ಎಲ್ಲದಕ್ಕೂ ಮೂಗು ತೂರಿಸುತ್ತಾಳೆ: ಕಂಗನಾ ವಿರುದ್ಧ ತಿರುಗಿಬಿದ್ದ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಅಲಿಯಾ

By Shruthi Krishna  |  First Published Jun 30, 2023, 5:37 PM IST

ಎಲ್ಲದಕ್ಕೂ ಮೂಗು ತೂರಿಸುತ್ತಾಳೆ ಎಂದು ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಅಲಿಯಾ ಕಂಗನಾ ವಿರುದ್ಧ ತಿರುಗಿಬಿದ್ದಿದ್ದಾರೆ. ಆಕೆಯ ಮಾತುಗಳಿಗೆ ಬೆಲೆ ಎಂದು ಹೇಳಿದ್ದಾರೆ. 


ಬಾಲಿವುಡ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅಲಿಯಾ ದಂಪತಿ ಕಳೆದ ಕೆಲವು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇಬ್ಬರ ಜಗಳ ಬೀದಿ ರಂಪಾಟವಾಗಿದ್ದು ಅಲಿಯಾ ಸಿದ್ದಿಕಿ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಈ ನಡುವೆ ಅಲಿಯಾ ಬಿಗ್ ಬಾಸ್ ಒಟಿಟಿ 2ಗೆ ಎಂಟ್ರಿ ಕೊಟ್ಟಿದ್ದರು. ಸ್ಪರ್ಧಿಯಾಗಿ ಭಾಗಿಯಾಗಿದ್ದ ಅಲಿಯಾ ಒಂದಿಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದರು. ನವಾಜುದ್ದೀನ್ ಜೊತೆಗಿನ ಪ್ರೀತಿ, ಮದುವೆ ಹಾಗೂ ಗಲಾಟೆಯ ವಿಚಾರಗಳನ್ನು ಬಹಿರಂಗ ಪಡಿಸಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಅಲಿಯಾ ನಟಿ ಕಂಗನಾ ವಿರುದ್ಧ ಹರಿಹಾಯ್ದಿದ್ದಾರೆ. ಈ ಹಿಂದಿ ಕಂಗನಾ ಕೂಡ  ನವಾಜುದ್ದೀನ್ ಪರ ಮಾತನಾಡಿದ್ದರು. ಇದೀಗ ಕಂಗನಾ ಮಾತಿಗೆ ತಿರುಗೇಟು ನೀಡಿರುವ ಅಲಿಯಾ ಆಕೆಯ ಮಾತುಗಳಿಗೆ ಮೌಲ್ಯವಿಲ್ಲ, ಎಲ್ಲದಕ್ಕೂ ಮೂಗು ತೂರಿಸುತ್ತಾರೆ ಎಂದು ಕಿಡಿಕಾರಿದ್ದಾರೆ. 

ವಿವಾದದ ಸಂದರ್ಭದಲ್ಲಿ ನವಾಜುದ್ದೀನ್‌ಗೆ ಬೆಂಬಲವಾಗಿ ನಿಂತ ಕಂಗನಾಗೆ ಪ್ರತಿಕ್ರಿಯೆ ನೀಡಿದ ಅಲಿಯಾ, 'ನಾನು ಕಂಗನಾ ಬಗ್ಗೆ ಗಮನ ಹರಿಸುವುದಿಲ್ಲ ಏಕೆಂದರೆ ಆಕೆಯ ಮಾತಿಗೆ ಯಾವುದೇ ಬೆಲೆ ಇಲ್ಲ. ಅವಳು ಎಲ್ಲದರಲ್ಲೂ ಮೂಗು ತೂರುತ್ತಾಳೆ. ಅವಳು ಎಲ್ಲರ ಬಗ್ಗೆ ಮಾತನಾಡುತ್ತಾಳೆ. ನನ್ನ ಅಭಿಪ್ರಾಯದಲ್ಲಿ, ಅವಳ ಮಾತುಗಳಿಗೆ ಅರ್ಥವಿಲ್ಲ' ಎಂದು ಹೇಳಿದ್ದಾರೆ. 

Tap to resize

Latest Videos

ಕಂಗನಾ ನಿರ್ಮಾಣದ ಸಿನಿಮಾದಲ್ಲಿ ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಟಿಕು ವೆಡ್ಸ್ ಶೇರುದಲ್ಲಿ ನವಾಜುದ್ದೀನ್ ನಟಿಸಿದ್ದು ಈಗಾಗಲೇ ರಿಲೀಸ್ ಕೂಡ ಆಗಿದೆ. ಆದರೆ ಹೇಳಿಕೊಳ್ಳುವಷ್ಟು ಸಕ್ಸಸ್ ಸಿನಿಮಾ ಕಂಡಿಲ್ಲ. ಕಂಗನಾ ಮಾತುಗಳಿಗೆ ಈಗ ಪ್ರತಿಕ್ರಿಯೆ ನೀಡಿರುವ ಅಲಿಯಾ, 'ನಾನು ನನ್ನ ಜೀವನದಲ್ಲಿ ಕಂಗನಾಗೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ. ಕಂಗನಾ ಹೊರತುಪಡಿಸಿ ಯಾರೂ ಏನನ್ನೂ ಹೇಳಲಿಲ್ಲ ಏಕೆಂದರೆ ಕಂಗನಾ ಟಿಕು ವೆಡ್ಸ್ ಶೇರುಗೆ ಬೆಂಬಲ ನೀಡಬೇಕಾಗಿತ್ತು. ಅವಳು ನಿರ್ಮಾಪಕಿ ಮತ್ತು ಅವಳು ತನ್ನ ಚಿತ್ರವನ್ನು ಉಳಿಸಬೇಕಿತ್ತು. ಅವಳು ತಪ್ಪಾಗಿ ಧ್ವನಿ ಎತ್ತಲು ಹೆಸರುವಾಸಿಯಾಗಿದ್ದಾಳೆ. ಯಾರಾದರೂ ಯಾರಿಗಾದರೂ ಚುಚ್ಚಬೇಕಾದರೆ, ಅದು ಕಂಗನಾ ಆಗಿರುತ್ತದೆ' ಎಂದು ಹೇಳಿದ್ದಾರೆ. 

ಈ ಜನ್ಮದಲ್ಲಿ ಮತ್ತೆ ಮದ್ವೆಯಾಗಲ್ಲ: ನವಾಜುದ್ದೀನ್ ಜೊತೆ ಪ್ರೀತಿಯಲ್ಲಿ ಬಿದ್ದ ವಿಚಾರ ಬಾಯ್ಬಿಟ್ಟ ಪತ್ನಿ ಆಲಿಯಾ

ಕಂಗನಾ ಹೇಳಿದ್ದೇನು?

ಅಲಿಯಾ ತನ್ನ ಪತಿ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್‌ಗಳನ್ನು ಶೇರ್ ಮಾಡುತ್ತಿದ್ದರು. ಆಗ ಕಂಗನಾ ಪ್ರತಿಕ್ರಿಯೆ ನೀಡಿ,  'ನವಾಜುದ್ದೀನ್ ಸಿದ್ದಿಕಿ ಸಾಬ್ ಮೌನವು ನಮಗೆ ಯಾವಾಗಲೂ ಶಾಂತಿಯನ್ನು ನೀಡುವುದಿಲ್ಲ. ನೀವು ಈ ಹೇಳಿಕೆಯನ್ನು ನೀಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ' ಎಂದು ನವಾಜುದ್ದೀನ್ ಮಾತಿಗೆ ಬೆಂಬಲ ನೀಡಿದ್ದರು. 

ನಿಗೂಢ ವ್ಯಕ್ತಿಯೊಂದಿಗೆ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಆಲಿಯಾ

ಬಳಿಕ ಮತ್ತೊಂದು ಪ್ರತಿಕ್ರಿಯೆ ನೀಡಿ, 'ನವಾಜ್ ಸರ್ ಅವರನ್ನು ಅವರ ಮನೆಯ ಹೊರಗೆ ಈ ರೀತಿ ಅವಮಾನಿಸಲಾಗುತ್ತಿದೆ. ಅವರು ಎಲ್ಲವನ್ನೂ ತಮ್ಮ ಕುಟುಂಬಕ್ಕೆ ನೀಡಿದರು. ಅವರು ಹಲವಾರು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇದ್ದರು. ಅವರು TWS ಚಿತ್ರೀಕರಣಕ್ಕೆ ರಿಕ್ಷಾದಲ್ಲಿ ಬರುತ್ತಿದ್ದರು. ಕಳೆದ ವರ್ಷವೇ ಅವರು ಈ ಬಂಗಲೆಯನ್ನು ಖರೀದಿಸಿದ್ದರು. ಆದರೀಗ ಅವರ ಮಾಜಿ ಪತ್ನಿ ಅದನ್ನು ಪಡೆಯಲು ಬಂದಿದ್ದಾರೆ. ತುಂಬಾ ದುಃಖವಾಗಿದೆ' ಎಂದು ಹೇಳಿದ್ದರು. 

click me!