TikTok ಖರೀದಿಗೆ ಮೈಕ್ರೋಸಾಫ್ಟ್‌ ಯತ್ನ, ಬ್ಯಾನ್‌ ಮಾಡ್ತೀನಿ, ಖರೀದಿಗೆ ಬಿಡಲ್ಲ ಎಂದ ಟ್ರಂಪ್‌

By Kannadaprabha News  |  First Published Aug 2, 2020, 7:28 AM IST

ಭಾರತದಲ್ಲಿ ಈಗಾಗಲೇ ನಿಷೇಧಗೊಂಡಿರುವ ಚೀನಾ ಮೂಲದ ಜನಪ್ರಿಯ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನ ಅಮೆರಿಕ ವಿಭಾಗ ಖರೀದಿಸಲು ಅಮೆರಿಕ ಮೂಲದ ಸಾಫ್ಟ್‌ವೇರ್‌ ದೈತ್ಯ ಕಂಪನಿ ಮೈಕ್ರೋಸಾಫ್ಟ್‌ ಮಾತುಕತೆಯಲ್ಲಿ ನಿರತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೆಂಡಾಮಂಡಲಗೊಂಡಿದ್ದಾರೆ.


ವಾಷಿಂಗ್ಟನ್‌(ಆ.02): ಭಾರತದಲ್ಲಿ ಈಗಾಗಲೇ ನಿಷೇಧಗೊಂಡಿರುವ ಚೀನಾ ಮೂಲದ ಜನಪ್ರಿಯ ಸಾಮಾಜಿಕ ಜಾಲತಾಣ ಟಿಕ್‌ಟಾಕ್‌ನ ಅಮೆರಿಕ ವಿಭಾಗ ಖರೀದಿಸಲು ಅಮೆರಿಕ ಮೂಲದ ಸಾಫ್ಟ್‌ವೇರ್‌ ದೈತ್ಯ ಕಂಪನಿ ಮೈಕ್ರೋಸಾಫ್ಟ್‌ ಮಾತುಕತೆಯಲ್ಲಿ ನಿರತವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೆಂಡಾಮಂಡಲಗೊಂಡಿದ್ದಾರೆ. ಈ ಒಪ್ಪಂದ ಏರ್ಪಡಲು ಬಿಡುವುದಿಲ್ಲ. ಆದಷ್ಟುಶೀಘ್ರವೇ ಅಮೆರಿಕದಲ್ಲಿ ಟಿಕ್‌ಟಾಕ್‌ ಅನ್ನು ನಿಷೇಧಿಸುತ್ತೇನೆ ಎಂದು ಗುಡುಗಿದ್ದಾರೆ.

ಟಿಕ್‌ಟಾಕ್‌ ಸೇರಿದಂತೆ ಚೀನಾ ಮೂಲದ 106 ಆ್ಯಪ್‌ಗಳನ್ನು ಭಾರತ ನಿಷೇಧಿಸಿದಾಗ ಅಮೆರಿಕ ಮುಕ್ತ ಕಂಠದಿಂದ ಸ್ವಾಗತಿಸಿತ್ತು. ಅದೇ ಮಾದರಿಯ ಕ್ರಮವನ್ನು ತಾನೂ ಕೈಗೊಳ್ಳುವುದಾಗಿ ಹೇಳಿತ್ತು.

Tap to resize

Latest Videos

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕನ್ನಡದಲ್ಲಿ ಪ್ರಚಾರ!

ಈ ನಡುವೆ, ಭಾರತೀಯ ಮೂಲದ ಸತ್ಯ ನಾದೆಳ್ಲ ಅವರು ಮುಖ್ಯಸ್ಥರಾದ ಮೈಕ್ರೋಸಾಫ್ಟ್‌ ಕಂಪನಿ ಟಿಕ್‌ಟಾಕ್‌ನ ಅಮೆರಿಕ ವ್ಯವಹಾರವನ್ನು ಸಹಸ್ರಾರು ಕೋಟಿ ರು.ಗೆ ಖರೀದಿಸುವ ಸಂಬಂಧ ಮಾತುಕತೆಯಲ್ಲಿ ನಿರತವಾಗಿದೆ. ಸೋಮವಾರದೊಳಗೆ ಅದು ಪೂರ್ಣಗೊಳ್ಳಬಹುದು ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ಬಗ್ಗ ಪ್ರತಿಕ್ರಿಯಿಸಿರುವ ಟ್ರಂಪ್‌, ಆ ಒಪ್ಪಂದಕ್ಕೆ ಅವಕಾಶ ಕೊಡುವುದಿಲ್ಲ. ತುರ್ತು ಆರ್ಥಿಕ ಅಧಿಕಾರ ಅಥವಾ ಅಧ್ಯಾದೇಶ ಹೊರಡಿಸುವ ಮೂಲಕ ಟಿಕ್‌ಟಾಕ್‌ ಅನ್ನು ಅಮೆರಿಕದಲ್ಲಿ ನಿಷೇಧಿಸುತ್ತೇನೆ. ಟಿಕ್‌ಟಾಕ್‌ಗೆ ಪರಾರ‍ಯಯ ಹುಡುಕುತ್ತಿದ್ದೇವೆ ಎಂದಿದ್ದಾರೆ.

click me!