ಅಂಬರೀಶ್ ಹುಟ್ಟುಹಬ್ಬದ ದಿನ ಮಗನ ಹೊಸ ಲುಕ್ ರಿವೀಲ್; ಅಭಿಷೇಕ್ ರೆಬಲ್ ಅವತಾರಕ್ಕೆ ಫ್ಯಾನ್ಸ್ ಫಿದಾ

Published : May 29, 2022, 04:54 PM ISTUpdated : May 29, 2022, 05:00 PM IST
 ಅಂಬರೀಶ್ ಹುಟ್ಟುಹಬ್ಬದ ದಿನ ಮಗನ ಹೊಸ ಲುಕ್ ರಿವೀಲ್;  ಅಭಿಷೇಕ್ ರೆಬಲ್ ಅವತಾರಕ್ಕೆ ಫ್ಯಾನ್ಸ್ ಫಿದಾ

ಸಾರಾಂಶ

ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಪುತ್ರ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಎರಡು ಸಿನಿಮಾಗಳನ್ನು ಅನೌನ್ಸ್ ಮಾಡಲಾಗಿದೆ. ಅಭಿಷೇಕ್ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಅಭಿಷೇಕ್ ಅವರ ಎರಡು ಸಿನಿಮಾಗಳು ಘೋಷಣೆಯಾಗಿವೆ. ಒಂದು ಸ್ಯಾಂಡಲ್ ವುಡ್‌ನ ಸ್ಟಾರ್ ನಿರ್ದೇಶಕ ಗಜಕೇಸರಿ, ಹೆಬ್ಬುಲಿ ಸಿನಿಮಾಗಳನ್ನು ಮಾಡಿದ ನಿರ್ದೇಶಕ ಕೃಷ್ಣ(Director Krishna) ಸಾರಥ್ಯದಲ್ಲಿ ಬರ್ತಿವ ಕಾಳಿ(Kaali) ಮತ್ತು ನಿರ್ದೇಶಕ ಮಹೇಶ್ ಸಾರಥ್ಯದಲ್ಲಿ ಬರ್ತಿರುವ ಇನ್ನು ಹೆಸರಿಡದ ಸಿನಿಮಾ ಅನೌನ್ಸ್ ಆಗಿದೆ. 

ಸ್ಯಾಂಡಲ್ ವುಡ್‌ನ ರೆಬೆಲ್ ಸ್ಟಾರ್, ಮಂಡ್ಯದ ಗಂಡು ಅಂಬರೀಶ್(Ambareesh) ಅವರ ಹುಟ್ಟುಹಬ್ಬ(Birthday) ಇಂದು (ಮೇ 29) ಆಚರಿಸಲಾಗುತ್ತಿದೆ. ರಾಜ್ಯದಾದ್ಯಂತ ಅಭಿಮಾನಿಗಳು ಅಂಬರೀಶ್ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅನೇಕ ಸಾಮಾಜಿಕ ಕಾರ್ಯಗಳ ಮೂಲಕ ಅಭಿಮಾನಿಗಳು ಪ್ರೀತಿಯ ಅಂಬಿಯನ್ನು ನೆನೆಯುತ್ತಿದ್ದಾರೆ. ಅಂಬರೀಶ್ ಹುಟ್ಟುಹಬ್ಬದ ಪ್ರಯುಕ್ತ ಪುತ್ರ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಎರಡು ಸಿನಿಮಾಗಳನ್ನು ಅನೌನ್ಸ್ ಮಾಡಲಾಗಿದೆ. ಅಭಿಷೇಕ್ ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಅಭಿಷೇಕ್ ಅವರ ಎರಡು ಸಿನಿಮಾಗಳು ಘೋಷಣೆಯಾಗಿವೆ. ಒಂದು ಸ್ಯಾಂಡಲ್ ವುಡ್‌ನ ಸ್ಟಾರ್ ನಿರ್ದೇಶಕ ಗಜಕೇಸರಿ, ಹೆಬ್ಬುಲಿ ಸಿನಿಮಾಗಳನ್ನು ಮಾಡಿರುವ ಕೃಷ್ಣ(Director Krishna) ಸಾರಥ್ಯದಲ್ಲಿ ಬರ್ತಿವ ಕಾಳಿ(Kaali) ಮತ್ತು ಅಯೋಗ್ಯ, ಮದಗಜ ಖ್ಯಾತಿಯ ನಿರ್ದೇಶಕ ಮಹೇಶ್ ಸಾರಥ್ಯದಲ್ಲಿ ಬರ್ತಿರುವ ಇನ್ನು ಹೆಸರಡಿದ ಎಂಎಂ4(MM4) ಸಿನಿಮಾ ಘೋಷಣೆಯಾಗಿದ್ದು ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ.

ಕಾಳಿ ಮತ್ತು ಎಂಎಂ4 ಎರಡು ಸಿನಿಮಾಗಳಲ್ಲೂ ಅಭಿಷೇಕ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಮಾಸ್ ಎಂಟ್ರಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ಪುತ್ರನ ಸಿನಿಮಾ ಬಗ್ಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ,

'ನಮ್ಮ ಜೂನಿಯರ್ ರೆಬೆಲ್ ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎಲ್ಲರೂ ನೋಡಿ ಹರಸಿ ಆಶೀರ್ವಾದಿಸಿ' ಎಂದು ಹೇಳಿದ್ದಾರೆ. ಕಾಳಿ ಸಿನಿಮಾ ಆರ್ ಆರ್ ಆರ್ ಮೋಷನ್ ಪಿಕ್ಚರ್ ಅಡಿಯಲ್ಲಿ ನಿರ್ದೇಶಕ ಕೃಷ್ಣ ಪತ್ನಿ, ನಿರ್ಮಾಪಕಿ ಸ್ವಪ್ನ ಕೃಷ್ಣ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಅಭಿಷೇಕ್ ಕಾಳಿ ಸಿನಿಮಾದ ಬಗ್ಗೆ ನಟ ಸುದೀಪ್ ಕೂಡ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.

ಅಂಬರೀಶ್ 70ನೇ ಹುಟ್ಟುಹಬ್ಬ; ಕೇಕ್ ಕತ್ತರಿಸಿ ಭಾವುಕ ಸಾಲು ಬರೆದ ಪತ್ನಿ ಸುಮಲತಾ

ಇಂದು ಅನೌನ್ಸ್ ಆದ ಮತ್ತೊಂದು ಸಿನಿಮಾ ಎಂಎಂ4 ಆಯೋಗ್ಯ ಖ್ಯಾತಿಯ ಮಹೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ. ರಕ್ತ ಮೆತ್ತಿಕೊಂಡಿರುವ ಅಭಿಷೇಕ್ ಮುಖ ನೋಡುಗರಿಗೆ ಭಯಹುಟ್ಟಿಸುತ್ತಿದೆ. ನಿರ್ದೇಶಕ ಮಹೇಶ್‌ಗೆ ಇದು ಮೂರನೆ ಸಿನಿಮಾ. ಅಯೋಗ್ಯ ಮತ್ತು ಮದಗಜ ಸಿನಿಮಾ ಬಳಿಕ ಅಭಿಷೇಕ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

'ಬ್ಯಾಡ್‌ ಮ್ಯಾನರ್ಸ್‌' ಅಡ್ಡದಲ್ಲಿ ಅಭಿಷೇಕ್‌, ಸೂರಿ ಜೊತೆ ಡಾಲಿ ಧನಂಜಯ್!

ಅಮರ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟ ಅಭಿಷೇಕ್ ಬಳಿಕ ಮತ್ತೆ ತೆರೆ ಮೇಲೆ ಬಂದಿಲ್ಲ. ಈ ಸಿನಿಮಾ ನಂತರ ನಿರ್ದೇಶಕ ಸೂರಿ ಜೊತೆ ಬ್ಯಾಡ್ ಮ್ಯಾನರ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಈ ಸಿನಿಮಾದಲ್ಲೂ ಅಭಿಷೇಕ್ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಬ್ಯಾಡ್ ಮ್ಯಾನರ್ಸ್ ಸಿನಿಮಾದ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾ ಬಳಿಕ ಕಾಳಿ ಮತ್ತು ಮಹೇಶ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಭಿಷೇಕ್ ಯಾವಾಗ ತೆರೆಮೇಲೆ ಬರಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ