ಮದ್ವೆಯಲ್ಲಿ ಸಲ್ಮಾನ್ ಖಾನ್‌ ನಮ್ಗೆ ಕಾರ್ ಕೊಟ್ಟಿಲ್ಲ; ಭಾವ-ಭಾಮೈದ ನಡುವೆ ತಂದಿಟ್ಟ ನೆಟ್ಟಿಗರು!

By Vaishnavi Chandrashekar  |  First Published Jun 2, 2023, 11:22 AM IST

ಸಲ್ಮಾನ್ ಖಾನ್‌ ಹಣವನ್ನು ಗುಡಿಸಿ ಗುಂಡಾಂತರ ಮಾಡುತ್ತಿರುವ ಅಳಿಯ ಎಂದ ನೆಟ್ಟಿಗರು.  ಅರ್ಪಿತಾ ಖಾನ್ ಗಂಡ ಕೊಟ್ಟ ಸ್ಪಷ್ಟನೆ ಏನು?
 


ಸಲ್ಮಾನ್ ಖಾನ್ ತಮ್ಮ ದತ್ತು ಸಹೋದರಿಯನ್ನು ತುಂಬಾನೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸಿನಿಮಾ ಲೋಕದಿಂದ ದೂರವಿದ್ದರೂ ಸ್ಟಾರ್ ಸೆಲೆಬ್ರಿಟಿಗಳ ಜೊತೆ ಅರ್ಪಿತಾ ಖಾನ್ ಒಳ್ಳೆಯ ಒಡನಾಟ ಬೆಳೆಸಿಕೊಂಡಿದ್ದಾರೆ. ಸೆಲೆಬ್ರಿಟಿಗಳಷ್ಟೇ ಪ್ಯಾಪರಾಜಿಗಳು ಇವರ ಮೇಲೆ ಕಣ್ಣಿಟ್ಟಿದ್ದಾರೆ. ಅರ್ಪಿತಾ ದಪ್ಪ ಕಪ್ಪು ನೋಡಲು ಚೆನ್ನಾಗಿಲ್ಲ ಫುಟ್‌ಪಾತ್‌ನಲ್ಲಿ ಬೆಳೆದ ಹುಡುಗಿ ಎಂದು ಎಷ್ಟು ಟ್ರೋಲ್ ಎದುರಿಸಿದರೋ ಅಷ್ಟೇ ಟ್ರೋಲ್ ಅವರ ಪತಿ ಆಯಷ್ ಶರ್ಮಾ ಎದುರಿಸುತ್ತಿದ್ದಾರೆ. 

ಕೆಲವು ದಿನಗಳ ಹಿಂದೆ ನಡೆದ ಖಾಸಗಿ ಸಂದರ್ಶನದಲ್ಲಿ ಅರ್ಪಿತಾ ಮೇಲೆ ಪರಿಣಾಮ ಬೀರುತ್ತಿರುವ ಟ್ರೋಲ್‌ಗಳು ಹಾಗೂ ಸಲ್ಮಾನ್ ಖಾನ್ ಹಣದ ಬಗ್ಗೆ ಆಯುಷ್ ಸ್ಪಷ್ಟನೆ ಕೊಟ್ಟಿದ್ದಾರೆ.  

Tap to resize

Latest Videos

ಟ್ರೋಲ್‌ಗಳಿಗೆ ಉತ್ತರ: 

'ಸೋಷಿಯಲ್ ಮೀಡಿಯಾದಲ್ಲಿ ನಮ್ಮನ್ನು ಪದೇ ಪದೇ ಟ್ರೋಲ್ ಮಾಡುತ್ತಿದ್ದಾರೆ. ಪ್ರಮುಖ ಕಾರಣ ಏನೆಂದರೆ ಅರ್ಪಿತಾ ಬಣ್ಣದ ಪ್ರಪಂಚಕ್ಕೆ ತುಂಬಾನೇ ಹತ್ತಿರವಾಗಿರುವ ವ್ಯಕ್ತಿ ಆದರೆ ನನಗೆ ಒಂದು ಚೂರು ಅರಿವೇ ಇಲ್ಲ. ತುಂಬಾ ಬೇಸರ ಆಗುವ ವಿಚಾರ ಏನೆಂದರೆ ಹಣಕ್ಕಾಗಿ ನಾನು ಅರ್ಪಿತಾಳನ್ನು ಮದುವೆ ಮಾಡಿಕೊಂಡು ಅದಾದ ನಂತರ ನಾಯಕನಾದೆ ಎಂದು. ನನಗೆ ಅರ್ಪಿತಾ ತುಂಬಾನೇ ಇಷ್ಟೆ ಆಕೆಯನ್ನು ಪ್ರೀತಿಸಿದೆ ಅದಿಕ್ಕೆ ಮದುವೆ ಮಾಡಿಕೊಂಡೆ. ನನ್ನ ಪ್ರೀತಿ ಬಗ್ಗೆ ಆಕೆಗೆ ಗೊತ್ತಿತ್ತು ನನಗೆ ಗೊತ್ತಿತ್ತು ನಮ್ಮ ಕುಟುಂಬಕ್ಕೆ ಗೊತ್ತಿತ್ತು ಅಷ್ಟು ಸಾಕು. 

ಸಲ್ಮಾನ್ ತಂಗಿ ಮನೆಯಲ್ಲಿದ್ದ ವಜ್ರದ ನೆಕ್ಲೆಸ್​ ಮಾಯ! ಕಳ್ಳನ ಮುಖ ಸಿಸಿಟಿವಿಯಲ್ಲಿ ನೋಡಿ ಶಾಕ್​

ಸಲ್ಮಾನ್ ಖಾನ್‌ ಹಣದ ಬಗ್ಗೆ ಸ್ಪಷ್ಟನೆ: 

'ಮಕ್ಕಳ ರಜೆ ದಿನ ನಾವು ವಿದೇಶ ಪ್ರಯಾಣ ಮಾಡಿದರೆ ಅದಿಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಾರೆ. ಸಲ್ಮಾನ್ ಖಾನ್ ಹಣವನ್ನು ಖರ್ಚು ಮಾಡಲು ಇವನೊಬ್ಬ ಸಾಕು ಎನ್ನುತ್ತಾರೆ. ನಮ್ಮ ಮದುವೆ ಸಮಯದಲ್ಲಿ ನಮಗೆ ಸಲ್ಮಾನ್ ಖಾನ್ ರೋಲ್ಸ್‌ ರಾಯ್ಸ್‌ ಕಾರು ಗಿಫ್ಟ್‌ ಕೊಟ್ಟಿದ್ದಾರೆ ಸುದ್ದಿ ಮಾಡಿದ್ದರು, ಮದುವೆಯಾಗಿ ಇಷ್ಟು ವರ್ಷ ಆಗಿದೆ ಆ ಕಾರು ಎಲ್ಲಿದೆ ಎಂದು ಹುಡುಕುತ್ತಿರುವೆ.

10 ಕೋಟಿ ಐಷಾರಾಮಿ ಮನೆ ಖರೀದಿಸಿದ ಸಲ್ಮಾನ್ ತಂಗಿ ಅರ್ಪಿತಾ!

 ಆಗಸ್ಟ್ 3 ರಂದು. ಅವರು 1989 ರಲ್ಲಿ ಮುಂಬೈನಲ್ಲಿಯೇ ಜನಿಸಿದ ಅರ್ಪಿತಾರನ್ನು ಸಲ್ಮಾನ್ ತಂದೆ ಸಲೀಂ ಖಾನ್ ದತ್ತು ಪಡೆದಿದ್ದಾರೆ. ವಾಸ್ತವವಾಗಿ,  ತನ್ನ ಸತ್ತ ತಾಯಿಯ ಮೃತದೇಹದ ಬಳಿ ರಸ್ತೆ ಬದಿಯ ಫುಟ್‌ಬಾಲ್‌ನಲ್ಲಿ ಅಳುತ್ತಿರುವ ಈ ಚಿಕ್ಕ ಹುಡುಗಿಯನ್ನು ನೋಡಿದ ಸಲೀಂ ಖಾನ್ ತಡೆಯಲಾರದೇ ಮನೆಗೆ ಕರೆತಂದಿದ್ದರು. ಅರ್ಪಿತಾಗೆ ಈ ಹೆಸರು ಬಂದಿರುವುದರ ಹಿಂದೆ ಕುತೂಹಲಕಾರಿ ಕಥೆ ಇದೆ ಎನ್ನಲಾಗಿದೆ. ಸಲೀಂ ಅರ್ಪಿತಾ ಅವರನ್ನು ಮನೆಗೆ ಕರೆತಂದು ದತ್ತು ಪಡೆದಾಗ ಅವರ ಕಾಲೇಜು ಸ್ನೇಹಿತ ಶರದ್ ಜೋಶಿ ಕೂಡ ಇದ್ದರು. ಆಗ ಸಲೀಂ ಹೆಣ್ಣು ಮಗುವಿಗೆ ಹೆಸರಿಡುವ ಬಗ್ಗೆ ಶರದ್ ಜೊತೆ ಮಾತನಾಡಿದಾಗ  ಈ ಹುಡುಗಿಯನ್ನು ನಿನಗೆ ಅರ್ಪಿಸಿದರೆ ಅರ್ಪಿತಾ ಆಗಿರಬೇಕು ಎಂದರು. ಸಲೀಂ ಮತ್ತು ಕುಟುಂಬದವರಿಗೂ ಈ ಹೆಸರು ಇಷ್ಟವಾಯಿತು.

click me!