ಚಿತ್ರರಂಗಕ್ಕೆ ವಿದಾಯ ಹೇಳುತ್ತಿದ್ದೇನೆ ಎನ್ನುತ್ತಲೇ ಕಣ್ಣೀರಾದ ಆಮೀರ್‌ ಖಾನ್‌! ಫ್ಯಾನ್ಸ್‌ ಶಾಕ್‌..

By Suchethana D  |  First Published Aug 19, 2024, 5:11 PM IST

ಚಿತ್ರರಂಗಕ್ಕೆ ವಿದಾಯ ಹೇಳುತ್ತಿದ್ದೇನೆ ಎನ್ನುತ್ತಲೇ ಕಣ್ಣೀರಾದ ಆಮೀರ್‌ ಖಾನ್‌! ಸಂದರ್ಶನದ ವೈರಲ್‌ ವಿಡಿಯೋದಲ್ಲಿ ಏನಿದೆ? 
 


ಸದ್ಯ ಬಾಲಿವುಡ್‌ ನಟ ಆಮೀರ್‌ ಖಾನ್‌ ಬಂಡವಾಳ ಹೂಡಿರುವ ಲಾ ಪತಾ ಲೇಡೀಸ್ ಯಶಸ್ಸಿನ ಖುಷಿಯಲ್ಲಿದ್ದಾರೆ. ಕೇವಲ ನಾಲ್ಕು ಕೋಟಿ ರೂಪಾಯಿಗಳಲ್ಲಿ ನಿರ್ಮಿಸಲಾದ ಬಾಲಿವುಡ್​ನ ಲಾ ಪತಾ ಲೇಡೀಸ್​  ಹಲವು ದಾಖಲೆಗಳನ್ನು ಬರೆದಿದೆ. ನೂರಾರು ಕೋಟಿ ಬಜೆಟ್​ನಲ್ಲಿ ನಿರ್ಮಿಸಿ, ಕ್ರೌರ್ಯವನ್ನು ವಿಜೃಂಭಿಸುವ ಜೊತೆಗೆ ಬ್ಲಾಕ್​ಬಸ್ಟರ್​ ಎಂದೂ ಸಾಬೀತಾಗಿರೋ ಅನಿಮಲ್​ ಚಿತ್ರದ ದಾಖಲೆಯನ್ನು ಲಾಪತಾ ಲೇಡೀಸ್​ ಮುರಿದು ಹಾಕಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕೂಡ ಇದನ್ನು ಕೋರ್ಟ್‌‌ನಲ್ಲಿ ಪ್ರದರ್ಶನ ಏರ್ಪಡಿಸಿದ್ದರು. ಆದರೆ ಆಮೀರ್‌ ಖಾನ್‌ ಅವರಿಗೆ ಈ ಅದೃಷ್ಟ ಅವರ ನಟನೆಯ ಚಿತ್ರಗಳಿಗೆ ಸಿಕ್ಕಿಲ್ಲ. ಅವರು ಅಭಿನಯಿಸಿದ ಎಲ್ಲಾ ಚಿತ್ರಗಳೂ ತೋಪೆದ್ದು ಹೋಗುತ್ತಿವೆ. ಇದರಿಂದ ಆಮೀರ್‌ ಖಾನ್‌ ಚಿತ್ರರಂಗದಿಂದಲೇ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ!

ಹೌದು. ಆಮೀರ್‌ ಖಾನ್‌ ಅವರೇ ಖುದ್ದಾಗಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತೆಯಾಗಿದ್ದ ನಟಿ ರಿಯಾ ಚಕ್ರವರ್ತಿ ಅವರು ನಡೆಸಿಕೊಡುತ್ತಿರುವ ಪಾಡ್‌ಕ್ಯಾಸ್ಟ್‌ನಲ್ಲಿ ಖುದ್ದು ಆಮೀರ್‌ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಒಂದು ಕ್ಷಣದಲ್ಲಿ ಭಾವುಕರಾಗಿ ನಟ ಕಣ್ಣೀರು ಕೂಡ ಇಟ್ಟಿದ್ದಾರೆ. ಈ ವಿಡಿಯೋದಲ್ಲಿ ಅಮೀರ್ ಖಾನ್ ಅವರು ಬಾಲಿವುಡ್ ತೊರೆಯುವ ಬಗ್ಗೆ ಮಾತನಾಡಿದ್ದಾರೆ. ರಿಯಾ ಚಕ್ರವರ್ತಿ ಅವರು ಅಮೀರ್ ಖಾನ್ ಅವರನ್ನು ಉದ್ದೇಶಿಸಿ, ನಿಮ್ಮನ್ನು  ಕನ್ನಡಿಯಲ್ಲಿ ನೋಡಿದಾಗ,   ಎಷ್ಟು ಸುಂದರವಾಗಿ ಕಾಣುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟ, ನಾನು ಸುಂದರವಾಗಿ ಕಾಣಿಸುವುದಿಲ್ಲ. ನನ್ನನ್ನು ನಾನು ಸುಂದರ ಎಂದು  ಪರಿಗಣಿಸುವುದಿಲ್ಲ.  ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ನಿಜವಾದ ತಾರೆಗಳು ಎನ್ನುತ್ತಲೇ ಚಿತ್ರರಂಗ ತೊರೆಯುವ ಮಾತನಾಡಿದ್ದಾರೆ.  

Tap to resize

Latest Videos

ಸುಪ್ರೀಂ ಕೋರ್ಟಲ್ಲಿ ಲಾಪತಾ ಲೇಡಿಸ್ ಪ್ರದರ್ಶನ ವೀಕ್ಷಿಸಲು ಬಂದ ಆಮೀರ್ ಖಾನ್ ಕಾಲೆಳೆದ ಚೀಫ್ ಜಸ್ಟೀಸ್

2018ರಿಂದ ಈಚೆ ಆಮಿರ್ ಖಾನ್​ಗೆ ಹೆಚ್ಚು ಗೆಲುವು ಸಿಕ್ಕಿಲ್ಲ. ರಿಲೀಸ್ ಆದ ‘ಥಗ್ಸ್ ಆಫ್ ಹಿಂದೂಸ್ಥಾನ್’ ಹಾಗೂ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾಗಳು ಸೋತಿವೆ. ಸದ್ಯ ಅವರ ಮುಂದಿನ ಚಿತ್ರ ‘ಸಿತಾರೆ ಜಮೀನ್ ಪರ್’ ಮೇಲೆ ಅಭಿಮಾನಿಗಳ ಕಣ್ಣಿದೆ.  ಇದಾದ ಬಳಿಕ ಆಮಿರ್ ದಕ್ಷಿಣದ ಸ್ಟಾರ್ ನಿರ್ದೇಶಕನ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯ ನಡುವೆಯೇ ತಾವು ಚಿತ್ರರಂಗದಿಂದ ಹಿಂದೆ ಸರಿಯುತ್ತಿರುವುದಾಗಿ ನಟ ತಿಳಿಸಿದ್ದಾರೆ. ಅಷ್ಟಕ್ಕೂ ಇದು ರಿಯಾ ಅವರ ಮುಂಬರುವ ಎಪಿಸೋಡ್‌ ಆಗಿದ್ದು, ಅದರ ಕ್ಲಿಪ್‌ ಅನ್ನು ಅವರು ಶೇರ್‌ ಮಾಡಿದ್ದಾರೆ. ಅದರಲ್ಲಿ ನಟ ನನಗೆ ಇನ್ನು ಚಿತ್ರರಂಗದಿಂದ ದೂರ ಉಳಿಯಬೇಕಿದೆ ಎನ್ನುತ್ತಾರೆ. ಆಗ ರಿಯಾ ತಮಾಷೆ ಮಾಡುತ್ತಿದ್ದೀರಾ ಎಂದಾಗ ನಟ, ಇಲ್ಲ ನಾನು ಇದನ್ನು ಸೀರಿಯಲ್‌ ಆಗಿಯೇ ಹೇಳುತ್ತಿದ್ದೇನೆ ಎನ್ನುತ್ತಾರೆ. ಇದರ ಕ್ಲಿಪ್‌ ವೈರಲ್‌ ಆಗುತ್ತಲೇ ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ.  

 ಇನ್ನು ರಿಯಾ ಚಕ್ರವರ್ತಿ ಅವರ ಈ ಪಾಡ್‌ಕಾಸ್ಟ್‌ ಕುರಿತು ಹೇಳುವುದಾದರೆ, ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ನಟನಾ ಪ್ರಪಂಚದಿಂದ ದೂರವಾಗಿದ್ದರು. ಈಗ ಈ ಆಘಾತದಿಂದ ಹೊರ ಬಂದ ಮೇಲೆ ಯಾರೂ ಕೆಲಸ ಕೊಡುತ್ತಿಲ್ಲ. ಆದ್ದರಿಂದ ನಟಿ ಈಗ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ,  ಅವರ ಪಾಡ್‌ಕ್ಯಾಸ್ಟ್‌ನ ಮೊದಲ ಅತಿಥಿ ಉದ್ಯಮದ ಟಾಪ್ ನಟಿ ಸುಶ್ಮಿತಾ ಸೇನ್. ಈಗ ಬಾಲಿವುಡ್ ಸೂಪರ್‌ಸ್ಟಾರ್ ಅಮೀರ್ ಖಾನ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಪ್ರೊಮೋದಲ್ಲಿ ಆಮೀರ್‌ ಳ್ಳಲಿದ್ದು, ಇತ್ತೀಚೆಗೆ, ಅಮೀರ್ ಖಾನ್ ಮತ್ತು ರಿಯಾ ಚಕ್ರವರ್ತಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಸಂಬಂಧ ವಿಡಿಯೋವೊಂದನ್ನು ನಟಿ ಹಂಚಿಕೊಂಡಿದ್ದಾರೆ..

ಶಾರುಖ್‌ ಫಿಟ್‌ನೆಸ್‌ ಗುಟ್ಟು ಬೆಳಿಗ್ಗೆ 5 ಗಂಟೆಗೆ ಮಲಗೋದಂತೆ! ನಂಬಲಾಗ್ತಿಲ್ವಾ? ನಟ ಹೇಳಿದ್ದು ಕೇಳಿ...
 

click me!