ಇಂದು ನಟ ಆಮೀರ್ ಖಾನ್ ಅವರ 58ನೇ ಹುಟ್ಟುಹಬ್ಬ. ಈ ದಿನದಂದು ಯಾರಿಗೂ ತಿಳಿಯದ ಕೆಲವೊಂದು ಸೀಕ್ರೆಟ್ಗಳು ರಟ್ಟಾಗಿವೆ. ಏನದು?
ಮಿಸ್ಟರ್ ಪರ್ಫೆಕ್ಷನಿಸ್ಟ್ (Mr Perfectionist) ಎಂದೇ ಖ್ಯಾತಿ ಪಡೆದಿರುವ ಆಮೀರ್ ಖಾನ್ ಅವರಿಗೆ ಇಂದು 58 ವರ್ಷ ತುಂಬಿದೆ. ಆಮೀರ್ 14 ಮಾರ್ಚ್ 1965 ರಂದು ಮುಂಬೈನಲ್ಲಿ ಜನಿಸಿದರು. ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಅಮೀರ್‌ಗೆ ಸಂಬಂಧಿಸಿದ ಕೆಲವು ತಮಾಷೆಯ ಕಥೆಗಳಿವೆ. ಇವರು ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ಎಂಟನೇ ವಯಸ್ಸಿನಲ್ಲಿ 'ಯಾದೋನ್ ಕಾ ಬಾರಾತ್' ಚಿತ್ರದ ಮೂಲಕ ಬಾಲ ಕಲಾವಿದರಾಗಿ ಬಾಲಿವುಡ್ಗೆ ಪದಾರ್ಪಣೆ ಮಾಡಿದ್ದರು. ಅವರು ಇಂದು ಕೋಟಿ ಕೋಟಿಗಳ ಒಡೆಯನಾಗಿರಬಹುದು, ಆದರೆ ಅವರ ಬಾಲ್ಯವು ತುಂಬಾ ತೊಂದರೆಯಲ್ಲಿ ಕಳೆದಿದೆ. ಅವರು ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ ಎಂದು ಕೆಲವೇ ಜನರಿಗೆ ತಿಳಿದಿದೆ.
ಆಮೀರ್ (Aamir Khan) ಅವರ ತಂದೆ ತಾಹಿರ್ ಹುಸೇನ್ ಅವರು ಚಲನಚಿತ್ರ ನಿರ್ಮಾಪಕರಾಗಿದ್ದರು ಮತ್ತು ಅವರ ಅನೇಕ ಚಿತ್ರಗಳು ನಿರಂತರವಾಗಿ ಸೋತರು ಮತ್ತು ಅವರು ಸಾಲದಲ್ಲಿದ್ದರು. ಇದರಿಂದ ಕುಟುಂಬ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಯಿತು. ಆಮೀರ್ ಖಾನ್ ಅವರ ಬಾಲ್ಯ ಭಯದ ನೆರಳಿನಲ್ಲಿ ಕಳೆದಿದೆ ಎಂದು ಹೇಳಲಾಗುತ್ತದೆ. ಶಾಲೆಯ ಶುಲ್ಕ ಕಟ್ಟುವ ಸ್ಥಿತಿ ಇರಲಿಲ್ಲ. ಆದ್ದರಿಂದ ಶಾಲೆಯಿಂದ ತೆಗೆದು ಹಾಕುತ್ತಾರೆ ಎಂದು ಕ್ಷಣ ಕ್ಷಣವೂ ಭಯಪಡುತ್ತಿದ್ದರು ಆಮೀರ್. ತಾಹಿರ್ ಅವರಿಗೆ ತಮ್ಮ ಮಗ ಆಮೀರ್ ಖಾನ್ ಎಂಜಿನಿಯರ್ ಅಥವಾ ಡಾಕ್ಟರ್ ಆಗಬೇಕೆಂದು ಬಯಸಿದ್ದರು. ಆದರೆ ವಿಧಿ ಅವರನ್ನು ನಟನಾ ವೃತ್ತಿಗೆ ಕರೆದುಕೊಂಡು ಹೋಯಿತು.
Natu Natu ಆಸ್ಕರ್ ಪ್ರಶಸ್ತಿ ಗೆಲ್ಲುತ್ತಿದ್ದಂತೆಯೇ ಸುದ್ದಿಯಲ್ಲಿ ಶಾರುಖ್ ಟ್ವೀಟ್...
ಆಮೀರ್ ಖಾನ್ ತಮ್ಮ ನಟನಾ ವೃತ್ತಿಜೀವನವನ್ನು ಹೋಳಿ ಚಿತ್ರದೊಂದಿಗೆ ಪ್ರಾರಂಭಿಸಿದರೂ, 1988 ರ ಚಲನಚಿತ್ರ ಖಯಾಮತ್ ಸೆ ಕಯಾಮತ್ ತಕ್ ನಿಂದ ಅವರು ಗುರುತಿಸಲ್ಪಟ್ಟರು. ಚಿತ್ರ ಬಿಡುಗಡೆಯೊಂದಿಗೆ ಎಲ್ಲಾ ದಾಖಲೆಗಳನ್ನು ಮುರಿದಿದೆ. ಚಿತ್ರವು ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಚಿತ್ರದಲ್ಲಿ ಆಮೀರ್ ಜೊತೆ ಜೂಹಿ ಚಾವ್ಲಾ ಪ್ರಮುಖ ಪಾತ್ರದಲ್ಲಿದ್ದರು. ಖಯಾಮತ್ ಸೆ ಕಯಾಮತ್ ತಕ್ (Qayamat Se Qayamat Tak) ಹಿಟ್ ನಂತರ, ಆಮೀರ್ ಖಾನ್ ಅನೇಕ ಚಿತ್ರಗಳಿಗೆ ಸಹಿ ಹಾಕಿದರು, ಆದರೆ ಟಾಪ್ ನಂಬರ್, ದೀವಾನಾ ಮುಜ್ಸಾ ನಹಿ, ಜವಾನಿ ಜಿಂದಾಬಾದ್, ತುಮ್ ಮೇರೆ ಮುಂತಾದ ಹೆಚ್ಚಿನ ಚಿತ್ರಗಳು ಫ್ಲಾಪ್ ಎಂದು ಸಾಬೀತಾಯಿತು. ಮಾಧುರಿ ದೀಕ್ಷಿತ್ ಜೊತೆಗಿನ ದಿಲ್ ಚಿತ್ರ 1990 ರಲ್ಲಿ ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು.
ಇಂತಿಪ್ಪ ಆಮೀರ್ ಖಾನ್ ತಲೆಯನ್ನು ಬಹು ದಿನಗಳವರೆಗೆ ಬೋಳಿಸಿಕೊಂಡಿದ್ದರು. ಇನ್ನೊಂದು ಸಲ 12 ದಿನಗಳವರೆಗೆ ಸ್ನಾನವೇ ಮಾಡಿರಲಿಲ್ಲ. ಇವೆರಡು ಘಟನೆಗಳು ಅವರ ಅಭಿಮಾನಿಗಳನ್ನು ಭಾರಿ ಆತಂಕಕ್ಕೆ ಈಡುಮಾಡಿತ್ತು. ಕಾರಣ ಮಾತ್ರ ತಿಳಿದದ್ದು ಎಷ್ಟೋ ವರ್ಷಗಳ ಬಳಿಕ. ತಲೆ ಬೋಳಿಸಲು ಕಾರಣವೇನೆಂದರೆ, ಆಮೀರ್ ಖಾನ್ ಒಬ್ಬಳನ್ನು ಪ್ರೀತಿಸುತ್ತಿದ್ದರಂತೆ, ಆದರೆ ಆಕೆ ಪ್ರೀತಿಸಿ ಮೋಸ ಮಾಡಿದ್ದಳು. ಇದರಿಂದ ನೊಂದು ಆಮೀರ್ ತಲೆ ಬೋಳಿಸಿಕೊಂಡಿದ್ದರಂತೆ. ಈ ಬಗ್ಗೆ ಅವರೇ ಹಲವಾರು ವರ್ಷಗಳ ಬಳಿಕ ನಟಿ ಸಿಮಿ ಗ್ರೆವಾಲ್ ಅವರ ಚಾಟ್ ಶೋನಲ್ಲಿ ವಿವರಿಸಿದ್ದರು. ಇನ್ನು ಸ್ನಾನ ಮಾಡದೇ ಇರುವುದಕ್ಕೂ ಕುತೂಹಲದ ಕಾರಣವಿದೆ. ಅದೇನೆಂದರೆ, ಗುಲಾಮ್ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರೀಕರಿಸಲು ಆಮೀರ್ ಖಾನ್ ಸುಮಾರು 12 ದಿನಗಳ ಕಾಲ ಸ್ನಾನ ಮಾಡಲಿಲ್ಲ! ವಾಸ್ತವವಾಗಿ, ಈ ದೃಶ್ಯದಲ್ಲಿ ಅವರು ಖಳನಾಯಕನನ್ನು ಹೊಡೆಯಬೇಕಾಗಿತ್ತು ಮತ್ತು ಇದಕ್ಕಾಗಿ ಅವರು ವಿಕಾರವಾಗಿ ಕಾಣಬೇಕಾಗಿತ್ತಂತೆ ಅದಕ್ಕಾಗಿ 12 ದಿನ ಸ್ನಾನ (bath) ಮಾಡಿರಲಿಲ್ಲ ಎಂದಿದ್ದಾರೆ.
ನಾನು ಸತ್ತರೆ ಇವರೇ ಕಾರಣ... ಡೆತ್ ನೋಟ್ ಬರೆದ ವರ್ಷಧಾರೆ ನಟಿ Payal Ghosh
ವಿಶ್ವದಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ 5 ಚಿತ್ರಗಳಲ್ಲಿ 3 ಆಮೀರ್ ಖಾನ್ ಅವರದ್ದು ಎನ್ನುವ ಹೆಗ್ಗಳಿಕೆ ಇವರದ್ದು. 2016 ರಲ್ಲಿ ದಂಗಲ್ (Dangan) 2024 ಕೋಟಿ ಗಳಿಸಿದೆ, 2017 ರಲ್ಲಿ ಸೀಕ್ರೆಟ್ ಸೂಪರ್ ಸ್ಟಾರ್ 858 ಕೋಟಿ ಗಳಿಸಿದೆ ಮತ್ತು ಪಿಕೆ (PK) 769 ಕೋಟಿ ಗಳಿಸಿದೆ. 2014ರಲ್ಲಿ ಪಿಕೆ ಬಂದಿತ್ತು. ಇದಲ್ಲದೇ 2015ರಲ್ಲಿ ಬಂದ ಬಜರಂಗಿ ಭಾಯಿಜಾನ್ ಎರಡು ಚಿತ್ರಗಳು 918 ಕೋಟಿ ಗಳಿಸಿವೆ. ಈ ವರ್ಷ ಆಯಿ ಪಠಾಣ್ 1040 ಕೋಟಿ ಕಲೆಕ್ಷನ್ ಮಾಡಿದೆ.