ಜಾತಿ ನೋಡಿ ಮದುವೆಯಾಗಬೇಡ; ವಿಡಿಯೋದಿಂದ ನವಾಜುದ್ದೀನ್ ಸಿದ್ಧಿಕಿ ಬಣ್ಣ ಬಯಲು ಮಾಡಿದ ಪತ್ನಿ

By Vaishnavi Chandrashekar  |  First Published Feb 11, 2023, 1:35 PM IST

ನವಾಜುದ್ದೀನ್ ಸಿದ್ಧಿಕಿ ಜೊತೆ ಫೊನ್‌ ಕಾಲ್‌ನಲ್ಲಿ ನಡೆದ ಜಗಳವನ್ನು ಹಂಚಿಕೊಂಡ ಆಲಿಯಾ. ನವಾಜುದ್ದೀನ್‌ ಮತ್ತೊಂದು ಮುಖ ಬಯಲು?


ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ ಮತ್ತು ಪತ್ನಿ ಆಲಿಯಾ ವಿಚ್ಛೇದನ ಮತ್ತು ಆಸ್ತಿ ವಿಚಾರ ರಸ್ತೆ ಬಂದು ನಿಂತಿದೆ. ಇಬ್ಬರು ಆರೋಪ ಪ್ರತ್ಯಾರೋಪ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಆಲಿಯಾ ಸೈಲೆಂಟ್ ಆಗಿ ಮದುವೆ ಮಾಡಿಕೊಂಡಿರುವುದಕ್ಕೆ ಹೀಗೆಲ್ಲಾ ಆಗುತ್ತಿರುವುದು ಎಂದು ಚರ್ಚೆಯಾಗುತ್ತಿದೆ. ಹೀಗಾಗಿ ಅಲಿಯಾ ಉರ್ಫ್‌ ಅಂಜಲಿ ಕಿಶೋರ್ ಪಾಂಡೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಆಂಧೇರಿ ಮನೆಯೊಳಗೆ ನವಾಜ್ ಪ್ರವೇಶಿಸುತ್ತಿದ್ದು ಮಗಳು ಶೋರಾಳನ್ನು ಕರೆದುಕೊಂಡು ಹೋಗಲು ಬಂದಿರುವ ವಿಡಿಯೋವಿದು. 

'ನನಗೆ ನಿನ್ನ ಮೇಲೆ ಒಂದು ಚೂರು ಭರವಸೆ ಇಲ್ಲ. ನೀವು ನನ್ನ ಮಗಳನ್ನು ನಮ್ಮ ಮಗಳು ಎಂದು ಒಪ್ಪಿಕೊಂಡಿಲ್ಲ' ಎಂದು ಆಲಿಯಾ ನವಾಜ್‌ ಬಳಿ ಹೇಳುತ್ತಾರೆ. ಆಲಿಯಾ ಮತ್ತು ನವಾಜ್ ಮದುವೆಯಾಗಿರುವುದಕ್ಕೆ ಏನೇಲ್ಲಾ ಸಾಕ್ಷಿಗಳಿದೆ ಅದನ್ನು ಹಂಚಿಕೊಂಡಿದ್ದಾರೆ. 'ನನ್ನ ಜೀವನದ ಅಮೂಲ್ಯವಾದ 18 ವರ್ಷಗಳನ್ನು ನನ್ನ ಮೇಲೆ ಪ್ರೀತಿ ನಂಬಿಕೆ ಮತ್ತು ವಿಶ್ವಾಸ ಇಲ್ಲದೆ ಇರುವ ವ್ಯಕ್ತಿ ಜೊತೆಗಿರುವೆ. ಅವನ ದೃಷ್ಟಿಯಲ್ಲಿ ನಾನು ತುಂಬಾ ಕೀಳು. 2004ರಲ್ಲಿ ನಾನು ಮೊದಲು ನವಾಜ್‌ನ ಭೇಟಿ ಮಾಡಿದ್ದು ಏಕ್ತಾ ನಗರ್‌, ಮುಂಬೈನಲ್ಲಿ ವಾಸಿಸುತ್ತಿದ್ದ ಸಮಯಲ್ಲಿ ನಾವು ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದೆವು. ನವಾಜ್‌, ನಾನು ಮತ್ತು ಅವರ ಸಹೋದರ ಶಮಸುದ್ದೀನ್ ಒಟ್ಟಿಗೆ ಒಂದು ರೂಮಿನಲ್ಲಿ ವಾಸಿಸುತ್ತಿದ್ದೆವು. ನಮ್ಮ ಜರ್ನಿ ಒಟ್ಟಿಗೆ ಶುರುವಾಗಿ ಖುಷಿ ಖುಷಿಯಾಗಿದ್ದೆವು' ಎಂದು ಆಲಿಯಾ ಬರೆದುಕೊಂಡಿದ್ದಾರೆ.

Tap to resize

Latest Videos

ಆಕೆ ಇನ್ನೂ ಮೊದಲ ಪತಿ ಜೊತೆಯೇ ಇದ್ದಾಳೆ; ಪತ್ನಿ ಅರೋಪಗಳಿಗೆ ನವಾಜುದ್ದೀನ್ ಸಿದ್ದಿಕಿ ತಿರುಗೇಟು

'ಯಶಸ್ಸು ಕಾಣುತ್ತಿದ್ದಂತೆ ನವಾಜುದ್ದೀನಿ ಬದಲಾಗಿದ್ದಾರೆ ಎನ್ನುತ್ತಾರೆ ಆಲಿಯಾ. '2010ರಲ್ಲಿ ನಾವು ದಾಂಪತ್ಯ ಜೀವನಕ್ಕೆ ಕಾಲಿಟ್ಟೆವು, ಒಂದು ವರ್ಷಕ್ಕೆ ಕರೆಕ್ಟ್‌ ಆಗಿ ಮಗು ಮಾಡಿಕೊಂಡೆವು. ಮಗುವಿಗೆ ಖರ್ಚು ನೋಡಿಕೊಳ್ಳಬೇಕು ಎಂದು ನನ್ನ ತಾಯಿ ಗಿಫ್ಟ್‌ ಕೊಟ್ಟಿದ್ದ ಮನೆಯನ್ನು ಮಾರಾಟ ಮಾಡಲಾಗಿತ್ತು. ಅದೇ ಹಣದಲ್ಲಿ ನವಾಜುದ್ದೀನ್‌ಗೆ ನಾನು ಸ್ಕೂಡಾ ಕಾರನ್ನು ಗಿಫ್ಟ್‌ ಮಾಡಿದೆ. ನವಾಜುದ್ದೀನ್‌ ಬಸ್‌ನಲ್ಲಿ  ಪ್ರಯಾಣ ಮಾಡಬಾರದು ಎನ್ನುವ ಕಾರಣಕ್ಕೆ ಈ ರೀತಿ ಸಹಾಯ ಮಾಡಿದೆ. ಇಷ್ಟೆಲ್ಲಾ ನಾನು ಮಾಡಿದ್ದರೂ ಕೇರ್‌ ಮಾಡದೆ ಮನುಷ್ಯತ್ವ ಇಲ್ಲದಂತೆ ವರ್ತಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

'ಭವಿಷ್ಯದಲ್ಲಿ ಈ ರೀತಿ ಆಗುತ್ತದೆ ಎಂದು ಗೊತ್ತಿದ್ದರೆ ನನ್ನ ಜೀವನದ ಅಮೂಲ್ಯವಾದ 12 ವರ್ಷಗಳನ್ನು ಮತ್ತೊಬ್ಬರ ಜೊತೆ ಕಳೆಯುತ್ತಿದ್ದೆ. ಹಣ ಕಡಿಮೆ ಇದ್ದರೂ ಪರ್ವಾಗಿಲ್ಲ ಪ್ರೀತಿ ಇರುವ ವ್ಯಕ್ತಿ ಜೊತೆ ಜೀವನ ನಡೆಸಬೇಕು. ಸೂಪರ್ ಸ್ಟಾರ್ ಆದ್ಮೇಲೆ ಸುಳ್ಳು ಹೇಳುವುದು ಹೆಚ್ಚಾಗಿ ಹಾಗೇ ಸೈಲೆಂಟ್ ಆಗಿ ಮೋಸ ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಈ ವ್ಯಕ್ತಿಯನ್ನು ಮದುವೆ ಮಾಡಿಕೊಂಡೆ ಎಂದು ನನಗೆ ಗೊತ್ತಾಗುತ್ತಿಲ್ಲ'ಎಂದಿದ್ದಾರೆ ಆಲಿಯಾ. 

ಅವರು ಚಿತ್ರ ಹಿಂಸೆ ನೀಡ್ತಿದ್ದಾರೆ; ನವಾಜುದ್ದೀನ್ ಸಿದ್ದಿಕಿ ವಿರುದ್ಧ ಮತ್ತೆ ಸಿಡಿದೆದ್ದ ಪತ್ನಿ ಆಲಿಯಾ

'ಮೊದಲ ಮಗು ಹುಟ್ಟಿದ ನಂತರ ನಾನು ಡಿವೋರ್ಸ್‌ ಪಡೆದುಕೊಂಡು, ಎರಡನೇ ಮಗುವನ್ನು ಲಿವ್‌ ಇನ್‌ ರಿಲೇಷನ್‌ಶಿಪ್‌ ಜೊತೆಗಿರುವ ವ್ಯಕ್ತಿಯಿಂದ ಮಾಡಿಕೊಂಡೆ ಎನ್ನುವ ಆರೋಪವನ್ನು ನವಾಜುದ್ದೀನಿ ಹೇಳಿದ್ದಾರೆ. ನನ್ನ ಮೇಲೆ ಈ ರೀತಿ ಆರೋಪಗಳನ್ನು ಕೇಳಿ ಬೇಸರವಾಗಿದೆ, ಸಮಾಜದಲ್ಲಿ ಗೌರವ ಕಳೆದುಕೊಂಡಿರುವೆ. ಇಷ್ಟು ದೊಡ್ಡ ಮೆಸೇಜ್ ಬರೆಯಲು ಕಾರಣ ಏನೆಂದರೆ ಈ ವ್ಯಕ್ತಿಯನ್ನು ಎಲ್ಲರು ಒಳ್ಳೆಯವರು ಅಂದುಕೊಂಡಿದ್ದಾರೆ ಆದರೆ ಆತನ ನಿಜ ಬಣ್ಣ ಬಯಲು ಮಾಡುವುದು. ಒಳ್ಳೆ ಕುಟುಂಬದಲ್ಲಿ ಬೆಳೆದವರು ಎಂದೂ ಮೋಸ ಮಾಡುವುದಿಲ್ಲ. ಜಾತಿ ನೋಡಿ ಮದುವೆ ಮಾಡಿಕೊಳ್ಳ ಬೇಡಿ ಜಾತಿ ನೋಡಿ ಪ್ರೀತಿ ಮಾಡಬೇಡಿ ಎಂದು ಎಲ್ಲರಿಗೂ ಕಿವಿ ಮಾತು ಹೇಳುವೆ' ಎಂದು ಆಲಿಯಾ ಹೇಳಿದ್ದಾರೆ.

click me!