್ಲಿ ಕೂಡ ನಟ ಬಾಬ್ಬಿ ಡಿಯೋಲ್ ನಟಿಸಿದ್ದಾರೆ. ಒಟ್ಟಿನಲ್ಲಿ, ನಟ ಬಾಬ್ಬಿ ಡಿಯೋಲ್ ಮಾತಿನ ಮೂಲಕ ಅವರಮ್ಮನನ್ನು ಧಮೇಂದ್ರ ಡಿವೋರ್ಸ್ ಮಾಡಿ ದೂರವಾಗಿದ್ದರೂ, ಮಕ್ಕಳಾದ ಬಾಬ್ಬಿ ಡಿಯೋಲ್ ಹಾಗೂ ಸನ್ನಿ ಡಿಯೋಲ್ ಅವರನ್ನು ತಮ್ಮ ಮನಸ್ಸಿನಿಂದ ದೂರ ಮಾಡಿಲ್ಲ ಎನ್ನಬಹುದು.