ಶಾರುಖ್ ಖಾನ್ (Shah Rukh Khan) ಅಭಿಮಾನಿಗಳಿಗೆ ಗುಡ್ ನ್ಯೂಸ್. ವರ್ಷಗಳ ಕಾಲ ಅಭಿಯನಯದಿಂದ ದೂರ ಉಳಿದಿದ್ದ ಕಿಂಗ್ ಖಾನ್ ಕಂ ಬ್ಯಾಕ್ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಅಭಿನಯದ ಪಠಾಣ್ (Pathan) ಚಿತ್ರದ ಟೀಸರ್ (Teaser) ರಿಲೀಸ್ ಆಗಿದೆ.
ಬಾಲಿವುಡ್ ಬಾದ್ ಷಾ, ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ದೇವರು. ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟು ಸೂಪರ್ ಸ್ಟಾರ್ ಎನಿಸಿಕೊಂಡವರು. ದೇವದಾಸ್, ದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇ, ಕುಚ್ ಕುಚ್ ಹೋತಾ ಹೈ, ಕಭೀ ಖುಷಿ ಕಭೀ ಗಮ್, ರಾಯೀಸ್, ಓಂ ಶಾಂತಿ ಓಂ, ಕಲ್ ಹೋ ನಾ ಹೋ, ಚೆನ್ನೈ ಎಕ್ಸ್‌ಪ್ರೆಸ್ ಸೇರಿ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಶಾರೂಕ್ ಇತ್ತೀಚಿಗೆ ಮಗ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಪ್ರಕರಣದಿಂದ ಕೋರ್ಟ್, ಕೇಸ್ ಎಂದು ಅಲೆದಾಡಿದ್ದರು. ಯಾವುದೇ ಚಿತ್ರಗಳಲ್ಲಿ ಅಭಿನಯಿಸರಲ್ಲಿಲ್ಲ. ಈಗ ಬಹಳಷ್ಟು ಸಮಯಗಳ ನಂತರ ಕಿಂಗ್ ಖಾನ್ ಸಿನಿಮಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.
ಶಾರುಖ್ ಖಾನ್ ಅಂತಿಮವಾಗಿ ತಮ್ಮ ಕಂ ಬ್ಯಾಕ್ ಚಿತ್ರದ ಹೆಸರನ್ನು ಘೋಷಿಸಿದ್ದಾರೆ. ಟೀಸರ್‌ನ್ನು ರಿಲೀಸ್ ಮಾಡಿದ್ದಾರೆ. ಹೌದು, ಶಾರುಖ್ ಖಾನ್ ಬಹುನಿರೀಕ್ಷಿತ ಚಿತ್ರ ಪಠಾಣ್ (Pathan) ನ ಟೀಸರ್ (Teaser) ರಿಲೀಸ್ ಆಗಿದೆ. ಚಿತ್ರದಲ್ಲಿ ಶಾರುಖ್ ಖಾನ್ ಜತೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸಹ ನಟಿಸುತ್ತಿದ್ದಾರೆ.
ಪಠಾಣ್ ಚಿತ್ರದ ಮೊದಲ ಟೀಸರ್‌ನ್ನು ಶಾರುಖ್ ಖಾನ್ ಹಂಚಿಕೊಂಡಿದ್ದಾರೆ. ಈ ಚಿತ್ರವು ಸುಮಾರು ನಾಲ್ಕು ವರ್ಷಗಳ ನಂತರ ಅವರು ಚಲನಚಿತ್ರಗಳಿಗೆ ಪುನರಾಗಮನವನ್ನು ಸೂಚಿಸುತ್ತದೆ. ಪಠಾಣ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ದೀಪಿಕಾ ಪಡುಕೋಣೆ (Deepika Padukone) ಮತ್ತು ಜಾನ್ ಅಬ್ರಹಾಂ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾರುಖ್ ಗೂಢಚಾರಿಕನ ಪಾತ್ರದಲ್ಲಿ ನಟಿಸಿದ್ದಾರೆ.
RIP Lata Mangeshkar : ಗೌರಿ ಅಲ್ಲ... ಶಾರುಖ್ ಜತೆ ವೈರಲ್ ಪೋಟೋದಲ್ಲಿ ಇರುವ ಲೇಡಿ ಯಾರು!
ಟೀಸರ್ ಜಾನ್ ಅಬ್ರಹಾಂ (John Abraham) ಅವರು ಪರ್ವತಗಳು ಮತ್ತು ಬೆಟ್ಟಗಳ ನಡುವೆ ನಿಂತಿರುವ ದೃಶ್ಯದಿಂದ ಆರಂಭವಾಗುತ್ತದೆ. ಬ್ಯಾಕ್ ಗ್ರೌಂಡ್‌ನಲ್ಲಿ ಹೆಲಿಪ್ಯಾಡ್ ಹಾರುವುದನ್ನು ನೋಡಬಹುದು.. ಟೀಸರ್‌ನಲ್ಲಿ ಜಾನ್ ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುತ್ತಾ, ‘ನಮ್ಮ ದೇಶದಲ್ಲಿ, ನಾವು ನಮ್ಮ ಹೆಸರನ್ನು ನಮ್ಮ ಧರ್ಮ ಅಥವಾ ಜಾತಿಗೆ ಸಂಬಂಧಿಸಿದಂತೆ ಇಡುತ್ತೇವೆ. ಆದರೆ ಅವನಿಗೆ ಯಾವುದೇ ಆಯ್ಕೆಗಳಿಲ್ಲ’ ಎಂದು ಹೇಳುತ್ತಾರೆ. ಬ್ಯಾಕ್‌ಡ್ರಾಪ್‌ನಲ್ಲಿ ಯುದ್ಧದ ಸನ್ನಿವೇಶವನ್ನು ವೀಕ್ಷಿಸುತ್ತಿರುವಂತೆ ಬರುತ್ತಿರುವಂತೆಯೇ ದೀಪಿಕಾ ಡೈಲಾಗ್ ಬರುತ್ತದೆ. ಅವರಿಗೆ ಹೆಸರನ್ನು ಇಡಲು ಯಾರೂ ಇರಲಿಲ್ಲ, ಮತ್ತು ಅವರು ಹೊಂದಿದ್ದ ಒಂದೇ ಒಂದು ಗುರುತು,ದೇಶ –ಭಾರತ’ ಎಂದು ಹೇಳುತ್ತಾರೆ.
ಆ ನಂತರ ಟೀಸರ್‌ನಲ್ಲಿ ಎಸ್ಆರ್‌ಕೆ ಹೆಸರು ಕಾಣಿಸಿಕೊಳ್ಳುತ್ತದೆ. ‘ಆದ್ದರಿಂದ, ಅವರು ಭಾರತವನ್ನು ತಮ್ಮ ಧರ್ಮ ಎಂದು ಪರಿಗಣಿಸಿದ್ದಾರೆ ಮತ್ತು ದೇಶವನ್ನು ರಕ್ಷಿಸುವುದು ಅವರ ಕೆಲಸ. ಹೆಸರಿಲ್ಲದವರು ದೇಶದ ಹೆಸರಿನೊಂದಿಗೆ ತಮ್ಮ ಹೆಸರನ್ನು ಹೊಂದಿದ್ದಾರೆ. ಈ ಹೆಸರನ್ನು ಹೇಗೆ ಮತ್ತು ಏಕೆ ಕರೆಯಲಾಯಿತು ಎಂಬುದನ್ನು ತಿಳಿಯಲು, ನೀವು ಸ್ವಲ್ಪ ಕಾಯಬೇಕಾಗುತ್ತದೆ. ನಾವು ಶೀಘ್ರದಲ್ಲೇ ಪಠಾಣ್ ಅವರನ್ನು ಭೇಟಿಯಾಗುತ್ತೇವೆ’ ಎಂದು ಟೀಸರ್‌ನಲ್ಲಿ ತಿಳಿಸಲಾಗಿದೆ.
ಶಾರುಖ್ ಮನೆ ಪಕ್ಕದಲ್ಲೇ ನವಾಜುದ್ದೀನ್ ಸಿದ್ದಿಕಿ ಬಂಗಲೆ; ತಂದೆಯ ಹೆಸರಿಟ್ಟ ನಟ!
ಟೀಸರನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಶಾರುಖ್ ಖಾನ್ ‘ಚಿತ್ರದ ಬಿಡುಗಡೆ ತಡವಾಗಿದೆ ಎಂದು ನನಗೆ ತಿಳಿದಿದೆ. ಆದರೆ ದಿನಾಂಕವನ್ನು ನೆನಪಿಸಿಕೊಳ್ಳಿ. ಪಠಾಣ್ ಸಮಯ ಈಗ ಪ್ರಾರಂಭವಾಗುತ್ತದೆ . 2023ರ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ತಿಳಿಸಿದ್ದಾರೆ..
ಶಾರುಖ್ ಕೊನೆಯದಾಗಿ 2018ರಲ್ಲಿ ಆನಂದ್ ಎಲ್ ರೈ ಅವರ ನಿರ್ದೇಶನದ ಝೀರೋ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಕೂಡ ನಟಿಸಿದ್ದಾರೆ. ಆದರೆ ಥಿಯೇಟರ್‌ನಲ್ಲಿ ಚಿತ್ರ ಅಷ್ಟೇನು ಯಶಸ್ವೀ ಪ್ರದರ್ಶನವನ್ನು ಕಾಣಲ್ಲಿಲ್ಲ. ಅಮೆಜಾನ್ ಪ್ರೈಮ್ ರಿಲೀಸ್ ಗೆಹ್ರಾಯನ್‌ನಲ್ಲಿ ದೀಪಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಓಂ ಶಾಂತಿ ಓಂ, ಚೆನ್ನೈ ಎಕ್ಸ್‌ಪ್ರೆಸ್ ಮತ್ತು ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಶಾರೂಕ್ ಖಾನ್ ಜತೆ ನಟಿಸಿದ್ದರು. ಪಠಾಣ್ ದೀಪಿಕಾ ಪಡುಕೋಣೆ ಶಾರೂಕ್ ಖಾನ್ ಜತೆ ನಟಿಸುತ್ತಿರುವ ನಾಲ್ಕನೇ ಚಿತ್ರವಾಗಿದೆ.
ದೀಪಿಕಾ ಹೃತಿಕ್ ರೋಷನ್ ಜೊತೆಗಿನ ಫೈಟರ್, ಪ್ರಭಾಸ್ ಜತೆಗೆ ಹಿಂದೆ ಇಂಟರ್ನ್ ಸಿನಿಮಾದ ರಿಮೇಕ್ ಚಿತ್ರದಲ್ಲಿ ನಟಿಸಲಿದ್ದಾರೆ. ಜಾನ್ ಅಬ್ರಾಹಂ ಅಟ್ಯಾಕ್ ಮತ್ತು ಏಕ್ ವಿಲನ್ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಶಾರುಖ್ ಖಾನ್ ಯಾವುದೇ ಚಿತ್ರದಲ್ಲಿ ನಟಿಸದಿದ್ದರೂ ತಮ್ಮ ನಿರ್ಮಾಣ ಸಂಸ್ಥೆಗಳಲ್ಲಿ, ಉದ್ಯಮಗಳಲ್ಲಿ ಕಾರ್ಯ ನಿರತರಾಗಿದ್ದಾರೆ. 2020ರಲ್ಲಿ ಶಾರೂಕ್ ತಮ್ಮ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಎರಡು ಚಲನಚಿತ್ರಗಳನ್ನು ನಿರ್ಮಿಸಿದರು. 2021ರಲ್ಲಿ ಕಾಮ್ಯಾಬ್ ಮತ್ತು ಕ್ಲಾಸ್ ಆಫ್ 83 ಚಿತ್ರ ನಿರ್ಮಿಸಿದರು. ಶಾರೂಕ್ ನಿರ್ಮಾಣದ ಲವ್ ಹಾಸ್ಟೆಲ್ ಶುಕ್ರವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಬಾಬಿ ಡಿಯೋಲ್, ಸನ್ಯಾ ಮಲ್ಹೋತ್ರಾ ಮತ್ತು ವಿಕ್ರಾಂತ್ ಮಾಸ್ಸಿ ನಟಿಸಿದ್ದಾರೆ.