
ರಕ್ಷಾ ಬಂಧನ ಹಬ್ಬ (Raksha Bandhan festival) ವನ್ನು ಇಡೀ ದೇಶ ಸಂಭ್ರಮದಿಂದ ಆಚರಿಸುತ್ತಿದೆ. ಆದ್ರೆ ಡಿ ಬಾಸ್ ದರ್ಶನ್ (D Boss Darshan) ಸಹೋದರಿ ಸೋನಲ್ ಮೊಂಥೆರೋ (Sonal Monthero) ಮಾತ್ರ ಬೇಸರದಲ್ಲಿದ್ದಾರೆ. ತಮ್ಮ ಅಣ್ಣ ದರ್ಶನ್ ಅವರನ್ನು ಸೋನಲ್ ಮಿಸ್ ಮಾಡಿಕೊಂಡಿದ್ದಾರೆ. ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ಸೋನಲ್, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು, ದರ್ಶನ್ ಅವರಿಗೆ ರಕ್ಷಾ ಬಂಧನದ ಶುಭಕೋರಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ದರ್ಶನ್ ಜೊತೆಗಿರುವ ಫೋಟೋ ಪೋಸ್ಟ್ ಮಾಡಿದ ಸೋನಲ್, ಈ ವಿಶೇಷ ದಿನದಂದು ನಾವು ಒಟ್ಟಿಗೆ ಇಲ್ಲದಿದ್ದರೂ, ನಮ್ಮ ಬಾಂಧವ್ಯ ಎಂದಿಗೂ ಮರೆಯಾಗುವುದಿಲ್ಲ. ನಾವು ನಿಮ್ಮನ್ನು ಮಿಸ್ ಮಾಡಿಕೊಳ್ತೇವೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ ಸಹೋದರ ಎಂದು ಸೋನಲ್ ಶೀರ್ಷಿಕೆ ಹಾಕಿದ್ದಾರೆ.
vaishnavi gowda : ಅತ್ತಿಗೆ ಸೀಮಂತದಲ್ಲಿ ಮಿಂಚಿದ ನಟಿ ವೈಷ್ಣವಿ ಗೌಡ
ಇನ್ಸ್ಟಾಗ್ರಾಮ್ ನಲ್ಲಿ ಸೋನಲ್ ಹಂಚಿಕೊಂಡಿರುವ ಈ ಫೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಒಬ್ಬ ಒಳ್ಳೆ ಮನುಷ್ಯನನ್ನು ಫ್ರೆಂಡ್ಸ್ ಸೇರಿ ಹಾಳ್ ಮಾಡಿದ್ರು ಅಂತ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಬಹುತೇಕ ಅಭಿಮಾನಿಗಳು ಮಿಸ್ ಯು ಬಾಸ್ ಅಂತ ಕಮೆಂಟ್ ಮಾಡಿದ್ರೆ, ಮತ್ತೊಬ್ಬರು, ನಾನು ದರ್ಶನ್ ದೊಡ್ಡ ಅಭಿಮಾನಿ. ಆದ್ರೆ ಅವರು ತಮ್ಮ ಗರ್ಲ್ ಫ್ರೆಂಡ್ ಗಾಗಿ ಕೊಲೆ ಮಾಡಿ ತಪ್ಪು ಮಾಡಿದ್ದಾರೆ. ಅವರು ಒಳ್ಳೆ ಸಹೋದರ ಆಗಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಅದಕ್ಕೆ ಡಿ ಬಾಸ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ದರ್ಶನ್ ಅಪರಾಧಿ ಎನ್ನುವುದು ಸಾಭೀತಾಗಿಲ್ಲ. ದರ್ಶನ್ ರಷ್ಟು ಒಳ್ಳೆಯ ಮನುಷ್ಯ ಯಾರಿಲ್ಲ. ಅವರು ದೇವರು ಅಂತ ಅಭಿಮಾನಿಗಳು ಬರೆದಿದ್ದಾರೆ.
ಹಿಂದಿನ ವರ್ಷ ಸೋನಲ್ ಮೊಂಥೆರೋ, ನಟ ದರ್ಶನ್ ಮನೆಗೆ ಹೋಗಿ ರಾಖಿ ಕಟ್ಟಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದರ್ಶನ್ ಗೆ ರಾಖಿ ಕಟ್ಟಿದ ನಟಿ ಸೋನಲ್ ಕ್ಯಾಮರಾಕ್ಕೆ ಫೋಸ್ ನೀಡಿದ್ದರು. ಅದೇ ಫೋಟೋವನ್ನು ಈಗ ಹಂಚಿಕೊಂಡಿದ್ದಾರೆ.
ಅಭಿಸಾರಿಕೆ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿರುವ ಸೋನಲ್, ರಾಬರ್ಟ್ ನಲ್ಲಿ ದರ್ಶನ್ ಜೊತೆ ಕಾಣಿಸಿಕೊಂಡಿದ್ದರು. ನಟ ದರ್ಶನ್ ಗೆ ರಾಖಿ ಕಟ್ಟಿ, ಸಂತೋಷದ ಶೀರ್ಷಿಕೆ ಹಾಕಿದ್ದರು.
ಈ ಬಾರಿ ದರ್ಶನ್ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಸಹೋದರಿ ಸೋನಲ್ ಹಾಗೂ ತರುಣ್ ಸುಧೀರ್ ಮದುವೆಗೂ ದರ್ಶನ್ ಗೈರಾಗಿದ್ದರು. ಅವರಿಲ್ಲದೆ ಮದುವೆಯನ್ನು ಸಂಭ್ರಮಿಸೋದು ಕಷ್ಟ ಎಂದಿದ್ದ ಜೋಡಿ, ಜೈಲಿಗೆ ಹೋಗಿ ದರ್ಶನ್ ಆಶೀರ್ವಾದ ಪಡೆದು ಬಂದಿದ್ದರು. ಈಗ ರಾಖಿ ಸಮಯದಲ್ಲಿ ಮತ್ತೆ ದರ್ಶನ್ ಅವರನ್ನು ನೆನೆಪಿಸಿಕೊಂಡಿದ್ದಾರೆ ಸೋನಲ್.
bigg boss : ಬಿಗ್ ಬಾಸ್ ಕಿಚ್ಚನಿಲ್ಲದೆ ಮುಂದುವರಿಯುತ್ತಾರಾ? ಅಭಿಮಾನಿಗಳು ಹೇಳೋದೇನು ?
ಸೋನಲ್ ಮಂಗಳೂರಿನ ಹುಡುಗಿ. ಮಾಡಲಿಂಗ್ ಕ್ಷೇತ್ರದಲ್ಲಿ ಅವರು ಮೊದಲು ಕಾಣಿಸಿಕೊಂಡಿದ್ದರು. ಸ್ಯಾಂಡಲ್ವುಡ್ ಪ್ರವೇಶಕ್ಕೆ ಮುನ್ನ ಕೊಂಕಣಿ ಹಾಗೂ ತುಳು ಸಿನಿಮಾದಲ್ಲಿ ನಟಿಸಿದ್ದ ನಟಿಗೆ 2015ರಲ್ಲಿ ತುಳು ಸಿನಿಮಾದಲ್ಲಿ ನಟಿಸಿದ್ದರು. ಸೋನಲ್ ಈವರೆಗೆ ಎಂಎಲ್ ಎ, ಮದುವೆ ದಿಬ್ಬಣ, ಪಂಚತಂತ್ರ, ಡೆವೋಪೀಸ್, ರಾಬರ್ಟ್, ಬನಾರಸ್, ಬುದ್ಧಿವಂತ 2, ಶುಗರ್ ಫ್ಯಾಕ್ಟರಿ, ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ ಸೋನಲ್.
ಸದ್ಯ ಮದುವೆ ವಿಷ್ಯಕ್ಕೆ ಸೋನಲ್ ಸುದ್ದಿಯಲ್ಲಿದ್ದರು. ಅವರು ಕೆಲ ದಿನಗಳ ಹಿಂದಷ್ಟೆ ತರುಣ್ ಸುಧೀರ್ ಕೈ ಹಿಡಿದಿದ್ದಾರೆ. ಕಲಾಬಳಗವೇ ಅವರನ್ನು ಹರಸಿ ಹಾರೈಸಿದೆ. ಮದುವೆಯ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ್ಲೂ ಸದ್ದು ಮಾಡ್ತಿವೆ. ಮದುವೆಯಾದ ನಂತ್ರ ಮೊದಲ ಹಬ್ಬವನ್ನು ಸೋನಲ್ ಸಂಭ್ರಮದಿಂದ ಆಚರಿಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸೋನಲ್, ಪತಿ ತರುಣ್ ಜೊತೆ ನಟ ರವಿಚಂದ್ರನ್ ಮನೆಗೆ ಭೇಟಿ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.