ಹಾಲಿವುಡ್ ಎಂಟ್ರಿ ಬಗ್ಗೆ ಶಾರುಖ್ ಖಾನ್ ನೀಡಿದ್ದ ಹೇಳಿಕೆಗೆ ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸದ್ಯ ಸಿಟಾಡೆಟ್ ಸೀರಿಸ್ ನ ಪ್ರಮೋಶನಲ್ಲಿದ್ದಾರೆ. ಸಿಟಾಡೆಲ್ ಸದ್ಯದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಭಾರಿ ನಿರೀಕ್ಷೆ ಮೂಡಿಸಿರುವ ಈ ಸೀರಿಸ್‌ನ ಪ್ರಚಾರ ಕಾರ್ಯ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಪ್ರಮೋಷನ್ ವೇಳೆ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಭಾರತದ ಅನೇಕ ಕಲಾವಿದರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಹುತೇಕರು ಮತ್ತೆ ಭಾರತೀಯ ಸಿನಿಮಾರಂಗಕ್ಕೆ ವಾಪಾಸ್ ಆಗಿದ್ದಾರೆ. ಆದರೆ ಪ್ರಿಯಾಂಕಾ ಹಾಗಲ್ಲ. ಮದುವೆಯಾಗಿ ಅಮೆರಿಕಾ ಸೇರಿದ ಬಳಿಕ ಅಲ್ಲೇ ಫಿಕ್ಸ್ ಆಗಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೆ ಬಾಲಿವುಡ್‌ಗೆ ಪಾವಾಸ್ ಆಗುವುದು ಕೂಡ ಅನುಮಾನವಿದೆ. ಹೀಗಿರುವಾಗ ಪ್ರಿಯಾಂಕಾ ಹಾಲಿವುಡ್ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ಹೇಳಿಕೆಯ ಬಗ್ಗೆ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಶ್ನೆ ಮಾಡಲಾಯಿತು. ಶಾರುಖ್ ಖಾನ್ ಈ ಹಿಂದೆ ತಾನು ಯಾಕೆ ಹಾಲಿವುಡ್‌ಗೆ ಹೋಗಲ್ಲ ಎಂದು ಬಹಿರಂಗ ಪಡಿಸಿದ್ದರು. ಹಾಲಿವುಡ್‌ಗೆ ಹೋಗುವ ಪ್ರಶ್ನೆ ಮಾಡಿದ್ದಕ್ಕೆ ಶಾರುಖ್ ಖಾನ್, 'ನಾನೇಕೆ ಅಲ್ಲಿಗೆ ಹೋಗಬೇಕು. ನಾನು ಇಲ್ಲೇ ಆರಾಮಾಗಿ ಇದ್ದೀನಿ' ಎಂದು ಹೇಳಿದರು. ಶಾರುಖ್ ಮಾತನ್ನು ಉಲ್ಲೇಖಿಸಿ ಪ್ರಿಯಾಂಕಾ ಚೋಪ್ರಾ ಅವರಿಗೆ ಪ್ರಶ್ನೆ ಮಾಡಲಿಯಾತು. ಉತ್ತರ ನೀಡಿದ ಪ್ರಿಯಾಂಕಾ ತನಗೆ ಆರಾಮಾಗಿ ಇರುವುದು ಬೋರಿಂಗ್ ಎಂದು ಹೇಳಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅಮೆರಿಕಾ ಮನೆಯಲ್ಲಿ ರಾಮ್ ಚರಣ್ ದಂಪತಿ; ಫೋಟೋ ವೈರಲ್
ಆರಾಮಾಗಿ ಇರುವುದು ನನಗೆ ಬೋರ್ ಆಗಿದೆ. ಹಾಗಂತ ನಾನು ಅಹಂಕಾರಿಯಲ್ಲ. ನಾನು ಸೆಟ್‌ಗೆ ಕಾಲಿಟ್ಟಾಗಾ ಏನು ಮಾಡುತ್ತೇನೆ ಎಂದು ನನಗೆ ತಿಳಿದಿದೆ. ನನಗೆ ಆತ್ಮವಿಶ್ವಾಸವಿದೆ. ನಾನು ಈಗಲೂ ಆಡಿಶನ್ ತೆಗೆದುಕೊಳ್ಳಲು ಸಿದ್ಧಳಿದ್ದೇನೆ. ನಾನು ಈಗಲೂ ಕೆಲಸ ಮಾಡಲು ಸಿದ್ಧ. ಇನ್ನೊಂದು ದೇಶಕ್ಕೆ ಕಾಲಿಟ್ಟಾಗ ನನ್ನ ಯಶಸ್ಸನ್ನು ತೆಗೆದುಕೊಂಡು ಹೋಗುವುದಿಲ್ಲ' ಎಂದು ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದು ಶಾರುಖ್ ಖಾನ್ ಅವರಿಗೆ ಕೊಟ್ಟ ತಿರುಗೇಟು ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ.
ಬಾಡಿ ಶೇಮಿಂಗ್‌ನಿಂದ ನೊಂದು ಪತಿ ನಿಕ್ ಜೋನಾಸ್ ಮುಂದೆ ಕಣ್ಣೀರು ಹಾಕಿದ ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಮತ್ತು ಶಾರುಖ್ ಖಾನ್ ಇಬ್ಬರೂ ಡಾನ್ ಸೀರಿಸ್ ನಲ್ಲಿ ಒಟ್ಟಿಗೆ ನಟಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇದೀಗ ಡಾನ್ 3 ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಮತ್ತೆ ಇಬ್ಬರನ್ನೂ ಒಟ್ಟಿಗೆ ನೋಡಲು ಸಾಧ್ಯನಾ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಇಬ್ಬರ ಹೇಳಿಕೆಗಳು ಈಗ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿವೆ.