ವಿವಾದದ ಬಳಿಕ ಆಮೀರ್ ಖಾನ್ ನಟಿಸಿದ್ದ ಜಾಹೀರಾತು ಹಿಂಪಡೆದ ಬ್ಯಾಂಕ್

By Shruiti G Krishna  |  First Published Oct 14, 2022, 5:35 PM IST

ವಿವಾದ ಸೃಷ್ಟಿಸಿದ್ದ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟಿಸಿದ್ದ ಜಾಹೀರಾತನ್ನು ಖಾಸಗಿ ಬ್ಯಾಂಕ್ ಹಿಂಪಡೆದಿದೆ.


ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ನಟಿಸಿದ್ದ ಜಾಹೀರಾತುವೊಂದು ವಿವಾದಕ್ಕೆ ಕಾರಣವಾಗಿತ್ತು. ಖಾಸಗಿ ಬ್ಯಾಂಕ್‌ ವೊಂದರ ಜಾಹೀರಾತು ಅದಾಗಿತ್ತು. ಆಮೀರ್ ಖಾನ್ ಜೊತೆ ನಟಿ ಕಿಯಾರಾ ಅಡ್ವಾಣಿ ಕೂಡ ಕಾಣಿಸಿಕೊಂಡಿದ್ದರು. ಈ ಜಾಹೀರಾತು ರಿಲೀಸ್ ಆಗುತ್ತಿದ್ದಂತೆ ವಿವಾದದ ಕಿಡಿ ಹೊತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ವಿವಾದ ಬಳಿಕ ಇದೀಗ ಖಾಸಗಿ ಬ್ಯಾಂಕ್ ಜಾಹೀರಾತನ್ನು ಪಾವಾಸ್ ಪಡೆದಿದೆ. ಅಂದಹಾಗೆ ಜಾಹೀರಾತುಗಳು ವಿವಾದ ಸೃಷ್ಟಿಸಿ ಬಳಿಕ ಹಿಂಪಡೆದಿರುವ ಉದಾಹರಣೆಗಳು ಸಾಕಷ್ಟಿದೆ. ಇದೀಗ ಆಮೀರ್ ಖಾನ್ ನಟಿಸಿದ್ದ ಜಾಹೀರಾತನ್ನು ಸಹ ಹಿಂಪಡೆಯಲಾಗಿದೆ. 

ಜಾಹೀರಾತಿನಲ್ಲಿ ಏನಿತ್ತು?

Tap to resize

Latest Videos

ಖಸಾಗಿ ಬ್ಯಾಂಕ್‌ನ ಜಾಹೀರಾತಿನಲ್ಲಿ ಆಮೀರ್ ಖಾನ್ ಮತ್ತು  ಕಿಯಾರಾ ಮದುವೆಯಾದ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಮೀರ್ ಕಿಯಾರಾಗೆ, 'ವಧು ಅಳದಿರುವುದು ಇದೇ ಮೊದಲು' ಎಂದು ಹೇಳುತ್ತಾರೆ. ಇಲ್ಲಿ ವರನು ವಧುವಿನ ಮನೆಗೆ ಹೋಗುವ ಸಂಪ್ರದಾಯ ತೋರಿಸಲಾಗಿದೆ. ವರನು ವಧುವಿನ ಅನಾರೋಗ್ಯದ ತಂದೆಯನ್ನು ನೋಡಿಕೊಳ್ಳುವ ಸಲುವಾಗಿ ಆಕೆಯ ಮನೆಗೆ ಹೋಗುತ್ತಾನೆ. ಅಮೀರ್ ವಧುವಿನ ಮನೆಯಲ್ಲಿ ಮೊದಲ ಹೆಜ್ಜೆ ಇಡುವ ಮೂಲಕ ಪ್ರವೇಶಿಸುತ್ತಾರೆ. ಎಲ್ಲಾ ಅತಿಥಿಗಳು ಅಮೀರ್ ಅವರನ್ನು ವೈಭವದಿಂದ ಸ್ವಾಗತಿಸುತ್ತಾರೆ. ನೆಟ್ಟಿಗರು ಅಮೀರ್‌ ಮತ್ತೊಮ್ಮೆ ಹಿಂದುಗಳ ಭಾವನೆಗೆ ಧಕ್ಕೆ ತಂದ ಜಾಹೀರಾತು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು. 

ಹಿಂದುಗಳ ಭಾವನೆಗಳಿಗೆ ಮತ್ತೆ ಧಕ್ಕೆ, ಅಮೀರ್‌ ಖಾನ್‌ ಜಾಹೀರಾತಿಗೆ ವಿವಾದದ ಕಿಡಿ!

ವಿವಾದದ ಕಿಡಿ  

ಈ ಜಾಹೀರಾತಿಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇಂತಹ ಜಾಹೀರಾತುಗಳಿಂದ ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದಿದ್ದರು. ಇನ್ನು ಕಾಶ್ಮೀರ ಫೈಲ್ಸ್‌ ಚಿತ್ರದ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಕೂಡ ಈ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಬ್ಯಾಂಕ್‌ನ ಜಾಹೀರಾತಿನಲ್ಲಿ ಹಿಂದುಗಳ ಸಂಪ್ರದಾಯವನ್ನು ಕುಹಕ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನೆ ಮಾಡಿದ್ದರು.

ಹೃತಿಕ್ ಸೈಫ್‌ಗೂ ಮೊದಲು ಈ 2 ಸೂಪರ್‌ಸ್ಟಾರ್‌ಗಳಿಗೆ ವಿಕ್ರಂವೇದಾ ಆಫರ್‌ ಮಾಡಲಾಗಿತ್ತು

I just fail to understand since when Banks have become responsible for changing social & religious traditions? I think should do activism by changing corrupt banking system.
Aisi bakwaas karte hain fir kehte hain Hindus are trolling. Idiots.pic.twitter.com/cJsNFgchiY

— Vivek Ranjan Agnihotri (@vivekagnihotri)

ಆಮೀರ್ ಖಾನ್ ಸಿನಿಮಾ 

ಆಮೀರ್ ಖಾನ್ ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಭಾರಿ ನಿರೀಕ್ಷೆ ಮೂಡಿಸಿದ್ದ ಲಾಲ್ ಸಿಂಗ್ ಚಡ್ಡಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿತ್ತು. ಬಾಕ್ಸ್ ಆಫೀಸ್ ನಲ್ಲೂ ಲಾಲ್ ಸಿಂಗ್ ಚಡ್ಡಾ ಹಿನಾಯ ಸೋಲು ಕಂಡಿದೆ. ಆಮೀರ್ ಖಾನ್ ಬ್ಯಾಕ್ ಟು ಬ್ಯಾಕ್ ಸೋಲು ಅನುಭವಿಸಿದ್ದಾರೆ. ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 

click me!