ಆ ಡರ್ಟಿ ಜಾಗಕ್ಕೆ ಕರೆದ್ರು, ಬಿ ಸೆಕ್ಸಿ ಎಂದರು; ಬಾಲಿವುಡ್ ಕರಾಳ ಮುಖ ಬಿಚ್ಚಿಟ್ಟ ನಟ ರಣ್ವೀರ್ ಸಿಂಗ್

By Shruthi Krishna  |  First Published Nov 15, 2022, 5:04 PM IST

ಆರಂಭದ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ಅನುಭವವಾಗಿದೆ ಎಂದು ಬಾಲಿವುಡ್ ಸ್ಟಾರ್ ನಟ ರಣ್ವೀರ್ ಸಿಂಗ್ ಬಹಿರಂಗ ಪಡಿಸಿದರು.


ಬಾಲಿವುಡ್‌ನಲ್ಲಿ ಸ್ಟಾರ್ ನಟರ ಸಾಲಿನಲ್ಲಿದ್ದಾರೆ ರಣ್ವೀರ್ ಸಿಂಗ್. ಸಿನಿಮಾ ಬ್ಯಾಗ್ರೌಂಡ್ ಇಲ್ಲದೇ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಇಂದು ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿ ರಣ್ವೀರ್ ಸಿಂಗ್ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ಬಹುಬೇಡಿಕೆಯ ನಟನಾಗಿ ಹೊರಹೊಮ್ಮಿರುವ ರಣ್ವೀರ್ ಸಿಂಗ್ ತನ್ನ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ಪ್ರಾರಂಭದ ದಿನಗಳಲ್ಲಿ ತುಂಬಾ ಕಷ್ಟ ಅನುಭವಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ಕಾಸ್ಟಿಂಗ್ ಕೌಚ್ ಅನುಭವ ಕೂಡ ಆಗಿದೆ ಎನ್ನುವ ಮೂಲಕ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ. ನಟಿಯರಿಗೆ ಮಾತ್ರವಲ್ಲದೇ ಹೀರೋಗಳು ಸಹ ಕಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸಿದ್ದಾರೆ ಎನ್ನುವುದಕ್ಕೆ ರಣ್ವೀರ್ ಸಿಂಗ್ ಹೇಳಿಕೆಯೇ ಸಾಕ್ಷಿ.   

ಮೊರಾಕೊದಲ್ಲಿ ನಡೆದ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ, ಸ್ಟಾರ್ ಹೀರೋ ರಣ್ವೀರ್ ಸಿಂಗ್ ತಮ್ಮ ಚೊಚ್ಚಲ ಸಿನಿಮಾದ ಪಾತ್ರ ಪಡೆಯಲು ಹೇಗೆ ಹೆಣಗಾಡಿದರು ಎಂದು ರಿವೀಲ್ ಮಾಡಿದರು. ಅದೇ ವೇಳೆ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡರು. ನಿರ್ಮಾಪಕರ ಹೆಸರನ್ನು ಹೇಳದೆ, ರಣವೀರ್ ಅವರನ್ನು ಹೇಗೆ ಕೆಟ್ಟದಾಗಿ ನಡೆಸಿಕೊಂಡರು ಎಂಬುದನ್ನು ಬಹಿರಂಗಪಡಿಸಿದರು.

ಆವಾರ್ಡ್‌ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡ ದೀಪಿಕಾ ರಣವೀರ್‌ !

Tap to resize

Latest Videos

ಯಾರೆಂದು ಹೆಸರು ರಿವೀಲ್ ಮಾಡಿದ ರಣ್ವೀರ್ ಸಿಂಗ್, 'ಈ ವ್ಯಕ್ತಿ ನನ್ನನ್ನು ಈ ಡರ್ಟಿ ಸ್ಥಳಕ್ಕೆ ಕರೆಯುತ್ತಾನೆ ಮತ್ತು ನೀವು ಶ್ರಮವಹಿಸಿ ಕೆಲಸ ಮಾಡುತ್ತೀರಾ? ಅಥವಾ ನೀವು ಬುದ್ಧಿವಂತ ಕೆಲಸಗಾರರೇ?' ಎಂದು ಕೇಳಿದರು. ನಾನು ನನ್ನನ್ನು ಸ್ಮಾರ್ಟ್ ಎಂದು ಪರಿಗಣಿಸಲಿಲ್ಲ, ಆದ್ದರಿಂದ ನಾನು ಹೇಳಿದೆ, ನಾನು ಹಾರ್ಡ್ ವರ್ಕರ್ ಎಂದು ಭಾವಿಸುತ್ತೇನೆ ಎಂದು ಹೇಳಿದೆ. ಅವರು ಡಾರ್ಲಿಂಗ್, ಬಿ ಸ್ಮಾರ್ಟ್, ಬಿ ಸೆಕ್ಸಿ ಎಂದರು. ಆ ಮೂರೂವರೆ ವರ್ಷಗಳಲ್ಲಿ ನಾನು ಎಲ್ಲಾ ರೀತಿಯ ಅನುಭವಗಳನ್ನು ಹೊಂದಿದ್ದೇನೆ ಮತ್ತು ಆ ಅವಧಿಯು ನನಗೆ ಈಗಿರುವ ಅವಕಾಶಗಳನ್ನು ಗೌರವಿಸುವಂತೆ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ರಣ್ವೀರ್ ಸಿಂಗ್ ಬಹಿರಂಗ ಪಡಿಸಿದರು.

ಫ್ಲಾಪ್ ನಂತರ ಈಗ ಸೌತ್‌ನ ಸೂಪರ್ ಡೈರೆಕ್ಟರ್‌ ಕೈ ಹಿಡಿದ ರಣವೀರ್ ಸಿಂಗ್

ಒಮ್ಮೆ ಪರಿಚಯ ಇರುವ ನಿರ್ಮಾಪಕರೊಬ್ಬರು ತನ್ನನ್ನು ಮೀಟಿಂಗ್ ಎಂದು ಆಹ್ವಾನಿಸಿದ್ದರು. ಆದರೆ ನಂತರ ನಾಯಿಯನ್ನು ಬಿಟ್ಟು ತಮಾಷೆ ಮಾಡಿದ್ದ ಬಗ್ಗೆಯೂ ವಿವರಿಸಿದರು. ರಣ್ವೀರ್ ಸಿಂಗ್ 2010ರಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಬ್ಯಾಂಡ್ ಬಾಜಾ ಭಾರತ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅನುಷ್ಕಾ ಶರ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.  ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.  2013 ರಲ್ಲಿ ಬಂದ ಸಂಜಯ್ ಲೀಲಾ ಬನ್ಸಾಲಿಯವರ ಗೊಲಿಯೋನ್ ಕಿ ರಾಸಲೀಲಾ ರಾಮ್-ಲೀಲಾ ಸಿನಿಮಾ ರಣ್ವೀರ್ ಸಿಂಗ್ ಅವರ ವೃತ್ತಿ ಬದುಕನ್ನೇ ಬದಲಾಯಿಸಿತು. ಆ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತು. ಇದು ಬಾಕ್ಸ್ ಆಫೀಸ್‌ನಲ್ಲಿ ರೂ 100 ಕೋಟಿ ಕಲೆಕ್ಷನ್ ಮಾಡಿ ಬಿಗಿತ್ತು. ಆ ಸಿನಿಮಾ ಬಳಿಕ ರಣ್ವೀರ್ ಸಿಂಗ್ ಬೇಡಿಕೆ ಮತ್ತಷ್ಟು ಹೆಚ್ಚಾಯಿತು. ಅದ್ಭುತ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ತರಹೇವಾರಿ ಪಾತ್ರಗಳಲ್ಲಿ ಮಿಂಚಿದರು.  ಸೂಪರ್ ಸ್ಟಾರ್ ರಾರಾಜಿಸುತ್ತಿರುವ ರಣ್ವೀರ್ ಸಿಂಗ್ ಸದ್ಯ ಸರ್ಕಸ್, ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

 

click me!