
ಭಾರತೀಯ ಸಿನಿಮಾರಂಗದ ಇಬ್ಬರು ಲೆಜೆಂಡರಿ ನಟರಾದ ತಲೈವಾ ರಜನಿಕಾಂತ್(Rajinikanth) ಮತ್ತು ಕಮಲ್ ಹಾಸನ್(Kamal Haasan) ಅವರ ದಿಢೀರ್ ಭೇಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇಬ್ಬರೂ ಸ್ಟಾರ್ ಒಟ್ಟಿಗೆ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಮಲ್ ಹಾಸನ್ ನಿನ್ನೆ (ಮೇ. 28) ಸೂಪರ್ ಸ್ಟಾರ್ ರಜನಿಕಾಂತ್ ಅವರ ಚೆನ್ನೈ ನಿವಾಸಕ್ಕೆ ಭೇಟಿ ನೀಡಿದ್ದರು. ಕಮಲ್ ಹಾಸನ್ ಸದ್ಯ ವಿಕ್ರಮ್ ಸಿನಿಮಾದ ಬಿಡುಗಡೆ ತಯಾರಿಯಲ್ಲಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ವಿಕ್ರಮ್ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಪಕ್ಕಾ ಆಕ್ಷನ್ ಸಿನಿಮಾ ವಿಕ್ರಮ್ ತಮಿಳು ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬರುತ್ತಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬರ್ತಿರುವ ವಿಕ್ರಮ್(Vikram) ಸಿನಿಮಾದ ಪ್ರಮೋಷನ್‌ನಲ್ಲಿ ಕಮಲ್ ಹಾಸನ್ ಬ್ಯುಸಿಯಾಗಿದ್ದಾರೆ. ದೇಶದಾದ್ಯಂತ ಪ್ರಚಾರ ಕಾರ್ಯ ಮಾಡುತ್ತಿರುವ ಕಮಲ್ ಹಾಸನ್ ಮತ್ತೋರ್ವ ಸ್ಟಾರ್ ರಜನಿಕಾಂತ್ ಅವರನ್ನು ದಿಢೀರ್ ಭೇಟಿಯಾಗಿದ್ದಾರೆ. ರಜನಿಕಾಂತ್ ಮನೆಗೆ ತೆರಳಿರುವ ಕಮಲ್ ಹಾಸನ್ ಗೆಳೆಯ ರಜನಿಕಾಂತ್ ಜೊತೆ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಸ್ನೇಹಿತರಿಬ್ಬರ ಭೇಟಿಯ ಫೋಟೋಗಳನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಅಂದಹಾಗೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರದ್ದು 40 ವರ್ಷಗಳ ಸ್ನೇಹ. ಇಬ್ಬರು ಸ್ನೇಹ ಸಂಬಂಧ ಇವತ್ತಿಗೂ ಅಷ್ಟೇ ಅನ್ಯೋನ್ಯವಾಗಿದೆ. ಇಬ್ಬರ ಭೇಟಿಯ ಫೋಟೋವನ್ನು ನಿರ್ದೇಶಕ ಲೋಕೇಶ್ ಕನಗರಾಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ v/s ಕಮಲ್ ಹಾಸನ್; ಬಾಕ್ಸ್ ಆಫೀಸ್‌ನಲ್ಲಿ ಮತ್ತೊಂದು ಮೆಗಾವಾರ್, ಗೆಲ್ಲೋರ್ಯಾರು?
ವಿಕ್ರಮ್ ಸಿನಿಮಾದ ಬಗ್ಗೆ
ಕಮಲ್ ಹಾಸನ್ ನಟನೆಯ ನಿರೀಕ್ಷೆಯ ವಿಕ್ರಮ್ ಸಿನಿಮಾ ಜೂನ್ 3ರಂದು ತೆರೆಗೆ ಬರುತ್ತಿದೆ. ಆಕ್ಷನ್ ಸಿನಿಮಾ ವಿಕ್ರಮ್ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಲೋಕೇಶ್ ಕನಗರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ಕಲಾವಿದರು ನಟಿಸಿದ್ದಾರೆ. ಹೌದು, ವಿಜಯ್ ಸೇತುಪತಿ ಮತ್ತು ಫಹಾದ್ ಫಾಸಿಲ್ ಇಬ್ಬರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹಾದ್ ಕಾಂಬಿನೇಷನ್ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ನಟ ಸೂರ್ಯ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿ ಖ್ಯಾತ ನಟ ಕಮಲ್ ಹಾಸನ್ ಮಾಜಿ ಪತ್ನಿ ಸಾರಿಕಾ
ಕಮಲ್ ಹಾಸನ್ ವಿಕ್ರಮ್ ಸಿನಿಮಾ ಬಿಡುಗಡೆ ದಿನವೇ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಇಬ್ಬರು ಸ್ಟಾರ್ ನಟರ ಸಿನಿಮಾ ಒಂದೇ ದಿನ ತೆರೆಗೆ ಬರುತ್ತಿರುವುದು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕ್ಲಾಶ್ ಆಗಲಿದೆ ಎನ್ನುವುದು ಸಿನಿಮಾ ಪಂಡಿತರ ಲೆಕ್ಕಾಚಾರ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.