BIFFES: ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ, ಮನೇಲಿ ಮೂವಿ ನೋಡ್ಬಹುದಾ?

By Suvarna News  |  First Published Mar 3, 2022, 10:37 AM IST

13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಈ ಸಲ ನೀವು ಆನ್‌ಲೈನ್‌ನಲ್ಲೂ ಇಲ್ಲಿನ ಚಿತ್ರಗಳನ್ನು ವೀಕ್ಷಿಸಬಹುದು ಎಂಬುದು ವಿಶೇಷ.


13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ (Bengaluru International Film Festival) ಇಂದು ಚಾಲನೆ ಸಿಗಲಿದೆ. ಇಂದಿನಿಂದ ಮಾರ್ಚ್ 10ರವರೆಗೆ ನಡೆಯುವ ಈ ಸಿನಿಮೋತ್ಸವದಲ್ಲಿ 55 ದೇಶಗಳ 200 ಚಿತ್ರಗಳು ಪ್ರದರ್ಶನ ಕಾಣಲಿವೆ. ಈ ಬಾರಿಯ ಸಿನಿಮೋತ್ಸವ ಬೆಂಗಳೂರು ನಗರದ ಮೂರು ಕಡೆ ನಡೆಯಲಿದೆ. ರಾಜಾಜಿ ನಗರದ ಓರಾಯನ್ ಮಾಲ್ (Orian Mall) - ಪಿವಿಆರ್ ಸಿನಿಮಾ (PVR Cinema), ಚಾಮರಾಜಪೇಟೆಯ ಕಲಾವಿದರ ಸಂಘ ಹಾಗೂ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ (Suchitra Film Society) ದಿನವಿಡೀ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ವರ್ಷದ ಅಂಗವಾಗಿ ಈ ಬಾರಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ ಚಿತ್ರಗಳು ತೆರೆ ಕಾಣುತ್ತಿರುವುದು ವಿಶೇಷ. ಇದರ ಜೊತೆಗೆ ತುಳು ಸಿನಿಮಾ ರಂಗಕ್ಕೆ 50 ವರ್ಷವಾದ ಹಿನ್ನೆಲೆಯಲ್ಲೂ ತುಳು ಚಿತ್ರಗಳ ಕುರಿತ ಸಂವಾದ ಕಾರ್ಯಕ್ರಮ, ತುಳು ಚಿತ್ರಗಳ ಪ್ರದರ್ಶನ ಕಾಣಲಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ 'ಪಡ್ಡಾಯಿ' ಚಿತ್ರದ ಪ್ರದರ್ಶನವೂ ಇರುತ್ತದೆ. ಜೊತೆಗೆ ಈಶಾನ್ಯ ರಾಜ್ಯಗಳ ಚಿತ್ರಗಳಿಗೂ ಈ ಬಾರಿ ಆದ್ಯತೆ ನೀಡಲಾಗಿದೆ. 

1941ರಲ್ಲಿ ಬಂದ ಕನ್ನಡ ಕ್ಲಾಸಿಕ್ ‘ವಸಂತ ಸೇನೆ’ ಚಿತ್ರದ ಸ್ಕ್ರೀನಿಂಗ್ (Screening) ಈ ಬಾರಿಯ ಚಲನಚಿತ್ರೋತ್ಸವದ ವಿಶೇಷ. ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆೆ ಚಾಲನೆ ನೀಡಲಿದ್ದಾರೆ. 

Tap to resize

Latest Videos

ಸಲ್ಮಾನ್ ಸೊನಾಕ್ಷಿಯನ್ನು ಮದ್ವೆಯಾದ್ರಂತೆ, ಈ ಸುಳ್ಳು ಸುದ್ದಿ ವೈರಲ್ ಆಗಿದ್ದೇಕೆ?

ಆನ್‌ಲೈನ್‌ನಲ್ಲೂ (Online) ಸಿನಿಮಾ ನೋಡಬಹುದು
ಪ್ಯಾಂಡಮಿಕ್ ಯುಗದಲ್ಲಿ (Pandemic Time) ಆನ್‌ಲೈನ್‌ನಲ್ಲಿ ಸಿನಿಮೋತ್ಸವದ ಚಿತ್ರ ನೋಡಲು ಸಿಕ್ಕಿರೋ ಕಾರಣ ನೀವು ಮನೆಯಲ್ಲೇ ಕೂತು ಆನ್‌ಲೈನ್ ಮುಖಾಂತರ ಬೆಂಗಳೂರು ಸಿನಿಮೋತ್ಸವದ ಚಿತ್ರಗಳನ್ನು ನೋಡಬಹುದು. ಆನ್‌ಲೈನ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ ದಿನಕ್ಕೆ 10 ಸಿನಿಮಾ ನೋಡುವ ಅವಕಾಶ ಇದೆ. ಬೆಳಗ್ಗೆ 9ರಿಂದ ರಾತ್ರಿ ಎಷ್ಟರವರೆಗೆ ಬೇಕಿದ್ದರೂ ನೋಡಬಹುದು. ಆದರೆ ಟೈಮ್ ಸ್ಲಾಟ್ ಅನ್ನು ನೀವು ಆಯ್ಕೆ ಮಾಡಿಕೊಂಡಿರಬೇಕು. ಸಿನಿಮೋತ್ಸವ ತಂಡ ಸಿನಿಮಾಕ್ಕಿರುವ ಡಿಮ್ಯಾಂಡ್ ಅನ್ನು ಗಮನಿಸುತ್ತಿರುತ್ತದೆ. ಹೆಚ್ಚು ಡಿಮ್ಯಾಂಡ್ ಇರುವ ಚಿತ್ರ 39ರಿಂದ 48 ಗಂಟೆಗಳವರೆಗೂ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ. ಓಟಿಟಿಯಂತೆ ಇದು ಕಾರ್ಯಾಚರಿಸಲಿದ್ದು, 400 ರು. ಕೊಟ್ಟು ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು. 

ಟಿವಿಯಲ್ಲೂ ನೋಡಬಹುದು
ಈ ಬಾರಿ ಟಿವಿಯಲ್ಲೂ ಸಿನಿಮೋತ್ಸವದ ಚಿತ್ರ ನೋಡಬಹುದು. ಫೈರ್ ಟಿವಿ ಆಪ್ ಸ್ಟೋರ್‌ನಲ್ಲಿ biffes ಆಪ್ ಡೌನ್‌ಲೋಡ್ ಮಾಡಿಕೊಂಡು ಅಲ್ಲಿರುವ instructionsನ ಫಾಲೋ ಮಾಡಬೇಕು. ಅಮೆಜಾನ್ ಪ್ಲೇ ಸ್ಟೋರ್‌ನಲ್ಲೂ ಈ ಬಿಐಎಫ್ಎಫ್ಇಎಸ್ ಆಪ್ ಸೆಲೆಕ್ಟ್ ಮಾಡಿ ಹಣ ತುಂಬಿ ನಿಮ್ಮನೆ ಸ್ಮಾರ್ಟ್ ಟಿವಿಯಲ್ಲೇ ಚಲನಚಿತ್ರೋತ್ಸವದ ಸಿನಿಮಾ ನೋಡಬಹುದು. ಇದು ಸಿನಿಮೋತ್ಸವ ಇತಿಹಾಸದಲ್ಲೇ ಇದೇ ಮೊದಲು ಎನ್ನಲಾಗಿದೆ. 

ಹುಡುಗನೋ? ಹುಡುಗಿಯೋ? ಟ್ರೋಲ್‌ ಆಗಿದ್ದ Tiger Shroff ಈಗ ಆ್ಯಕ್ಷನ್ ಹೀರೋ!

ಯಾವೆಲ್ಲ ಸಿನಿಮಾಗಳು
ವರ್ಲ್ಡ್ ಸಿನಿಮಾ, ಇಂಡಿಯನ್ ಹಾಗೂ ಏಶ್ಯನ್ ಕಾಂಪಿಟಿಷಿಯನ್ ಕೆಟಗರಿಯಲ್ಲಿ ಅನೇಕ ಉತ್ತಮ ಚಿತ್ರಗಳಿವೆ. Sonia Liza kenterman ನ ‘ಟೈಲರ್’, Omar El Zohairy ಯ ‘ಫೆದರ್ಸ್’, Mohammed Rasoulofನ ‘ದೇರ್ ಈಸ್ ನೋ ಈವಿಲ್’ ಹೀಗೆ ಹಲವು ಉತ್ತಮ ಸಿನಿಮಾಗಳು ತೆರೆ ಕಾಣಲಿವೆ.  ಆಯಾ ದಿನ ಯಾವೆಲ್ಲ ಬೆಸ್ಟ್ ಸಿನಿಮಾಗಳಿವೆ ಅನ್ನೋದನ್ನು ಚೆಕ್ ಮಾಡಿಕೊಂಡು ನೋಡಬಹುದು. ಟೈಲರ್ ಚಿತ್ರ ಇಂದಿನ ಉದ್ಘಾಟನಾ ಚಿತ್ರವಾಗಿ ತೆರೆ ಕಾಣಲಿದೆ. ಮುಂದಿನ ದಿನಗಳಲ್ಲೂ ಈ ಚಿತ್ರದ ಪ್ರದರ್ಶನ ಇರುತ್ತದೆ. ದಿ ನ್ಯೂಸ್ ಪೇಪರ್, ಫೈರ್, ದಿ ಎಫ್ಟೀ ನೆಸ್ಟ್, ಕನ್ನಡದ ಮಾನಾ, ಸಾರಾ ವಜ್ರ, ಮುನ್ನುಡಿ ಇತ್ಯಾದಿ ಚಿತ್ರಗಳ ಪ್ರದರ್ಶನವಿರುತ್ತದೆ. ಶಿವಾಜಿ ಸುರತ್ಕಲ್, ರುಗ್ಣ ಸೇರಿದಂತೆ ಹಲವು ಕನ್ನಡ ಚಿತ್ರಗಳ ಪ್ರದರ್ಶನವಿದೆ. ಇಂಗ್ಲೀಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು ಸೇರಿದಂತೆ ಭಾರತೀಯ ಭಾಷೆಯ ಚಿತ್ರಗಳೂ ತೆರೆ ಕಾಣಲಿವೆ. 

Pathan Teaser: ಶಾರೂಕ್ ಖಾನ್ ಕಂ ಬ್ಯಾಕ್ ಚಿತ್ರ ‘ಪಠಾಣ್’ ಟೀಸರ್ ರಿಲೀಸ್

click me!