ಮೀಮ್‌ ಮಾಡ್ತಿದ್ದವನಿಗೆ ಒಲಿದು ಬಂದ ಅದೃಷ್ಟ: ಆಲಿಯಾ ಜೊತೆ ಜಾಹೀರಾತಿನಲ್ಲಿ ಭಾಗಿ

By Anusha KbFirst Published May 12, 2022, 3:32 PM IST
Highlights
  • ಮೀಮ್ ಮಾಡ್ತಿದ್ದ ಹುಡುಗನಿಗೆ ಒಲಿದು ಬಂದ ಅದೃಷ್ಟ
  • ಆಲಿಯಾ ಜೊತೆ ಜಾಹೀರಾತಿನಲ್ಲಿ ನಟಿಸುವ ಅವಕಾಶ
  • ಪ್ಯಾರಾ ಗ್ಲೈಂಡಿಂಗ್ ವೇಳೆ ಬೊಬ್ಬೆ ಹಾಕಿ ಸುದ್ದಿಯಾಗಿದ್ದ ಯುವಕ

ಇದು ಎಷ್ಟಿದ್ದರು ಸಾಮಾಜಿಕ ಜಾಲತಾಣಗಳ (Social Media) ಯುಗ. ಕೈಯಲ್ಲೊಂದು ಮೊಬೈಲ್‌ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಎಕೌಂಟ್‌ ಸ್ವಂತ ಪ್ರತಿಭೆಗಳಿದ್ದರೆ ನಿಮ್ಮನ್ನು ಯಾರು ಹಿಡಿದಿಡಲು ಸಾಧ್ಯವಿಲ್ಲ. ಕ್ಷಣದಲ್ಲಿ ನೀವು ಜಗತ್ತನ್ನು ತಲುಪಬಹುದು. ನನ್ನ ಪ್ರತಿಭೆಗೆ ಅವಕಾಶ ಸಿಕ್ಕಿಲ್ಲ ಎಂದು ಅಳುತ್ತಾ ಕೂರಬೇಕಾದ ಸ್ಥಿತಿ ಈಗ ಎಲ್ಲ. ಇದಕ್ಕೆ ನಮ್ಮಲ್ಲಿ ಈಗಾಗಲೇ ಹಲವು ನಿದರ್ಶನಗಳು ಆಗಿ ಹೋಗಿವೆ. ಹಾಗೆಯೇ ಇವತ್ತು ಸಾಕಷ್ಟು ಮೀಮ್ (Meme), ಟ್ರೋಲ್‌ (Trol)ಪೇಜ್‌ಗಳಿವೆ. ಹಾಗೆಯೇ ತನ್ನನ್ನೇ ತಾನು ಟ್ರೋಲ್ ಮಾಡಿಕೊಂಡು ಸುದ್ದಿಯಾಗಿದ್ದ ಯುವಕನೋರ್ವನಿಗೆ ಈಗ ಆಲಿಯಾ ಜೊತೆ ಜಾಹೀರಾತಿನಲ್ಲಿ ನಟಿಸುವ ಅವಕಾಶವೊಂದು ಹುಡುಕಿ ಬಂದಿದ್ದು ಆತ ತನ್ನ ಅದೃಷ್ಟವನ್ನು ತಾನೇ ನಂಬದಾಗಿದ್ದಾನೆ. 

2019 ರ ಒಂದು ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ನೀವು ಗಮನಿಸಿರಬಹುದು. ಪ್ಯಾರಾ ಗ್ಲೈಡಿಂಗ್ (Para Gliding) ಮಾಡಲು ಹೋರಾಟ ಯುವಕನೋರ್ವ ನಡು ಆಗಸದಲ್ಲಿ ಅಯ್ಯೋ ಒಮ್ಮೆ ಕೆಳಗಿಳಿಸಿ ಎಂದು ತನ್ನ ಗ್ಲೈಡರ್‌ಗೆ ಗೊಗರೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆತನೇ ಈಗ ನಟಿ ಆಲಿಯಾ ಭಟ್ ಜೊತೆ ನಟಿಸಲು ಅವಕಾಶ ಗಿಟ್ಟಿಸಿಕೊಂಡ ಅದೃಷ್ಟವಂತ. ಈ ಮೂಲಕ ಸಾಮಾಜಿಕ ಜಾಲತಾಣ ಎಷ್ಟು ಪ್ರಭಾವಶಾಲಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಿಪುಲ್ ಕುಮಾರ್ ಸಾಹು (Vipul Kumar Sahu) ಎಂಬಾತನೇ ಆಗ ತಮ್ಮ ತಮಾಷೆಯ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಲ್ಲಿ ರಾತ್ರಿ ಬೆಳಗಾಗುವುದರಲ್ಲಿ ಸುದ್ದಿಯಾದವರು. ಇದಾಗಿ ಬಹುಶಃ ಈಗ ಮೂರು ವರ್ಷಗಳೇ ಕಳೆದಿದೆ. ಅಲ್ಲದೇ ಅವರ ಖ್ಯಾತಿ ಯಾವ ಮಟ್ಟದಲ್ಲಿ ಏರಿದೆ ಎಂದರೆ ಆಲಿಯಾ ಜೊತೆ ಅವರಿಗೆ ಜಾಹೀರಾತಿನಲ್ಲಿ (Advertisement) ನಟಿಸಲು ಅವಕಾಶ ಸಿಕ್ಕಿದೆ.

 

ಕ್ಯಾಡ್‌ಬರಿ ಪರ್ಕ್ ಜಾಹೀರಾತಿನಲ್ಲಿ ವಿಪುಲ್ ಕುಮಾರ್ ಸಾಹು ಹಾಗೂ ಆಲಿಯಾ ಜೊತೆಯಾಗಿ ನಟಿಸಿದ್ದಾರೆ. ತನ್ನ ಅಂದಿನ ನಟನೆಯಂತೆಯೇ ಸಾಹು ಇಲ್ಲಿ ಪ್ಯಾರಾ ಗ್ಲೈಡರ್ ಆಗಿದ್ದರೆ ನಟಿ ಆಲಿಯಾ ಅವರ ಜೊತೆ ಇರುವ ಇನ್ಸ್ಟ್ರಕ್ಟರ್‌ ಆಗಿದ್ದು, ವಿಪುಲ್‌ ಕುಮಾರ್ ಅಂದಿನಂತೆಯೇ ಅಯ್ಯೋ ಒಮ್ಮೆ ಕೆಳಗಿಳಿಸಿ ಎಂದು ಬೊಬ್ಬೆ ಹೊಡೆಯುತ್ತಾರೆ. ನನಗೆ ಈ ಲಾಂಗ್‌ರೈಡ್ ಬೇಕಿರಲಿಲ್ಲ. ಬೇಕಾದರೆ 500 ರೂಪಾಯಿ ಹೆಚ್ಚೇ ಕೊಡುವೆ ಒಮ್ಮೆ ಕೆಳಗಿಳಿಸು ಎಂದು ಹೇಳುತ್ತಾನೆ. ಆಗ ನಟಿ ಆಲಿಯಾ ಅವರಿಗೆ ಪರ್ಕ್‌ ನೀಡುತ್ತಾರೆ. ಪರ್ಕ್ ಪಡೆಯುವ ಆತ ಅದನ್ನು ತಿನ್ನುತ್ತಾನೆ. ಪರ್ಕ್ ತಿನ್ನಿ ಲೈಟ್ ಆಗಿ ಎಂದು ನಟಿ ಆಲಿಯಾ ಹೇಳುತ್ತಾರೆ. 

ಜಾಲಿಯಾಗಿ ಪಾರಾಗ್ಲೈಡಿಂಗ್ ಮಾಡಿದ ನಾಯಿ: ವಿಡಿಯೋ ವೈರಲ್

ಇನ್ನು ಆಲಿಯಾ ಜೊತೆ ತಾವು ಜಾಹೀರಾತಿನಲ್ಲಿ ನಟಿಸಿರುವ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ (Instagram) ಹೇಳಿಕೊಂಡಿರುವ ವಿಪುಲ್ ಕುಮಾರ್, ಯಾರು ಹೇಳಿದ್ದು, ಮೆಮೆಯಿಂದ ಸಾಧನೆ ಮಾಡಲಾಗುವುದಿಲ್ಲ ಎಂದು. ಯಾರು ಹೇಳಿದ್ದು ಮೆಮೆಗೆ ಕೇವಲ ಒಂದರಿಂದ ಎರಡು ತಿಂಗಳಷ್ಟೇ ಆಯಸ್ಸು ಎಂದು ಎಲ್ಲ ಈ ನಂಬಿಕೆಗಳನ್ನು ಮುರಿದು ಆಲಿಯಾ ಜೊತೆ ಜಾಹೀರಾತಿನಲ್ಲಿ ಭಾಗವಹಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ. ಈ ಅವಕಾಶ ನೀಡಿದ್ದಕ್ಕೆ ಕ್ಯಾಡ್‌ಬರಿ ಇಂಡಿಯಾಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಅಯ್ಯೋ ಒಮ್ಮೆ ಕೆಳಗಿಳ್ಸಿ... ಪ್ಯಾರಾಗ್ಲೈಡಿಂಗ್ ಮಾಡಲು ಹೋಗಿ ಏನಾಯ್ತು ನೋಡಿ
ಇನ್ನು ಆಲಿಯಾ ಜೊತೆ ಚಿತ್ರೀಕರಣದಲ್ಲಿ ಭಾಗವಹಿಸುವುದು ಬಹುತೇಕ ಕನಸಾಗಿತ್ತು ಎಂದು ಆಲಿಯಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಮೊದಲ ಶಾಟ್ ಶೂಟ್‌ ಮಾಡಿದಾಗ ನನಗೆ ಒಂತರ ಭಯ ಭಯ ಆಗಿತ್ತು. ಒಂದು ದಿನ ನಾವಿಬ್ಬರು ಜೊತೆಯಾಗಿ ಕುಳಿತು ಮಾತುಕತೆ ನಡೆಸಬಹುದು ಎಂದು ನಾನು ಕಲ್ಪನೆ ಕೂಡ ಮಾಡಿರಲಿಲ್ಲ. ಆಲಿಯಾ ಭಟ್ (Alia Bhat) ಅವರ ಕೇಶ ವಿನ್ಯಾಸಕರ ಹೆಸರು ನನಗೆ ತಿಳಿದಿಲ್ಲ ಆದರೆ ಅವರಿಗೆ ನಾನು ಸಾಕಷ್ಟು ಧನ್ಯವಾದ ಹೇಳಲಾಗಲಿಲ್ಲ. ಅವರು ತುಂಬಾ ಒಳ್ಳೆಯ ಬಾಡಿ ಬಿಲ್ಡರ್ ಎಂದು ವಿಪುಲ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಇನ್ನೊಂದು ಪೋಸ್ಟ್‌ನಲ್ಲಿ ಅವರು ಕೆಲವು ತೆರೆಮರೆಯ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. 
 

click me!